Viral Video: ಮೊಬೈಲ್ ಕಳವಾದರೆ ಫೋನ್​ಪೇ ಸಹಾಯವಾಣಿಗೆ ಕರೆ ಮಾಡಿ; ಆರ್​ಬಿಐ ಗವರ್ನರ್ ಅವರ ವೈರಲ್ ವಿಡಿಯೋದ ಅಸಲಿಯತ್ತು ಇಲ್ಲಿದೆ

| Updated By: Rakesh Nayak Manchi

Updated on: Sep 30, 2022 | 2:47 PM

ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡಬಹುದು. ಈ ಬಗ್ಗೆ ಎಚ್ಚರವಾಗಿರಿ.

Viral Video: ಮೊಬೈಲ್ ಕಳವಾದರೆ ಫೋನ್​ಪೇ ಸಹಾಯವಾಣಿಗೆ ಕರೆ ಮಾಡಿ; ಆರ್​ಬಿಐ ಗವರ್ನರ್ ಅವರ ವೈರಲ್ ವಿಡಿಯೋದ ಅಸಲಿಯತ್ತು ಇಲ್ಲಿದೆ
ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ವೈರಲ್ ವಿಡಿಯೋದ ಅಸಲಿಯತ್ತು
Follow us on

ಇಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಳ ಮಾಡಲಾಗಿದೆ. ಅದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರ ವಿಡಿಯೋ ವೈರಲ್ (Video Viral) ಆಗುತ್ತಿದೆ. ನಿಮ್ಮ ಮೊಬೈಲ್ ಕಳ್ಳತನವಾದರೆ PhonePe, Paytm ಮತ್ತು Google Payನ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ನೀವು ಸಹಾಯ ಪಡೆಯಬಹುದು ಎಂದು ಶಕ್ತಿಕಾಂತ್ ದಾಸ್ ಹೇಳಿರುವುದು ಈ ವೀಡಿಯೊದಲ್ಲಿ ಕಂಡುಬಂದಿದೆ. ಹಾಗಿದ್ದರೆ ಇದು ನಿಜವೇ? ದೂರವಾಣಿ ಕರೆ ಮಾಡಿದರೆ ಮೊಬೈಲ್ ಪತ್ತೆ ಹಚ್ಚಲು ಸಹಾಯಕವಾಗಲಿದೆಯೇ? ವೈರಲ್ ವಿಡಿಯೋದ ಅಸಲಿಯತ್ತು ಏನು? ಇಲ್ಲಿದೆ ಮಾಹಿತಿ.

ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದರ ಅಸಲಿಯತ್ತನ್ನು ಬಯಲಿಗೆಳೆಯಲು ಪಿಐಬಿ ಫ್ಯಾಕ್ಟ್ ಚೆಕ್ ನಡೆಸಿದೆ. ಈ ವೇಳೆ ಇದು ಸುಳ್ಳು ಎಂದು ತಿಳಿದುಬಂದಿರುವ ಹಿನ್ನೆಲೆ ನೀವು ವಿಡಿಯೋವನ್ನು ನೋಡಿ ಅದರಲ್ಲಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಲು ಮುಂದಾಗದಿರಿ. ಈ ಬಗ್ಗೆ ಟ್ವೀಟ್ ಮಾಡಿದ ಪಿಐಬಿ ಫ್ಯಾಕ್ಟ್ ಚೆಕ್, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದಿದೆ. ಈ ವಿಡಿಯೋದಲ್ಲಿ ಕೇಳಿಬರುತ್ತಿರುವ ಧ್ವನಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರದ್ದಲ್ಲ. ಇದರಲ್ಲಿ ಮತ್ತೊಬ್ಬ ವ್ಯಕ್ತಿಯ ಧ್ವನಿಯನ್ನು ಅಳವಡಿಸಲಾಗಿದೆ ಎಂದು ಹೇಳಿದೆ.

ಹಾಗೆಂದು ವಿಡಿಯೋದಲ್ಲಿ ನೀಡಿರುವ ಮಾಹಿತಿಯೂ ಸತ್ಯವಲ್ಲ, ಮಾಹಿತಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ವಿಡಿಯೋದಲ್ಲಿ Paytm, PhonePe ಮತ್ತು Google Pay ಹೆಸರಿನಲ್ಲಿ ಹಂಚಿಕೊಂಡಿರುವ ಸಂಖ್ಯೆಗೆ ನೀವು ಕರೆ ಮಾಡಬಾರದು. ಈ ಸಂಖ್ಯೆಗಳಲ್ಲಿ ನಿಮ್ಮ ಯಾವುದೇ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಬೇಡಿ. ಇದು ನಿಮ್ಮೊಂದಿಗೆ ವಂಚನೆಯ ಸಾಧನವಾಗಿರಬಹುದು. ಇದರೊಂದಿಗೆ ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡಬಹುದು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Fri, 30 September 22