
ನವದೆಹಲಿ, ಜನವರಿ 19: ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಬಿಡುಗಡೆ ಮಾಡಿದ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೈನ್ನಲ್ಲಿ (Vande Bharat Sleeper Train) ಹಲವು ಫೀಚರ್ಗಳು ಹಾಗೂ ನಿಯಮಗಳಿವೆ. ಕೋಲ್ಕತಾದ ಹೌರಾ ಮತ್ತು ಅಸ್ಸಾಮ್ನ ಗುವಾಹತಿಯಲ್ಲಿರುವ ಕಾಮಾಖ್ಯ ಜಂಕ್ಷನ್ ಮಾರ್ಗದಲ್ಲಿ ಇದು ಸಾಗುತ್ತದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್ ನಡುವೆ ಹೈಸ್ಪೀಡ್ ರೈಲು ಹಳಿ ವ್ಯವಸ್ಥೆಯ ಒಂದು ಭಾಗವಾಗಿ ಈ ರೈಲು ಮಾರ್ಗ ಇದೆ.
ವಂದೇ ಭಾರತ್ ಸ್ಲೀಪರ್ ಟ್ರೈನ್ಗಳಲ್ಲಿ ಟಿಕೆಟ್ ಕ್ಯಾನ್ಸಲೇಶನ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಟಿಕೆಟ್ ಕ್ಯಾನ್ಸಲ್ ಮಾಡಿದರೆ ಕನಿಷ್ಠವೆಂದರು ಶೇ. 25ರಷ್ಟು ಡಿಡಕ್ಷನ್ ಮಾಡಲಾಗುತ್ತದೆ. 72 ಗಂಟೆಗೂ ಹೆಚ್ಚು ಕಾಲ ಮುಂಚೆ ನೀವು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಶೇ. 25ರಷ್ಟು ಟಿಕೆಟ್ ಹಣ ಮುರಿದುಕೊಳ್ಳಲಾಗುತ್ತದೆ.
ಟ್ರೈನ್ ಹೊರಡುವ ಮುಂದಿನ 72 ಗಂಟೆಯಿಂದ 8 ಗಂಟೆವರೆಗೆ ಅವಧಿಯಲ್ಲಿ ಟಿಕೆಟ್ ರದ್ದುಗೊಳಿಸಿದರೆ ಶೇ. 50ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. ಟ್ರೈನ್ ಹೊರಡುವ 8 ಗಂಟೆ ಮುಂಚೆ ನೀವು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಯಾವುದೇ ರೀಫಂಡ್ ಇರುವುದಿಲ್ಲ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್
ಈ ಟ್ರೈನ್ ಗಂಟೆಗೆ 180 ಕಿಮೀ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಆದರೆ, ಈಗಿರುವ ರೈಲು ಹಳಿ ವ್ಯವಸ್ಥೆಯಲ್ಲಿ ಇದು 120-130 ಕಿಮೀ ವೇಗದಲ್ಲಿ ಹೋಗಬಲ್ಲುದು. ಇದರ ಬರ್ತ್ಗಳಲ್ಲಿ (ಸೀಟು) ವಿಶ್ವ ದರ್ಜೆಯ ಸಸ್ಪೆನ್ಸ್ ಸಿಸ್ಟಂ ಇದ್ದು, ಇದರ ಡಿಸೈನ್ ಕೂಡ ವಿಶೇಷವಾಗಿದೆ. ಕೂರಲು ಆರಾಮವಾಗಿರುವಂತೆ ವಿನ್ಯಾಸ ಮಾಡಲಾಗಿದೆ.
ವಂದೇ ಭಾರತ್ ಸ್ಲೀಪರ್ ಟ್ರೈನ್ನಲ್ಲಿ ಹೊಸ ಹೊಸ ಸೋಂಕುನಿವಾರಕ ತಂತ್ರಜ್ಞಾನ ಹೊಂದಿದ್ದು, ಶೇ. 99ರಷ್ಟು ಸೂಕ್ಷ್ಮಜೀವಿಗಳನ್ನು ಕೊಲ್ಲಬಲ್ಲುದು. ಈ ಟ್ರೈನ್ನಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಲಾಗಿದೆ.
ಇದನ್ನೂ ಓದಿ: ಗ್ರೀನ್ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?
ಈ ರೈಲಿನಲ್ಲಿ ಕವಚ್ ಎನ್ನುವ ಆಟೊಮ್ಯಾಟಿಕ್ ಪ್ರೊಟೆಕ್ಷನ್ ಸಿಸ್ಟಂ ಇರುತ್ತದೆ. ಇದರಲ್ಲಿ ಸ್ಲೈಡಿಂಗ್ ಡೋರ್ ಇದ್ದು, ನಿಲ್ದಾಣ ಬಂದಾಗ ಮಾತ್ರ ಇದು ತೆರೆಯುವಂತೆ ಪ್ರೋಗ್ರಾಮ್ ಮಾಡಲಾಗಿರುತ್ತದೆ.
ಹೌರಾದಿಂದ ಕಾಮಾಖ್ಯವರೆಗಿನ ಮಾರ್ಗದ ವಂದೇ ಭಾರತ್ ಸ್ಲೀಪರ್ ಟ್ರೈನ್ನ ಟಿಕೆಟ್ ದರ 2,300 ರೂನಿಂದ 3,600 ರೂ ಇದೆ. ಪ್ರಯಾಣಿಕರಿಗೆ ಆಹಾರವೂ ಕೂಡ ಟಿಕೆಟ್ ದರದಲ್ಲೇ ಒಳಗೊಳ್ಳಲಾಗುತ್ತದೆ. ಸ್ಥಳೀಯ ಶೈಲಿಯ ಆಹಾರವನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ