Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI New Rules: ಸ್ಟೇಟ್ ಬ್ಯಾಂಕ್​ ಆಫ್​ ಇಂಡಿಯಾದ ಈ ನಿಯಮಗಳಲ್ಲಿ ಫೆಬ್ರವರಿಯಿಂದ ಬದಲಾವಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ನಿಯಮಾವಳಿಗಳಲ್ಲಿ ಫೆಬ್ರವರಿಯಿಂದ ಬದಲಾವಣೆ ಮಾಡುವುದಕ್ಕೆ ಎಲ್ಲ ಸಿದ್ಧತೆ ನಡೆದಿದೆ ಎಂದು ತಿಳಿಸಲಾಗಿದೆ.

SBI New Rules: ಸ್ಟೇಟ್ ಬ್ಯಾಂಕ್​ ಆಫ್​ ಇಂಡಿಯಾದ ಈ ನಿಯಮಗಳಲ್ಲಿ ಫೆಬ್ರವರಿಯಿಂದ ಬದಲಾವಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jan 14, 2022 | 1:51 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಐಎಂಪಿಎಸ್, ಎನ್​ಇಎಫ್​ಟಿ ಮತ್ತು ಆರ್​ಟಿಜಿಎಸ್​ ವಹಿವಾಟುಗಳೂ ಸೇರಿ ಆನ್​ಲೈನ್ ವ್ಯವಹಾರಗಳ ಕಾರ್ಯ ಚಟುವಟಿಕೆಯನ್ನು ಬದಲಾವಣೆಗೆ ಸಿದ್ಧವಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಮಿಡೆಯೆಟ್ ಪೇಮೆಂಟ್ ಸರ್ವೀಸ್ (ಐಎಂಪಿಎಸ್) ವಹಿವಾಟಿನ ಮಿತಿಯನ್ನು ಹೆಚ್ಚಳ ಮಾಡಿದೆ. ಇದರ ಅಡಿಯಲ್ಲಿ ಎಸ್​ಬಿಐ ಖಾತೆದಾರರು 2 ಲಕ್ಷದ ಬಲಿಗೆ 5 ಲಕ್ಷ ರೂಪಾಯಿ ತನಕ ವಹಿವಾಟು ನಡೆಸಬಹುದು, ಎಂದು ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ಸೂಚನೆ ಹೊರಡಿಸಿದೆ. ಡಿಜಿಟಲ್​ ಆಗಿ ವಹಿವಾಟು ನಡೆಸಿದಲ್ಲಿ 5 ಲಕ್ಷ ರೂಪಾಯಿ ತನಕ ಮಾಡುವ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಶುಲ್ಕ ಇಲ್ಲ, ಅದು ಕೂಡ ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೋ ಮೂಲಕ.

“ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಉತ್ತೇಜಿಸುವ ಗುರಿಯೊಂದಿಗೆ 5 ಲಕ್ಷ ರೂಪಾಯಿ ತನಕ ಐಎಂಪಿಎಸ್​ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಆ ವಹಿವಾಟನ್ನು ಯೋನೋ ಸೇರಿದಂತೆ ಇಂಟರ್​ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡಿರಬೇಕು. ಒಂದು ವೇಳೆ ಶಾಖೆಯ ಮೂಲಕ ಮಾಡಿದ್ದಲ್ಲಿ ಈಗಿರುವಂತೆಯೇ ಐಎಂಪಿಎಸ್​ಗೆ ವಿಧಿಸುತ್ತಿರುವ ಸೇವಾ ಶುಲ್ಕವು ಅನ್ವಯ ಆಗುತ್ತದೆ,” ಎಂದು ಜನವರಿ 4ರಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆದರೆ, 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೊಸ ಸ್ಲ್ಯಾಬ್ ಸೇರ್ಪಡೆಯಾಗಿದ್ದು, ಇದಕ್ಕೆ ಪ್ರಸ್ತಾವಿತ ಸೇವಾ ಶುಲ್ಕವಾಗಿ ರೂ. 20+ ಜಿಎಸ್​ಟಿ ಫೆಬ್ರವರಿ 1, 2022ರಿಂದ ಅನ್ವಯಿಸುತ್ತದೆ. ಎನ್​ಇಎಫ್​ಟಿ/ಆರ್​ಟಿಜಿಎಸ್​ ಮೇಲಿನ ಸೇವಾ ಶುಲ್ಕದಂತೆಯೇ ಐಎಂಪಿಎಸ್​ ಮೇಲೆ ಸೇವಾ ಶುಲ್ಕ ಇದೆ,” ಎಂದು ಬ್ಯಾಂಕ್ ತಿಳಿಸಿದೆ. ಈ ಹೊಸ ಬದಲಾವಣೆಯು ಈ ವರ್ಷದ ಫೆಬ್ರವರಿ 1ರಿಂದ ಅನ್ವಯ ಆಗುತ್ತದೆ.

ಎಸ್​ಬಿಐನಲ್ಲಿ ಐಎಂಪಿಎಸ್, ಎನ್​ಇಎಫ್​ಟಿ ಮತ್ತು ಆರ್​ಟಿಜಿಎಸ್​ ವಹಿವಾಟುಗಳಿಗೆ ಹೊಸ ನಿಯಮ ಐಎಂಪಿಎಸ್​ ಶುಲ್ಕ- ಆನ್​ಲೈನ್ ವಿಧಾನ ಇಂಟರ್​ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ವಹಿವಾಟು ನಡೆಸಿದಲ್ಲಿ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕ ಅಥವಾ ಜಿಎಸ್​ಟಿ ಅನ್ವಯಿಸಲ್ಲ. ಅದು 5 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ. ಇದರಲ್ಲಿ ಯೋನೋ ಆ್ಯಪ್ ಮೂಲಕದ ವಹಿವಾಟುಗಳು ಒಳಗೊಂಡಿವೆ.

ಐಎಂಪಿಎಸ್ ಶುಲ್ಕಗಳು- ಆಫ್​ಲೈನ್ ವಿಧಾನ 1000 ರೂ. ತನಕ: ಯಾವುದೇ ಶುಲ್ಕವಿಲ್ಲ 1000 ರೂ. ಮೇಲ್ಪಟ್ಟು ರೂ. 10 ಸಾವಿರ ತನಕ: ರೂ. 2 ಸೇವಾ ಶುಲ್ಕ + ಜಿಎಸ್​ಟಿ 10000 ರೂ. ಮೇಲ್ಪಟ್ಟು ರೂ. 1 ಲಕ್ಷ ತನಕ: ರೂ. 4 ಸೇವಾ ಶುಲ್ಕ + ಜಿಎಸ್​ಟಿ 1 ಲಕ್ಷ ರೂ. ಮೇಲ್ಪಟ್ಟು ರೂ. 2 ಲಕ್ಷ ತನಕ: ರೂ. 12 ಸೇವಾ ಶುಲ್ಕ + ಜಿಎಸ್​ಟಿ 2 ಲಕ್ಷ ರೂ. ಮೇಲ್ಪಟ್ಟು ರೂ. 5 ಲಕ್ಷ ತನಕ (ಹೊಸ ಸ್ಲ್ಯಾಬ್): ರೂ. 20 ಸೇವಾ ಶುಲ್ಕ + ಜಿಎಸ್​ಟಿ

ಎನ್​ಇಎಫ್​ಟಿ ಸೇವಾ ಶುಲ್ಕಗಳು- ಆನ್​ಲೈನ್ ವಿಧಾನ ಇಂಟರ್​ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್, ಯೋನೋ ಆ್ಯಪ್ ಸೇರಿದಂತೆ ಎನ್​ಇಎಫ್​ಟಿ ವಹಿವಾಟುಗಳಿಗೆ ಯಾವುದೇ ಜಿಎಸ್​ಟಿ ಅಥವಾ ಸೇವಾ ಶುಲ್ಕ ಇಲ್ಲ. 2 ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತಕ್ಕೂ ಇದು ಅನ್ವಯಿಸುತ್ತದೆ.

ಎನ್​ಇಎಫ್​ಟಿ ಸೇವಾ ಶುಲ್ಕಗಳು- ಆಫ್​​ಲೈನ್ ವಿಧಾನ 10,000 ರೂ. ತನಕ: ರೂ. 2 ಸೇವಾ ಶುಲ್ಕ + ಜಿಎಸ್​ಟಿ 10,000 ರೂ. ಮೇಲ್ಪಟ್ಟು ರೂ. 1 ಲಕ್ಷ ತನಕ: ರೂ. 4 ಸೇವಾ ಶುಲ್ಕ + ಜಿಎಸ್​ಟಿ 1 ಲಕ್ಷ ರೂ. ಮೇಲ್ಪಟ್ಟು ರೂ. 2 ಲಕ್ಷ ತನಕ: ರೂ. 12 ಸೇವಾ ಶುಲ್ಕ + ಜಿಎಸ್​ಟಿ 2 ಲಕ್ಷ ರೂ. ಮೇಲ್ಪಟ್ಟು : ರೂ. 20 ಸೇವಾ ಶುಲ್ಕ + ಜಿಎಸ್​ಟಿ

ಆರ್​ಟಿಜಿಎಸ್​ ಶುಲ್ಕಗಳು: ಆನ್​ಲೈನ್ ವಿಧಾನ ಇಂಟರ್​ನೆಟ್​ ಅಥವಾ ಮೊಬೈಲ್​ ಬ್ಯಾಂಕಿಂಗ್ ಸೇರಿದಂತೆ ಯೋನೋ ಆ್ಯಪ್ ಮೂಲಕ ಮಾಡುವ ಆರ್​ಟಿಜಿಎಸ್​ ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕ ಅಥವಾ ಜಿಎಸ್​ಟಿ ಅನ್ವಯ ಆಗಲ್ಲ. ಮೊತ್ತವು 5 ಲಕ್ಷ ರೂಪಾಯಿ ದಾಟಿದರೂ ಯಾವುದೇ ಶುಲ್ಕ ತಗುಲುವುದಿಲ್ಲ.

ಆರ್​ಟಿಜಿಎಸ್​ ಶುಲ್ಕಗಳು: ಆಫ್​​ಲೈನ್ ವಿಧಾನ 2 ಲಕ್ಷ ರೂಪಾಯಿ ಮೇಲ್ಪಟ್ಟು ಮತ್ತು 5 ಲಕ್ಷ ರೂಪಾಯಿವರೆಗೆ: ರೂ. 20 ಸೇವಾ ಶುಲ್ಕ + ಜಿಎಸ್​ಟಿ 5 ಲಕ್ಷ ರೂಪಾಯಿ ಮೇಲ್ಪಟ್ಟು: ರೂ. 40 ಸೇವಾ ಶುಲ್ಕ + ಜಿಎಸ್​ಟಿ

ಈ ಮೇಲ್ಕಂಡ ಸೇವೆಗಳ ಎಲ್ಲ ಶುಲ್ಕಗಳು ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅನ್ವಯ ಆಗುವಂಥದ್ದು.

ಇದನ್ನೂ ಓದಿ: IMPS Charges: ಎಸ್​ಬಿಐನಲ್ಲಿ 5 ಲಕ್ಷ ರೂಪಾಯಿ ತನಕ ಆನ್​ಲೈನ್ ಐಎಂಪಿಎಸ್​ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ

Published On - 1:48 pm, Fri, 14 January 22

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ