Debtors List: ಸಾಲದ ವಿಚಾರದಲ್ಲಿ ಅಮೆರಿಕಕ್ಕೆ ಯಾರು ಸಾಟಿ? ಅತಿಹೆಚ್ಚು ಸಾಲ ಹೊಂದಿರುವವರ ಪಟ್ಟಿಯಲ್ಲಿ ಭಾರತದ ಸ್ಥಾನವೆಷ್ಟು?

|

Updated on: Jan 01, 2024 | 12:36 PM

India's External Debt: ಜಗತ್ತಿನ ಒಟ್ಟಾರೆ ಬಾಹ್ಯ ಸಾಲದಲ್ಲಿ ಅಮೆರಿಕದ ಪಾಲೇ ಶೇ. 40ಕ್ಕಿಂತಲೂ ಹೆಚ್ಚಿದೆ. ಅಮೆರಿಕ 32.9 ಟ್ರಿಲಿಯನ್ ಡಾಲರ್​ನಷ್ಟು ಬಾಹ್ಯ ಸಾಲ ಹೊಂದಿದೆ. ಭಾರತ 625 ಬಿಲಿಯನ್ ಡಾಲರ್​ನಷ್ಟು (52 ಲಕ್ಷ ಕೋಟಿ ರೂ) ಬಾಹ್ಯ ಸಾಲ ಹೊಂದಿದ್ದು ಪಟ್ಟಿಯಲ್ಲಿ 22ನೇ ಸ್ಥಾನದಲ್ಲಿದೆ. ಸಾಲ ಅಪಾಯಕಾರಿಯೂ ಹೌದು, ಉಪಕಾರಿಯೂ ಹೌದು. ಹೆಚ್ಚಿನ ಶ್ರೀಮಂತ ದೇಶಗಳು ಮತ್ತು ಶ್ರೀಮಂತ ಕಂಪನಿಗಳೇ ಹೆಚ್ಚಿನ ಸಾಲ ಹೊಂದಿರುವುದು ಗಮನಾರ್ಹ.

Debtors List: ಸಾಲದ ವಿಚಾರದಲ್ಲಿ ಅಮೆರಿಕಕ್ಕೆ ಯಾರು ಸಾಟಿ? ಅತಿಹೆಚ್ಚು ಸಾಲ ಹೊಂದಿರುವವರ ಪಟ್ಟಿಯಲ್ಲಿ ಭಾರತದ ಸ್ಥಾನವೆಷ್ಟು?
ಸಾಲ
Follow us on

ನವದೆಹಲಿ, ಜನವರಿ 1: ಒಟ್ಟಾರೆ ಜಾಗತಿಕ ಸಾಲ (global debt) 2023ರ ವರ್ಷದಲ್ಲಿ 307 ಟ್ರಿಲಿಯನ್ ಡಾಲರ್ ಗಡಿ ಮುಟ್ಟಿದೆ. ಇನ್ನು, ವಿವಿಧ ದೇಶಗಳ ಒಟ್ಟಾರೆ ಬಾಹ್ಯ ಸಾಲವೇ 100 ಟ್ರಿಲಿಯನ್ ಡಾಲರ್ ಸಮೀಪ ಇದೆ. ಇಲ್ಲಿ ಒಂದು ದೇಶದ ಸರ್ಕಾರವಾಗಲೀ ಅದರ ಕಂಪನಿಗಳಾಗಲೀ, ಸಾರ್ವಜನಿಕರೇ ಆಗಲೀ ವಿದೇಶಗಳಿಂದ ಪಡೆದ ಒಟ್ಟಾರೆ ಸಾಲವನ್ನು ಬಾಹ್ಯ ಸಾಲವೆಂದು (external debt) ಪರಿಗಣಿಸಲಾಗುತ್ತದೆ. ಜಗತ್ತಿನ ಒಟ್ಟಾರೆ ಬಾಹ್ಯ ಸಾಲದಲ್ಲಿ ಅಮೆರಿಕದ ಪಾಲೇ ಶೇ. 40ಕ್ಕಿಂತಲೂ ಹೆಚ್ಚಿದೆ. ಅಮೆರಿಕ 32.9 ಟ್ರಿಲಿಯನ್ ಡಾಲರ್​ನಷ್ಟು ಬಾಹ್ಯ ಸಾಲ ಹೊಂದಿದೆ. ಅಂದರೆ ಸುಮಾರು 2,737 ಲಕ್ಷ ಕೋಟಿ ರೂನಷ್ಟು ಸಾಲ ಹೊಂದಿದೆ. ಭಾರತ (indian economy) 625 ಬಿಲಿಯನ್ ಡಾಲರ್​ನಷ್ಟು (52 ಲಕ್ಷ ಕೋಟಿ ರೂ) ಬಾಹ್ಯ ಸಾಲ ಹೊಂದಿದ್ದು ಪಟ್ಟಿಯಲ್ಲಿ 22ನೇ ಸ್ಥಾನದಲ್ಲಿದೆ.

ಅತ್ಯಧಿಕ ಬಾಹ್ಯ ಸಾಲ ಹೊಂದಿರುವ 25 ದೇಶಗಳ ಪಟ್ಟಿ

  1. ಅಮೆರಿಕ: 32.9 ಟ್ರಿಲಿಯನ್ ಡಾಲರ್
  2. ಬ್ರಿಟನ್: 8.7 ಟ್ರಿಲಿಯನ್ ಡಾಲರ್
  3. ಜಪಾನ್: 4.34 ಟ್ರಿಲಿಯನ್ ಡಾಲರ್
  4. ನೆದರ್​ಲ್ಯಾಂಡ್ಸ್: 3.79 ಟ್ರಿಲಿಯನ್ ಡಾಲರ್
  5. ಫ್ರಾನ್ಸ್: 3.28 ಟ್ರಿಲಿಯನ್ ಡಾಲರ್
  6. ಐರ್ಲೆಂಡ್: 3.26 ಟ್ರಿಲಿಯನ್ ಡಾಲರ್
  7. ಇಟಲಿ: 3.1 ಟ್ರಿಲಿಯನ್ ಡಾಲರ್
  8. ಜರ್ಮನಿ: 2.81 ಟ್ರಿಲಿಯನ್ ಡಾಲರ್
  9. ಕೆನಡಾ: 2.65 ಟ್ರಿಲಿಯನ್ ಡಾಲರ್
  10. ಚೀನಾ: 2.45 ಟ್ರಿಲಿಯನ್ ಡಾಲರ್
  11. ಸ್ವಿಟ್ಜರ್​ಲ್ಯಾಂಡ್: 2.3 ಟ್ರಿಲಿಯನ್ ಡಾಲರ್
  12. ಆಸ್ಟ್ರೇಲಿಯಾ: 1.9 ಟ್ರಿಲಿಯನ್ ಡಾಲರ್
  13. ಹಾಂಕಾಂಗ್: 1.82 ಟ್ರಿಲಿಯನ್ ಡಾಲರ್
  14. ಸ್ಪೇನ್: 1.67 ಟ್ರಿಲಿಯನ್ ಡಾಲರ್
  15. ಬ್ರೆಜಿಲ್: 1.49 ಟ್ರಿಲಿಯನ್ ಡಾಲರ್
  16. ಸ್ವೀಡನ್: 1.03 ಟ್ರಿಲಿಯನ್ ಡಾಲರ್
  17. ಮೆಕ್ಸಿಕೋ: 880 ಬಿಲಿಯನ್ ಡಾಲರ್
  18. ಸಿಂಗಾಪುರ್: 815 ಬಿಲಿಯನ್ ಡಾಲರ್
  19. ನಾರ್ವೆ: 738 ಬಿಲಿಯನ್ ಡಾಲರ್
  20. ಸೌತ್ ಕೊರಿಯಾ: 665 ಬಿಲಿಯನ್ ಡಾಲರ್
  21. ಬೆಲ್ಜಿಯಂ: 652 ಬಿಲಿಯನ್ ಡಾಲರ್
  22. ಭಾರತ: 625 ಬಿಲಿಯನ್ ಡಾಲರ್
  23. ಟರ್ಕಿ: 476 ಬಿಲಿಯನ್ ಡಾಲರ್
  24. ಪೋರ್ಚುಗಲ್: 440 ಬಿಲಿಯನ್ ಡಾಲರ್
  25. ಆಸ್ಟ್ರಿಯಾ: 401 ಬಿಲಿಯನ್ ಡಾಲರ್

ಇದನ್ನೂ ಓದಿ: FPI Investments: 2023ರಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗೆ ಹರಿದುಬಂದಿದೆ ಭರಪೂರ ಎಫ್​ಪಿಐ ಹಣ; 2.4 ಲಕ್ಷ ಕೋಟಿ ರೂ ಹೂಡಿಕೆ

ಬಾಹ್ಯ ಸಾಲ ಎಷ್ಟು ಅಪಾಯಕಾರಿ?

ಸಾಲ ಅಪಾಯಕಾರಿಯೂ ಹೌದು, ಉಪಕಾರಿಯೂ ಹೌದು. ಹೆಚ್ಚಿನ ಶ್ರೀಮಂತ ದೇಶಗಳು ಮತ್ತು ಶ್ರೀಮಂತ ಕಂಪನಿಗಳೇ ಹೆಚ್ಚಿನ ಸಾಲ ಹೊಂದಿರುವುದು ಗಮನಾರ್ಹ. ಆರ್ಥಿಕತೆಗೆ ಅತ್ಯಗತ್ಯವಾದ ಬಂಡವಾಳ ವೆಚ್ಚಕ್ಕಾಗಿ ದೇಶಗಳು ಸಾಲ ಮಾಡುತ್ತವೆ. ಕಡಿಮೆ ಬಡ್ಡಿದರಕ್ಕೆ ಸಿಗುವ ಸಾಲ ಬಳಸಿ, ಹೆಚ್ಚಿನ ಆದಾಯ ಸೃಷ್ಟಿಸುವ ಕಡೆ ಹೂಡಿಕೆ ಮಾಡುವುದು ಬಹಳ ದೇಶಗಳ ನೀತಿ ಆಗಿರುತ್ತದೆ. ಹೀಗಾಗಿ, ಸಾಲದ ಪ್ರಮಾಣ ಹೆಚ್ಚು ಹೊಂದಿರುತ್ತವೆ.

ಆದರೆ, ಬಂಡವಾಳ ವೆಚ್ಚವನ್ನು ಸರಿಯಾಗಿ ನಿಭಾಯಿಸದ ದೇಶಗಳು ಸಾಲದ ನಿರ್ವಹಣೆಯಲ್ಲಿ ಸೋಲುತ್ತವೆ. ಸಾಲದ ಸುಳಿಗೆ ಸಿಲುಕಿ ಆರ್ಥಿಕವಾಗಿ ಪತನಗೊಳ್ಳುತ್ತವೆ ಎಂಬುದು ಆರ್ಥಿಕ ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ