Russia-Ukraine War: ಕೀವ್ನಲ್ಲಿರುವ ಟಿವಿ ಟವರ್ ಮೇಲೆ ರಷ್ಯಾ ಬಾಂಬ್ ದಾಳಿ; 5 ಮಂದಿ ಸಾವು, ಚಾನಲ್ಗಳೆಲ್ಲ ಸ್ಥಗಿತ
ರಷ್ಯಾ ಮತ್ತು ಉಕ್ರೇನ್ ನಡುವೆ ಮಾರ್ಚ್ 2 (ಇಂದು) ರಂದು ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ. ಸೋಮವಾರ ಬೆಲಾರಸ್ನ ಗೋಮೆಲ್ನಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು.
ಉಕ್ರೇನ್ನ ಕೀವ್ ಮತ್ತು ಖಾರ್ಕೀವ್ಗಳ ಮೇಲೆ ರಷ್ಯಾ ದಾಳಿ (Russia Attack) ಹೆಚ್ಚಾಗಿದೆ. ಕೀವ್ನಲ್ಲಿರುವ ಟಿವಿ ಟವರ್ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದ್ದು, ಇದರಿಂದಾಗಿ ಇಡೀ ದೇಶಾದ್ಯಂತ ಟಿವಿ ಚಾನಲ್ಗಳ ಪ್ರಸಾರ ನಿಂತಿದೆ. ಈ ದಾಳಿಯಲ್ಲಿ ಐವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, 2ನೇ ಮಹಾಯುದ್ಧ ಕಾಲದಲ್ಲಿ ಸಾಮೂಹಿಕ ಹತ್ಯೆಯಾಗಿದ್ದ ಯಹೂದಿಗಳ ಸ್ಮರಣಾರ್ಥ ನಿರ್ಮಿಸಿದ್ದ ಸ್ಮಾರಕ ಕೇಂದ್ರಕ್ಕೂ ಹಾನಿಯಾಗಿದೆ. ದಾಳಿಗೂ ಮೊದಲು ರಷ್ಯಾ ಎಚ್ಚರಿಕೆಯೊಂದನ್ನು ನೀಡಿತ್ತು. ಕೀವ್ನಲ್ಲಿರುವ ಭದ್ರತಾ ಸೇವೆಯ ಪ್ರಧಾನ ಕಚೇರಿ ಮೇಲೆ ಹೆಚ್ಚು ಪ್ರಭಾವ ಇರುವ ಶಸ್ತ್ರಗಳಿಂದ ದಾಳಿ ನಡೆಸುತ್ತೇವೆ. ಇಲ್ಲಿ ಸಮೀಪದಲ್ಲಿ ವಾಸವಾಗುತ್ತಿರುವ ಜನರು ಸ್ಥಳಾಂತರಗೊಳ್ಳುವಂತೆ ಹೇಳಿತ್ತು. ಅಷ್ಟೇ ಅಲ್ಲ, ಯುದ್ಧದ ಬಗ್ಗೆ ಮಾಹಿತಿ ಸಿಗದಂತೆ ಮಾಡುವುದಕ್ಕೋಸ್ಕರ್, ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಇನ್ಫಾರ್ಮೇಶನ್ ಮತ್ತು ಸೈಕಾಲಜಿಕಲ್ ಸೆಂಟರ್ ಮೇಲೆ ಕೂಡ ಆಕ್ರಮಣ ಮಾಡುವುದಾಗಿ ಹೇಳಿತ್ತು.
ಉಕ್ರೇನ್ನ ಎರಡನೇ ದೊಡ್ಡ ನಗರವಾದ ಖಾರ್ಕೀವ್ನಲ್ಲಿ ರಷ್ಯಾ ನಿರಂತರವಾಗಿ ಶೆಲ್, ರಾಕೆಟ್ ದಾಳಿ ನಡೆಸಿದೆ. ಅದರಲ್ಲಿ ಸುಮಾರು 11 ಮಂದಿ ಮೃತಪಟ್ಟಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯುಎಸ್ ತಂತ್ರಜ್ಞಾನ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಸೋಮವಾರ ಉಪಗ್ರಹಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ರಷ್ಯಾದ ಮಿಲಿಟರಿ ಪಡೆ ಕೈವ್ನತ್ತ ಹೋಗುತ್ತಿರುವುದು ಕಂಡುಬಂದಿತ್ತು. ಸುಮಾರು 64 ಕಿಮೀ ಉದ್ದದವರೆಗ ಈ ಮಿಲಿಟರಿ ಬೆಂಗಾವಲು ಪಡೆ ವ್ಯಾಪಿಸಿಕೊಂಡಿದ್ದನ್ನು ಉಪಗ್ರಹ ಚಿತ್ರ ತೋರಿಸಿತ್ತು.
ಇಂದು ಎರಡನೇ ಸುತ್ತಿನ ಮಾತುಕತೆ
ರಷ್ಯಾ ಮತ್ತು ಉಕ್ರೇನ್ ನಡುವೆ ಮಾರ್ಚ್ 2 (ಇಂದು) ರಂದು ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ. ಸೋಮವಾರ ಬೆಲಾರಸ್ನ ಗೋಮೆಲ್ನಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಇದರಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಹೊರಬೀಳದ ಕಾರಣ ಇಂದು ಮತ್ತೊಮ್ಮೆ ರಷ್ಯಾ-ಉಕ್ರೇನ್ ಮಾತುಕತೆ ನಡೆಯಲಿದೆ. ಅಂದಹಾಗೇ, ಮೊದಲ ಸುತ್ತಿನ ಮಾತುಕತೆ ಸುಮಾರು 5 ತಾಸು ನಡೆದಿತ್ತು.
ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಏನಾಗಲಿದೆ ಭಾರತದ ಆರ್ಥಿಕ ಪರಿಸ್ಥಿತಿ?
Published On - 8:09 am, Wed, 2 March 22