AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Foreign Investments: ಭಾರತಕ್ಕೆ ಪ್ರವಾಹೋಪಾದಿಯಲ್ಲಿ ವಾಪಸ್ ಬರುತ್ತಿರುವ ವಿದೇಶೀ ಬಂಡವಾಳ; ಏನು ಕಾರಣ?

FPIs coming back to Indian market: ಈ ವರ್ಷದ ಮೊದಲು ಮೂರು ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಯಿಂದ ಹೊರಹೋಗಿದ್ದ ವಿದೇಶೀ ಹೂಡಿಕೆಗಳು ಈಗ ಮರಳಿ ಬರುತ್ತಿವೆ. ಮೇ ತಿಂಗಳಲ್ಲಿ ಭಾರತ ಮತ್ತು ಪಾಕ್ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಮೊದಲ 9 ದಿನ ಎಫ್​​ಪಿಐಗಳು ಭಾರತಕ್ಕೆ ಸಾಕಷ್ಟು ಹರಿದುಬಂದಿವೆ. ಡಾಲರ್ ದುರ್ಬಲಗೊಂಡಿರುವುದು, ರುಪಾಯಿ ಬಲಗೊಂಡಿರುವುದು ಇತ್ಯಾದಿ ಕೆಲ ಅಂಶಗಳು ಈ ವರ್ತನೆಗೆ ಕಾರಣವಾಗಿವೆ.

Foreign Investments: ಭಾರತಕ್ಕೆ ಪ್ರವಾಹೋಪಾದಿಯಲ್ಲಿ ವಾಪಸ್ ಬರುತ್ತಿರುವ ವಿದೇಶೀ ಬಂಡವಾಳ; ಏನು ಕಾರಣ?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2025 | 11:30 AM

Share

ನವದೆಹಲಿ, ಮೇ 12: ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹೊರತಾಗಿಯೂ, ವಿದೇಶಿ ಬಂಡವಾಳ ಹೂಡಿಕೆದಾರರು (FPI) ಭಾರತೀಯ ಷೇರು ಮಾರುಕಟ್ಟೆಯಲ್ಲಿ (Indian stock market) ಸಾಕಷ್ಟು ವಿಶ್ವಾಸ ತೋರಿಸಿದ್ದಾರೆ. ಮೇ ತಿಂಗಳ ಮೊದಲ ಒಂಬತ್ತು ದಿನಗಳಲ್ಲಿ (ಕಳೆದ ಶುಕ್ರವಾರದವರೆಗೂ) ಅವರು 14,167 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ, ಭಾರತದ ಆರ್ಥಿಕತೆಯ ಮೇಲಿನ ಅವರ ವಿಶ್ವಾಸ ಬಲವಾಗಿ ಉಳಿದಿದೆ ಎಂಬುದು ಇದು ತೋರಿಸುತ್ತದೆ. ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಆಗಿರುವುದೂ ಕೂಡ ಮಾರುಕಟ್ಟೆಯ ಲಯವನ್ನು ಹೆಚ್ಚಿಸಿದೆ.

ಜನವರಿ, ಫೆಬ್ರವರಿ, ಮಾರ್ಚ್​​​ನಲ್ಲಿ ದೊಡ್ಡ ಎಫ್​​ಪಿಐ ಹೊರಹರಿವು

ಈ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವಿದೇಶೀ ಬಂಡವಾಳಗಳು ಸಾಕಷ್ಟು ಹೊರಗೆ ಹೋಗಿದ್ದುವು. ಜನವರಿಯಿಂದ ಮಾರ್ಚ್​​ವರೆಗಿನ ಮೂರು ತಿಂಗಳಲ್ಲಿ ಲಕ್ಷ ಕೋಟಿ ರೂಗೂ ಅಧಿಕ ಮೊತ್ತದಷ್ಟು ಎಫ್​​ಪಿಐಗಳು ಮಾರುಕಟ್ಟೆಯಿಂದ ಹೊರನಡೆದಿದ್ದುವು. ಜನವರಿಯಲ್ಲಿ 78,027 ಕೋಟಿ ರೂ, ಫೆಬ್ರುವರಿಯಲ್ಲಿ 34,574 ಕೋಟಿ ರೂಗಳಷ್ಟು ಭಾರೀ ಪ್ರಮಾಣದಲ್ಲಿ ಬಂಡವಾಳ ಹಿಂತೆಗೆತ ಆಗಿತ್ತು. ಮಾರ್ಚ್ ತಿಂಗಳಲ್ಲಿ ನಿವ್ವಳ ಹೊರಹರಿವು 3,973 ರೂ ಮಾತ್ರ. ಫೆಬ್ರುವರಿ ತಿಂಗಳ ಬಳಿಕ ಭಾರತದ ಮಾರುಕಟ್ಟೆ ಮತ್ತೆ ಚೇತರಿಕೆಯ ಹಾದಿ ಹಿಡಿದಿದೆ. ಏಪ್ರಿಲ್ ತಿಂಗಳಲ್ಲಿ ನಿವ್ವಳ ಹೊರಹರಿವು ಇರಲಿಲ್ಲ. ಒಳಹರಿವು ಹೆಚ್ಚಾಗಿ, 4,223 ಕೋಟಿ ರೂ ನಿವ್ವಳ ಒಳಹರಿವು ದಾಖಲಾಗಿದೆ. ಮೇ ತಿಂಗಳಲ್ಲಿ ಈ ಒಳಹರಿವಿನ ವೇಗ ತೀವ್ರವಾಗಿ ಹೆಚ್ಚಾಗಿರುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF

ವಿದೇಶೀ ಹೂಡಿಕೆದಾರರು ಭಾರತದ ಮಾರುಕಟ್ಟೆಗೆ ಮರಳಿ ಬರುತ್ತಿರುವುದು ಯಾಕೆ?

ಜಾಗತಿಕವಾಗಿ ಡಾಲರ್ ದುರ್ಬಲಗೊಂಡಿರುವುದು, ಅಮೆರಿಕ-ಚೀನಾ ಆರ್ಥಿಕ ಬೆಳವಣಿಗೆ ನಿಧಾನವಾಗಿರುವುದು ಮತ್ತು ಭಾರತದ ಜಿಡಿಪಿ ಬೆಳವಣಿಗೆ ಆಶಾದಾಯಕ ಎನಿಸಿರುವುದು, ಹಣದುಬ್ಬರ ಮತ್ತು ಬಡ್ಡಿದರಗಳು ಕಡಿಮೆಯಾಗುತ್ತಿರುವುದು ವಿದೇಶಿ ಹೂಡಿಕೆದಾರರನ್ನು ಮತ್ತೆ ಭಾರತೀಯ ಮಾರುಕಟ್ಟೆಯತ್ತ ಆಕರ್ಷಿಸಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯ್‌ಕುಮಾರ್ ಹೇಳುತ್ತಾರೆ.

ಅಮೆರಿಕ ಡಾಲರ್‌ನ ದುರ್ಬಲತೆ ಮತ್ತು ಭಾರತೀಯ ರೂಪಾಯಿಯ ಬಲವು ಜಾಗತಿಕ ಹೂಡಿಕೆದಾರರಲ್ಲಿ ಭಾರತೀಯ ಮಾರುಕಟ್ಟೆ ಮೇಲಿನ ಆಸಕ್ತಿಯನ್ನು ಹೆಚ್ಚಿಸಿದೆ. ಇದಲ್ಲದೆ, ಪ್ರಮುಖ ಭಾರತೀಯ ಕಾರ್ಪೊರೇಟ್‌ಗಳ ಅತ್ಯುತ್ತಮ ತ್ರೈಮಾಸಿಕ ಫಲಿತಾಂಶಗಳು ಸಹ ಒಟ್ಟಾರೆ ಸಕಾರಾತ್ಮಕ ವಾತಾರಣ ಹೆಚ್ಚಿಸಲು ನೆರವಾಗಿದೆ.

ಇದನ್ನೂ ಓದಿ: ಭಾರತ-ಪಾಕ್ ಕದನ ವಿರಾಮದ ಬಳಿಕ, ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಟ್ರೋಲ್ ಆಗಿದ್ದೇಕೆ?

ಯುದ್ಧದ ಕಾರ್ಮೋಡ ಇದ್ದರೂ ಹೂಡಿಕೆ ನಿಲ್ಲಲಿಲ್ಲ

ಮೇ 8 ರವರೆಗೆ ಎಫ್‌ಪಿಐಗಳು ಸತತ 16 ವಹಿವಾಟು ದಿನಗಳವರೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದರು. ಈ ಅವಧಿಯಲ್ಲಿ ಅವರು ಒಟ್ಟು 48,533 ಕೋಟಿ ರೂ. ಮೌಲ್ಯದ ಖರೀದಿ ಮಾಡಿದ್ದಾರೆ. ಆದಾಗ್ಯೂ, ಮೇ 9 ರಂದು, ಭಾರತ-ಪಾಕ್ ಮಧ್ಯೆ ಉದ್ವಿಗ್ನತೆ ಹೆಚ್ಚಾದಾಗ 3,798 ಕೋಟಿ ರೂ. ಮಾರಾಟ ಕಂಡುಬಂದಿದೆ. ಮತ್ತೊಂದೆಡೆ, ಎಫ್‌ಪಿಐಗಳು ಡೆಟ್ ಜನರಲ್ ಲಿಮಿಟ್​​ನಿಂದ 3,725 ಕೋಟಿ ರೂ.ಗಳನ್ನು ಹಿಂತೆಗೆದುಕೊಂಡರೆ, ವಾಲಂಟರಿ ರಿಟೆನ್ಷನ್ ರೂಟ್​​ನಲ್ಲಿ 1,160 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ