Financial Changes: ಬ್ಯಾಂಕ್ ಲಾಕರ್​ನಿಂದ ಸಿಮ್ ಕಾರ್ಡ್​ವರೆಗೆ, ಜ. 1ರಿಂದ ಆಗುವ ಈ ಹಣಕಾಸು ಬದಲಾವಣೆಗಳು ತಿಳಿದಿರಲಿ

January 2024: ಜನವರಿ 1ರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಳದಿಂದ ಹಿಡಿದು ಸಿಮ್ ಕಾರ್ಡ್​ವರೆಗೆ ಕೆಲ ಪ್ರಮುಖ ಹಣಕಾಸು ಬದಲಾವಣೆಗಳಿವೆ. ಬ್ಯಾಂಕ್ ಲಾಕರ್ ಅಗ್ರೀಮೆಂಟ್ ಪರಿಷ್ಕರಿಸದಿದ್ದರೆ ಜನವರಿ 1ರಿಂದ ಲಾಕರ್ ಫ್ರೀಜ್ ಆಗಬಹುದು. 2022-23ರ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡದಿದ್ದರೆ 5,000 ರೂವರೆಗೂ ದಂಡ ಪಾವತಿಸಬೇಕಾಗುತ್ತದೆ.

Financial Changes: ಬ್ಯಾಂಕ್ ಲಾಕರ್​ನಿಂದ ಸಿಮ್ ಕಾರ್ಡ್​ವರೆಗೆ, ಜ. 1ರಿಂದ ಆಗುವ ಈ ಹಣಕಾಸು ಬದಲಾವಣೆಗಳು ತಿಳಿದಿರಲಿ
ಆರೋಗ್ಯ ವಿಮೆ
Follow us
|

Updated on: Dec 31, 2023 | 6:06 PM

ಬೆಂಗಳೂರು, ಡಿಸೆಂಬರ್ 31: ಈ ತಿಂಗಳು ಕಳೆದು, ಈ ವರ್ಷವೂ ಕಳಚಿ ಹೊಸ ತಿಂಗಳು ಮತ್ತು ಹೊಸ ವರ್ಷ ಬರುತ್ತಿದೆ. ಹೊಸ ಭರವಸೆ, ಹೊಸ ಆಶಯದೊಂದಿಗೆ 2024ಕ್ಕೆ ಅಡಿ ಇಡುತ್ತಿದ್ದೇವೆ. ಇದೇ ವೇಳೆ, ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರುವಂತಹ ಕೆಲ ಹಣಕಾಸು ಬದಲಾವಣೆಗಳು (financial changes) ಜನವರಿ 1ರಿಂದ ಇರಲಿವೆ. ಸಣ್ಣ ಉಳಿತಾಯ ಯೋಜನೆಗಳ ಪರಿಷ್ಕೃತ ಬಡ್ಡಿದರದಿಂದ ಹಿಡಿದು ಸಿಮ್ ಕಾರ್ಡ್ ವೆರಿಫಿಕೇಶನ್​ವರೆಗೆ ಈ ಬದಲಾವಣೆಗಳು ಮಹತ್ವದ್ದೆನಿಸಿವೆ.

ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಹೆಚ್ಚಿನ ಬಡ್ಡಿದರ

ಸರ್ಕಾರ ಎರಡು ಸಣ್ಣ ಉಳಿತಾಯ ಯೋಜನೆಗಳಿಗೆ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ಗೆ ಬಡ್ಡಿದರ ಹೆಚ್ಚಿಸಿದೆ. ಸುಕನ್ಯಾ ಸಮೃದ್ದಿ ಯೋಜನೆಗೆ ಬಡ್ಡಿದರ ಶೇ. 8ರಿಂದ 8.20ಕ್ಕೆ ಹೆಚ್ಚಿಸಲಾಗಿದೆ. ಅಂಚೆ ಕಚೇರಿಯ 3 ವರ್ಷದ ಠೇವಣಿ ಪ್ಲಾನ್​ಗೆ ಬಡ್ಡಿದರ ಶೇ. 7ರಿಂದ 7.10ಕ್ಕೆ ಹೆಚ್ಚಿಸಲಾಗಿದೆ.

ಬ್ಯಾಂಕ್ ಲಾಕರ್ ಒಪ್ಪಂದ

ಬ್ಯಾಂಕ್ ಲಾಕರ್ ಒಪ್ಪಂದ ನವೀಕರಿಸಲು ಡಿಸೆಂಬರ್ 31 ಡೆಡ್​ಲೈನ್ ಆಗಿದೆ. ಅಪ್​ಡೇಟ್ ಮಾಡದಿದ್ದರೆ ಜನವರಿ 1ರಂದು ಅವರ ಲಾಕರ್ ಫ್ರೀಜ್ ಆಗುತ್ತದೆ.

ಇದನ್ನೂ ಓದಿ: Savings: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಚ್ಚು ಬಡ್ಡಿ, ಜೊತೆಗೆ ಅದರ ವಿವಿಧ ಪ್ರಯೋಜನಗಳೇನು ತಿಳಿಯಿರಿ…

ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ…

2022-23ರ ಹಣಕಾಸು ವರ್ಷಕ್ಕೆ ತಡವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುತ್ತಿರುವವರಿಗೆ ಅಂತಿಮ ಗುಡುವು ಡಿಸೆಂಬರ್ 31 ಇದೆ. ಲೇಟ್ ಫೀ ಕಟ್ಟಿ ಮಾಡುವ ಅವಕಾಶ ಕೊಡಲಾಗಿತ್ತು. ಜನವರಿ 1ರಿಂದ ರಿಟರ್ನ್ ಸಲ್ಲಿಸಬಹುದಾದರೂ 5,000 ರೂವರೆಗೆ ದಂಡ ಪಾವತಿಸಬೇಕಾಗುತ್ತದೆ.

ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ನಿಬಂಧನೆಗಳು…

ಆರೋಗ್ಯ ವಿಮೆಯ ಅಂಶಗಳು ಗ್ರಾಹಕರಿಗೆ ಅರ್ಥವಾಗುವಷ್ಟು ಸರಳವಾಗಿರಬೇಕು ಎಂದು ಇನ್ಷೂರೆನ್ಸ್ ನಿಯಂತ್ರಕ ಸಂಸ್ಥೆ ಐಆರ್​ಡಿಎಐ ಆದೇಶ ಮಾಡಿದೆ. ಅದರಂತೆ, ಇನ್ಷೂರೆನ್ಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ಪರಿಷ್ಕೃತವಾದ ಗ್ರಾಜಕ ಮಾಹಿತಿ ದಾಖಲೆ (ಸಿಐಎಸ್- ಕಸ್ಟಮರ್ ಇನ್ಫಾರ್ಮೇಶನ್ ಶೀಟ್ಸ್) ಬಿಡುಗಡೆ ಮಾಡಬೇಕೆಂದು ತಿಳಿಸಿದೆ.

ಇದನ್ನೂ ಓದಿ: IPOs: 2023ರಲ್ಲಿ ಅತಿಹೆಚ್ಚು ಐಪಿಒಗಳ ಬಿಡುಗಡೆ; 2024ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ

ಸಿಮ್ ಕಾರ್ಡ್​ಗಳಿಗೆ ಡಿಜಿಟಲ್ ಕೆವೈಸಿ

ಸಿಮ್ ಕಾರ್ಡ್​ಗಳನ್ನು ಪಡೆಯುವಾಗ ಫೋಟೋ ಐಡಿ ಕೊಟ್ಟರೆ ಸಾಕು. ಸಂಪೂರ್ಣ ಆನ್​ಲೈನ್​ನಲ್ಲೇ ಕೆವೈಸಿ ಪ್ರಕ್ರಿಯೆ ನಡೆಯುತ್ತದೆ. ಹಾಗಂತ ದೂರಸಂಪರ್ಕ ಇಲಾಖೆಯು ಟೆಲಿಕಾಂ ಕಂಪನಿಗಳಿಗೆ ಮನವಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್