Sign In

By signing in or creating an account, you agree with Associated Broadcasting Company's Terms & Conditions and Privacy Policy.

IPOs: 2023ರಲ್ಲಿ ಅತಿಹೆಚ್ಚು ಐಪಿಒಗಳ ಬಿಡುಗಡೆ; 2024ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ

Year Ender 2023: ಭಾರತದಲ್ಲಿ 2023ರಲ್ಲಿ 173 ಎಸ್​ಎಂಇ ಸಂಸ್ಥೆಗಳು ಹಾಗು 52 ಪ್ರಮುಖ ಸಂಸ್ಥೆಗಳು 2023ರಲ್ಲಿ ಷೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗಿವೆ. 2023ರಲ್ಲಿ ಸೆನ್ಸೆಕ್ಸ್ ಇಂಡೆಕ್ಸ್ ಶೇ. 14-15ರಷ್ಟು ಬೆಳೆದರೆ ಐಪಿಒ ಇಂಡೆಕ್ಸ್ ಶೇ. 35ರಷ್ಟು ಬೆಳೆದಿದೆ. 2024ರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಐಪಿಒಗಳು ಭಾರತದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

IPOs: 2023ರಲ್ಲಿ ಅತಿಹೆಚ್ಚು ಐಪಿಒಗಳ ಬಿಡುಗಡೆ; 2024ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ
ಐಪಿಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 31, 2023 | 3:31 PM

ನವದೆಹಲಿ, ಡಿಸೆಂಬರ್ 31: ಈ ವರ್ಷ ಭಾರತದ ಹಣಕಾಸು ಮತ್ತು ಆರ್ಥಿಕ ವಲಯದಲ್ಲಿ ಗಮನಾರ್ಹ ಬೆಳವಣಿಗೆಗಳಾಗಿವೆ. ಸಾಕಷ್ಟು ಅಭಿವೃದ್ಧಿಗಳಾಗಿವೆ, ನಿರೀಕ್ಷೆಮೀರಿದ ಆರ್ಥಿಕ ವೃದ್ಧಿ ಆಗಿದೆ. ಷೇರುಮಾರುಕಟ್ಟೆ ಈ ವರ್ಷ ಅದ್ಬುತವಾಗಿ ಬೆಳೆದಿದೆ. ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಶೇ. 19ರಿಂದ 20ರಷ್ಟು ಏರಿವೆ. ಅಷ್ಟು ಮಾತ್ರವಲ್ಲ, ಈ 2023, ಭಾರತೀಯ ಷೇರು ಮಾರುಕಟ್ಟೆಗೆ ಐಪಿಒಗಳ (IPO- initial public offering) ವರ್ಷವಾಗಿದೆ. ಬರೋಬ್ಬರಿ 200ಕ್ಕೂ ಹೆಚ್ಚು ಐಪಿಒಗಳು ಬಿಡುಗಡೆ ಆಗಿವೆ.

173 ಎಸ್​ಎಂಇ ಸಂಸ್ಥೆಗಳು ಹಾಗು 52 ಪ್ರಮುಖ ಸಂಸ್ಥೆಗಳು 2023ರಲ್ಲಿ ಷೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗಿವೆ. ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್​ನ ಈಕ್ವಿರಸ್ ಸಂಸ್ಥೆಯ ಎಂಡಿ ವೆಂಕಟರಾಘವನ್ ಅವರ ಪ್ರಕಾರ 2023ರಲ್ಲಿ ಐಪಿಒಗಳು ಯಶಸ್ಸು ಕಂಡಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಐಪಿಒ ಇಂಡೆಕ್ಸ್ ಶೇ. 35ರಷ್ಟು ಬೆಳೆದಿದೆ. ಅದಕ್ಕೆ ಹೋಲಿಸಿದರೆ ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ ಶೇ. 14.25ರಷ್ಟು ಮಾತ್ರ ರಿಟರ್ನ್ ನೀಡಿದೆ ಎಂದು ವೆಂಕಟರಾಘವನ್ ಹೇಳುತ್ತಾರೆ.

ಇದನ್ನೂ ಓದಿ: 2023ರಲ್ಲಿ ಅತಿಹೆಚ್ಚು ಮತ್ತು ಅತಿಕಡಿಮೆ ವಿದೇಶೀ ವಿನಿಮಯ ಮೀಸಲು ನಿಧಿ ಇರುವ ದೇಶಗಳು

ಐಪಿಒಗಳು ಇಷ್ಟು ಸಂಖ್ಯೆಯಲ್ಲಿ ಬಿಡುಗಡೆ ಆಗಲು ಏನು ಕಾರಣ?

ಭಾರತದಲ್ಲಿ 2023ರಲ್ಲಿ ದಾಖಲೆ ಸಂಖ್ಯೆಯಲ್ಲಿ ಐಪಿಒಗಳು ಬಿಡುಗಡೆ ಆಗಲು ಏನು ಕಾರಣ? ವೆಂಕರಾಘವನ್ ಅವರು ಒಂದಷ್ಟು ಕಾರಣಗಳನ್ನು ಅಂದಾಜಿಸಿದ್ದಾರೆ:

  • ಭಾರತೀಯ ಕಂಪನಿಗಳು ಚೆನ್ನಾಗಿ ನಿರ್ವಹಣೆ ಆಗುತ್ತಿರುವುದು
  • ಭಾರತೀಯ ಕಂಪನಿಗಳ ಒಟ್ಟಾರೆ ನೋಟ ಉತ್ತಮವಾಗಿ ಕಾಣುತ್ತಿರುವುದು.
  • ಸಾಂಸ್ಥಿಕ ಹೂಡಿಕೆದಾರರಿಗೆ ಎಸ್​ಐಪಿ ಮತ್ತಿತರ ಮೂಲಕ ಸಾಕಷ್ಟು ಫಂಡ್​ಗಳು ಹರಿದುಬರುತ್ತಿರುವುದು.
  • ಫಾರೀನ್ ಪೋರ್ಟ್​ಫೋಲಿಯೋ ಇನ್ವೆಸ್ಟ್​ಮೆಂಟ್ ಅಥವಾ ಎಫ್​ಪಿಐಗಳ ಲಭ್ಯತೆ ಹೆಚ್ಚಿರುವುದು.
  • ಕಂಪನಿಯ ವ್ಯಾಲ್ಯುಯೇಶನ್ ವಿಚಾರದಲ್ಲಿ ಐಪಿಒ ವಿತರಕರು ಮತ್ತು ಹೂಡಿಕೆದಾರರ ಮಧ್ಯೆ ಸಹಮತ ಇರುವುದು.

ವೆಂಕಟರಾಘವನ್ ಪ್ರಕಾರ 2024ರಲ್ಲಿ ಬಿಡುಗಡೆ ಆಗಲಿರುವ ಐಪಿಒಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಜಾಗತಿಕ ಹಿನ್ನಡೆ ಮಧ್ಯೆಯೂ ಐಪಿಒಗಳ ಬಿಡುಗಡೆಗೆ ಪೂರಕವಾದ ವಾತಾವರಣ ಭಾರತದಲ್ಲಿ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Year Ender 2023: ಹಿಂಡನ್ಬರ್ಗ್ ರಿಪೋರ್ಟ್​ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು

ಏನಿದು ಐಪಿಒ?

ಐಪಿಒ ಎಂದರೆ ಇನಿಷಿಯಲ್ ಪಬ್ಲಿಕ್ ಆಫರಿಂಗ್. ಅಂದರೆ ಆರಂಭಿಕ ಸಾರ್ವಜನಿಕ ಕೊಡುಗೆ. ಒಂದು ಕಂಪನಿ ತನ್ನ ಪಾಲನ್ನು ಷೇರುಗಳ ಮೂಲಕ ಸಾರ್ವಜನಿಕವಾಗಿ ಹಂಚಿಕೆ ಮಾಡುತ್ತದೆ. ಒಂದೊಂದು ಷೇರಿಗೆ ನಿರ್ದಿಷ್ಟ ಬೆಲೆ ನಿಗದಿ ಮಾಡುತ್ತದೆ. ಕೋಟ್ಯಂತರ ಸಂಖ್ಯೆಯಲ್ಲಿ ಷೇರುಗಳನ್ನು ಬಿಡುಗಡೆ ಮಾಡಿ ಮಾರುತ್ತದೆ. ಇದೇ ಐಪಿಒ. ಒಂದು ಕಂಪನಿಯ ಷೇರು ಸಾರ್ವಜನಿಕವಾಗಿ ಲಭ್ಯವಾದಂತಾಗುತ್ತದೆ. ಆ ಮೂಲಕ ಷೇರು ಮಾರುಕಟ್ಟೆಗೆ ಅದು ಪ್ರವೇಶ ಪಡೆಯುತ್ತದೆ. ಅಲ್ಲಿ ಆ ಷೇರುಗಳನ್ನು ಹೊಂದಿದವರು ಮಾರಬಹುದು. ಒಟ್ಟಾರೆ, ಐಪಿಒ ಎಂಬುದು ಒಂದು ಸಂಸ್ಥೆ ಬಂಡವಾಳ ಪಡೆಯಲು ಇರುವ ಮಾರ್ಗ ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು