AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hydrogen Drone: ಭಾರತದಲ್ಲೇ ತಯಾರಿಸಿದ ಹೈಡ್ರೋಜನ್​ಶಕ್ತ ಮಿಲಿಟರಿ ಡ್ರೋನ್​​ಗಳು ನಿಯೋಜನೆಗೆ ಸಿದ್ಧ; ಭಾರತದ ವಾಯುಸೇನೆಗೆ ಮತ್ತಷ್ಟು ಬಲ

Paras Defence manufactures hydrogen powered drones for Indian military: ಪಾರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ ಸಂಸ್ಥೆ ತಯಾರಿಸಿರುವ ಹೈಡ್ರೋಜನ್​​ಶಕ್ತ ಡ್ರೋನ್​​ಗಳು ಭಾರತದ ಮಿಲಿಟರಿ ನಿಯೋಜನೆಗೆ ಸಿದ್ದವಾಗಿವೆ. ಅಮೆರಿಕ ಮೂಲದ ಹೆವೆನ್​​ನ ಇಸ್ರೇಲೀ ಅಂಗಸಂಸ್ಥೆಯಾದ ಹೆವೆನ್​ಡ್ರೋನ್ಸ್ ಜೊತೆ ಜಂಟಿಯಾಗಿ ಪಾರಸ್ ಈ ಡ್ರೋನ್​​ಗಳನ್ನು ತಯಾರಿಸಿದೆ. ಭಾರತದಲ್ಲಿ ಹೈಡ್ರೋಜನ್ ಶಕ್ತ ಡ್ರೋನ್​​ಗಳನ್ನು ತಯಾರಿಸಿರುವುದು ಇದೇ ಮೊದಲು.

Hydrogen Drone: ಭಾರತದಲ್ಲೇ ತಯಾರಿಸಿದ ಹೈಡ್ರೋಜನ್​ಶಕ್ತ ಮಿಲಿಟರಿ ಡ್ರೋನ್​​ಗಳು ನಿಯೋಜನೆಗೆ ಸಿದ್ಧ; ಭಾರತದ ವಾಯುಸೇನೆಗೆ ಮತ್ತಷ್ಟು ಬಲ
ಹೈಡ್ರೋಜನ್ ಡ್ರೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2025 | 12:22 PM

Share

ನವದೆಹಲಿ, ಮೇ 12: ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯವಾಗಿ ತಯಾರಿಸಲಾದ ಹೈಡ್ರೋಜನ್ ಶಕ್ತ ಡ್ರೋನ್​​ಗಳು (Hydrogen Powered Drones) ಸೇನೆಯಲ್ಲಿ ನಿಯೋಜನೆಗೆ ಸಿದ್ಧವಾಗಿವೆ. ಇಸ್ರೇಲ್​​ನ ಹೆವೆನ್​​ಡ್ರೋನ್ಸ್ (HevenDrones) ಎನ್ನುವ ಸಂಸ್ಥೆಯ ಸಹಯೋಗದಲ್ಲಿ ಭಾರತದ ಪರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ (Paras Defence and Space Technologies) ಸಂಸ್ಥೆ ಈ ಡ್ರೋನ್​​​ಗಳನ್ನು ತಯಾರಿಸಿದೆ. ಈ ಜಲಜನಕ ಶಕ್ತ ಡ್ರೋನ್​​ಗಳಿಂದ ಭಾರತದ ರಕ್ಷಣಾ ಕ್ಷೇತ್ರ ಮತ್ತಷ್ಟು ಬಲಗೊಳ್ಳಗೊಳ್ಳಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ (India Pakistan conflict) ಡ್ರೋನ್​​ಗಳು ಎಷ್ಟು ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ಸಾಬೀತಾರಿದೆ. ಈ ಹಿನ್ನೆಲೆಯಲ್ಲಿ ಹೈಡ್ರೋಜನ್ ಡ್ರೋನ್​​ಗಳ ಆಗಮನವು ಭಾರತದ ವಾಯುಪಡೆಯ ಶಕ್ತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಅಮೆರಿಕ, ಇಸ್ರೇಲ್ ಮತ್ತು ಭಾರತದ ಶಕ್ತಿಗಳ ಸಂಯೋಜನೆ ಈ ಹೈಡ್ರೋನ್​ಶಕ್ತ ಡ್ರೋನ್​​ಗೆ

ಇಸ್ರೇಲ್​​ನ ಹೆವೆನ್​ಡ್ರೋನ್ಸ್ ಕಂಪನಿಯು ಅಮೆರಿಕ ಮೂಲದ ಹೆವೆನ್ ಎನ್ನುವ ಕಂಪನಿಯ ಅಂಗಸಂಸ್ಥೆಯಾಗಿದೆ. ಅಮೆರಿಕದ ಈ ಕಂಪನಿಯು ಹೈಡ್ರೋಜನ್ ಶಕ್ತ ಡ್ರೋನ್​​ಗಳ ತಯಾರಿಕೆಗೆ ಹೆಸರಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಭಾರತದಲ್ಲಿ ಈ ಡ್ರೋನ್​​ಗಳನ್ನು ಪರಸ್ ಸಂಸ್ಥೆ ತಯಾರಿಸುತ್ತಿದೆ. ಇಸ್ರೇಲ್​​ನ ಯುದ್ಧ ಸಿದ್ಧ ಮಾದರಿ, ಅಮೆರಿಕದ ತಂತ್ರಜ್ಞಾನ ಹಾಗೂ ಭಾರತದ ಉತ್ಪಾದನಾ ಸಾಮರ್ಥ್ಯ ಇದು ಭಾರತದಲ್ಲಿ ಹೈಡ್ರೋಜನ್ ಶಕ್ತ ಡ್ರೋನ್​​ಗಳಿಗೆ ಜೀವ ತುಂಬಿದೆ ಎನ್ನುತ್ತದೆ ಪರಸ್ ಡಿಫೆನ್ಸ್ ಅಂಡ್ ಸ್ಪೆಸ್ ಟೆಕ್ನಾಲಜೀಸ್ ಸಂಸ್ಥೆ.

ಇದನ್ನೂ ಓದಿ: ಭಾರತಕ್ಕೆ ಪ್ರವಾಹೋಪಾದಿಯಲ್ಲಿ ವಾಪಸ್ ಬರುತ್ತಿರುವ ವಿದೇಶೀ ಬಂಡವಾಳ; ಏನು ಕಾರಣ?

ಇದನ್ನೂ ಓದಿ
Image
ಭಾರತದ ಮಾರುಕಟ್ಟೆಗೆ ಧಾವಿಸಿ ಬರುತ್ತಿರುವ ಎಫ್​​ಪಿಐಗಳು
Image
ಎಮರ್ಜೆನ್ಸಿ ವೇಳೆ ತೈಲಕ್ಕೆ ಮೊದಲ ಅಧಿಕಾರ ಸರ್ಕಾರದ್ದು: ಕರಡು ನಿಯಮ
Image
ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF
Image
ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ 15 ಬಿಲಿಯನ್ ಡಾಲರ್​​​ಗೆ ಕುಸಿತ

ಹೈಡ್ರೋಜನ್ ಶಕ್ತ ಯುಎವಿಗಳ ವಿಶೇಷತೆ ಏನು?

ಸಾಮಾನ್ಯವಾಗಿ ಡ್ರೋನ್​​ಗಳು ಬ್ಯಾಟರಿ ಚಾಲಿತವಾಗಿರುತ್ತವೆ. ಹೈಡ್ರೋಜನ್ ಡ್ರೋನ್​​ಗಳು ಹೈಡ್ರೋಜನ್ ಫುಯಲ್ ಸೆಲ್​​ಗಳನ್ನು ಹೊಂದಿರುತ್ತವೆ. ಇವು ದೀರ್ಘಾವಧಿ ಕಾಲ ಹಾರಾಡಬಲ್ಲುವು. ದೂರ ಶ್ರೇಣಿಯ ಆಕ್ರಮಣ ಹಾಗೂ ಸ್ಟೀಲ್ತ್ ಅಪರೇಷನ್ಸ್​​ಗೆ ಈ ಡ್ರೋನ್​​ಗಳು ಹೇಳಿ ಮಾಡಿರುತ್ತವೆ.

ನಾಗರಿಕ ಬಳಕೆಗೂ ಡ್ರೋನ್​​​ಗಳನ್ನು ತಯಾರಿಸಲಿದೆ ಪಾರಸ್

ಪಾರಸ್ ಡಿಫೆನ್ಸ್ ಮತ್ತು ಹೆವೆನ್​​ಡ್ರೋನ್ಸ್ ಸಂಸ್ಥೆಗಳ ಈ ಜಂಟಿ ವ್ಯವಹಾರದಲ್ಲಿ ಮಿಲಿಟರಿ ಡ್ರೋನ್​​​ಗಳಷ್ಟೇ ಅಲ್ಲದೆ, ನಾಗರಿಕ ಬಳಕೆಗೆ ಬೇಕಾದ ಡ್ರೋನ್​​ಗಳನ್ನೂ ತಯಾರಿಸುತ್ತಿದೆ. ಸರಕು ಸಾಗಣೆಗೆ ಇವುಗಳನ್ನು ಬಳಸಬಹುದಾಗಿದೆ. ಭಾರತದ ಮಾರುಕಟ್ಟೆಗೆ ಮಾತ್ರವಲ್ಲ, ಜಾಗತಿಕ ಮಾರುಕಟ್ಟೆಗೂ ಈ ಡ್ರೋನ್​​ಗಳ ಸರಬರಾಜಾಗಬಹುದು. ಭಾರತದಲ್ಲಿ ಎವಿರೋನಿಕ್ಸ್ ಡ್ರೋನ್ ಎನ್ನುವ ಕಂಪನಿ ಕೂಡ ಹೈಡ್ರೋಜನ್​​ಶಕ್ತ ಡ್ರೋನ್​ಗಳನ್ನು ತಯಾರಿಸುತ್ತಿದೆ.

ಇದನ್ನೂ ಓದಿ: ತುರ್ತು ಸಂದರ್ಭದಲ್ಲಿ ದೇಶದ ಎಲ್ಲಾ ತೈಲ ಮತ್ತು ನೈಸರ್ಗಿಕ ಅನಿಲದ ಮೊದಲ ಅಧಿಕಾರ ಸರ್ಕಾರದ್ದು: ಹೊಸ ನಿಯಮ ನಿರೀಕ್ಷೆ

ಜಾಗತಿಕವಾಗಿ, ಚೀನಾ ಅತಿಹೆಚ್ಚು ಹೈಡ್ರೋಜನ್ ಡ್ರೋನ್​​ಗಳನ್ನು ತಯಾರಿಸುತ್ತದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಸೌತ್ ಕೊರಿಯ, ಜಪಾನ್ ಮೊದಲಾದ ಕೆಲ ದೇಶಗಳು ಈ ತಂತ್ರಜ್ಞಾನ ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ