Weekly Horoscope: ಮೇ 11ರಿಂದ ಮೇ 18ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಮೇ ತಿಂಗಳ 11-05-2025 ರಿಂದ 18-05-2025 ವರೆಗಿನ ವಾರ ಭವಿಷ್ಯ: ಚಂದ್ರನು ತುಲಾ ಹಾಗೂ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡಲಿದ್ದು ಶುಭಾಶುಭಫಲವನ್ನು ನೀಡುವನು. ಚಂದ್ರ ದಶೆಯವರಿಗೆ ಮುಖ್ಯವಾಗಿ ಶಶಿಯ ಪರಿಣಾಮ ವಿಶೇಷವಾಗಿ ಗೊತ್ತಾಗುವುದು. ಶಾಂತಸ್ವರೂಪದಲ್ಲಿ ನೆಲೆಸಿದ ದೇವಿಯ ಉಪಾಸನೆಯಿಂದ ಅಧಿಕ ಶುಭ ಹಾಗೂ ಅನಿಷ್ಟ ದೂರವಾಗಲಿದೆ.

ಮೇ ತಿಂಗಳ ಮೂರನೇ ವಾರ 11-05-2025ರಿಂದ 18-05-2025ರವರೆಗೆ ಇರಲಿದೆ. ಚಂದ್ರನು ತುಲಾ ಹಾಗೂ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡಲಿದ್ದು ಶುಭಾಶುಭಫಲವನ್ನು ನೀಡುವನು. ಚಂದ್ರ ದಶೆಯವರಿಗೆ ಮುಖ್ಯವಾಗಿ ಶಶಿಯ ಪರಿಣಾಮ ವಿಶೇಷವಾಗಿ ಗೊತ್ತಾಗುವುದು. ಶಾಂತಸ್ವರೂಪದಲ್ಲಿ ನೆಲೆಸಿದ ದೇವಿಯ ಉಪಾಸನೆಯಿಂದ ಅಧಿಕ ಶುಭ ಹಾಗೂ ಅನಿಷ್ಟ ದೂರವಾಗಲಿದೆ.
ಮೇಷ ರಾಶಿ: ಮೇ ತಿಂಗಳ ಮೂರನೇ ವಾರದಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಮಿಶ್ರಫಲ. ಆರಂಭದಲ್ಲಿ ಸಂಗಾತಿಯಿಂದ ಸುಖವು ಲಭ್ಯ. ಮನೋರಥವು ಈಡೇರಿ ಖುಷಿಯಾಗುವುದು. ನೂತನ ಸ್ನೇಹಿತರನ್ನು ಮಾಡಿಕೊಳ್ಳುವಾಗ ಎಚ್ಚರಿಕೆ ಇರಲಿ. ಶುಭ ಸಮಾಚಾರವು ನಿಮಗೆ ಗೊತ್ತಾಗಬಹುದು. ಭೂ ವ್ಯವಹಾರದಿಂದ ತೊಂದರೆ ಕಾಣಿಸಿಕೊಳ್ಳುಕುವುದು. ಸೊಂಟದ ಕೆಳಭಾಗಕ್ಕೆ ಆಘಾತ ನೋವು ಉಂಟಾಗುವುದು. ಮನೆಯಿಂದ ಸಮೀಪದ ದೇವರ ದರ್ಶನಕ್ಕೆ ನೀವು ಹೋಗಲಿದ್ದೀರಿ. ಸಂಗಾತಿಯನ್ನು ನಿಮ್ಮ ಹಿಡಿತಕ್ಕೆ ತಂದುಕೊಳ್ಳಲು ಪ್ರಯತ್ನಿಸಬಹುದು. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.
ವೃಷಭ ರಾಶಿ: ಈ ತಿಂಗಳ ಮೂರನೇ ವಾರದಲ್ಲಿ ನಿಮಗೆ ಶುಭಾಶುಭವಿದೆ. ಔಷಧೋಪಚಾರದಿಂದ ರೋಗವು ಶಮನವಾಗವುದು. ಸಹೋದರರಿಂದ ನಿಮಗೆ ಸಂತೋಷ ಪ್ರಾಪ್ತವಾಗುವುದು. ಮಕ್ಕಳಲ್ಲಿ ಯಾವ ಪ್ರಗತಿಯನ್ನು ಕಾಣದೇ ಅವರಿಗೆ ವೃಥಾ ಖರ್ಚು ಮಾಡುವುದು ಎಂಬ ಭಾವ ಪೋಷಕರಿಗೆ ಉಂಟಾಗಬಹುದು. ಕುಟುಂಬದಲ್ಲಿ ಶಾಂತತೆ ಇದ್ದರೂ ಒಳಗೆ ಜ್ವಾಲಾಮುಖಿಯು ಸ್ಫೋಟಿಸಲು ಕಾಯುತ್ತಿರಬಹುದು. ಎಂದೋ ಮಾಡಿದ ಸಹಾಯಕ್ಕೆ ಪ್ರತಿಫಲ ಸಿಗುವ ಸಾಧ್ಯತೆ ಇದೆ. ಎಂದೂ ಊಹಿಸದ ಘಟನೆಯೊಂದು ಇಂದು ನಡೆಯಬಹುದು. ಸಂದರ್ಭಗಳನ್ನು ನಿಭಾಯಿಸಲು ಕಲಿಯುವ ಅನಿವಾರ್ಯತೆ ಬರಬಹುದು.
ಮಿಥುನ ರಾಶಿ: ಮೇ ತಿಂಗಳ ಮೂರನೇ ವಾರದಲ್ಲಿ ಮಿಶ್ರಫಲ. ರೋಗನಾಶಕ್ಕೆ ಪರಿಹಾರವನ್ನು ಕಂಡುಕೊಳ್ಳುವಿರಿ. ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ. ಹೊಸ ಪ್ರದೇಶಗಳ ಭೇಟಿಯಿಂದ ನಿಮ್ಮ ಉತ್ಸಾಹವು ಹೆಚ್ಚಾಗಲಿದೆ. ನಿಮ್ಮ ಕೆಲಸವು ಬೇರೆಯವರಿಗೆ ಪ್ರೇರಣೆಯಾದೀತು. ಕುಟುಂಬದಲ್ಲಿ ಕೆಲಸಗಳು ಹೆಚ್ಚಿರಬಹುದು. ಪ್ರಯಾಣದಿಂದ ಆಯಾಸ, ವಿಶ್ರಾಂತಿಯನ್ನು ಪಡೆಯಬೇಕಾಗಬಹುದು. ವಿದೇಶ ಪ್ರಯಾಣಕ್ಕೆ ತಯಾರಾಗಿ ನಿಂತಿರುವಿರಿ. ಹೊಸ ಆದಾಯಗಳು ನಿಮಗೆ ವಿದೇಶದಿಂದ ಬರಲಿದೆ. ನಿಮ್ಮ ಶಾಂತಸ್ವಭಾವವನ್ನು ದುರುಪಯೋಗ ಮಾಡಿಕೊಂಡಾರು. ತಂತ್ರಜ್ಞಾನ ಕ್ಷೇತ್ರದವರಿಗೆ ಸ್ವಲ್ಪ ಹಿನ್ನಡೆಯಾದೀತು.
ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರದಲ್ಲಿ ಅಶುಭ. ವ್ಯವಹಾರದಲ್ಲಿ ಮುಂದೇನಾಗುತ್ತದೋ ಎಂಬ ಭಯವಿದೆ. ಮಕ್ಕಳಿಂದ ದುಃಖವುಂಟಾಗುವುದು. ವಿದ್ಯಾಭ್ಯಾಸಕ್ಕೆ ತೊಂದರೆ ಅನಿವಾರ್ಯವಾಗಿ ಬರಬಹುದು. ಶಿಸ್ತುಬದ್ಧ ಜೀವನದಿಂದ ಹೊರಬರುವುದು ನಿಮಗೆ ಕಷ್ಟವಾದೀತು. ಹೊಸ ಬದುಕಿಗೆ ಒಗ್ಗಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮವರ ಜೊತೆ ಸಂತೋಷದ ಕ್ಷಣವನ್ನು ಕಳೆಯುವಿರಿ. ಧಾರ್ಮಿಕ ಸ್ಥಳಗಳ ದರ್ಶನವನ್ನು ಮಾಡಿ ಬರುವಿರಿ. ಮುಗಿಸುವ ಕೆಲಸಗಳನ್ನು ನಾಳೆಗೆ ಇಟ್ಟುಕೊಳ್ಳುವಿರಿ. ಕಛೇರಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ಇಷ್ಟಪಡದವರು ನಿಮ್ಮನ್ನು ಅಪಹಾಸ್ಯ ಮಾಡಿಯಾರು.
ಸಿಂಹ ರಾಶಿ: ಈ ತಿಂಗಳ ಮೂರನೇ ವಾರ ನಿಮಗೆ ಶುಭಾಶುಭ ಫಲ. ವಾರದ ಆರಂಭದಲ್ಲಿ ನಿಮಗೆ ಸ್ತ್ರೀಯರಿಂದ ಜಯವಾಗಲಿದೆ. ಸಹೋದರರಿಂದ ಭಯವಾಗಲಿದೆ. ವಿದೇಶದಲ್ಲಿ ಇರುವವರಿಗೆ ಭೀತಿ ಕಾಡುವುದು. ತವರಿಗೆ ಬರುವ ತವಕ ಉದ್ಭವಿಸುವುದು. ಗಣ್ಯರ ಸಂಪರ್ಕವು ಹಲವು ತಿರುವುಗಳನ್ನು ಪಡೆದುಕೊಂಡೀತು. ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಮಯವೂ ಬರಬಹುದು. ನೂತನ ದಾಂಪತ್ಯದಲ್ಲಿ ಅನ್ಯೋನ್ಯತೆ ಇದ್ದರೂ ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯು ಇಬ್ಬರ ಮೇಲೂ ಇರಲಿದೆ. ವೃಥಾ ಖರ್ಚನ್ನು ಹೆಚ್ಚುಮಾಡಿಕೊಳ್ಳುವ ಕೆಲಸಕ್ಕೆ ಹೋಗಬೇಡಿ. ಅನಿವಾರ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಸಾಗಿರಿ. ದುಃಸ್ವಪ್ನಗಳು ನಿಮ್ಮನ್ನು ಕಾಡಬಹುದು. ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವಿರಿ.
ಕನ್ಯಾ ರಾಶಿ: ಈ ವಾರದ ಆರಂಭದಲ್ಲಿ ಕೌಟುಂಬಿಕ ವಿಚಾರದಿಂದ ಧನ ನಷ್ಟವಾಗಲಿದೆ. ದುಡುಕಿ ಮಾತನಾಡಿ ಮರ್ಯಾದೆಯನ್ನು ಕಳೆದುಕೊಳ್ಳುವಿರಿ. ಮಾಡುವ ಕೆಲಸಗಳು ಸುಲಲಿತವಾಗಿ ಆರಂಭವಾದರೂ ಅಂತ್ಯವು ಬಹಳ ಗೊಂದಲದಿಂದ ಇರಬುಹುದು. ಸಹೋದರ ನಡುವೆ ಸಂಘರ್ಷವೇರ್ಪಟ್ಟರೆ ಜಯವಾಗುವುದು. ಭೂ ವ್ಯವಹಾರದಲ್ಲಿ ಯಶಸ್ಸು ನಿಮ್ಮದೇ. ಅತಿಯಾದ ಧನಾತ್ಮಕ ಚಿಂತನೆಗಳು ನಿಮ್ಮನ್ನು ವಂಚನೆಗೆ ಸಿಕ್ಕಿಸಬಹುದು. ನಿಮ್ಮ ಪ್ರಭಾವವು ಉದ್ಯೋಗವಲಯಕ್ಕೆ ಗೊತ್ತಾಗಲಿದೆ. ಎದುರಿನಿಂದ ಬೆಂಬಲಿಸಿ ಹಿಂದಿನಿಂದ ನಿಮ್ಮವರೇ ಕಾಲು ಎಳೆಯುವರು. ಎಚ್ಚರದಿಂದ ಇರವುದು ಒಳ್ಳೆಯದು. ಸರ್ಕಾರಿ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಬೇಸರ ಬಂದರೂ ಬಿಡದೇ ಮುಂದುವರಿಸುವುದು ಅನಿವಾರ್ಯ.
ತುಲಾ ರಾಶಿ: ಮೇ ತಿಂಗಳ ಈ ವಾರದಲ್ಲಿ ಶುಭಾಶುಭ ಫಲ. ಆರಂಭದ ದಿನಗಳಲ್ಲಿ ಸುಖಭೋಗವನ್ನು ಇತರರಿಂದಲೂ ಪಡೆಯುವಿರಿ. ಸ್ತ್ರೀಸೌಖ್ಯವೂ ಸಿಗುವುದು. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಮುಗಿಸಬೇಕೆಂಬ ಹಠವಿರಲಿದೆ. ಯಂತ್ರೋಪಕರಣಗಳ ದುರಸ್ತಿ ಮಾಡಿ, ಹಣ ನಾಶವಾಗುವುದು. ಭೂಮಿಯ ವ್ಯವಹಾರದಲ್ಲಿ ಅನನುಕೂಲಗಳು ಅಧಿಕವಾಗಿರಲಿವೆ. ನಿಮ್ಮ ಮಾನಸಿಕತೆಗೆ ಹೊಂದಿಕೆಯಾಗುವ ಸಂಗಾತಿಯು ನಿಮಗೆ ಸಿಗಬಹುದು. ತಂದೆಯ ಆರೋಗ್ಯವು ದೃಢವಾಗಿರಲಿದೆ. ಸಹೋದರನು ನಿಮ್ಮ ಬಗ್ಗೆ ಪ್ರೀತಿ ಉಳ್ಳವನಾಗುವನು. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕೆನಿಸೀತು.
ವೃಶ್ಚಿಕ ರಾಶಿ: ನಿಮಗೆ ಈ ವಾರದಲ್ಲಿ ಮಿಶ್ರಫಲ. ಚಂದ್ರನು ನಿಮ್ಮ ರಾಶಿಯಲ್ಲಿ ಇರುವ ಕಾರಣ ದೇಹದ ಬಗ್ಗೆ ಹೆಚ್ಚು ಆಸಕ್ತಿ. ಸೌಂದರ್ಯ ಸಾಧನವನ್ನು ಬಳಸುವಿರಿ. ನಿಮ್ಮ ಕೆಲಸದಲ್ಲಿ ಸಾವಧಾನತೆ ಅಧಿಕವಾಗಿರಬಹುದು. ಉದ್ಯಮವನ್ನು ಬಿಡುವಂತಹ ಪರಿಸ್ಥಿತಿ ಬರಬಹುದು. ಜೂಜು ಅಥವಾ ದುಶ್ಚಟಗಳಿಂದ ಮನಸ್ಸು ವಿಕಾರವಾಗಿ ಧನ ಹಾನಿಯಾಗುವುದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಮಾಡಬೇಕಾದ ಕೆಲಸದ ಬಗ್ಗೆ ಗಮನವಿರಲಿ. ಮೊದಲು ಅದರ ಪಟ್ಟಿಯನ್ನು ಆದ್ಯತೆಯ ಪ್ರಕಾರ ರಚಿಸಿಕೊಳ್ಳಿ. ಕಲಾವಿದರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಒಂಟಿತನವನ್ನು ಇಷ್ಟಪಡುವ ನಿಮಗೆ ನಿಮ್ಮವರು ಹಾಗೆ ಇರಲು ಬಿಡಲಾರರು. ಬಂಧುಗಳು ಆಸ್ತಿಯ ವಿಚಾರವನ್ನು ಕೆದಕಿ ಕೇಳುವರು.
ಧನು ರಾಶಿ: ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ಶುಭಾಶುಭವಿದೆ. ಭೋಗ ವಸ್ತುಗಳಿಂದ ನಿಮ್ಮ ಸಂತೋಷ ಇಮ್ಮಡಿಯಾಗುವುದು. ಅಪರಿಚಿತರ ವಾಹನದಲ್ಲಿ ಪ್ರಯಾಣ ಮಾಡುವಿರಿ. ಶಶಿಯು ದ್ವಾದಶದಲ್ಲಿದ್ದು ಭೂಮಿಯ ನಷ್ಟ ಅಥವಾ ಭೂಮಿಯ ಉತ್ಪನ್ನದಿಂದ ಹಾನಿ ಆಗುವುದು. ಅಪಘಾತವಾಗುವ ಸಾಧ್ಯತೆ ಇದೆ. ಭಯದ ಮನಸ್ಸು ನಿಮ್ಮನ್ನು ಕೆಲಸದಲ್ಲಿ ಹಿಂದೇಟು ಹಾಕುವಂತೆ ಮಾಡಬಹುದು. ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ. ಸಜ್ಜನರ ಅಥವಾ ಸಾಧುಗಳ ದರ್ಶನವಾಗಬಹುದು. ಅವರ ಮಾತುಗಳು ನಿಮಗೆ ಹಿತವೆನಿಸಬಹುದು. ಸ್ನೇಹಿತರ ನಿಮ್ಮ ಮನೆಗೆ ಬರಬಹುದು. ಒಳ್ಳೆಯ ಆತಿಥ್ಯವನ್ನು ಮಾಡಿ. ಮಧುರವಾದ ಆಹಾರವನ್ನು ಹೆಚ್ಚು ಸೇವಿಸುವಿರಿ. ಗುರು ರಾಯರ ದರ್ಶನವನ್ನು ಮಾಡಿ ಬನ್ನಿ.
ಮಕರ ರಾಶಿ: ಮೇ ತಿಂಗಳ ಈ ವಾರದಲ್ಲಿ ಶುಭ. ಶಶಿಯು ದಶಮ ಮತ್ತು ಏಕಾದಶದಲ್ಲಿ ಸಂಚಾರ ಮಾಡುವ ಕಾರಣ ನಿಮ್ಮ ಇಚ್ಛೆ ಸ್ತ್ರೀಯಿಂದ ಪೂರೈಕೆಯಾಗಲಿದೆ. ಸಹೋದರರಿಂದ ಸಂತಸ ನಿಮಗಾಗುವುದು. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವುದು ಉಚಿತ. ನಿಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳಿ. ಹಣ ಹೂಡಿಕೆಯ ವಿಚಾರದಲ್ಲಿ ಗೊಂದಲವಿರಬಹುದು. ಜೀವನ ಸಂಗಾತಿಯಾಗುವವರ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನೀವು ಹೆಸರನ್ನು ಬಯಸುವಿರಿ. ಕಣ್ಣಿನ ದೋಷವು ಅಧಿಕವಾಗಬಹುದು. ಸ್ತ್ರೀಯರಿಗೆ ಸಂಬಂಧಿಸಿದಂತೆ ಖರ್ಚುಗಳನ್ನು ಅಧಿಕ ಮಾಡುವಿರಿ. ಮನಸ್ಸು ನಿಮ್ಮ ಹಿಡಿತದಲ್ಲಿ ಇರದಿದ್ದರೆ ಸ್ವಲ್ಪ ಕಾಲ ಧ್ಯಾನವನ್ನು ಮಾಡಿ. ಕರಕುಶಲದಲ್ಲಿ ಆಸಕ್ತಿಯನ್ನು ತೋರಿಸುವಿರಿ.
ಕುಂಭ ರಾಶಿ: ಈ ತಿಂಗಳ ಮೂರನೇ ರಾಶಿಯವರಿಗೆ ಮಿಶ್ರಫಲ. ಆರೋಗ್ಯದಲ್ಲಿ ವ್ಯತ್ಯಾಸ. ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಪೀಡೆ ಕಾಣಿಸುವುದು. ಉದ್ಯೋಗದಲ್ಲಿ ಅಂದುಕೊಂಡ ಸ್ಥಾನಮಾನ ಸಿಗಲಿದೆ. ಅಂದುಕೊಂಡ ಕಾರ್ಯವು ಸಫಲವಾಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುವ ಸಂಭವವಿದೆ. ಪ್ರಯಾಣವು ಕಷ್ಟವಾದರೂ ಹೋಗಲಿದ್ದೀರಿ. ಇದರಿಂದ ನಿಮಗೆ ಸಂತೋಷವಾಗಲಿದೆ. ಹೆಚ್ಚು ಅನನುಕೂಲದ ಸ್ಥಿತಿಯು ನಿಮಗೆ ಕಿರಿಕಿರಿಯನ್ನು ಉಂಟುಮಾಡಬಹುದು. ನಿಮ್ಮ ಸಾಮರ್ಥ್ಯವನ್ನು ಯಾರೂ ತಿಳಿಯರು. ನೀವೇ ಖುದ್ದಾಗಿ ತಿಲಕಿಸಬೇಕಾದ ಪರಿಸ್ಥಿತಿಯೂ ಇರಬಹುದು. ಸ್ವತಂತ್ರವಾದ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಲು ಹೋಗಬೇಡಿ. ವಿವಾಹ ಜೀವನವು ಡೋಲಾಯಮಾನವಾಗಲಿದೆ.
ಮೀನ ರಾಶಿ: ರಾಶಿ ಚಕ್ರದ ಕೊನೆಯ ರಾಶಿಯಲ್ಲಿ ಇವರಿಗೆ ಈ ವಾರ ಚಂದ್ರನು ಅಷ್ಟಮ ನವಮದಲ್ಲಿ ಸಂಚಾರ ಮಾಡುವ ಕಾರಣ ಶುಭವಿಲ್ಲ. ಹಿಡಿದ ಕೆಲಸ ಕೈಗೂಡದು. ಆರೋಗ್ಯವೂ ಹಾಳಾಗಲಿದೆ. ಧನ ವ್ಯವಹಾರದಲ್ಲಿ ಸರಿಯಾದ ತಿಳಿವಳಿಕೆ ಇಟ್ಟುಕೊಳ್ಳಿ. ಉನ್ನತ ಸ್ಥಾನ, ಮಾನಗಳು ಪ್ರಭಾವದಿಂದ ಸಿಗಲಿದೆ. ನಿಮ್ಮ ಅಭಿಪ್ರಾಯವು ದೃಢವಾಗಿರಲಿ. ಮಾನಸಿಕ ನೆಮ್ಮದಿಗೆ ತೊಂದರೆಯಾಗಬಹುದು. ಹೆಚ್ಚು ಅನುಕೂಲತೆಗಳ ಇರುವ ಕಡೆ ನೀವು ಸೇರಿಕೊಳ್ಳಿ. ಹೆಚ್ಚಿನ ಆದಾಯದ ಜೊತೆ ಖರ್ಚೂ ಅಧಿಕವಾಗಿದೆ. ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬವು ನಿಮ್ಮ ಜೊತೆಗಿದ್ದು ನಿಮಗೆ ಧೈರ್ಯವನ್ನು ತುಂಬಬಹುದು. ಸಾಮಾನ್ಯ ಜ್ಞಾನದ ಕೊರತೆ ಕಾಣಬಹುದು.
-ಲೋಹಿತ ಹೆಬ್ಬಾರ್ 8762924271 (what’s app only)




