Cryptocurrency Terra: ಕ್ರಿಪ್ಟೋಕರೆನ್ಸಿ ಟೆರಾ ಏಳು ದಿನದಲ್ಲಿ ಶೇ 70ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ
ಕ್ರಿಪ್ಟೋಕರೆನ್ಸಿ ಟೆರಾದ ಬೆಲೆಯೂ ಏಳು ದಿನದಲ್ಲಿ ಶೇ 70ರಷ್ಟು ಹೆಚ್ಚಾಗಿದೆ. ಈ ಮೂಲಕ ಇತರ ಪ್ರಮುಖ ಕ್ರಿಪ್ಟೋಕರೆನ್ಸಿಗಳನ್ನೂ ಮೀರಿಸಿದೆ.
ಏನೇ ಏರಿಳಿತದ ಹೊರತಾಗಿಯೂ ಜನಪ್ರಿಯ ಡಿಜಿಟಲ್ ಟೋಕನ್‌ಗಳಾದ ಬಿಟ್‌ಕಾಯಿನ್ ಮತ್ತು ಈಥರ್ ಅನ್ನು ಸಹ ಮೀರಿಸಿ ಕಳೆದ ಏಳು ದಿನಗಳಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ಟೆರಾ (Terra) ಶೇ 70ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಅದೇ ಬಿಟ್‌ಕಾಯಿನ್ ಮತ್ತು ಈಥರ್‌ನಲ್ಲಿ ಸುಮಾರು ಶೇ 15ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳಲ್ಲಿ ಟೆರಾ ಬೆಲೆ ದುಪ್ಪಟ್ಟುಗೊಂಡಿದೆ. ಏಕೆಂದರೆ ಈ ಸ್ಟೇಬಲ್ ಕಾಯಿನ್ ಸುಮಾರು 44 ಯುಎಸ್ಡಿ ಮಟ್ಟದಿಂದ ಪ್ರಸ್ತುತ 95 ಯುಎಸ್ಡಿಗೆ ಮೇಲೇರಿ ಈ ಅವಧಿಯಲ್ಲಿ ಶೇ 115ಕ್ಕಿಂತ ಹೆಚ್ಚಾಯಿತು. ಟೆರಾ ಎಂಬುದು ವಿಕೇಂದ್ರೀಕೃತ ಹಣಕಾಸು ಪಾವತಿ ನೆಟ್‌ವರ್ಕ್ ಆಗಿದ್ದು, ಅದು ಬ್ಲಾಕ್‌ಚೈನ್‌ನಲ್ಲಿ ಸಾಂಪ್ರದಾಯಿಕ ಪಾವತಿ ಸ್ಟಾಕ್ ಅನ್ನು ಮರುನಿರ್ಮಾಣ ಮಾಡುತ್ತದೆ. ಪ್ರೊಗ್ರಾಮೆಬಲ್ ಪಾವತಿಗಳನ್ನು ಮತ್ತು ಮುಕ್ತ ಹಣಕಾಸು ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲ ಆಗುವಂತೆ ಇದು ಫಿಯೆಟ್-ಪೆಗ್ಡ್ ಸ್ಟೇಬಲ್ ಕಾಯಿನ್‌ಗಳ ಬುಟ್ಟಿಯನ್ನು ಬಳಸುತ್ತದೆ. ಅದರ ಮೀಸಲು ಕರೆನ್ಸಿ ಲೂನಾದಿಂದ ಕ್ರಮಾವಳಿಯ ಪ್ರಕಾರ ಸ್ಥಿರವಾಗಿದೆ. 2020ರ ಡಿಸೆಂಬರ್ ಹೊತ್ತಿಗೆ Coingecko ಪ್ರಕಾರ, 2 ಮಿಲಿಯನ್ ಬಳಕೆದಾರರಿಗೆ ನೆಟ್‌ವರ್ಕ್ ಅಂದಾಜು 299 ಶತಕೋಟಿ ಡಾಲರ್ ವಹಿವಾಟು ಮಾಡಿದೆ.
ಟೆರಾ ವಹಿವಾಟುಗಳನ್ನು ಸ್ಟಾಕಿಂಗ್ ಮೂಲಕ ಮೈನಿಂಗ್ ಮಾಡುವುದು, ಟೆರಾ ಸ್ಟೇಬಲ್‌ಕಾಯಿನ್‌ಗಳ ಬೆಲೆ ಸ್ಥಿರತೆಯನ್ನು ಖಚಿತಪಡಿಸುವುದು ಮತ್ತು ಪ್ಲಾಟ್‌ಫಾರ್ಮ್‌ನ ಬ್ಲಾಕ್‌ಚೈನ್ ವ್ಯಾಲಿಡೇಟರ್‌ಗಳಿಗೆ ಪ್ರೋತ್ಸಾಹವನ್ನು ಒದಗಿಸುವುದು- ಹೀಗೆ ಟೆರಾ ಪ್ಲಾಟ್‌ಫಾರ್ಮ್‌ನ ಮೀಸಲು ಕರೆನ್ಸಿಯಾದ ಲೂನಾ ಮೂರು ಪ್ರಮುಖ ಕಾರ್ಯಗಳನ್ನು ಹೊಂದಿದೆ. ಟೆರಾ ಇದುವರೆಗೆ 2022ರಲ್ಲಿ ಶೇ 12ಕ್ಕಿಂತ ಮೇಲೇರಿದೆ (ವರ್ಷದಿಂದ ಇಲ್ಲಿಯವರೆಗೆ ಅಥವಾ YTD). ಆದರೆ ಅತ್ಯಂತ ಜನಪ್ರಿಯ ಕ್ರಿಪ್ಟೋ ಬಿಟ್‌ಕಾಯಿನ್ ಇದೇ ಅವಧಿಯಲ್ಲಿ ಸುಮಾರು ಶೇ 4ರಷ್ಟು ಕುಸಿದಿದೆ. ಸ್ಟೇಬಲ್‌ಕಾಯಿನ್ ತನ್ನ ಸಾರ್ವಕಾಲಿಕ ಉನ್ನತ ಮಟ್ಟದ 103 ಡಾಲರ್ನಿಂದ ಶೇ 8ರಷ್ಟು ಮಾತ್ರ ಕಡಿಮೆ ಇದೆ.
ಈಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮಧ್ಯೆ ಕ್ರಿಪ್ಟೋಕರೆನ್ಸಿಗಳಲ್ಲಿನ ಇತ್ತೀಚಿನ ಏರಿಳಿತವು ವಿಶಾಲವಾದ ಮಾರುಕಟ್ಟೆಯ ಮಾರಾಟ ಒತ್ತಡದ ಮಧ್ಯೆ ಬಂದಿದೆ. ಹೂಡಿಕೆದಾರರು ಹೆಚ್ಚು ಆಕ್ರಮಣಕಾರಿ ಫೆಡ್‌ಗೆ ತಮ್ಮ ಪೋರ್ಟ್ಫೋಲಿಯೋ ಬಂಡವಾಳವನ್ನು ಮರುಹೊಂದಾಣಿಕೆ ಮಾಡುವುದರಿಂದ ಏರಿಳಿತ ಕಾಣಿಸಿಕೊಂಡಿದೆ. ಇದು ಈಗ ಏರುತ್ತಿರುವ ಹಣದುಬ್ಬರ ವಿರುದ್ಧದ ಕ್ರಮದಂತೆ ಈ ವರ್ಷ ಏಳು ಬಾರಿ ದರಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.