AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುರ್ತು ಸಂದರ್ಭದಲ್ಲಿ ದೇಶದ ಎಲ್ಲಾ ತೈಲ ಮತ್ತು ನೈಸರ್ಗಿಕ ಅನಿಲದ ಮೊದಲ ಅಧಿಕಾರ ಸರ್ಕಾರದ್ದು: ಹೊಸ ನಿಯಮ ನಿರೀಕ್ಷೆ

Draft rules that give govt pre-emptive right over oil and gas: ದೇಶದಲ್ಲಿ ತುರ್ತು ಸನ್ನಿವೇಶ ಎದುರಾದಾಗ, ಇಲ್ಲಿ ಉತ್ಪತ್ತಿಯಾಗುವ ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ ಹಾಗೂ ಅವುಗಳ ಸಂಸ್ಕರಿತ ಉತ್ಪನ್ನಗಳ ಮೇಲೆ ಸರ್ಕಾರಕ್ಕೆ ಮೊದಲ ಅಧಿಕಾರ ಇರುತ್ತದೆ. ಹಾಗೆಂದು, ಹೊಸ ತಿದ್ದುಪಡಿ ಮಸೂದೆಯಲ್ಲಿ ಒಳಗೊಂಡಿರುವ ಕರಡು ನಿಯಮ ಹೇಳುತ್ತದೆ. ತುರ್ತು ಸಂದರ್ಭದಲ್ಲಿ ಹಾಲಿ ಇರುವ ಮಾರುಕಟ್ಟೆ ದರದಲ್ಲಿ ಸರ್ಕಾರವು ಇವನ್ನು ಖರೀದಿಸಲಿದೆ.

ತುರ್ತು ಸಂದರ್ಭದಲ್ಲಿ ದೇಶದ ಎಲ್ಲಾ ತೈಲ ಮತ್ತು ನೈಸರ್ಗಿಕ ಅನಿಲದ ಮೊದಲ ಅಧಿಕಾರ ಸರ್ಕಾರದ್ದು: ಹೊಸ ನಿಯಮ ನಿರೀಕ್ಷೆ
ಕಚ್ಚಾ ತೈಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 11, 2025 | 4:56 PM

Share

ನವದೆಹಲಿ, ಮೇ 11: ರಾಷ್ಟ್ರೀಯ ತುರ್ತು ಸನ್ನಿವೇಶ (Emergency) ಉದ್ಭವವಾದಾಗ, ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ತೈಲ (crude oil) ಮತ್ತು ನೈಸರ್ಗಿಕ ಅನಿಲದ (natural gas) ಮೇಲೆ ಸರ್ಕಾರಕ್ಕೆ ಮೊದಲ ಹಕ್ಕು (Pre-emption right) ಇರುತ್ತದೆ. ಇಂಥದ್ದೊಂದು ನಿಯಮವನ್ನು ಸರ್ಕಾರ ರೂಪಿಸುತ್ತಿದೆ. ಈ ನಿಯಮದ ಪ್ರಕಾರ, ಭಾರತದೊಳಗೆ ತಯಾರಾಗುವ ತೈಲ ಮತ್ತು ಅನಿಲವನ್ನು ಇತರರು (ವಾಣಿಜ್ಯಾತ್ಮಕ) ಖರೀದಿಸುವ ಮೊದಲು ಸರ್ಕಾರಕ್ಕೆ ಅದನ್ನು ಪಡೆಯಲು ಮೊದಲ ಅವಕಾಶ ಇರುತ್ತದೆ. ಈ ನಿಟ್ಟಿನಲ್ಲಿ ಕರಡು ನಿಯಮಗಳನ್ನು ಮಾಡಲಾಗಿದೆ.

ಭೂಗರ್ಭದಿಂದ ತೆಗೆಯಲಾಗುವ ಕಚ್ಛಾ ತೈಲ ಹಾಗು ನೈಸರ್ಗಿಕ ಅನಿಲದ ಮೇಲೆ ತುರ್ತು ಸಂದರ್ಭದಲ್ಲಿ ಸರ್ಕಾರ ಹಕ್ಕು ಹೊಂದಿರಲಿದೆ. ಕಚ್ಚಾ ತೈಲವನ್ನು ಸಂಸ್ಕರಿಸಿ ಪೆಟ್ರೋಲ್, ಡೀಸಲ್ ಇತ್ಯಾದಿ ಇಂಧನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ನೈಸರ್ಗಿಕ ಅನಿಲವನ್ನು ರಸಗೊಬ್ಬರ ತಯಾರಿಕೆ, ಸಿಎನ್​​ಜಿ, ಅಡುಗೆ ಅನಿಲ ತಯಾರಿಕೆಗೆ ಬಳಸಲಾಗುತ್ತದೆ. ಇವೆಲ್ಲವೂ ಕೂಡ ಸಾರ್ವಜನಿಕರಿಗೆ ಬಹಳ ಅಗತ್ಯವಾದ ವಸ್ತುಗಳು. ಹೀಗಾಗಿ, ತುರ್ತು ಸ್ಥಿತಿಯಲ್ಲಿ ಸಾರ್ವಜನಿಕರ ಒಳಿತು ಮತ್ತು ದೇಶದ ಹಿತಾಸಕ್ತಿ ದೃಷ್ಟಿಯಿಂದ ಇವುಗಳನ್ನು ಪಡೆಯುವ ಮೊದಲ ಹಕ್ಕು ಸರ್ಕಾರದ್ದಾಗಿರಲಿದೆ.

ಇದನ್ನೂ ಓದಿ: ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF

ಈಗ ರೂಪಿಸಿರುವ ಕರಡು ನಿಯಮಗಳ ಪ್ರಕಾರ, ಸರ್ಕಾರವು ಈ ತೈಲ ಮತ್ತು ಅನಿಲವನ್ನು ಉಚಿತವಾಗಿ ಪಡೆಯುವುದಿಲ್ಲ. ಅಂದಿನ ಸಂದರ್ಭದಲ್ಲಿ ಇರುವ ನ್ಯಾಯಯುತ ಮಾರುಕಟ್ಟೆ ಬೆಲೆ ನೀಡಿ ಅವನ್ನು ಖರೀದಿಸಲಾಗುತ್ತದೆ. ಇದರಿಂದ, ತೈಲ ಮಾರುಕಟ್ಟೆ ಕಂಪನಿಗಳಿಗೆ ನಷ್ಟ ಉಂಟಾಗುವುದಿಲ್ಲ.

ತುರ್ತು ಸಂದರ್ಭ ಎಂದರೆ ಯಾವುದು?

ಕರಡು ನಿಯಮದಲ್ಲಿ ಎಮರ್ಜೆನ್ಸಿ ಎನ್ನುವ ಪದ ಬಳಸಲಾಗಿದೆ. ಆದರೆ, ಯಾವ ಸಂದರ್ಭವು ಎಮರ್ಜೆನ್ಸಿ ಎಂದು ನಿರ್ದಿಷ್ಟಪಡಿಸಲಾಗಿಲ್ಲ. ಯುದ್ಧದಂತಹ ಸಂದರ್ಭವನ್ನು ತುರ್ತು ಪರಿಸ್ಥಿತಿ ಎಂದು ಗಣಿಸಲಾಗಬಹುದು. ಅಥವಾ ಭೂಕಂಪ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪದ ಸಂದರ್ಭವನ್ನೂ ತುರ್ತು ಪರಿಸ್ಥಿತಿ ಎಂದು ಪರಿಭಾವಿಸಬಹುದು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ತಪ್ಪದ ಆರ್ಥಿಕ ಸಂಕಷ್ಟ; ಫಾರೆಕ್ಸ್ ರಿಸರ್ವ್ಸ್ ಕೇವಲ 15 ಬಿಲಿಯನ್ ಡಾಲರ್

‘ಖನಿಜ ತೈಲಗಳ ವಿಚಾರದಲ್ಲಿ ರಾಷ್ಟ್ರೀಯ ಎಮರ್ಜೆನ್ಸಿ ಯಾವುದೆಂದು ತೀರ್ಮಾನಿಸುವುದು ಭಾರತ ಸರ್ಕಾರ ಮಾತ್ರವೇ. ಅದರ ನಿರ್ಧಾರವೇ ಅಂತಿಮವಾಗಿರುತ್ತದೆ’ ಎಂದು ಡ್ರಾಫ್ಟ್ ರೂಲ್​​​ನಲ್ಲಿ ಬರೆಯಲಾಗಿದೆ.

1948ರ ಆಯಿಲ್ ಫೀಲ್ಡ್ ಕಾಯ್ದೆ ಬದಲಿಗೆ ಈಗ ತಿದ್ದುಪಡಿ ಮಸೂದೆ ತರಲಾಗುತ್ತಿದೆ. ಈ ವರ್ಷ ಸಂಸತ್​​​ನಲ್ಲಿ ಈ ಮಸೂದೆಗೆ ಅನುಮೋದನೆ ಸಿಕ್ಕಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಕರಡು ನಿಯಮಗಳ ಮೇಲೆ ಪ್ರತಿಕ್ರಿಯೆ ಆಹ್ವಾನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ