India vs China: ಪಾಕಿಸ್ತಾನದ ಚೀನೀ ಅಸ್ತ್ರಗಳು ಮೇಡ್ ಇನ್ ಇಂಡಿಯಾ ವೆಪನ್ಸ್ಗೆ ಸಾಟಿಯಾ? ಜಾನ್ ಸ್ಪೆನ್ಸರ್ ಬಿಚ್ಚಿಟ್ಟ ಸತ್ಯ
India vs Pakistan weapons effectiveness: ಆಪರೇಷನ್ ಸಿಂದೂರ್ ಹಾಗೂ ನಂತರದ ಚಕಮಕಿಯಲ್ಲಿ ಚೀನಾದ ಶಸ್ತ್ರಾಸ್ತ್ರಗಳ ದೌರ್ಬಲ್ಯವನ್ನು ಭಾರತ ಎತ್ತಿ ತೋರಿಸಿದೆ. ಭಾರತದಲ್ಲಿ ಸ್ಥಳೀಯವಾಗಿ ತಯಾರಾದ ವೆಪನ್ಗಳು ಚೀನಾದವಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಆಧುನಿಕ ಯುದ್ಧೋಪಕರಣಗಳನ್ನು ಆಮದು ಮಾಡಿಕೊಳ್ಳೋದು ಮಾತ್ರವಲ್ಲ, ನೈಜ ಯುದ್ಧದಲ್ಲಿ ಅದರ ಕ್ಷಮತೆ ಎಷ್ಟು ಎಂಬುದು ಮುಖ್ಯ ಎಂದು ಯುದ್ಧನೀತಿ ತಜ್ಞ ಜಾನ್ ಸ್ಪೆನ್ಸರ್ ಹೇಳುತ್ತಾರೆ.

ನವದೆಹಲಿ, ಮೇ 12: ಭಾರತ ಮತ್ತು ಪಾಕಿಸ್ತಾನದ ನಡುವಿನ ಕಳೆದ ವಾರದ ಸಂಘರ್ಷದಲ್ಲಿ (India Pakistan conflict) ಒಂದು ಸ್ಪಷ್ಟ ಸಂದೇಶ ರವಾನೆಯಾಗಿದೆ. ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಇನ್ನೂ ಕೂಡ ಯುದ್ಧಕಾಲದಲ್ಲಿ ಬಳಕೆಯಾಗಿ ತಮ್ಮ ಸಾಮರ್ಥ್ಯ ಸಾಬೀತಾಗಬೇಕಿದೆ. ಭಾರತದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯಲ್ಲಿ ಚೀನಾದ ಡಿಫೆನ್ಸ್ ಸಿಸ್ಟಂ ವಿಫಲವಾಗಿದ್ದನ್ನು ತಜ್ಞರು ಎತ್ತಿತೋರಿಸಿದ್ದಾರೆ. ಜಾಗತಿಕ ಸಮರನೀತಿ ತಜ್ಞ ಜಾನ್ ಸ್ಪೆನ್ಸರ್ (John Spencer) ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. ಅವರ ಪ್ರಕಾರ ಯುದ್ಧವು ಮಿಲಿಟರಿ ಉಪಕರಣಗಳ ಪರೀಕ್ಷೆ ಮಾತ್ರವಲ್ಲ, ಅವುಗಳು ನೈಜ ಸ್ಥಿತಿಯಲ್ಲಿ ಎಷ್ಟು ಪರಿಣಾಮಕಾರಿ ಎಂಬುದರ ಪರೀಕ್ಷೆಯಾಗಿರುತ್ತದೆ ಎಂದು ಜಾನ್ ಸ್ಪೆನ್ಸರ್ ಹೇಳುತ್ತಾರೆ.
‘ಭಾರತದ ಆಪರೇಷನ್ ಸಿಂದೂರ್ನಿಂದ ಒಂದು ಸಂದೇಶ ರವಾನೆಯಾಗಿದೆ. ಅಷ್ಟು ಮಾತ್ರವಲ್ಲ, ಭಾರತದಲ್ಲಿ ಸ್ಥಳೀಯವಾಗಿ ತಯಾರಾದ ಶಸ್ತ್ರಾಸ್ತ್ರಗಳು ಕೆಲಸ ಮಾಡಿವೆ, ಚೀನಾದವು ಕೆಲಸ ಮಾಡಿಲ್ಲ ಎನ್ನುವ ಸತ್ಯಾಂಶವೂ ಬಹಿರಂಗಗೊಂಡಿದೆ’ ಎಂದು ಜಾನ್ ಸ್ಪೆನ್ಸರ್ ಹೇಳುತ್ತಾರೆ.
War is always a test—not just of military hardware, but of actual combat effectiveness. In response to the April 22 terrorist attack in Kashmir, India launched Operation Sindoor, striking nine terrorist infrastructure targets in Pakistan. The operation didn’t just send a… https://t.co/L39RsFkZz8 pic.twitter.com/h2Gw3xSAF7
— John Spencer (@SpencerGuard) May 12, 2025
‘2014ರಲ್ಲಿ ಭಾರತಕ್ಕೆ ಅಗತ್ಯವಾಗಿರುವ ಮದ್ದುಗುಂಡುಗಳಲ್ಲಿ ಶೇ. 32ರಷ್ಟನ್ನು ಸ್ಥಳೀಯವಾಗಿ ತಯಾರಿಸಲಾಗುತ್ತಿತ್ತು. 2024ರಲ್ಲಿ ಇದು ಶೇ. 88ಕ್ಕೆ ಏರಿದೆ. ಬ್ರಹ್ಮೋಸ್, ಪಿನಾಕದಂತಹ ಮಿಸೈಲ್ಗಳಿಂದ ಹಿಡಿದು ರಾಡಾರ್ ಮತ್ತು ಆರ್ಟಿಲರಿ ಸಿಸ್ಟಂಗಳವರೆಗೆ ಮೇಡ್ ಇನ್ ಇಂಡಿಯಾ ಯುದ್ಧೋಪಕರಣಗಳು ಸಮರ ಕಾಲದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿವೆ. ಇದು ಒಂದು ರಾಷ್ಟ್ರೀಯ ಸಾಧನೆ ಮಾತ್ರವವಲ್ಲ, ಆಧುನಿಕ ಅಪಾಯ ಎದುರಿಸುತ್ತಿರುವ ಯಾವುದೇ ದೇಶದ ಸಮರಸಿದ್ಧತೆಗೆ ಒಂದು ಮಾದರಿಯಾಗಿದೆ’ ಎಂದು ಜಾನ್ ಸ್ಪೆನ್ಸರ್ ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲೇ ತಯಾರಿಸಿದ ಹೈಡ್ರೋಜನ್ಶಕ್ತ ಮಿಲಿಟರಿ ಡ್ರೋನ್ಗಳು ನಿಯೋಜನೆಗೆ ಸಿದ್ಧ; ಭಾರತದ ವಾಯುಸೇನೆಗೆ ಮತ್ತಷ್ಟು ಬಲ
ಚೀನಾ ನಿರ್ಮಿತ ಯುದ್ಧೋಪಕರಣಗಳನ್ನು ಪ್ರಸ್ತಾಪಿಸದ ಅವರು, ಎಚ್ಕ್ಯು-9/ಪಿ, ಎಲ್ವೈ-80, ಎಫ್ಎಂ-90ಯಂತ ಡಿಫೆನ್ಸ್ ಸಿಸ್ಟಂಗಳು ನಿಖರ ದಾಳಿಗಳನ್ನು ಗುರುತಿಸಲು ಅಥವಾ ತಡೆಯು ವಿಫಲವಾಗಿವೆ. ನೈಜ ಯುದ್ಧದಲ್ಲಿ ಶಸ್ತ್ರಾಸ್ತ್ರಗಳ ಸಂಖ್ಯೆಗಿಂತ ಅವುಗಳ ಕ್ಷಮತೆ ಮುಖ್ಯ ಎಂಬುದು ಜಾನ್ ಸ್ಪೆನ್ಸರ್ ಅವರ ಅನಿಸಿಕೆ.
ಭಾರತ ಮತ್ತು ಪಾಕಿಸ್ತಾನಕ್ಕೆ ಎಲ್ಲೆಲ್ಲಿಂದ ಶಸ್ತ್ರಾಸ್ತ್ರ ಆಮದು?
ಸಿಪ್ರಿ ವರದಿಯೊಂದರ ಪ್ರಕಾರ, ಪಾಕಿಸ್ತಾನಕ್ಕೆ ಅಗತ್ಯವಾದ ಹೆಚ್ಚಿನ ಶಸ್ತ್ರಾಸ್ತ್ರಗಳು ಚೀನಾದಿಂದ ಸರಬರಾಜಾಗುತ್ತವೆ. ಅಮೆರಿಕ, ಟರ್ಕಿ, ನೆದರ್ಲ್ಯಾಂಡ್ಸ್ ದೇಶಗಳಿಂದಲೂ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಆಮದು ಮಾಡಿಕೊಳ್ಳುತ್ತದೆ.
ಇನ್ನೊಂದೆಡೆ, ಭಾರತವು ತನ್ನ ಶಸ್ತ್ರಾಸ್ತ್ರ ಪೂರೈಕೆಯ ಜಾಲವನ್ನು ಹೆಚ್ಚು ವಿಸ್ತರಿಸಿದೆ. ಈ ಹಿಂದೆ ರಷ್ಯಾದಿಂದ ಅತಿಹೆಚ್ಚು ವೆಪನ್ಸ್ ಪಡೆಯುತ್ತಿದ್ದ ಭಾರತ ಈಗ ಫ್ರಾನ್ಸ್, ಇಸ್ರೇಲ್, ಬ್ರಿಟನ್, ಅಮೆರಿಕದಿಂದಲೂ ಸಾಕಷ್ಟು ಆಮದು ಮಾಡಿಕೊಳ್ಳುತ್ತೇವೆ. ಅದಕ್ಕಿಂತ ಮುಖ್ಯವಾಗಿ, ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ವಿದೇಶೀ ಕಂಪನಿಗಳ ಸಹಯೋಗದೊಂದಿಗೆ ಭಾರತದಲ್ಲಿ ತಯಾರು ಮಾಡಲಾಗುತ್ತಿರುವುದು ಗಮನಾರ್ಹ.
ಇದನ್ನೂ ಓದಿ: ಭಾರತಕ್ಕೆ ಪ್ರವಾಹೋಪಾದಿಯಲ್ಲಿ ವಾಪಸ್ ಬರುತ್ತಿರುವ ವಿದೇಶೀ ಬಂಡವಾಳ; ಏನು ಕಾರಣ?
ಇದಕ್ಕೆ ಉತ್ತಮ ಉದಾಹರಣೆ, ಬ್ರಹ್ಮೋಸ್ ಕ್ಷಿಪಣಿಯದ್ದು. ಭಾರತ ಮತ್ತು ರಷ್ಯಾ ಸಹಯೋಗದಲ್ಲಿ ಬ್ರಹ್ಮೋಸ್ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದೆನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Mon, 12 May 25








