ನ. 12ಕ್ಕೆ ವಿಸ್ತಾರ-ಏರ್ ಇಂಡಿಯಾ ವಿಲೀನ; ಸೆ. 3ರ ಬಳಿಕ ವಿಸ್ತಾರದಲ್ಲಿ ಫ್ಲೈಟ್ ಬುಕಿಂಗ್ ಇಲ್ಲ

|

Updated on: Aug 30, 2024 | 12:17 PM

Vistara-Air India merger: ಟಾಟಾ ಒಡೆತನದ ವಿಸ್ತಾರ ಏರ್​ಲೈನ್ಸ್ ಸಂಸ್ಥೆ ಏರ್ ಇಂಡಿಯಾ ಜೊತೆ ವಿಲೀನಗೊಳ್ಳುವ ಪ್ರಕ್ರಿಯೆ ನವೆಂಬರ್ 12ಕ್ಕೆ ಮುಗಿಯಬಹುದು. ಈ ವಿಲೀನ ಪ್ರಕ್ರಿಯೆಯಲ್ಲಿ ಸಿಂಗಾಪುರ್ ಏರ್​ಲೈನ್ಸ್​ನಿಂದ ಎಫ್​ಡಿಐ ಹೂಡಿಕೆಗೆ ಸರ್ಕಾರ ಅನುಮತಿ ನೀಡಿದೆ. ಏರ್​ ಇಂಡಿಯಾ ಸಂಸ್ಥೆಯಲ್ಲಿ ಸಿಂಗಾಪುರ್ ಏರ್​ಲೈನ್ಸ್ ಶೇ. 49ರಷ್ಟು ಷೇರುಪಾಲು ಹೊಂದಿದೆ. ಟಾಟಾ ಗ್ರೂಪ್ ಶೇ. 51ರಷ್ಟು ಪಾಲು ಹೊಂದಿದೆ.

ನ. 12ಕ್ಕೆ ವಿಸ್ತಾರ-ಏರ್ ಇಂಡಿಯಾ ವಿಲೀನ; ಸೆ. 3ರ ಬಳಿಕ ವಿಸ್ತಾರದಲ್ಲಿ ಫ್ಲೈಟ್ ಬುಕಿಂಗ್ ಇಲ್ಲ
ವಿಸ್ತಾರ ಏರ್ಲೈನ್ಸ್
Follow us on

ನವದೆಹಲಿ, ಆಗಸ್ಟ್ 30: ವಿಸ್ತಾರ ಏರ್​ಲೈನ್ಸ್ ಮತ್ತು ಏರ್ ಇಂಡಿಯಾ ಸಂಸ್ಥೆಗಳು ವಿಲೀನಗೊಳ್ಳುವುದು ಸನ್ನಿಹಿತವಾಗಿದೆ. ವರದಿಗಳ ಪ್ರಕಾರ ನವೆಂಬರ್ 12ರಂದು ಈ ಎರಡು ದೈತ್ಯ ವಿಮಾನ ಸಂಸ್ಥೆಗಳು ವಿಲೀನಗೊಳ್ಳುವ ಸಾಧ್ಯತೆ ಇದೆ. ಇದೇನಾದರೂ ಆದಲ್ಲಿ ಏರ್ ಇಂಡಿಯಾ ಬ್ರ್ಯಾಂಡ್​ನಲ್ಲೇ ಕಂಪನಿ ವಿಸ್ತಾರ ಆಗಲಿದೆ. ವಿಶ್ವದ ಅತಿದೊಡ್ಡ ವಿಮಾನ ಸಂಸ್ಥೆಗಳಲ್ಲಿ ಒಂದೆನಿಸಲಿದೆ. ಹೊಸ ಏರ್ ಇಂಡಿಯಾ ಸಂಸ್ಥೆಯಲ್ಲಿ ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆ ಶೇ. 25.1ರಷ್ಟು ಷೇರುಪಾಲು ಖರೀದಿಸಲಿದೆ. ಈ ಹೂಡಿಕೆಗೆ ಭಾರತ ಸರ್ಕಾರದಿಂದ ಸಮ್ಮತಿ ಸಿಕ್ಕಿದೆ.

ನವೆಂಬರ್ 12ರ ಬಳಿಕ ವಿಸ್ತಾರ ಹೆಸರಿನಲ್ಲಿ ವಿಮಾನಗಳಿರುವುದಿಲ್ಲ. ಇವೆಲ್ಲವೂ ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಚಾಲನೆಯಲ್ಲಿರುತ್ತವೆ. ನವೆಂಬರ್ 11ರವರೆಗೂ ವಿಸ್ತಾರ ವಿಮಾನಗಳಿಗೆ ಬುಕಿಂಗ್ ಮಾಡಲು ಅವಕಾಶ ಇರುತ್ತದಾದರೂ ಅವೆಲ್ಲವೂ ಏರ್ ಇಂಡಿಯಾ ತಾಣಕ್ಕೆ ರೀಡೈರೆಕ್ಟ್ ಆಗಲಿದೆ.

ಇದನ್ನೂ ಓದಿ: ಭಾರತದ ಜಿಡಿಪಿ 2024ರಲ್ಲಿ ಶೇ. 6.8 ಅಲ್ಲ, ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಮೂಡೀಸ್

ಗಮನಿಸಬೇಕಾದ ಸಂಗತಿ ಎಂದರೆ, ಸೆಪ್ಟಂಬರ್ 3ರವರೆಗೆ ಮಾತ್ರವೇ ವಿಸ್ತಾರದಲ್ಲಿ ಫ್ಲೈಟ್ ಬುಕಿಂಗ್ ಅವಕಾಶ ಇರುತ್ತದೆ. ನವೆಂಬರ್ 11ರವರೆಗಿನ ಫ್ಲೈಟ್​ಗಳನ್ನು ಮಾತ್ರ ಬುಕಿಂಗ್ ಮಾಡಬಹುದು. ಸೆಪ್ಟೆಂಬರ್ 3ರ ಬಳಿಕ ಬುಕಿಂಗ್ ಮಾಡಬೇಕಾದರೆ ಏರ್ ಇಂಡಿಯಾ ಬಳಸಬೇಕಾಗುತ್ತದೆ.

ವಿಸ್ತಾರ ಏರ್ಲೈನ್ಸ್ ಸಂಸ್ಥೆ ಟಾಟಾ ಗ್ರೂಪ್ ಒಡೆತನದಲ್ಲಿದೆ. ಏರ್ ಇಂಡಿಯಾ ಸಂಸ್ಥೆಯಲ್ಲಿ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಜಂಟಿ ಪಾಲುದಾರಿಕೆ ಹೊಂದಿವೆ. ಇದರಲ್ಲಿ ಟಾಟಾ ಗ್ರೂಪ್ ಷೇರುಪಾಲು ಶೇ. 51ರಷ್ಟಿದ್ದರೆ, ಸಿಂಗಾಪುರ್ ಏರ್​ಲೈನ್ಸ್​ನ ಷೇರುಪಾಲು ಶೇ. 49ರಷ್ಟಿದೆ.

ಇದನ್ನೂ ಓದಿ: ನೂರು ಜಿಬಿ ಉಚಿತ ಕ್ಲೌಡ್ ಸ್ಟೋರೇಜ್: ಜಿಯೋ ಬಳಕೆದಾರರಿಗೆ ರಿಲಾಯನ್ಸ್ ಗಿಫ್ಟ್

ವಿಸ್ತಾರ ಸಂಸ್ಥೆ ಏರ್ ಇಂಡಿಯಾದಲ್ಲಿ ವಿಲೀನಗೊಂಡ ಬಳಿಕ ಬೃಹತ್ ಏರ್ ಇಂಡಿಯಾದಲ್ಲಿ ಶೇ. 25.1ರಷ್ಟು ಷೇರುಪಾಲನ್ನು ಸಿಂಗಾಪುರ್ ಏರ್ಲೈನ್ಸ್ ಖರೀದಿಸುತ್ತಿದೆ. ಈ ಖರೀದಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ