ಭಾರತದ ಜಿಡಿಪಿ 2024ರಲ್ಲಿ ಶೇ. 6.8 ಅಲ್ಲ, ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಮೂಡೀಸ್

Moody's forecast on GDP growth of India: ಭಾರತದ ಜಿಡಿಪಿ 2024ರಲ್ಲಿ ಶೇ. 6.8ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಹೇಳಿದ್ದ ಮೂಡೀಸ್ ಈಗ ನಿಲುವು ಬದಲಿಸಿದೆ. ಈ ವರ್ಷ ಶೇ. 7.2ರ ದರದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ ಎಂದು ಈ ಗ್ಲೋಬಲ್ ರೇಟಿಂಗ್ ಏಜೆನ್ಸಿ ಅಭಿಪ್ರಾಯಪಟ್ಟಿದೆ. 2025ರ ವರ್ಷದಲ್ಲೂ ಭಾರತದ ಆರ್ಥಿಕ ಬೆಳವಣಿಗೆ ಸಾಧ್ಯ ಶೇ. 6.4ರಿಂದ ಶೇ. 6.6ಕ್ಕೆ ನಿರೀಕ್ಷೆ ಹೆಚ್ಚಿಸಿದೆ.

ಭಾರತದ ಜಿಡಿಪಿ 2024ರಲ್ಲಿ ಶೇ. 6.8 ಅಲ್ಲ, ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಮೂಡೀಸ್
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 30, 2024 | 11:37 AM

ನವದೆಹಲಿ, ಆಗಸ್ಟ್ 30: ಜಾಗತಿಕ ರೇಟಿಂಗ್ ಏಜೆನ್ಸಿಯಾದ ಮೂಡೀಸ್ ಇದೀಗ ಭಾರತದ ಆರ್ಥಿಕತೆ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಭಾರತ ಎಷ್ಟು ವೇಗದಲ್ಲಿ ಬೆಳೆಯಬಹುದು ಎಂದು ಈ ಹಿಂದೆ ಅಂದಾಜು ಮಾಡಿದುದಕ್ಕಿಂತ ಹೆಚ್ಚಿನ ನಿರೀಕ್ಷೆಯಲ್ಲಿ ಮೂಡೀಸ್ ಇದೆ. ಅದರ ಪ್ರಕಾರ 2024ರ ಕ್ಯಾಲಂಡರ್ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.2ರಷ್ಟು ಬೆಳೆಯಬಹುದು ಎಂದಿದೆ. ಈ ಹಿಂದೆ ಅದು ಶೇ. 6.8ರಷ್ಟು ಆರ್ಥಿಕ ವೃದ್ಧಿ ಕಾಣಬಹುದು ಎಂದು ಅಂದಾಜು ಮಾಡಿತ್ತು. 2025ರಲ್ಲಿ ಶೇ. 6.4ರಷ್ಟು ಬೆಳೆಯಬಹುದು ಎಂದಿದ್ದ ಅದು ಈಗ ಶೇ. 6.6ಕ್ಕೆ ಹೆಚ್ಚಿಸಿದೆ.

ಭಾರತದ ಕೈಗಾರಿಕೆ ಮತ್ತು ಸರ್ವಿಸ್ ವಲಯಗಳು ಈ ವರ್ಷದ ಆರಂಭದಿಂದಲೂ ಉತ್ತಮವಾಗಿ ಸಾಧನೆ ಮಾಡುತ್ತಿವೆ. ಸರ್ವಿಸಸ್ ಕ್ಷೇತ್ರದ ಪಿಎಂಐ ಸೂಚಿ 60ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ ಎಂಬ ಅಂಶವನ್ನು ಮೂಡೀಸ್ ಸಂಸ್ಥೆ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.

ಇದನ್ನೂ ಓದಿ: ರಿಲಾಯನ್ಸ್ ಹೂಡಿಕೆದಾರರಿಗೆ ಖುಷಿ ಸುದ್ದಿ; 1:1 ಬೋನಸ್ ಷೇರು ನೀಡಲು ಯೋಜನೆ

ರೀಟೇಲ್ ಹಣದುಬ್ಬರ ಕಡಿಮೆ ಆಗತೊಡಗಿರುವುದರಿಂದ ಗೃಹ ವೆಚ್ಚ ಹೆಚ್ಚಾಗಬಹುದು. ಗ್ರಾಮೀಣ ಭಾಗದಲ್ಲಿ ಬೇಡಿಕೆ ಮತ್ತೆ ಹೆಚ್ಚತೊಡಗಿರುವ ಸೂಚನೆ ಕಾಣುತ್ತಿದೆ. ಉತ್ತಮ ಮಳೆ, ಬೆಳೆಗಳಾಗುತ್ತಿರುವುದು ಗ್ರಾಮೀಣ ಆರ್ಥಿಕತೆಗೆ ಪುಷ್ಟಿ ಸಿಕ್ಕಂತಾಗಿದೆ ಎಂದು ಈ ಏಜೆನ್ಸಿ ಹೇಳಿದೆ.

ಭಾರತದಲ್ಲಿರುವ ಸಾಕಷ್ಟು ಕಾರ್ಮಿಕ ಶಕ್ತಿಯನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಲಾಗುತ್ತದೆ ಎಂಬುದರ ಮೇಲೆ ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಭಾರತ ಹೇಗೆ ಬೆಳೆಯಬಲ್ಲುದು ಎಂಬುದು ಅವಲಂಬಿತವಾಗಿರುತ್ತದೆ ಎಂದು ಹೇಳಿರುವ ಮೂಡೀಸ್, ಈಗಿನ ಪ್ರಸಕ್ತ ಸಂಗತಿಗಳನ್ನು ಮಾತ್ರವೇ ಪರಿಗಣನೆಗೆ ತೆಗೆದುಕೊಂಡು ಭಾರತದ ಆರ್ಥಿಕ ಬೆಳವಣಿಗೆ ಶೇ. 6ರಿಂದ 7ರಷ್ಟು ಆಗಬಹುದು ಎಂದು ಅಂದಾಜಿಸಿದೆ.

ಮೂಡೀಸ್ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆಯ ಶಕ್ತಿ ಇನ್ನೂ ಹೆಚ್ಚಿರುತ್ತದೆ. ಅದೆಲ್ಲವೂ ಕಾರ್ಮಿಕ ಶಕ್ತಿಯನ್ನು ಹೇಗೆ ಉಪಯೋಗಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಬಿಲಿಯನೇರ್ಸ್ ಪಟ್ಟಿಗೆ ಶಾರುಖ್ ಸೇರ್ಪಡೆ

ಇವತ್ತು ತ್ರೈಮಾಸಿಕ ಜಿಡಿಪಿ ಡಾಟಾ ಬಿಡುಗಡೆ

2024ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್, ಅಂದರೆ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯ ಜಿಡಿಪಿ ದತ್ತಾಂಶವನ್ನು ಸರ್ಕಾರ ಇಂದು ಬಿಡುಗಡೆ ಮಾಡಲಿದೆ. ಚುನಾವಣೆಯ ಸಂದರ್ಭವಾದ್ದರಿಂದ ನೀತಿ ಸಂಹಿತೆ ಕಾರಣಕ್ಕೆ ಸರ್ಕಾರ ವಿವಿಧ ಯೋಜನೆಗಳಿಗೆ ಬಂಡವಾಳ ವೆಚ್ಚ ಸರಿಯಾಗಿ ಮಾಡಲು ಆಗಿರಲಿಲ್ಲ. ಹೀಗಾಗಿ, ತಜ್ಞರು ಜಿಡಿಪಿ ದರ ಈ ಕ್ವಾರ್ಟರ್​ನಲ್ಲಿ ಕಡಿಮೆ ಇರಬಹುದು ಎಂದಿದ್ದಾರೆ. ಶೇ. 6ರಿಂದ 7ರಷ್ಟು ಜಿಡಿಪಿ ದರ ನಿರೀಕ್ಷಿಸಲಾಗಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ನಲ್ಲಿ ಶೇ. 7.8ರಷ್ಟು ಬೆಳವಣಿಗೆ ಕಂಡಿತ್ತು. ಅಷ್ಟು ಮಟ್ಟದ ದರ ನಿರೀಕ್ಷೆ ಅಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ