Sign In

By signing in or creating an account, you agree with Associated Broadcasting Company's Terms & Conditions and Privacy Policy.

US Rates: ಈ ಬಾರಿ ಬಡ್ಡಿದರ ಹೆಚ್ಚಳ ಇಲ್ಲ: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಅನಿರೀಕ್ಷಿತ ನಿರ್ಧಾರ; ಚಿನ್ನ ಮತ್ತು ತೈಲ ಬೆಲೆಗಳಲ್ಲಿ ವ್ಯತ್ಯಯ

Interest Rates Remain On 5-5.25%: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್, ಬಡ್ಡಿ ದರವನ್ನು ಶೇ. 5ರಿಂದ ಶೇ. 5.25ರ ವ್ಯಾಪ್ತಿಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ಆದರೆ, ಈ ವರ್ಷ ಎರಡು ಬಾರಿ ಸಣ್ಣ ಪ್ರಮಾಣದಲ್ಲಿ ಬಡ್ಡಿ ದರ ಹೆಚ್ಚಿಸುವುದಾಗಿ ಸುಳಿವು ನೀಡಿದೆ.

US Rates: ಈ ಬಾರಿ ಬಡ್ಡಿದರ ಹೆಚ್ಚಳ ಇಲ್ಲ: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಅನಿರೀಕ್ಷಿತ ನಿರ್ಧಾರ; ಚಿನ್ನ ಮತ್ತು ತೈಲ ಬೆಲೆಗಳಲ್ಲಿ ವ್ಯತ್ಯಯ
ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜಿರೋಮ್ ಪೋವೆಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 15, 2023 | 10:43 AM

ವಾಷಿಂಗ್ಟನ್: ಅಮೆರಿಕದಲ್ಲಿ ಬಡ್ಡಿ ದರ (US Interest Rates) ಏರಿಕೆ ಆಗಬಹುದು ಎಂದು ನಿರೀಕ್ಷಿಸಿದ್ದ ಬಹುತೇಕರಿಗೆ ಅಚ್ಚರಿ ಎನಿಸುವ ನಿರ್ಧಾರವನ್ನು ಅಮೆರಿಕದ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ (US Federal Reserve Bank) ಪ್ರಕಟಿಸಿದೆ. ಕಳೆದ 15 ತಿಂಗಳಿಂದ 10 ಬಾರಿ ಬಡ್ಡಿದರ ಹೆಚ್ಚಿಸಿದ್ದ ಫೆಡರಲ್ ರಿಸರ್ವ್ ಈ ಬಾರಿ ಹೆಚ್ಚಳಕ್ಕೆ ಬ್ರೇಕ್ ಹಾಕಿದೆ. ಜೂನ್ 13ರಿಂದ ಎರಡು ದಿನಗಳ ಕಾಲ ಹಣಕಾಸು ನೀತಿ ಸಭೆ ನಡೆಸಿದ ಫೆಡರಲ್ ರಿಸರ್ವ್ ಬ್ಯಾಂಕ್, ಬಡ್ಡಿ ದರವನ್ನು ಶೇ. 5ರಿಂದ ಶೇ. 5.25ರ ವ್ಯಾಪ್ತಿಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ಆದರೆ, ಈ ವರ್ಷ (2023) ಎರಡು ಬಾರಿ ಸಣ್ಣ ಪ್ರಮಾಣದಲ್ಲಿ ಬಡ್ಡಿ ದರಗಳನ್ನು ಹೆಚ್ಚಿಸುವುದಾಗಿ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC- Federal Open Market Committee) ಸುಳಿವು ನೀಡಿದೆ. ಇದು ಕೆಲವಾರು ಕ್ಷೇತ್ರಗಳಲ್ಲಿ ಸಂಚಲನ ಸೃಷ್ಟಿಸಲು ಕಾರಣವಾಗಿದೆ.

ಅಮೆರಿಕದಲ್ಲಿ 2022ಆರಂಭದಲ್ಲಿ ಶೇ. 8ರ ಮೇಲಿದ್ದ ಹಣದುಬ್ಬರವನ್ನು ನಿಯಂತ್ರಿಸಲು ಅಲ್ಲಿನ ಸೆಂಟ್ರಲ್ ಬ್ಯಾಂಕ್ ಸತತವಾಗಿ ಬಡ್ಡಿ ದರ ಹೆಚ್ಚಿಸುತ್ತಾ ಬಂದಿತ್ತು. ಶೇ. 0.25ರಿಂದ ಶೇ. 0.50ರಷ್ಟಿದ್ದ ಬಡ್ಡಿ ದರ ಶೇ. 5.25ರವರೆಗೂ ಏರಿಕೆ ಆಗಿದೆ. ಹಣದುಬ್ಬರ ಶೇ. 8.3ರಷ್ಟಿದ್ದದ್ದು ಈಗ 2023ರ ಮೇ ತಿಂಗಳಲ್ಲಿ ಶೇ. 4.1ಕ್ಕೆ ಬಂದು ಇಳಿದಿದೆ. ಆದರೆ, ಫೆಡರಲ್ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಶೇ. 2ಕ್ಕೆ ಇಳಿಸುವ ಗುರಿ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಬಡ್ಡಿ ದರ ಏರಿಕೆ ಮುಂದುವರಿಯಬಹುದು ಎಂದು ಬಹಳ ಮಂದಿ ನಿರೀಕ್ಷಿಸಿದ್ದರು. ಆದರೆ, ಫೆಡರಲ್ ರಿಸರ್ವ್​ನ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್​ಒಎಂಸಿ) ನಡೆಸಿದ ಎರಡು ದಿನದ ಸಭೆಯಲ್ಲಿ ಬಡ್ಡಿ ದರ ಏರಿಕೆಗೆ ಅಲ್ಪವಿರಾಮ ಹಾಕುವ ನಿರ್ಧಾರಕ್ಕೆ ಬಂದಿತೆನ್ನಲಾಗಿದೆ.

ಇದನ್ನೂ ಓದಿMultibagger: ರಾಜ್ ರೇಯಾನ್- ಇದಪ್ಪಾ ಮಲ್ಟಿಬ್ಯಾಗರ್ ಷೇರು; 1 ಲಕ್ಷಕ್ಕೆ ಎರಡೇ ವರ್ಷದಲ್ಲಿ 4.45 ಕೋಟಿ ರೂ ಲಾಭ

ಹಣದುಬ್ಬರಕ್ಕೆ ಕಡಿವಾಣ ಹಾಕುವ ಹಾದಿ ಇನ್ನೂ ದೀರ್ಘ ಇರುವುದರಿಂದ ಅಮೆರಿಕದ ಸೆಂಟ್ರಲ್ ಬ್ಯಾಂಕಿಗೆ ಬಡ್ಡಿ ದರ ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯ ಆಗಬಹುದು. ಇದೇ ಕಾರಣಕ್ಕೆ ಈ ವರ್ಷ ಕನಿಷ್ಠ ಎರಡು ಬಾರಿಯಾದರೂ ಬಡ್ಡಿದರ ಹೆಚ್ಚಿಸುವ ಸುಳಿವನ್ನು ಅದು ನೀಡಿದೆ.

ಚಿನ್ನದ ಬೆಲೆ ಏರಿಕೆ; ತೈಲ ಬೆಲೆ ಇಳಿಕೆ

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಈ ವರ್ಷದಲ್ಲಿ ಬಡ್ಡಿ ದರ ಹೆಚ್ಚಳಗಳು ಆಗಲಿವೆ ಎಂದು ಸುಳಿವು ಕೊಟ್ಟ ಬೆನ್ನಲ್ಲೇ ಅಲ್ಲಿನ ಚಿನಿವಾರಪೇಟೆಯಲ್ಲಿ ವ್ಯವಹಾರ ಗರಿಗೆದರಿದೆ. ಚಿನ್ನದ ಬೆಲೆಗಗಳು ತುಸು ಏರಿಕೆ ಕಂಡಿವೆ.

ಇನ್ನು ತೈಲ ಬೆಲೆಗಳು ಜೂನ್ 14ರಂದು ಶೇ. 1.5ರಷ್ಟು ಕುಸಿತ ಕಂಡಿವೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಶೇ. 1.5ರಷ್ಟು ಕಡಿಮೆ ಆಗಿದೆ. ಅಲ್ಲಿ ಒಂದು ಬ್ಯಾರಲ್ ಕಚ್ಛಾತೈಲದ ಬೆಲೆ 73.20 ಡಾಲರ್ ಇದೆ. ಇನ್ನು ಡಬ್ಲ್ಯುಟಿಐ ಕ್ರ್ಯೂಡ್​ನಲ್ಲಿ ಬೆಲೆ ಶೇ. 1.7ರಷ್ಟು ಇಳಿದಿದೆ. ಅಲ್ಲಿ 68.27 ಡಾಲರ್ ಬೆಲೆ ಸದ್ಯಕ್ಕೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್