Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI And Net Banking: ಅಯ್ಯೋ..ಮಿಸ್​ ಆಗಿ ಬೇರೆಯವರ ಅಕೌಂಟ್​ಗೆ ಹಣ ಹಾಕಿದ್ರಾ? ಈ ರೀತಿ ಮಾಡಿ ಹಣ ವಾಪಸ್ ಪಡೆಯಿರಿ

UPI ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ತಪ್ಪಾದ ಹಣ ವರ್ಗಾವಣೆಯಾದರೆ ಎರಡು ದಿನಗಳಲ್ಲಿ ಹಣವನ್ನು ಮರು ಪಡೆಯಬಹುದು ಅಥವಾ ತಪ್ಪಾಗಿ ಬೇರೆಯವರಿಗೆ ಕಳುಹಿಸಿದ್ದರೆ ಅದನ್ನು ಸರಿಯಾದ ವ್ಯಕ್ತಿಗೆ ಕಳುಹಿಸಬಹುದು.

UPI And Net Banking: ಅಯ್ಯೋ..ಮಿಸ್​ ಆಗಿ ಬೇರೆಯವರ ಅಕೌಂಟ್​ಗೆ ಹಣ ಹಾಕಿದ್ರಾ? ಈ ರೀತಿ ಮಾಡಿ ಹಣ ವಾಪಸ್ ಪಡೆಯಿರಿ
ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ತಪ್ಪಾದ ವರ್ಗಾವಣೆಯಾದರೆ ಹಣ ಮರು ಪಡೆಯುವ ಹಂತಗಳು
Follow us
TV9 Web
| Updated By: Rakesh Nayak Manchi

Updated on:Sep 30, 2022 | 4:12 PM

ದೇಶದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಆನ್‌ಲೈನ್ ವರ್ಗಾವಣೆಗಾಗಿ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಅನ್ನು ಉತ್ತೇಜಿಸುತ್ತಿದೆ. ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮಾಡುವಾಗ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾದರೆ ಏನು ಮಾಡಬೇಕು? ಆರ್‌ಬಿಐನ ಹೊಸ ಮಾರ್ಗಸೂಚಿಗಳ ಪ್ರಕಾರ, ತಪ್ಪಾಗಿ ಆದ ವರ್ಗಾವಣೆಯಾದ ಹಣವನ್ನು 48 ಗಂಟೆಗಳ ಒಳಗೆ ಮರುಪಾವತಿ ಮಾಡಬಹುದು. ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ (UPI And Net Banking) ಮಾಡಿದ ನಂತರ ಸ್ಮಾರ್ಟ್‌ಫೋನ್‌ನಲ್ಲಿ ಸ್ವೀಕರಿಸಿದ ಸಂದೇಶವನ್ನು ಎಂದಿಗೂ ಡಿಲಿಟ್ ಮಾಡಬೇಡಿ. ಈ ಸಂದೇಶವು PPBL ಸಂಖ್ಯೆಯನ್ನು ಒಳಗೊಂಡಿದೆ. ಹಣವನ್ನು ಮರುಪಾವತಿ ಮಾಡಲು ನಿಮಗೆ ಈ ಸಂಖ್ಯೆಯ ಅಗತ್ಯವಿರುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.

ಮಾರ್ಗಸೂಚಿಗಳ ಪ್ರಕಾರ, RBI RBI ಹೊರಡಿಸಿದ ಹೊಸ ಮಾರ್ಗಸೂಚಿಯು 48 ಗಂಟೆಗಳ ಒಳಗೆ ನಿಮ್ಮ ಹಣವನ್ನು ಮರುಪಾವತಿ ಮಾಡುವುದು ಬ್ಯಾಂಕಿನ ಜವಾಬ್ದಾರಿಯಾಗಿದೆ. ಹಣವನ್ನು ಮರಳಿ ಪಡೆಯಲು ಬ್ಯಾಂಕ್‌ಗಳು ಸಹಾಯ ಮಾಡದಿದ್ದರೆ, ಗ್ರಾಹಕರು bankingombudsman.rbi.org.in ನಲ್ಲಿ ದೂರು ಸಲ್ಲಿಸಬಹುದು. ತಪ್ಪಿಯೂ ಹಣ ತಪ್ಪು ಖಾತೆಗೆ ಹೋದರೆ, ಇದಕ್ಕಾಗಿ ಪತ್ರ ಬರೆದು ಬ್ಯಾಂಕ್‌ಗೆ ನೀಡಬೇಕಾಗುತ್ತದೆ. ಇದರಲ್ಲಿ ಖಾತೆ ಸಂಖ್ಯೆ, ಖಾತೆದಾರರ ಹೆಸರು, ಹಣ ಹೋಗಿರುವ ಖಾತೆ ಸಂಖ್ಯೆ ಬರೆಯಬೇಕು. ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮಾಡುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

ಯುಪಿಐ ಮಾಡುವಾಗ ನೀವು ಹಣವನ್ನು ಕಳುಹಿಸುತ್ತಿರುವ ವ್ಯಕ್ತಿಯ ಹೆಸರು ಮತ್ತು ಖಾತೆ ಸಂಖ್ಯೆ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಕ್ಯೂಆರ್ ಕೋಡ್ ಮೂಲಕ ಅಂಗಡಿಯವರಿಗೆ ಅವರ ಹೆಸರನ್ನು ಕೇಳುವ ಮೂಲಕ ಎರಡನ್ನೂ ಸಂಯೋಜಿಸಿ, ನೀವು ಕಳುಹಿಸಲು ಇಚ್ಚಿಸುತ್ತಿರುವ ಖಾತೆಯ ಸಂಖ್ಯೆಯು ಸರಿಯಾಗಿದೆಯೇ ಎಂಬುದನ್ನು ಖಚಿತಪಸಿಕೊಳ್ಳಿ. ನೆಟ್ ಬ್ಯಾಂಕಿಂಗ್ ಮಾಡುವಾಗ ಆತುರಪಡಬೇಡಿ. ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮಾಡಿದ ನಂತರ ನೀವು ಸ್ವೀಕರಿಸುವ ಸಂದೇಶವನ್ನು ಭದ್ರವಾಗಿರಿಸಿ.

ಹಣ ವಾಪಸ್ ಪಡೆಯುವ ಹಂತಗಳು

  • ತಪ್ಪಾಗಿ ತಪ್ಪು ಖಾತೆಗೆ ಹಣವನ್ನು ವರ್ಗಾಯಿಸಿದ ನಂತರ ಮೊದಲನೆಯದಾಗಿ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಮತ್ತು ಎಲ್ಲಾ ಮಾಹಿತಿಯೊಂದಿಗೆ PPBL ಸಂಖ್ಯೆಯನ್ನು ನಮೂದಿಸಿ
  • ಇದಾದ ನಂತರ ಬ್ಯಾಂಕ್​ಗೆ ಹೋಗಿ ಅಲ್ಲಿ ನಿಮ್ಮ ದೂರನ್ನು ದಾಖಲಿಸಿಕೊಳ್ಳಿ
  • ಶಾಖಾ ವ್ಯವಸ್ಥಾಪಕರಿಗೆ ಪತ್ರ ಬರೆಯಿರಿ
  • ಈ ಪತ್ರದಲ್ಲಿ ಹಣ ಹೋಗಿರುವ ಖಾತೆ ಸಂಖ್ಯೆಯನ್ನು ಬರೆಯಿರಿ ಮತ್ತು ನೀವು ಹಣವನ್ನು ಕಳುಹಿಸಲು ಬಯಸುವ ಖಾತೆಯ ಸಂಖ್ಯೆಯನ್ನು ಸಹ ನೀಡಿ
  • ವಹಿವಾಟಿನ ಉಲ್ಲೇಖ ಸಂಖ್ಯೆ, ವಹಿವಾಟಿನ ದಿನಾಂಕ, ಮೊತ್ತ ಮತ್ತು IFSC ಕೋಡ್ ಅನ್ನು ಬರೆಯುವುದು ಬಹಳ ಮುಖ್ಯ

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Fri, 30 September 22

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ