ಕೈತುಂಬ ಸಂಬಳ, ವಾರಕ್ಕೆ ಮೂರ್ನಾಲ್ಕು ದಿನ ರಜೆ, ದಿನಕ್ಕೆ ಕೆಲವೇ ತಾಸು ಮಾತ್ರ ಕೆಲಸ. ಇದು ಬಹುಶಃ ಎಲ್ಲಾ ವ್ಯಕ್ತಿಗಳು ಕನಸು ಕಾಣುವ ಹಣಸಂಪಾದನೆಯ ಮಾರ್ಗ. ಇವೆಲ್ಲಾ ವಾಸ್ತವದಲ್ಲಿ ಆಗುವಂಥದ್ದೇ? ಕೋಲ್ಕತಾದಲ್ಲಿ ವಕೀಲರೊಬ್ಬರು ತಮಗಾದ ಅನುಭವವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲಿಟಿಗೇಶನ್ ಅಸೋಸಿಯೇಟ್ ಹುದ್ದೆಗೆ ಅವರು ಇಂಟರ್ವ್ಯೂ ಏರ್ಪಡಿಸಿದ್ದಾಗ ಒಬ್ಬ ಅಭ್ಯರ್ಥಿಯ ಧೋರಣೆ ಕಂಡು ಚಕಿತಗೊಂಡಿದ್ದಾರೆ. ಈಗಷ್ಟೇ ಓದು ಮುಗಿಸಿ ಕೆಲಸಕ್ಕೆ ಸೇರಲು ಹೊರಟಿದ್ದ ಆ ಅಭ್ಯರ್ಥಿ ಹಾಕಿದ ಷರತ್ತುಗಳು, ಬೇಡಿಕೆಗಳ ವಿವರವನ್ನು ವಕೀಲೆ ಝುಮಾ ಸೇನ್ (Jhuma Sen) ಹಂಚಿಕೊಂಡಿದ್ದಾರೆ.
‘ಕೋಲ್ಕತಾದಲ್ಲಿ ಲಿಟಿಗೇಶನ್ ಅಸೋಸಿಯೇಟ್ ಹುದ್ದೆಗೆ ಹೊಸಬರೊಬ್ಬರನ್ನು ಇಂಟರ್ವ್ಯೂ ಮಾಡಿದೆ. ಆ ವ್ಯಕ್ತಿ ವಾರಕ್ಕೆ 4 ದಿನ ಮಾತ್ರ, ದಿನಕ್ಕೆ 4 ಗಂಟೆ ಮಾತ್ರ ಕೆಲಸ ಮಾಡುತ್ತಾರಂತೆ. ಕೋರ್ಟ್ಗೆ ಹೋಗಲು ಇಷ್ಟವಿಲ್ಲ, ಕಚೇರಿಯಲ್ಲೇ ಕೆಲಸ ಮಾಡುತ್ತಾರಂತೆ. ಸಂಬಳ 50,000 ರೂ ಬೇಕಂತೆ…’ ಎಂದು ಝುಮಾ ಹೆಸರಿನ ವಕೀಲರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Video Viral: 210 ಕೆಜಿ ಭಾರ ಎತ್ತುವ ಸಾಹಸ ಮಾಡಿ ಕುತ್ತಿಗೆ ಮುರಿತಕ್ಕೊಳಗಾಗಿ ಸಾವನ್ನಪ್ಪಿದ ಜಿಮ್ ಟ್ರೈನರ್
Interviewed a fresher for a litigation associate post who wants 4 days work week, 4 hrs/day work (because he doesn’t like going to court and will only be in chamber he said), and 50K salary in Kolkata. Bless this generation. ❤️
— Jhuma (@courtinglaw) July 23, 2023
ಬಳಿಕ ತಮ್ಮ ಟ್ವೀಟ್ನ ಕೊನೆಗೆ ಝುಮಾ ಅವರು ‘…ಈ ತಲೆಮಾರಿಗೆ ಶುಭವಾಗಲಿ’ ಎಂದು ವ್ಯಂಗ್ಯವಾಗಿ ಹಾರೈಕೆ ಮಾಡಿದ್ದಾರೆ. ಈ ಪೋಸ್ಟ್ಗೆ ಕೆಲವೊಂದಿಷ್ಟು ಪ್ರತಿಕ್ರಿಯೆಗಳು ಬಂದಿವೆ. ಬಹುತೇಕ ಎಲ್ಲರೂ ಅಭ್ಯರ್ಥಿಯ ಬೇಡಿಕೆ ಕಂಡು ದಂಗಾಗಿದ್ದಾರೆ.
ಇವತ್ತಿನ ದಿನಗಳಲ್ಲಿ ಯಾವ ವಿಚಾರಗಳನ್ನು ಇಟ್ಟುಕೊಂಡು ಇವರೆಲ್ಲಾ ಕಾನೂನು ಶಾಲೆಗಳಿಂದ ಬರುತ್ತಾರೆ ಎಂದು ಅಚ್ಚರಿ ಆಗುತ್ತದೆ ಎಂದು ಸಂದೀಪ್ ಭಟ್ಟಾಚಾರ್ಯ ಎಂಬುವವರು ಹೇಳಿದ್ದಾರೆ. ಇಂಥವರಿಗೆ ಇಷ್ಟೊಂದು ಧೈರ್ಯ ಹೇಗೆ ಬರುತ್ತೆ ಎಂದು ಒಬ್ಬರು ಹೇಳಿದರೆ, ಈತ ಮಾಡುವ ಕೆಲಸವನ್ನು ಎಐ ಇನ್ನೂ ಚೆನ್ನಾಗಿ ಮಾಡಬಲ್ಲುದು ಎಂದು ಹಲವರು ಟೀಕಿಸಿದ್ದಾರೆ.
ಇದನ್ನೂ ಓದಿ: Suguna Chicken: ಸುಗುಣ ಚಿಕನ್ ಸ್ಥಾಪನೆ ಹಾಗೂ ಅದರ ಮಾಲೀಕರ ಇಂಟರೆಸ್ಟಿಂಗ್ ಕಥೆ
ಹಾಗೆಯೇ, ಕೆಲವರು ಆ ಅಭ್ಯರ್ಥಿಯನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ. ಆತನ ಧೋರಣೆ ಸರಿ ಇದೆ. ಶೋಷಣೆ ಏನೆಂದು ಅರ್ಥ ಮಾಡಿಕೊಂಡಿದ್ದಾನೆ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಅತ್ಯಂತ ಕಡಿಮೆ ಜೀವನವೆಚ್ಚದ ನಗರಗಳಲ್ಲಿ ಕೋಲ್ಕತಾ ಒಂದು. ಇಲ್ಲಿ ಹೊಸಬರೊಬ್ಬರಿಗೆ 50,000 ರೂ ಸಂಬಳ ಎಂದರೆ ಅದು ದೊಡ್ಡದೇ. ಈ ಅಂಶದ ಬಗ್ಗೆಯೂ ಕೆಲ ಟ್ವೀಟಿಗರು ಕುತೂಹಲಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ