AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Edible oil: ಖಾದ್ಯ ತೈಲ ಬೆಲೆಗಳಲ್ಲಿ ಕೇಜಿಗೆ 5ರಿಂದ 20 ರೂಪಾಯಿ ಕುಸಿತ

ಖಾದ್ಯ ತೈಲ ಬೆಲೆಗಳು ಕೇಜಿಗೆ 5 ರೂಪಾಯಿಯಿಂದ 20 ರೂಪಾಯಿ ಇಳಿಕೆ ಆಗಿದೆ. ಆ ಬಗ್ಗೆ ಈ ಲೇಖನದಲ್ಲಿ ವಿಸ್ತೃತವಾದ ಮಾಹಿತಿ ನಿಮ್ಮೆದುರು ಇದೆ.

Edible oil: ಖಾದ್ಯ ತೈಲ ಬೆಲೆಗಳಲ್ಲಿ ಕೇಜಿಗೆ 5ರಿಂದ 20 ರೂಪಾಯಿ ಕುಸಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 14, 2022 | 10:25 PM

ದೇಶದಾದ್ಯಂತ ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು ಒಂದು ವರ್ಷದ ಹಿಂದೆ ಜಾಗತಿಕ ಮಾರುಕಟ್ಟೆಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ 2021ರ ಅಕ್ಟೋಬರ್​ನಿಂದ ಅವು ಕುಸಿದಿವೆ. 167 ಮೌಲ್ಯ ಸಂಗ್ರಹ ಕೇಂದ್ರಗಳ ಟ್ರೆಂಡ್ ಪ್ರಕಾರ, ಪ್ರಮುಖ ರೀಟೇಲ್ ಮಾರುಕಟ್ಟೆಗಳಲ್ಲಿ ಖಾದ್ಯ ತೈಲಗಳ ರೀಟೇಲ್ ಬೆಲೆಗಳು (Edible Oil Retail Price) ದೇಶಾದ್ಯಂತ ತೀವ್ರವಾಗಿ ಕೇಜಿಗೆ ರೂ. 5ರಿಂದ 20 ಕುಸಿತ ಕಂಡಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಶೇಂಗಾ ಎಣ್ಣೆಯ ಸರಾಸರಿ ರೀಟೇಲ್ ಬೆಲೆ ಕೇಜಿಗೆ 180 ರೂಪಾಯಿ, ಸಾಸಿವೆ ಎಣ್ಣೆ ಕೇಜಿಗೆ 184.59 ರೂಪಾಯಿ, ಸೋಯಾ ಎಣ್ಣೆ ಕೇಜಿಗೆ 148.85 ರೂಪಾಯಿ ಮತ್ತು ಸೂರ್ಯಕಾಂತಿ ಎಣ್ಣೆ ಕೇಜಿಗೆ 162.4 ರೂಪಾಯಿ ಮತ್ತು ತಾಳೆ ಎಣ್ಣೆ ಪ್ರತಿ ಕೇಜಿಗೆ 128.5 ರೂಪಾಯಿ.

ಖಾದ್ಯ ತೈಲಗಳ ಬೆಲೆ ಎಷ್ಟು ಕಡಿಮೆಯಾಗಿದೆ? 167 ಮೌಲ್ಯ ಸಂಗ್ರಹ ಕೇಂದ್ರಗಳ ಟ್ರೆಂಡ್ ಪ್ರಕಾರ, ದೇಶಾದ್ಯಂತ ಪ್ರಮುಖ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖಾದ್ಯ ತೈಲಗಳ ರೀಟೇಲ್ ಬೆಲೆಗಳು ಕೇಜಿಗೆ 5ರಿಂದ 20 ರೂಪಾಯಿ ತೀವ್ರವಾಗಿ ಕುಸಿದಿದೆ. ಆದರೆ ಅಕ್ಟೋಬರ್ 1, 2021ರಂದು ಚಾಲ್ತಿಯಲ್ಲಿದ್ದ ಬೆಲೆಗಳಿಗೆ ಹೋಲಿಸಿದರೆ, ಕಡಲೆಕಾಯಿ ಮತ್ತು ಸಾಸಿವೆ ಎಣ್ಣೆಗಳ ಚಿಲ್ಲರೆ ಬೆಲೆಗಳು ಕೇಜಿಗೆ ರೂ. 1.50ರಿಂದ 3ರಷ್ಟು ಕಡಿಮೆಯಾಗಿದೆ. ಆದರೆ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಬೆಲೆಗಳು ಕೇಜಿಗೆ ರೂ. 7ರಿಂದ 8ರಷ್ಟು ಕಡಿಮೆಯಾಗಿದೆ, ಎಂದು ಡೇಟಾ ತೋರಿಸಿದೆ.

ಖಾದ್ಯ ತೈಲ ಬೆಲೆಗಳನ್ನು ನಿಯಂತ್ರಣಕ್ಕೆ ತರಲು ಸರ್ಕಾರದ ಪ್ರಯತ್ನ ದೇಶದಲ್ಲಿ ವಿವಿಧ ತೈಲಗಳ ಬೆಲೆಯನ್ನು ಮಿತಿಗೊಳಿಸುವ ಸರ್ಕಾರದ ಇತ್ತೀಚಿನ ಕ್ರಮವೆಂದರೆ, 1955ರ ಅಗತ್ಯ ಸರಕುಗಳ ಕಾಯ್ದೆಯ ಶೆಡ್ಯೂಲ್​ನಲ್ಲಿ ಇರಿಸಿದೆ. ಸೋಯಾ ಮೀಲ್‌ನ ಸ್ಟಾಕ್ ಮೇಲೆ ಮಿತಿ ಹಾಕಲಾಗಿದೆ. ಇದು ಜಾನುವಾರುಗಳ ಆಹಾರಕ್ಕೆ ಶೇ 30ಕ್ಕಿಂತ ಹೆಚ್ಚು ಪ್ರೋಟೀನ್‌ನ ಪ್ರಮುಖ ಮೂಲವಾಗಿದೆ. ಡಿಸೆಂಬರ್ 23, 2021ರಿಂದ ಜೂನ್ 20, 2022ರ ವರೆಗೆ ಜಾರಿಗೆ ತರಲಾಗಿದೆ. ಪೂರೈಕೆಯನ್ನು ಹೆಚ್ಚಿಸುವಾಗ ಬೆಲೆಗಳನ್ನು ಕಡಿಮೆ ಮಾಡುತ್ತದೆ. ಎಲ್ಲ ನಿರ್ಣಾಯಕ ಸರಕುಗಳಲ್ಲಿನ ಫ್ಯೂಚರ್ಸ್ ವ್ಯಾಪಾರದ ಮೇಲೆ ಸರ್ಕಾರವು ಒಂದು ವರ್ಷದ ನಿಷೇಧವನ್ನು ವಿಧಿಸಿದ್ದು, ಇದು ಡಿಸೆಂಬರ್ 2022ರ ವರೆಗೆ ಇರುತ್ತದೆ.

ಇದನ್ನೂ ಓದಿ: Retail Inflation: ಡಿಸೆಂಬರ್ ಚಿಲ್ಲರೆ ಹಣದುಬ್ಬರ ದರ ಶೇ 5.59, ನವೆಂಬರ್ ಐಐಪಿ ಶೇ 1.4 ಬೆಳವಣಿಗೆ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ