Indian CEO: ಅಮೆರಿಕದ Honeywell ಸಂಸ್ಥೆಗೆ ವಿಮಲ್ ಕಪೂರ್ ಸಿಇಒ; ಭಾರತೀಯ CEOಗಳ ಪಟ್ಟಿ ಇಲ್ಲಿದೆ

|

Updated on: Mar 14, 2023 | 7:14 PM

Honeywell International CEO Vimal Kapur: ಜಾಗತಿಕ ಉದ್ಯಮ ವಲಯದಲ್ಲಿ ಭಾರತೀಯರು ಮುಂಚೂಣಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಹಲವಾರು ಪ್ರಮುಖ ಕಂಪನಿಗಳಿಗೆ ಭಾರತೀಯರೇ ಸಿಇಒಗಳಾಗಿದ್ದಾರೆ. ಈ ಪಟ್ಟಿಗೆ ವಿಮಲ್ ಕಪೂರ್ ಸೇರ್ಪಡೆಯಾಗುತ್ತಿದ್ದಾರೆ.

Indian CEO: ಅಮೆರಿಕದ Honeywell ಸಂಸ್ಥೆಗೆ ವಿಮಲ್ ಕಪೂರ್ ಸಿಇಒ; ಭಾರತೀಯ CEOಗಳ ಪಟ್ಟಿ ಇಲ್ಲಿದೆ
ವಿಮಲ್ ಕಪೂರ್
Follow us on

ಬೆಂಗಳೂರು: ಈಗ ಜಾಗತಿಕವಾಗಿ ಉದ್ಯಮ ವಲಯದಲ್ಲಿ ಭಾರತೀಯರ ಹೆಗ್ಗುರುತು ಬಹಳ ಸ್ಪಷ್ಟವಾಗಿ ನಮೂದಾಗುತ್ತಿದೆ. ಹಲವು ದಿಗ್ಗಜ ಸಂಸ್ಥೆಗಳಿಗೆ ಭಾರತೀಯರೇ ಮುಂದಾಳತ್ವ (Indians In Leadership Role) ವಹಿಸುತ್ತಿರುವುದು ಹೆಚ್ಚಾಗುತ್ತಿದೆ. ಇದೀಗ ಅಮೆರಿಕದ ಬೃಹತ್ ಕಂಪನಿಗಳಲ್ಲಿ ಒಂದೆನಿಸಿದ ಹನಿವೆಲ್ ಇಂಟರ್ನ್ಯಾಷನಲ್​ಗೆ (Honeywell International) ವಿಮಲ್ ಕಪೂರ್ ಸಿಇಒ ಆಗಲಿದ್ದಾರೆ. ಈ ವಿಷಯವನ್ನು ಹನಿವೆಲ್ ಸಂಸ್ಥೆಯೇ ಮಾರ್ಚ್ 14ರಂದು ಪ್ರಕಟಿಸಿದ್ದು, ಸಿಇಒ ಡೇರಿಯಸ್ ಅಡಂಜೈಕ್ ಅವರ ಸ್ಥಾನವನ್ನು ವಿಮಲ್ ಕಪೂರ್ ಕಪೂರ್ (Vimal Kapur) ತುಂಬಲಿದ್ದಾರೆ ಎಂದಿದೆ. ಸದ್ಯ ಹನಿವೆಲ್​ನ ಅಧ್ಯಕ್ಷ ಮತ್ತು ಸಿಒಒ ಆಗಿರುವ ವಿಮಲ್ ಕಪೂರ್ ಜೂನ್ 1ರಿಂದ ಸಿಇಒ ಜವಾಬ್ದಾರಿ ನಿಭಾಯಿಸಲಿದ್ದಾರೆ. 2017ರಲ್ಲಿ ಸಿಇಒ ಆಗಿದ್ದ ಡೇರಿಯಸ್ ಅವರು ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಕಂಪನಿಯಲ್ಲಿ ಮುಂದುವರಿಯಲಿದ್ದಾರೆ.

ವಿಮಲ್ ಕಪೂರ್ 3 ದಶಕಗಳಿಂದ ಹನಿವೆಲ್​ನಲ್ಲಿ ಕೆಲಸ ಮಾಡುತ್ತಿದ್ದು, ವಿವಿಧ ಕ್ಷೇತ್ರಗಳ ಉದ್ದಿಮೆಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ. ವಿಮಲ್ ಕಪೂರ್ ಈ ಹಿಂದೆ ಹನಿವೆಲ್​ನ ಇತರ ಉಪ ಸಂಸ್ಥೆಗಳಿಗೆ ಸಿಇಒ ಆಗಿಯೂ ಕೆಲಸ ಮಾಡಿದ್ದಾರೆ. ಈಗ ಇಡೀ ಗ್ರೂಪ್​ಗೆ ಅವರು ಸಿಇಒ ಆಗುತ್ತಿರುವುದು ಗಮನಾರ್ಹ. ಕಂಪನಿಯ ತಂತ್ರಜ್ಞಾನ ವಿಭಾಗವನ್ನು ಸುದೃಢಗೊಳಿಸಿದ ಶ್ರೇಯಸ್ಸು ಅವರದ್ದು. ಹನಿವೆಲ್​ನ ಸಾಫ್ಟ್​ವೇರ್ ವ್ಯವಹಾರಕ್ಕೆ ಭದ್ರ ಬುನಾದಿ ಹಾಕಿದ ಸಾಧನೆ ಅವರದ್ದು.

ಇದನ್ನೂ ಓದಿTCS: ಹೆಚ್ಚು ಅಮೆರಿಕನ್ನರಿಗೆ ಟಿಸಿಎಸ್ ಉದ್ಯೋಗ; ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಕಂಪನಿ; ಟಾಟಾ ಕಂಪನಿಯ ಇನ್ನೂ ಮಹತ್ವದ ಸಾಧನೆಗಳು ಇಲ್ಲಿವೆ

ಜಾಗತಿಕವಾಗಿ ಪ್ರಬಲ ಸಂಸ್ಥೆಗಳಿಗೆ ಭಾರತೀಯರು ಸಿಇಒ ಆಗುವ ಟ್ರೆಂಡ್ ಜೋರಾಗುತ್ತಿದೆ. ಹಲವಾರು ಕಂಪನಿಗಳ ಲೀಡರ್​ಶಿಪ್ ಸ್ಥಾನದಲ್ಲಿ ಭಾರತೀಯರು ಅಥವಾ ಭಾರತೀಯ ಮೂಲದವರು ಇದ್ದಾರೆ. ಅಂಥ ಕೆಲ ಪ್ರಮುಖ ಭಾರತೀಯ ಸಿಇಒಗಳ ಪಟ್ಟಿ ಇಲ್ಲಿದೆ:

  1. ಗೂಗಲ್ ಸಿಇಒ: ಸುಂದರ್ ಪಿಚೈ
  2. ಯೂಟ್ಯೂಬ್ ಸಿಇಒ: ನೀಲ್ ಮೋಹನ್
  3. ಮೈಕ್ರೋಸಾಫ್ಟ್ ಸಿಇಒ: ಸತ್ಯ ನಾದೆಲ್ಲಾ
  4. ಆಲ್ಬರ್ಟ್ಸನ್ಸ್ ಕಾಸ್ ಸಿಇಒ: ವಿವೇಕ್ ಶಂಕರನ್
  5. ಐಬಿಎಂ ಸಿಇಒ: ಅರವಿಂದ್ ಕೃಷ್ಣ
  6. ಡುಲೋಯ್ಟ್ (Duloitte) ಸಿಇಒ: ಪುನೀತ್ ರೆಂಜೆನ್
  7. ನೊವಾರ್ಟಿಸ್ ಸಿಇಒ: ವಸಂತ್ ನರಸಿಂಹನ್
  8. ಮೈಕ್ರಾನ್ ಸಿಇಒ: ಸಂಜಯ್ ಮೆಹರೋತ್ರಾ
  9. ಸ್ಟಾರ್​ಬಕ್ಸ್ ಸಿಇಒ: ಲಕ್ಷ್ಮಣ್ ನರಸಿಂಹನ್
  10. ಫ್ಲೆಕ್ಸ್ ಸಿಇಒ: ರೇವತಿ ಅದ್ವೈತಿ
  11. ಡಿಯಾಜಿಯೊ ಸಿಇಒ: ಇವಾನ್ ಮೆನೆಜಿಸ್
  12. ಅಡೋಬ್ ಸಿಇಒ: ಶಾಂತನು ನಾರಾಯಣ್
  13. ವೇಫೇರ್ ಸಿಇಒ: ನೀರಜ್ ಷಾ
  14. ನೆಟ್​ಆ್ಯಪ್ ಸಿಇಒ: ಜಾರ್ಜ್ ಕುರಿಯನ್
  15. ಚಾನಲ್ ಸಿಇಒ: ಲೀನಾ ನಾಯರ್
  16. ಓನ್ಲಿಫ್ಯಾನ್ಸ್ ಸಿಇಒ: ಆಮ್ರಪಾಲಿ
  17. ಮೋಟೊರೋಲಾ ಸಿಇಒ: ಸಂಜಯ್ ಝಾ
  18. ನೊಕಿಯಾ ಸಿಇಒ: ರಾಜೀವ್ ಸೂರಿ
  19. ಕಾಗ್ನೈಜೆಂಟ್ ಸಿಇಒ: ಫ್ರಾನ್ಸಿಸ್ಕೋ ಡಿಸೋಜಾ
  20. ಪಾಲೋ ಆಲ್ಟೋ ನೆಟ್ವರ್ಕ್ಸ್ ಸಿಇಒ: ನಿಕೇಶ್ ಅರೋರಾ
  21. ವಿಮಿಯೋ ಸಿಇಒ: ಅಂಜಲಿ ಸೂದ್
  22. ಓಗಿಲ್ವಿ ಸಿಇಒ: ದೇವಿಕಾ ಬುಲಚಂದಾನಿ
  23. ಅರಿಸ್ಟಾ ನೆಟ್ವರ್ಕ್ಸ್ ಸಿಇಒ: ಜಯಶ್ರೀ ಉಳ್ಳಾಲ
  24. ವಿಎಂವೇರ್ ಸಿಇಒ: ರಂಗರಾಜನ್ ರಘುರಾಮ್

ಇದನ್ನೂ ಓದಿYes Bank: ಯೆಸ್ ಬ್ಯಾಂಕ್ ಷೇರುಗಳನ್ನು ಮನಬಂದಂತೆ ಮಾರುತ್ತಿರುವ ಜನರು; ಯಾಕಿಷ್ಟು ನೂಕುನುಗ್ಗುಲು?

ಹಿಂದೆ ಸಿಇಒಗಳಾಗಿದ್ದವರು:

  • ಹರ್ಮನ್ ಇಂಟರ್ನ್ಯಾಷನಲ್ ಸಿಇಒ: ದಿನೇಶ್ ಪಲಿವಾಲಿ
  • ಕಾಂಡುಯೆಂಟ್ (ಜೆರಾಕ್ಸ್ ಕಾರ್ಪ್) ಸಿಇಒ: ಅಶೋಕ್ ವೇಮುರಿ
  • ಮಾಸ್ಟರ್​ಕಾರ್ಡ್ ಸಿಇಒ: ಅಜಯ್ ಪಾಲ್ ಸಿಂಗ್ ಬಾಂಗಾ
  • ಟ್ವಿಟ್ಟರ್ ಸಿಇಒ: ಪರಾಗ್ ಅಗರ್ವಾಲ್

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ