AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಾಯನ್ಸ್ ಹೂಡಿಕೆದಾರರಿಗೆ ಖುಷಿ ಸುದ್ದಿ; 1:1 ಬೋನಸ್ ಷೇರು ನೀಡಲು ಯೋಜನೆ

Reliance Industries to issue 1:1 bonus shares: ರಿಲಾಯನ್ಸ್ ಇಂಡಸ್ಟ್ರೀಸ್ ತನ್ನ ಪ್ರತೀ ಷೇರಿಗೆ 1:1 ಅನುಪಾತದಲ್ಲಿ ಬೋನಸ್ ಷೇರು ಹಂಚಿಕೆ ಮಾಡಲು ನಿರ್ಧರಿಸಿದೆ. ಸೆ. 5ರಂದು ನಡೆಯಲಿರುವ ಆರ್​ಐಎಲ್​ನ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಈ ಬೋನಸ್ ಹಂಚಿಕೆಯಿಂದ ಷೇರುಗಳ ಸಂಖ್ಯೆ ದ್ವಿಗುಣಗೊಳ್ಳುತ್ತದಾದರೂ ಒಟ್ಟಾರೆ ಷೇರು ಸಂಪತ್ತಿನ ಮೌಲ್ಯ ಅಷ್ಟೇ ಇರುತ್ತದೆ.

ರಿಲಾಯನ್ಸ್ ಹೂಡಿಕೆದಾರರಿಗೆ ಖುಷಿ ಸುದ್ದಿ; 1:1 ಬೋನಸ್ ಷೇರು ನೀಡಲು ಯೋಜನೆ
ಆರ್​ಐಎಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 29, 2024 | 7:11 PM

Share

ಮುಂಬೈ, ಆಗಸ್ಟ್ 29: ಭಾರತದ ಅತಿದೊಡ್ಡ ಮಾರುಕಟ್ಟೆ ಸಂಪತ್ತಿನ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ತನ್ನ ಪ್ರತೀ ಷೇರರಿಗೆ ಪ್ರತೀ ಷೇರಿಗೆ ಒಂದು ಹೆಚ್ಚುವರಿ ಷೇರು ನೀಡುತ್ತಿದೆ. ಈ ಸಂಬಂಧ ಸೆಪ್ಟಂಬರ್ 5ರಂದು ಆರ್​ಐಎಲ್​ನ ಬೋರ್ಡ್ ಮೀಟಿಂಗ್ ನಡೆಯಲಿದ್ದು ಅಲ್ಲಿ 1:1 ಬೋನಸ್ ಷೇರು ವಿತರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಬೋನಸ್ ಷೇರುಗಳಿಂದ ಷೇರುದಾರರ ಸಂಪತ್ತಿಗಾಗಲೀ, ಆರ್​ಐಎಲ್​ನ ಒಟ್ಟಾರೆ ಮಾರುಕಟ್ಟೆ ಸಂಪತ್ತಿಗಾಗಲೀ ವ್ಯತ್ಯಯ ಉಂಟು ಮಾಡದು. ಈ ಬೋನಸ್ ಷೇರುಗಳ ಹಂಚಿಕೆಯ ವಿಚಾರವನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇಂದು ಗುರುವಾರ ಸ್ಟಾಕ್ ಎಕ್ಸ್​ಚೇಂಜ್​ಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ತಿಳಿಸಿದೆ.

1:1 ಬೋನಸ್ ಷೇರು ಎಂದರೇನು?

ಪ್ರತೀ ಷೇರಿಗೆ ಬದಲಾಗಿ ಅದರ ಅರ್ಧ ಮೌಲ್ಯದ ಎರಡು ಷೇರುಗಳನ್ನು ನೀಡಲಾಗುತ್ತದೆ. ಒಂದು ರಿಲಾಯನ್ಸ್ ಷೇರು ಹೊಂದಿರುವವರು ಒಂದು ಹೆಚ್ಚುವರಿ ಷೇರು ಪಡೆಯುತ್ತಾರೆ. ಒಟ್ಟಾರೆ ಮೌಲ್ಯ ಅಷ್ಟೇ ಇರುತ್ತದೆ. ಇಂದು ಗುರುವಾರ ರಿಲಾಯನ್ಸ್ ಷೇರುಬೆಲೆ 3,042.90 ರೂ ಇದೆ. ಇದೇ ಬೆಲೆ ಆಧಾರವಾಗಿಟ್ಟುಕೊಂಡು ರಿಲಾಯನ್ಸ್ ಬೋನಸ್ ಷೇರು ಕೊಟ್ಟಿದ್ದೇ ಆದಲ್ಲಿ ಒಂದು ಷೇರಿನ ಬೆಲೆ 1,521.45 ರೂ ಆಗುತ್ತದೆ. ಆದರೆ, ಒಂದು ಹೆಚ್ಚುವರಿ ಷೇರು ಸಿಗುತ್ತದೆ.

ನೂರು ಷೇರು ಹೊಂದಿರುವವರಿಗೆ ಇನ್ನೂ ನೂರು ಷೇರು ಸಿಗುತ್ತದೆ. ಆದರೆ, ಒಟ್ಟಾರೆ ಮೌಲ್ಯ ಅಷ್ಟೇ ಇರುತ್ತದೆ. ಇದನ್ನು ಬೋನಸ್ ಷೇರು ಹಂಚಿಕೆ ಎನ್ನುತ್ತಾರೆ.

ಇದನ್ನೂ ಓದಿ: ನೂರು ಜಿಬಿ ಉಚಿತ ಕ್ಲೌಡ್ ಸ್ಟೋರೇಜ್: ಜಿಯೋ ಬಳಕೆದಾರರಿಗೆ ರಿಲಾಯನ್ಸ್ ಗಿಫ್ಟ್

ಬೋನಸ್ ಷೇರು ಹಂಚಿಕೆ ಯಾಕೆ?

ಷೇರು ವಿಭಜನೆ ರೀತಿಯಲ್ಲಿ ಬೋನಸ್ ಷೇರು ಹಂಚಿಕೆಯಿಂದ ಕೆಲ ಪ್ರಮುಖ ಅನುಕೂಲಗಳಿವೆ. ಒಂದು, ಆ ಕಂಪನಿಯ ಷೇರುಗಳ ಲಿಕ್ವಿಡಿಟಿ ಹೆಚ್ಚುತ್ತದೆ. ಹೆಚ್ಚು ಷೇರುಗಳು ವಹಿವಾಟಿಗೆ ಲಭ್ಯ ಇರುತ್ತವೆ. ಎರಡನೇ ಅಂಶವೆಂದರೆ, ಷೇರುಬೆಲೆ ಕಡಿಮೆ ಅಗುವುದರಿಂದ ಸಣ್ಣ ಹೂಡಿಕೆದಾರರನ್ನು ಆಕರ್ಷಿಸಬಹುದು. ಇದರಿಂದ ಷೇರಿಗೆ ಬೇಡಿಕೆ ಹೆಚ್ಚಬಹುದು. ಮೂರನೇ ಅಂಶವೆಂದರೆ, ಬೋನಸ್ ಷೇರು ಹಂಚಿಕೆಯು ಕಂಪನಿಯ ಮಾಲೀಕರ ಆತ್ಮವಿಶ್ವಾಸವನ್ನು ಬಿಂಬಿಸುತ್ತದೆ.

2017ರಲ್ಲೂ ರಿಲಾಯನ್ಸ್ ಇಂಡಸ್ಟ್ರೀಸ್ 1:1 ಪ್ರಮಾಣದಲ್ಲಿ ಬೋನಸ್ ಷೇರು ಹಂಚಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಆರ್​ಐಎಲ್​ ಬೋನಸ್ ಷೇರು ಕೊಟ್ಟಿದೆ. ಒಟ್ಟಾರೆ ಈವರೆಗೆ ಆರ್​ಐಎಲ್ ಐದು ಬಾರಿ ಬೋನಸ್ ಷೇರು ಹಂಚಿಕೆ ಮಾಡಿದೆ. 1980ರಲ್ಲಿ ಪ್ರತೀ 3 ಷೇರಿಗೆ 5 ಬೋನಸ್ ಷೇರು ಹಂಚಿತ್ತು. 1983ರಲ್ಲಿ 6:10 ಬೋನಸ್ ಷೇರು ಕೊಟ್ಟಿತ್ತು. ಅಂದರೆ ಆರು ಷೇರಿನ ಬದಲಾಗಿ 10 ಷೇರು ಕೊಟ್ಟಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Thu, 29 August 24

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್