ಲಂಡನ್‌ನಲ್ಲಿ ವರ್ಷದ ಗವರ್ನರ್ ಪ್ರಶಸ್ತಿ ಸ್ವೀಕರಿಸಿದ ಶಕ್ತಿಕಾಂತ ದಾಸ್
ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ಪ್ರಶಸ್ತಿ ವಿಜೇತರನ್ನು ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಘೋಷಿಸಲಾಯಿತು. ನ್ಯಾಷನಲ್ ಬ್ಯಾಂಕ್ ಆಫ್ ಉಕ್ರೇನ್ ಗೆ 2023 ರ ಸೆಂಟ್ರಲ್ ಬ್ಯಾಂಕ್ ಆಫ್ ದಿ ಇಯರ್ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಶಕ್ತಿಕಾಂತ ದಾಸ್ ಅವರಿಗೆ ವರ್ಷದ ಗವರ್ನರ್ ಪ್ರಶಸ್ತಿ ಲಭಿಸಿದೆ
ಲಂಡನ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್, ಶಕ್ತಿಕಾಂತ ದಾಸ್ (Shaktikanta Das) ಅವರು ಲಂಡನ್‌ನ ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ರಲ್ಲಿ ‘ವರ್ಷದ ಗವರ್ನರ್’ (Governor of the Year) ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ಪ್ರಶಸ್ತಿ ವಿಜೇತರನ್ನು ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಘೋಷಿಸಲಾಯಿತು. ನ್ಯಾಷನಲ್ ಬ್ಯಾಂಕ್ ಆಫ್ ಉಕ್ರೇನ್ ಗೆ 2023 ರ ಸೆಂಟ್ರಲ್ ಬ್ಯಾಂಕ್ ಆಫ್ ದಿ ಇಯರ್ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಶಕ್ತಿಕಾಂತ ದಾಸ್ ಅವರಿಗೆ ವರ್ಷದ ಗವರ್ನರ್ ಪ್ರಶಸ್ತಿ ಲಭಿಸಿದೆ. ಆರ್‌ಬಿಐ ಗವರ್ನರ್ ಸದ್ಯ ಲಂಡನ್‌ನಲ್ಲಿದ್ದಾರೆ. ಮಂಗಳವಾ ಅವರು ಸೆಂಟ್ರಲ್ ಬ್ಯಾಂಕಿಂಗ್, ಲಂಡನ್, ಯುಕೆ ಆಯೋಜಿಸಿದ್ದ ಬೇಸಿಗೆ ಸಭೆಗಳ ಆರಂಭಿಕ ಸಮಗ್ರ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದರು.
RBI Governor Shaktikanta Das awarded Governor of the Year by Central Banking in London
(Pics source – RBI) pic.twitter.com/BI1bWB3IfR
— ANI (@ANI) June 14, 2023
ಶಕ್ತಿಕಾಂತ ದಾಸ್ (ನಿವೃತ್ತ IAS ಅಧಿಕಾರಿ) ಡಿಸೆಂಬರ್ 12, 2018 ರಂದು ಭಾರತೀಯ ರಿಸರ್ವ್ ಬ್ಯಾಂಕ್‌ನ 25 ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು. ಇದಕ್ಕಿಂತ ಮೊದಲು ಅವರು ಭಾರತದ 15 ನೇ ಹಣಕಾಸು ಆಯೋಗದ ಮುಖ್ಯಸ್ಥ ಮತ್ತು G20 ಶೆರ್ಪಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಶಕ್ತಿಕಾಂತ ದಾಸ್ ಅವರು ತಮ್ಮ 40 ವರ್ಷಗಳ ವೃತ್ತಿಜೀವನದಲ್ಲಿ ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ದಾಸ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಇದನ್ನೂ ಓದಿ: Insurance: ಸಿಂಗಲ್ ಪ್ರೀಮಿಯಮ್ ಇನ್ಷೂರೆನ್ಸ್ ಪಾಲಿಸಿ ಜನಪ್ರಿಯವಾಗುತ್ತಿರುವುದು ಯಾಕೆ? ಅದರ ಅನುಕೂಲತೆಗಳೇನು?
ಹಣಕಾಸು ಸಚಿವಾಲಯದಲ್ಲಿ ಅವರ ಸುದೀರ್ಘ ಅಧಿಕಾರಾವಧಿಯಲ್ಲಿ, ಅವರು ಎಂಟು ಕೇಂದ್ರ ಬಜೆಟ್‌ಗಳ ತಯಾರಿಕೆಯಲ್ಲಿ ನೇರವಾಗಿ ಸಂಬಂಧ ಹೊಂದಿದ್ದರು. ಅವರು IMF, G20, BRICS, SAARC ಮುಂತಾದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಶಕ್ತಿಕಾಂತ ದಾಸ್ ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ