Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಏನಾಗಲಿದೆ ಭಾರತದ ಆರ್ಥಿಕ ಪರಿಸ್ಥಿತಿ?

Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಏನಾಗಲಿದೆ ಭಾರತದ ಆರ್ಥಿಕ ಪರಿಸ್ಥಿತಿ?
ಸಾಂದರ್ಭಿಕ ಚಿತ್ರ

ರಷ್ಯಾ- ಉಕ್ರೇನ್ ಯುದ್ಧದಿಂದ ಭಾರತದ ಆರ್ಥಿಕತೆ ಮೇಲೆ ಆಗುವ ಪರಿಣಾಮಗಳೇನು, ವಿವಿಧ ವಲಯಗಳ ಮೇಲೆ ಪ್ರಭಾವ ಏನು ಎಂಬುದರ ವಿವರಣೆ ಇಲ್ಲಿದೆ.

TV9kannada Web Team

| Edited By: Srinivas Mata

Mar 02, 2022 | 7:52 AM

ಈಗಿನ ರಷ್ಯಾ- ಉಕ್ರೇನ್ ಬಿಕ್ಕಟ್ಟು (Russia- Ukraine Crisis) ಹಣಕಾಸು ಮಾರುಕಟ್ಟೆ, ವಿನಿಮಯ ದರ ಮತ್ತು ಕಚ್ಚಾ ತೈಲ ದರಗಳ ಮೇಲೆ ಅಲ್ಪಾವಧಿಯಲ್ಲಿ ಗಂಭೀರ ಸ್ವರೂಪದ ಪರಿಣಾಮ ಬೀರಬಹುದು ಎಂದು ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (State Bank Of India) ಆರ್ಥಿಕ ತಜ್ಞರ ವರದಿ ಅಭಿಪ್ರಾಯ ದಾಖಲಿಸಿದೆ. ಆದರೆ ಇದರಿಂದ ಈ ಕ್ಷಣದಲ್ಲಿ ಭಾರತದ ಆರ್ಥಿಕತೆ ಮೇಲೆ ಕೊನೆಯಾಗದಂಥ ಪರಿಣಾಮ ಅಂಥದ್ದೇನೂ ಆಗಲ್ಲ ಎಂಬುದರ ಬಗ್ಗೆಯೂ ತಿಳಿಸಿದೆ. ಕೆಲ ದಿನಗಳ ಹಿಂದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಕ್ರೇನ್​ ಮೇಲೆ ರಷ್ಯಾ ದಾಳಿ ವಿಚಾರವಾಗಿ ಆತಂಕ ವ್ಯಕ್ತಪಡಿಸಿದ್ದರು. ಎರಡನೇ ವಿಶ್ವ ಯುದ್ಧದ ನಂತರದಲ್ಲಿ ಜಾಗತಿಕ ಶಾಂತಿಯು ಇಂಥದ್ದೊಂದು ಸವಾಲನ್ನು ಎಂದಿಗೂ ಎದುರಿಸಿರಲಿಲ್ಲ ಅಂತಲೂ ಹೇಳಿದ್ದರು. “ಇಡೀ ವಿಶ್ವದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಸವಾಲು ಭಾರತದ ಅಭಿವೃದ್ಧಿಗೂ ಸವಾಲಾಗಲಿದೆ. ಶಾಂತಿಗೆ ಆತಂಕ ಎದುರಾಗಿದ್ದು, ಎರಡನೇ ವಿಶ್ವಯುದ್ಧದ ನಂತರ ಈ ಯುದ್ಧಕ್ಕೆ ಅಂಥ ಮಹತ್ವ ಬಂದಿದೆ. ಈ ಪ್ರಭಾವವು ಬಹುಶಃ ಜಗತ್ತಿನ ಮೇಲೆ ಆಗಲ್ಲ,” ಎಂದು ನಿರ್ಮಲಾ ಹೇಳಿದ್ದರು.

ಉಕ್ರೇನ್​ನ ಸನ್ನಿವೇಶವನ್ನು ಸರ್ಕಾರವು ಹತ್ತಿರದಿಂದ ಗಮನಿಸುತ್ತಿದೆ ಎಂಬುದಾಗಿ ಖಾತ್ರಿ ನೀಡಿದ್ದಾರೆ. ಈಚಿನ ಬೆಳವಣಿಗೆಯಲ್ಲಿ, ರಷ್ಯಾದ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧ ಹೇರಿರುವುದರಿಂದ ರಷ್ಯನ್ ಸಂಸ್ಥೆಗಳನ್ನು ಒಳಗೊಂಡ ವಹಿವಾಟಿನ ಪ್ರಕ್ರಿಯೆ ಮಾಡುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಇದರ ಹೊರತಾಗಿ ರಷ್ಯನ್ ಕಚ್ಚಾ ತೈಲ ಕಾರ್ಗೋ ಮತ್ತು ಕಜಕ್ ಬ್ಲೆಂಡ್ ಕಾರ್ಗೋ ಅನ್ನು ಫ್ರೀ ಆನ್ ಬೋರ್ಡ್ ಆಧಾರದಲ್ಲಿ ವಿಮೆ ಅಪಾಯದ ಕಾರಣಕ್ಕೆ ಸ್ವೀಕರಿಸಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್​ ಹೇಳಿದೆ. ಈ ಎಲ್ಲದರ ಮಧ್ಯೆ ಕಚ್ಚಾ ತೈಲ ದರ ಬ್ಯಾರಲ್​ಗೆ ನೂರು ಯುಎಸ್​ಡಿ ದಾಟಿದೆ. ಜಾಗತಿಕವಾಗಿ ಪೂರೈಕೆ ವ್ಯತ್ಯಯದ ಅನಿಶ್ಚಿತತೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಇತರ ದೇಶಗಳಿಂದ ಶೇ 80ರಷ್ಟು ತೈಲ ಆಮದು ಮಾಡಿಕೊಳ್ಳುವ ಭಾರತದ ಮೇಲೆ ಪ್ರಮುಖವಾಗಿ ಪರಿಣಾಮ ಆಗುತ್ತದೆ. ಇತರ ವಲಯಗಳ ಮೇಲೆ ಆಗುವ ಪರಿಣಾಮ ಏನು ಅಂತ ನೋಡುವುದಾದರೆ ಅದು ಹೀಗಿದೆ.

ವ್ಯಾಪಾರ: ಭಾರತವು ರಷ್ಯಾದ ಜತೆಗೆ ವ್ಯಾಪಾರದ ಕೊರತೆ ಇದ್ದು, ರಫ್ತು ಇಳಿಮುಖವಾಗುತ್ತಿದ್ದು, ಆಮದು ಜಾಸ್ತಿ ಆಗುತ್ತಿದೆ. ರಷ್ಯಾದಿಂದ ಭಾರತಕ್ಕೆ ಪ್ರಮುಖವಾಗಿ ತೈಲವನ್ನೇ ಆಮದು ಮಾಡಿಕೊಳ್ಳಲಾಗುತ್ತದೆ. ವರದಿಯ ಪ್ರಕಾರ, ಹಣಕಾಸು ವರ್ಷ 2022ರಲ್ಲಿ ಒಟ್ಟಾರೆ ಆಮದಿನಲ್ಲಿ ಶೇ 2.8ರಷ್ಟು ರಷ್ಯಾದಿಂದ ಭಾರತಕ್ಕೆ ಮಾಡಿಕೊಳ್ಳಲಾಗಿದೆ. ಎಲೆಕ್ಟ್ರಿಕಲ್ ಮಶಿನರಿ ಮತ್ತು ಸಲಕರಣೆಗಳು ರಷ್ಯಾಕ್ಕೆ ಭಾರತದಿಂದ ಮಾಡುವ ಪ್ರಮುಖ ರಫ್ತು. ಆದರೆ ಒಟ್ಟಾರೆ ವ್ಯಾಪಾರದಲ್ಲಿ ಅಷ್ಟೇನೂ ಅಲ್ಲ (ರಷ್ಯಾದ ಪಾಲು ಒಟ್ಟಾರೆ ವ್ಯಾಪಾರದಲ್ಲಿ ಶೇ 1.3) ಮತ್ತು ನಮ್ಮ ಟಾಪ್ 25ರ ವ್ಯಾಪಾರ ಸಹಭಾಗಿ. ವ್ಯಾಪಾರ ಚಾನೆಲ್ ಮೂಲಕ ಆಗುವ ಪ್ರಭಾವ ಮಿತಿಯಾದದ್ದು ಹಾಗೂ ಹೆಚ್ಚಿನ ಪದಾರ್ಥಗಳ ಬೆಲೆಯಲ್ಲಿ ಆರ್ಥಿಕತೆಯ ನಮ್ಮ ಹಣದುಬ್ಬರ ಮತ್ತು ಸಿಎಡಿ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ಬ್ಯಾರೆಲ್​ಗೆ 10 ಡಾಲರ್​ ತೈಲ ಬೆಲೆ ಹೆಚ್ಚಾದರೆ ಹಣದುಬ್ಬರ 25 ಬಿಪಿಎಸ್​ ಮತ್ತು ಸಿಎಡಿಯು ಜಿಡಿಪಿಯ 35 ಬಿಪಿಎಸ್​ ವಿಸ್ತೃತಗೊಳ್ಳುತ್ತದೆ.

ಬ್ಯಾಂಕಿಂಗ್: ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ಈ ತನಕ ಬ್ಯಾಂಕಿಂಗ್​ ಅಲುಗಾಡದೆ ನಿಂತಿದೆ. ಲಾಭ, ಆಸ್ತಿ ಗುಣಮಟ್ಟ ಮತ್ತು ಬಂಡವಾಳ ಅಡಿಕ್ವಸಿ 2021ರ ಡಿಸೆಂಬರ್​ನಲ್ಲಿ ಹೊಸ ಎತ್ತರಕ್ಕೆ ಏರಿದೆ. ಇದರ ಜತೆಗೆ ಹಣಕಾಸು 2022ರಲ್ಲಿ YTD ಹೊಸ ಎತ್ತರವನ್ನು ಮುಟ್ಟಿದೆ. ಇದನ್ನು ಹೊರತುಪಡಿಸಿ ಪ್ರಬಲ ಬ್ಯಾಂಕಿಂಗ್ ಸನ್ನಿವೇಶದಲ್ಲಿ, ಎಸ್​ಬಿಐ ವರದಿ ತೋರುವಂತೆ ಅಗತ್ಯ ಪ್ರಮಾಣದ ಲಿಕ್ವಿಡಿಟಿ ಏಳು ಲಕ್ಷ ಕೋಟಿ ರೂಪಾಯಿ ಮತ್ತು ಸೂಕ್ತ ನಗದು ಬಾಕಿ 2.8 ಲಕ್ಷ ಕೋಟಿ ರೂಪಾಯಿ ಇದೆ. ಬಿಕ್ಕಟ್ಟನ್ನು ಎದುರಿಸಲು ಬ್ಯಾಂಕಿಂಗ್ ವಲಯಕ್ಕೆ ಈ ಮೊತ್ತ ಸಾಕಾಗಲಿದೆ.

ಕಾರ್ಪೊರೇಟ್: ಎಸ್​ಬಿಐ ಆರ್ಥಿಕ ತಜ್ಞರು ಅಭಿಪ್ರಾಯ ಪಡುವಂತೆ, ಕೊರೊನಾ ಸಂದರ್ಭವನ್ನು ಬಳಸಿಕೊಂಡು, ಭಾರತೀಯ ಕಾರ್ಪೊರೇಟ್​ಗಳು ತಮ್ಮ ಬ್ಯಾಲೆನ್ಸ್​ಶೀಟ್​ ಅನ್ನು ಉತ್ತಮ ರೂಪಕ್ಕೆ ತಂದುಕೊಂಡಿದ್ದಾರೆ. ಕಾರ್ಪೊರೇಟ್​ಗಳು ಸಾರ್ವಕಾಲಿಕ ಗರಿಷ್ಠ ಮೊತ್ತವಾದ 1.89 ಲಕ್ಷ ಕೋಟಿ ರೂಪಾಯಿಗಳನ್ನು ಸಾರ್ವಜನಿಕ ಈಕ್ವಿಟಿ ಮಾರುಕಟ್ಟೆಗಳ ಮೂಲಕ ಸಂಗ್ರಹಿಸಿದ್ದಾರೆ.

ಕ್ರೆಡಿಟ್​ ಅನುಪಾತದಲ್ಲಿ ಚೇತರಿಕೆ (ಅಪ್​ಗ್ರೇಡ್​ನಿಂದ ಡೌನ್​ಗ್ರೇಡ್) ಎಲ್ಲ ವಲಯದಲ್ಲೂ ಸಾಕ್ಷಿಯಾಗಿದೆ. ಹೊಸ ಹೂಡಿಕೆ ಘೋಷಣೆಯು 10 ಲಕ್ಷ ಕೋಟಿ ರೂಪಾಯಿ ಕಳೆದ ಎರಡು ವರ್ಷದಲ್ಲಿ ಆಗಿದ್ದು, ಹಣಕಾಸು ವರ್ಷ 2022ರ ಮೊದಲ 9 ತಿಂಗಳು (ಏಪ್ರಿಲ್​- ಡಿಸೆಂಬರ್)​ 12.78 ಲಕ್ಷ ಕೋಟಿ ರೂಪಾಯಿಗೆ ಚೇತರಿಕೆ ಆಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಣಕಾಸು ವರ್ಷಕ್ಕೆ ಶೇ 50ರಷ್ಟು ಬೆಳವಣಿಗೆ ಆಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಜಿಡಿಪಿ: ವ್ಯಾಪಾರ, ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್​ ವಲಯದಲ್ಲಿನ ಮಿತಿಯ ಜತೆಗೆ ಎಸ್​ಬಿಐ ವರದಿ ನಿರೀಕ್ಷೆ ಪ್ರಕಾರ, ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಪರಿಣಾಮ ಭಾರತೀಯ ಆರ್ಥಿಕತೆ ಮೇಲೆ ಬಹಳ ಕಡಿಮೆ. “ಆರ್ಥಿಕತೆಯು ಉನ್ನತ ಬೆಳವಣಿಗೆ (ಶೇ 9.2 ಹಣಕಾಸು ವರ್ಷ 2022ರಲ್ಲಿ ವರ್ಸಸ್ ಹಣಕಾಸು ವರ್ಷ 2021ರಲ್ಲಿ -6.6), ಕಡಿಮೆ ಹಣದುಬ್ಬರ (ಹಣಕಾಸು ವರ್ಷ 2023ರಲ್ಲಿ ಶೇ 4.5 ವರ್ಸಸ್ ಹಣಕಾಸು ವರ್ಷ 2022ರಲ್ಲಿ ಶೇ 5.3) ಹಂತ,” ಎಂದು ಸೇರಿಸಿದೆ.

ಇದನ್ನೂ ಓದಿ: ರಷ್ಯಾ ದಾಳಿಗೆ ಚೂರು ಚೂರಾದ ಉಕ್ರೇನ್​ ಜನರ ಜೀವನ: ಇಲ್ಲಿದೆ ಯುದ್ಧನಾಡಿನ ಫೋಟೋಗಳು

Follow us on

Related Stories

Most Read Stories

Click on your DTH Provider to Add TV9 Kannada