AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ನೊಂದಿಗೆ ವ್ಯಾಪಾರ: 4 ಭಾರತೀಯ ಕಂಪನಿಗಳು ಹಾಗು 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ

US Sanctions 4 Indian Firms, 3 Nationals Over Iran Trade Under 'Operation Economic Outcast': ಇರಾನ್ ಜೊತೆ ವ್ಯಾಪಾರದಲ್ಲಿ ತೊಡಗಿರುವ ಮತ್ತು ಸಹಕಾರ ನೀಡುತ್ತಿರುವ ಶಂಕೆಯ ಮೇಲೆ ವಿಶ್ವಾದ್ಯಂತ 60 ಸಂಸ್ಥೆಗಳು ಹಾಗೂ ವ್ಯಕ್ತಿಗಳ ಮೇಲೆ ಅಮೆರಿಕ ನಿಷೇಧ ಹೇರಿದೆ. ಇದರಲ್ಲಿ 4 ಭಾರತೀಯ ಕಂಪನಿಗಳು ಹಾಗೂ 3 ವ್ಯಕ್ತಿಗಳು ಇದ್ದಾರೆ. ಆಪರೇಷನ್ ಎಕನಾಮಿಕ್ ಔಟ್​ಕಾಸ್ಟ್ ಅಡಿಯಲ್ಲಿ ಅಮೆರಿಕ ಈ ನಿರ್ಬಂಧ ಕ್ರಮ ತೆಗೆದುಕೊಂಡಿದೆ.

ಇರಾನ್​ನೊಂದಿಗೆ ವ್ಯಾಪಾರ: 4 ಭಾರತೀಯ ಕಂಪನಿಗಳು ಹಾಗು 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 26, 2026 | 12:06 PM

Share

ವಾಷಿಂಗ್ಟನ್, ಆಗಸ್ಟ್ 26: ಅಮೆರಿಕ ತನ್ನ “ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್” (Operation Economic Outcast) ಕಾರ್ಯಾಚರಣೆಯಡಿಯಲ್ಲಿ ಇರಾನ್‌ಗೆ ಸಂಬಂಧಿಸಿದಂತೆ ಕಾನೂನುಬಾಹಿರ ವ್ಯಾಪಾರ ಮತ್ತು ಇಂಧನ ಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ 4 ಭಾರತೀಯ ಸಂಸ್ಥೆಗಳು ಮತ್ತು 3 ಭಾರತೀಯ ಪ್ರಜೆಗಳ ಮೇಲೆ ನಿರ್ಬಂಧಗಳನ್ನು (US Sanctions) ಹೇರಿದೆ.

ಇರಾನ್‌ನ ಪೆಟ್ರೋಕೆಮಿಕಲ್ ಮತ್ತು ಪೆಟ್ರೋಲಿಯಂ ವಲಯದ ಮೇಲೆ ಒತ್ತಡ ಹೇರಲು ಅಮೆರಿಕ ಈ ಕ್ರಮ ಕೈಗೊಂಡಿದೆ.

ಇರಾನ್ ಉತ್ಪನ್ನಗಳ ಖರೀದಿ, ಮಾರಾಟ ಅಥವಾ ಸಾಗಣೆಗೆ ನೆರವಾದ ಆರೋಪದ ಮೇಲೆ ನಾಲ್ಕು ಭಾರತೀಯ ಮೂಲದ ನೆಟ್‌ವರ್ಕ್/ಸಂಸ್ಥೆಗಳನ್ನು ನಿರ್ಬಂಧಿತ ಪಟ್ಟಿಗೆ ಸೇರಿಸಲಾಗಿದೆ. ಈ ಅಕ್ರಮ ವ್ಯಾಪಾರ ಜಾಲಗಳಿಗೆ ನೆರವು ನೀಡಿದ ಮೂವರು ಭಾರತೀಯ ನಾಯಕರನ್ನು ಅಮೆರಿಕ ಹಣಕಾಸು ಇಲಾಖೆ ಗುರಿಯಾಗಿಸಿಕೊಂಡಿದೆ.

ಇದನ್ನೂ ಓದಿ: ಯುಪಿಐ: ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಯ ಒಂದು ದಶಕದ ಸಾಧನೆ

ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಭಾರತೀಯ ಕಂಪನಿಗಳು

  1. ಪೋರ್ಟ್​ಈಸ್ ಪಾರ್ಟ್ನರ್ಸ್ ಎಲ್​ಎಲ್​ಪಿ
  2. ಸದಾಶಿವ ಓವರ್​ಸೀಸ್ ಲಿ
  3. ಪಿಪಿ ಸಾಫ್ಟ್​ಟೆಕ್ ಪ್ರೈ ಲಿ
  4. ಪ್ರಕೃತೀಸ್ ಇನ್​ಫ್ರಾ ಇಂಪೆಕ್ಸ್ ಇಂಡಿಯಾ ಪ್ರೈ ಲಿ

ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಭಾರತೀಯ ವ್ಯಕ್ತಿಗಳು

  1. ಇಂದ್ರಿಸ್ಮಿಯಾ ಅಷ್ರಫ್​ಮಿಯಾ ಶೇಖ್
  2. ಹರೀಶ್ ರಾಮಚಂದ್ರ ರಂಗಿ (ಪೋರ್ಟ್​ಈಸ್ ಪಾರ್ಟ್ನರ್ಸ್)
  3. ಪ್ರಶಾಂತ್ ಗರ್ಗ್ (ಪಿಪಿ ಸಾಫ್ಟ್​ಟೆಕ್)

ನಿರ್ಬಂಧದ ಪರಿಣಾಮ: ಅಮೆರಿಕದಲ್ಲಿರುವ ಇವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಹಾಗೂ ಯಾವುದೇ ಅಮೆರಿಕನ್ ಪ್ರಜೆ ಅಥವಾ ಸಂಸ್ಥೆ ಇವರೊಂದಿಗೆ ವ್ಯವಹರಿಸುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಡಿಆರ್​ಡಿಒ ಮಿಸೈಲ್ ಸಿಸ್ಟಂಗಳ ತಂತ್ರಜ್ಞಾನ ರಕ್ಷಣಾ ಉದ್ಯಮಕ್ಕೆ ಹಸ್ತಾಂತರ; ದೇಶೀಯವಾಗಿ ಕ್ಷಿಪಣಿ ತಯಾರಿಕೆಗೆ ಭರ್ಜರಿ ಪುಷ್ಟಿ

ಅಮೆರಿಕವು ಕೇವಲ ಭಾರತೀಯ ಕಂಪನಿಗಳು ಮತ್ತು ಪ್ರಜೆಗಳನ್ನು ಗುರಿಯಾಗಿಸಿಲ್ಲ. ಇರಾನ್​ನ ಮಿಲಿಟರಿ ಚಟುವಟಿಕೆ, ಸರಬರಾಜು, ವ್ಯಾಪಾರಗಳಲ್ಲಿ ಶಾಮೀಲಾಗಿರುವ ಶಂಕೆ ಮತ್ತು ಆರೋಪದ ಮೇಲೆ ಜಾಗತಿಕವಾಗಿ ಸುಮಾರು 60 ಸಂಸ್ಥೆಗಳು, ವ್ಯಕ್ತಿಗಳು ಹಾಗೂ ಹಡಗುಗಳ ಮೇಲೆ ಅಮೆರಿಕ ನಿಷೇಧ ಹಾಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು