ಅಪ್ಪ ಅಮ್ಮನಿಗೋಸ್ಕರ 2 ಕೋಟಿ ಸಂಬಳದ ಕೆಲಸ ತಿರಸ್ಕರಿಸಿದ ಐಐಟಿ ಗೋಲ್ಡ್ ಮೆಡಲಿಸ್ಟ್? ಇದು ಫೇಕ್ ಸ್ಟೋರಿಯಾ?

Viral story of Vivek Sharma rejecting us job offer to take care of parents, turns out to be fake: ಕಳೆದ ಎರಡು ದಿನದಿಂದ ವಿವೇಕ್ ಶರ್ಮಾ ಎನ್ನುವ ವ್ಯಕ್ತಿಯ ಕಥೆ ವೈರಲ್ ಆಗಿದೆ. ಐಐಟಿಯಲ್ಲಿ ಗೋಲ್ಡ್ ಮೆಡಲ್ ಪಡೆದು, ಕ್ಯಾಲಿಫೋರ್ನಿಯಾದಲ್ಲಿ 2.2 ಕೋಟಿ ರೂ ಸಂಬಳದ ಕೆಲಸ ಬಿಟ್ಟು ಅಪ್ಪ ಅಮ್ಮನನ್ನು ನೋಡಿಕೊಳ್ಳುತ್ತಿದ್ದಾರೆ ಎನ್ನುವುದು ಸುದ್ದಿ. ಆದರೆ, ಇದು ಕಟ್ಟು ಕಥೆ ಎನ್ನುವುದು ಗೊತ್ತಾಗಿದೆ.

ಅಪ್ಪ ಅಮ್ಮನಿಗೋಸ್ಕರ 2 ಕೋಟಿ ಸಂಬಳದ ಕೆಲಸ ತಿರಸ್ಕರಿಸಿದ ಐಐಟಿ ಗೋಲ್ಡ್ ಮೆಡಲಿಸ್ಟ್? ಇದು ಫೇಕ್ ಸ್ಟೋರಿಯಾ?
ವಿವೇಕ್ ಶರ್ಮಾ ಎನ್ನಲಾದ ವ್ಯಕ್ತಿಯ ಚಿತ್ರ
Image Credit source: X user @Vikasalwys

Updated on: Jul 06, 2026 | 12:57 PM

ನವದೆಹಲಿ, ಜುಲೈ 5: ಈತ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್​ನಲ್ಲಿ ಗೋಲ್ಡ್ ಮೆಡಲಿಸ್ಟ್. ಅಮೆರಿಕದ ಸ್ಟಾರ್ಟಪ್​ವೊಂದರಿಂದ 2.2 ಕೋಟಿ ರೂ ಸಂಬಳದ ಆಫರ್ ಗಿಟ್ಟಿಸಿದ್ದವ. ಇನ್ನೇನು ಅಮೆರಿಕಕ್ಕೆ ಹಾರಬೇಕು ಎನ್ನುವಷ್ಟರಲ್ಲಿ ಅಪ್ಪ ಮತ್ತು ಅಮ್ಮನಿಗೆ ಗಂಭೀರ ಅನಾರೋಗ್ಯ. ಹೆತ್ತ ತಂದೆ ತಾಯಿಗಿಂತ ಯಾವ ಕಂಪನಿಯ ಆಫರ್ ಬೇಕಿಲ್ಲ ಎಂದು ನಿರ್ಧರಿಸಿದ ಮಗ (Vivek Sharma) ತನ್ನೂರಲ್ಲೇ ಉಳಿದುಕೊಂಡು ಅಪ್ಪ ಅಮ್ಮನ ಆರೈಕೆಯಲ್ಲಿ ತೊಡಗಿದೆ. ಜೀವನಕ್ಕೆ ದಿನಸಿ ಅಂಗಡಿ ತೆರೆದ. ಈತನ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿಹೋಯಿತು. ಅಬ್ಬಬ್ಬಾ, ಇದ್ದರೆ ಇಂಥ ಮಗ ಇರಬೇಕು ಎಂದು ಎಲ್ಲರೂ ಬಾಯಿಯ ಮೇಲೆ ಕೈಇಟ್ಟುಕೊಂಡಿದ್ದರು. ಆದರೆ, ಈ ಕಥೆ ಪೂರ್ಣ ಫೇಕ್ ಎಂಬುದು ಗೊತ್ತಾಗಿದೆ.

ಎಕ್ಸ್ ಬಳಕೆದಾರರಾದ ವಿಕಾಸ್ ಆಲ್ವೇಸ್ (X user @VikasAlwys) ಎಂಬ ಹೆಸರಿನ ಅಕೌಂಟ್​ನಲ್ಲಿ ಜುಲೈ 4ರಂದು ಈ ಸ್ಟೋರಿ ಅಪ್​ಲೋಡ್ ಮಾಡಲಾಗಿತ್ತು. ಈ ಅಕೌಂಟ್​ನಲ್ಲಿ ದಿನವೂ ನಿಜ ಜೀವನದ ಸ್ಫೂರ್ತಿಯುತ ಕಥೆಗಳು ಪೋಸ್ಟ್ ಆಗುತ್ತಿರುತ್ತವೆ. ಹೀಗಾಗಿ, ಅಪ್ಪ ಅಮ್ಮನಿಗೋಸ್ಕರ ದೊಡ್ಡ ಕೆಲಸದ ಆಫರ್ ಬಿಟ್ಟ ವಿವೇಕ್ ಶರ್ಮಾ ಅವರ ಕಥೆ ಭಾರೀ ವೈರಲ್ ಆಗಿದೆ. ಆದರೆ, ಈ ಸ್ಟೋರಿ ನಕಲಿ ಎಂದು ಹಿಂದೂಸ್ತಾನ್ ಟೈಮ್ಸ್ ವೆಬ್​ಸೈಟ್ ಹೇಳುತ್ತಿದೆ.

ವಿಕಾಸ್ ಆಲ್ವೇಸ್ ಎಂಬ ಎಕ್ಸ್ ಅಕೌಂಟ್​ನಲ್ಲಿ ಬಂದ ಪೋಸ್ಟ್

ಇದನ್ನೂ ಓದಿ: ಬಾಲ್ಯದಲ್ಲಿ ಎನ್​ಸೈಕ್ಲೊಪಿಡಿಯಾ, ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಪಿಕ್ಸೆಲ್ ಮ್ಯಾನ್; ಇದು ಕನ್ನಡಿಗ ಅವೈಸ್​ನ ರೋಚಕ ಕಥೆ

ವಿವೇಕ್ ಶರ್ಮಾ ಅವರ ಕಥೆ ಒಂದು ತಿಂಗಳ ಹಿಂದೆ ಡಾ. ದಿಲೀಪ್ ಗೋಸಾಯಿ ಎಂಬುವವರ ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಆಗಿತ್ತು. ಅದರ ಆಧಾರದ ಮೇಲೆ ವಿವೇಕ್ ಶರ್ಮಾ ತಮ್ಮ ಎಕ್ಸ್​ನಲ್ಲಿ ಸ್ಟೋರಿ ಹಂಚಿಕೊಂಡಂತಿತ್ತು. ಆದರೆ, ದಿಲೀಪ್ ಗೋಸಾಯಿ ಅವರು ಜನರಿಗೆ ಸ್ಫೂರ್ತಿ ನೀಡಲು ವಿವೇಕ್ ಶರ್ಮಾ ಎನ್ನುವ ಕಟ್ಟುಕಥೆ ಹಂಚಿಕೊಂಡಿದ್ದರು.

ವಿವೇಕ್ ಶರ್ಮಾ ಸ್ಟೋರಿ ಯಾವಾಗ ವೈರಲ್ ಆಗತೊಡಗಿತೋ, ಗೋಸಾಯಿ ಅವರು ತಾವು ಪೋಸ್ಟ್ ಮಾಡಿದ್ದು ಕಟ್ಟುಕಥೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ನಿಗೂಢ ಸಾವು

ದಿಲೀಪ್ ಗೋಸಾಯಿ ಪೋಸ್ಟ್​ನಲ್ಲಿ ವಿವೇಕ್ ಶರ್ಮಾ ಕಥೆ ಹೀಗಿತ್ತು…

ವಿವೇಕ್ ಶರ್ಮಾ 2012ರಲ್ಲಿ 147ನೇ ಜೆಇಇ ರ್ಯಾಂಕಿಂಗ್ ಪಡೆದು ಐಐಟಿ ಬಾಂಬೆ ಸೇರಿದ್ದರು. ಕಂಪ್ಯೂಟರ್ ಸೈನ್ಸ್​ನಲ್ಲಿ ಗೋಲ್ಡ್ ಮೆಡಲ್ ಪಡೆದರು. ಕ್ಯಾಲಿಫೋರ್ನಿಯಾದ ಸ್ಟಾರ್ಟಪ್​ನಲ್ಲಿ 2.2 ಕೋಟಿ ರೂ ಸಂಬಳದ ಕೆಲಸದ ಆಫರ್ ಪಡೆದರು. ಅಷ್ಟರಲ್ಲಿ ಅಪ್ಪ ಅಮ್ಮನಿಗೆ ಅನಾರೋಗ್ಯ ಎದುರಾಯಿತು. ಅವರನ್ನು ನೋಡಿಕೊಳ್ಳಲು ಕಾನಪುರ್​ನಲ್ಲೇ ಅವರು ದಿನಸಿ ಅಂಗಡಿ ಆರಂಭಿಸಿದರು. ಇದೇ ವೇಳೆ, ಅಪ್ಪ ಅಮ್ಮನ ಆರೋಗ್ಯವೂ ಸುಧಾರಿಸಿತು. ಇದು ದಿಲೀಪ್ ಗೋಸಾಯಿ ಅವರ ಪೋಸ್ಟ್​ನಲ್ಲಿದ್ದ ಸಾರಾಂಶ.

2012ರಲ್ಲಿ ಜೆಇಇಯಲ್ಲಿ 147ನೇ ರ್ಯಾಂಕ್ ಪಡೆದದ್ದು ವಿವೇಕ್ ಶರ್ಮಾ ಎನ್ನುವುದು ಖಚಿತವಾಗಿತ್ತು. ಆ ಹೆಸರಿನವ 2012ರಲ್ಲಿ ಜೆಇಇ ರ್ಯಾಂಕಿಂಗನ್ನೇ ಪಡೆದಿಲ್ಲ. ಹಾಗೆಯೇ, ವಿವೇಕ್ ಶರ್ಮಾ ಕಿರಾಣಿ ಅಂಗಡಿಯಲ್ಲಿದ್ದ ಚಿತ್ರವೂ ಕೂಡ ಬೇರೆಯವರದ್ದಾಗಿತ್ತು. ಸುಮಿತ್ ಗೊರೈ ಎನ್ನುವ ವ್ಯಕ್ತಿಯ ಯೂಟ್ಯೂಬ್ ವಿಡಿಯೋದಿಂದ ಆ ಫೋಟೋ ಪಡೆದು ಹಾಕಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Mon, 6 July 26

Follow Us