FPI Investments: 2023ರಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗೆ ಹರಿದುಬಂದಿದೆ ಭರಪೂರ ಎಫ್​ಪಿಐ ಹಣ; 2.4 ಲಕ್ಷ ಕೋಟಿ ರೂ ಹೂಡಿಕೆ

Indian Equity and Debt Market: 2023ರಲ್ಲಿ ಭಾರತದ ಷೇರು ಮಾರುಕಟ್ಟೆಗೆ 1.71 ಲಕ್ಷ ಕೋಟಿ ರೂ ಮೊತ್ತದ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆಗಳು ಹರಿದುಬಂದಿವೆ. ಡಿಸೆಂಬರ್ ತಿಂಗಳಲ್ಲೇ 66,134 ಕೋಟಿ ರೂ ಹೂಡಿಕೆ ಬಂದಿದೆ. ಗವರ್ನ್ಮೆಂಟ್ ಬಾಂಡ್ ಇತ್ಯಾದಿ ಡೆಟ್ ಮಾರುಕಟ್ಟೆಗೆ 2023ರಲ್ಲಿ 68,663 ಕೋಟಿ ರೂ ಮೊತ್ತದ ಎಫ್​ಪಿಐ ಹೂಡಿಕೆಗಳು ಬಂದಿವೆ. ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಆಗುವ ಸಾಧ್ಯತೆ ಇರುವುದರಿಂದ ಅಲ್ಲಿಂದ ಹೂಡಿಕೆದಾರರು ತಮ್ಮ ಹಣವನ್ನು ಭಾರತದ ಮಾರುಕಟ್ಟೆಗಳಿಗೆ ವರ್ಗಾಯಿಸುತ್ತಿದ್ದಾರೆ.

FPI Investments: 2023ರಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗೆ ಹರಿದುಬಂದಿದೆ ಭರಪೂರ ಎಫ್​ಪಿಐ ಹಣ; 2.4 ಲಕ್ಷ ಕೋಟಿ ರೂ ಹೂಡಿಕೆ
ಎಫ್​ಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 01, 2024 | 10:29 AM

ನವದೆಹಲಿ, ಜನವರಿ 1: ಹಿಂಡನ್ಬರ್ಗ್ ವರದಿ, ಜಾಗತಿಕ ಆರ್ಥಿಕ ಹಿನ್ನಡೆಯ ಮಧ್ಯೆಯೂ 2023ರ ವರ್ಷದಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆ (Share Market) ಸಖತ್ತಾಗಿ ಬೆಳೆದಿದೆ. ಈ ಒಂದು ವರ್ಷ ಬರೋಬ್ಬರಿ 1.7 ಲಕ್ಷ ಕೋಟಿ ರೂ ಮೊತ್ತದ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆಗಳು (FPI- Foreign Portfolio Investment) ಭಾರತದ ಷೇರು ಮಾರುಕಟ್ಟೆಗಳಿಗೆ ಹರಿದುಬಂದಿವೆ. ಅದರಲ್ಲೂ ಡಿಸೆಂಬರ್​ನ ಒಂದೇ ತಿಂಗಳಲ್ಲಿ 66,134 ಕೋಟಿ ರೂ ಮೊತ್ತದಷ್ಟು ಎಫ್​ಪಿಐಗಳು ಬಂದಿರುವುದು ಗಮನಾರ್ಹ. ಎಫ್​ಪಿಐಗಳು ಒಟ್ಟಾರೆ 2.4 ಲಕ್ಷ ಕೋಟಿ ರೂ ನಷ್ಟು ಬಂಡವಾಳವನ್ನು ಷೇರುಮಾರುಕಟ್ಟೆ ಮತ್ತು ಡೆಟ್ ಮಾರುಕಟ್ಟೆಗೆ ಹಾಕಿವೆ.

2023ರಲ್ಲಿ ಎಫ್​ಪಿಐಗಳು 1.71 ಲಕ್ಷ ಕೋಟಿ ರೂ ಹೂಡಿಕೆಯನ್ನು ಈಕ್ವಿಟಿಗಳ ಮೇಲೆ ಹಾಕಿದರೆ, 68,663 ಕೋಟಿ ರೂ ಹೂಡಿಕೆಯನ್ನು ಡೆಟ್ ಮಾರುಕಟ್ಟೆಗಳಲ್ಲಿ (Debt market) ತೊಡಗಿಸಿವೆ. ಡೆಟ್ ಮಾರುಕಟ್ಟೆ ಎಂದರೆ ಸಾಲಪತ್ರಗಳ (ಸರ್ಕಾರಿ ಬಾಂಡ್, ಕಾರ್ಪೊರೇಟ್ ಬಾಂಡ್ ಇತ್ಯಾದಿ) ಮಾರುಕಟ್ಟೆ.ಇದರೊಂದಿಗೆ ಭಾರತದ ಬಂಡವಾಳ ಮಾರುಕಟ್ಟೆಗೆ ಎಫ್​ಪಿಐಗಳು ಮಾಡಿದ ಒಟ್ಟಾರೆ ಹೂಡಿಕೆ 2.4 ಲಕ್ಷ ಕೋಟಿ ರೂ ಆಗಿದೆ.

ಇದನ್ನೂ ಓದಿ: IPOs: 2023ರಲ್ಲಿ ಅತಿಹೆಚ್ಚು ಐಪಿಒಗಳ ಬಿಡುಗಡೆ; 2024ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ

ಎಫ್​ಪಿಐಗಳಿಗೆ 2023ರಲ್ಲಿ ಭಾರತದ ಷೇರು ಮಾರುಕಟ್ಟೆ ಆಕರ್ಷಕವಾಗಿದ್ದು ಯಾಕೆ?

2022ರಲ್ಲಿ ಭಾರತದ ಬಂಡವಾಳ ಮಾರುಕಟ್ಟೆಯಿಂದ 1.21 ಲಕ್ಷ ಕೋಟಿ ರೂ ಮೊತ್ತದ ಎಫ್​ಪಿಐ ಹೂಡಿಕೆಗಳು ಹಿಂತೆಯಲ್ಪಟ್ಟಿದ್ದವು. ಆದರೆ, 2023ರಲ್ಲಿ, ಅದರಲ್ಲೂ ವರ್ಷಾಂತ್ಯದಲ್ಲಿ ಎಫ್​​ಪಿಐಗಳು ಮತ್ತೆ ಭಾರತದತ್ತ ಮುಖ ಮಾಡಲು ಪ್ರಮುಖ ಕಾರಣ ಅಮೆರಿಕದ ಬಡ್ಡಿದರ ವಿಚಾರ. ಅಮೆರಿಕದಲ್ಲಿ ಬಡ್ಡಿದರ ಮತ್ತೆ ಹೆಚ್ಚುವುದಿಲ್ಲ. ಮುಂದಿನ ದಿನಗಳಲ್ಲಿ ಮೂರು ಬಾರಿ ಬಡ್ಡಿ ದರ ಇಳಿಕೆ ಮಾಡಬಹುದು ಎಂಬ ಸಾಧ್ಯತೆ ಇರುವುದರಿಂದ ವಿದೇಶಗಳಿಂದ ಹೂಡಿಕೆದಾರರ ಆಸಕ್ತಿ ಭಾರತದ ಷೇರು ಮಾರುಕಟ್ಟೆ ಮತ್ತು ಡೆಟ್ ಮಾರುಕಟ್ಟೆಯ ಮೇಲೆ ನೆಟ್ಟಿದೆ.

2022ರಲ್ಲಿ ಎಫ್​ಪಿಐಗಳು ಭಾರತದಿಂದ ಕಾಲ್ತೆಗೆಯಲು ಕೂಡ ಇದೇ ಅಮೆರಿಕಾ ಬಡ್ಡಿದರವೇ ಕಾರಣ. ಹಣದುಬ್ಬರ ನಿಯಂತ್ರಿಸಲು ಅಮೆರಿಕದಲ್ಲಿ ಸತತವಾಗಿ ಬಡ್ಡಿದರ ಏರಿಕೆ ಮಾಡಿದ್ದರಿಂದ ಭಾರತದಿಂದ ವಿದೇಶಿಗರ ಹೂಡಿಕೆಗಳು ಅಮೆರಿಕದ ಡೆಟ್ ಮಾರುಕಟ್ಟೆಗೆ ಕಡೆಗೆ ಹರಿದುಹೋಗಿದ್ದವು. ಈಗ ಬಡ್ಡಿದರ ಇಳಿಕೆ ಆಗುವ ಸಾಧ್ಯತೆ ಇರುವುದರಿಂದ ಭಾರತದತ್ತ ಇವು ಮತ್ತೆ ಮುಖ ಮಾಡಿವೆ. 2024ರಲ್ಲಿ ಇನ್ನೂ ಹೆಚ್ಚಿನ ಎಫ್​ಪಿಐಗಳು ಭಾರತಕ್ಕೆ ಹರಿದುಬರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್