Savings: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಚ್ಚು ಬಡ್ಡಿ, ಜೊತೆಗೆ ಅದರ ವಿವಿಧ ಪ್ರಯೋಜನಗಳೇನು ತಿಳಿಯಿರಿ…

Sukanya Samriddhi Yojana: ಹೆಣ್ಮಕ್ಕಳಿಗೆಂದು ರೂಪಿಸಲಾಗಿರುವ ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರ ಬಡ್ಡಿದರವನ್ನು ಶೇ. 8ರಿಂದ ಶೇ 8.2ಕ್ಕೆ ಹೆಚ್ಚಿಸಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಹೆಣ್ಮಗುವಿನ ಹೆಸರಿನಲ್ಲಿ ಪೋಷಕರು ಈ ಸ್ಕೀಮ್ ಆರಂಭಿಸಬಹುದು. ಹೆಚ್ಚಿನ ಬಡ್ಡಿದರ ಜೊತೆಗೆ ತೆರಿಗೆ ರಿಯಾಯಿತಿ, ತೆರಿಗೆ ವಿನಾಯಿತಿ ಇತ್ಯಾದಿ ಸೌಲಭ್ಯ ಪಡೆಯಬಹುದು.

Savings: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಚ್ಚು ಬಡ್ಡಿ, ಜೊತೆಗೆ ಅದರ ವಿವಿಧ ಪ್ರಯೋಜನಗಳೇನು ತಿಳಿಯಿರಿ...
ಸುಕನ್ಯಾ ಸಮೃದ್ಧಿ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 31, 2023 | 1:12 PM

ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರ ಬಡ್ಡಿದರವನ್ನು ಶೇ. 8ರಿಂದ ಶೇ. 8.2ಕ್ಕೆ ಹೆಚ್ಚಿಸಿದೆ. ಬಹುತೇಕ ಒಂಬತ್ತು ವರ್ಷದ ಹಿಂದೆ ಆರಂಭವಾದ ಈ ಸ್ಕೀಮ್ (Sukanya Samriddhi Yojana) ಸಾಕಷ್ಟು ಜನಪ್ರಿಯವಾಗಲು ಹಲವು ಕಾರಣಗಳಿವೆ. ಹೆಣ್ಮಕ್ಕಳ ಓದು, ಮದುವೆಗೆ ಸಹಾಯವಾಗುವ ಉದ್ದೇಶದ ಈ ಸ್ಕೀಮ್​ನಲ್ಲಿ ಹೆಚ್ಚಿನ ಬಡ್ಡಿದರ ಮಾತ್ರವಲ್ಲದೇ ತೆರಿಗೆ ರಿಯಾಯಿತಿ ಇತ್ಯಾದಿ ಹಲವು ಪ್ರಯೋಜನಗಳಿವೆ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ?

ಹತ್ತು ವರ್ಷ ವಯಸ್ಸಿನ ಯಾವುದೇ ಹಣ್ಮಗುವಿನ ಹೆಸರಿನಲ್ಲಿ ಈ ಯೋಜನೆ ಆರಂಭಿಸಬಹುದು. 21 ವರ್ಷಕ್ಕೆ ಇದು ಮೆಚ್ಯೂರ್ ಆಗುತ್ತದೆ. ಆದರೆ, 15 ವರ್ಷದವರೆಗೆ ಮಾತ್ರ ಪಾವತಿ ಅವಧಿ ಇರುತ್ತದೆ. 15 ವರ್ಷ ಕಾಲ ಪ್ರತೀ ವರ್ಷ ಎಸ್​ಎಸ್​​ಐ ಖಾತೆಗೆ ಹಣ ಠೇವಣಿ ಇಡಬೇಕು. ಈ ಯೋಜನೆಯ ಕೆಲ ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸುಕನ್ಯಾ ಸಮೃದ್ದಿ ಯೋಜನೆ ಖಾತೆ ತೆರೆಯಲು 250 ರೂ ಸಾಕು

ಸುಕನ್ಯಾ ಸಮೃದ್ಧಿ ಯೋಜನೆ ಪಡೆಯಲು ಕನಿಷ್ಠ ಮೊತ್ತ 250 ರೂ ಮಾತ್ರವೇ. ವರ್ಷಕ್ಕೆ 250 ರೂ ಕಟ್ಟಬಹುದು. ಗರಿಷ್ಠ 1.5 ಲಕ್ಷ ರೂವರೆಗೂ ಪಾವತಿಗೆ ಅವಕಾಶ ಇರುತ್ತದೆ.

ಇದನ್ನೂ ಓದಿ: Interest Rates: ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸಿದ ಸರ್ಕಾರ; ಸುಕನ್ಯಾ ಸಮೃದ್ಧಿ, ಪೋಸ್ಟ್ ಆಫೀಸ್​ನ ಠೇವಣಿ ದರ ಹೆಚ್ಚಳ

ಹೆಣ್ಮಗುವಿನ ಶಿಕ್ಷಣ ವೆಚ್ಚಕ್ಕೆ ಹಣ ಹಿಂಪಡೆಯಬಹುದು

ಪಾಲಿಸಿಯನ್ನು ನೀವು ಯಾವಾಗೇ ಆರಂಭಿಸಲಿ, ಹೆಣ್ಮಗುವಿನ ವಯಸ್ಸು 18 ವರ್ಷ ದಾಟಿದಾಗ ಆವರೆಗೆ ಕಟ್ಟಲಾಗಿರುವ ಹಣದಲ್ಲಿ ಶೇ. 50ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶ ಇದೆ. ಇದು ಹೆಣ್ಮಗುವಿನ ಶಿಕ್ಷಣ ವೆಚ್ಚಕ್ಕೆ ಬಳಕೆ ಆಗಬೇಕು.

ಆದಾಯ ತೆರಿಗೆ ರಿಯಾಯಿತಿ…

ನೀವು ವರ್ಷಕ್ಕೆ ಇಲ್ಲಿ ಇರಿಸಬಹುದಾದ 1.5 ಲಕ್ಷ ರೂ ಹಣಕ್ಕೆ ಇನ್ಕಮ್ ಟ್ಯಾಕ್ಸ್ ಡಿಡಕ್ಷನ್ ಪಡೆಯಲು ಅವಕಾಶ ಇದೆ. ಅಂದರೆ ಅಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: Tips: ನಿವೃತ್ತಿಗೆ ಹಣ ಹೊಂದಿಸಬೇಕೆ? ಎಲ್ಲೆಲ್ಲಿ ಹೂಡಿಕೆ ಮಾಡಬೇಕು, ಈ ಸಲಹೆ ನಿಮಗೆ ಉಪಯುಕ್ತ ಎನಿಸಬಹುದು

ಬಡ್ಡಿ ಆದಾಯಕ್ಕೆ ತೆರಿಗೆ ಇರುವುದಿಲ್ಲ…

ಎಫ್​ಡಿ ಇತ್ಯಾದಿ ಸ್ಕೀಮ್​ಗಳಲ್ಲಿ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ. ಆದರೆ, ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ನಿಮ್ಮ ಮೊತ್ತಕ್ಕೆ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್