AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo X Fold 6: ವಿವೋದ ಅತ್ಯಂತ ದುಬಾರಿ ಫೋನ್ ಬಿಡುಗಡೆ; ಇದರ ಬೆಲೆ 2 ಲಕ್ಷಕ್ಕೂ ಹೆಚ್ಚು

ವಿವೋ ಭಾರತದಲ್ಲಿ ಎಕ್ಸ್ ಫೋಲ್ಡ್ 6, ವಿ80 ಮತ್ತು ಎಸ್2 ಎಫ್ಇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎಕ್ಸ್ ಫೋಲ್ಡ್ 6 ಬೆಲೆ ಬೆಲೆ 2 ಲಕ್ಷಕ್ಕೂ ಹೆಚ್ಚಿದೆ. ಫೋನ್‌ನಲ್ಲಿ 6,900mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಎಕ್ಸ್ ಫೋಲ್ಡ್ 6 ಮತ್ತು ವಿ80 ಅಕ್ಟೋಬರ್ 13ರಿಂದ, ಎಸ್2 ಎಫ್ಇ ಅಕ್ಟೋಬರ್ 20ರಿಂದ ಮಾರಾಟವಾಗಲಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Vivo X Fold 6: ವಿವೋದ ಅತ್ಯಂತ ದುಬಾರಿ ಫೋನ್ ಬಿಡುಗಡೆ; ಇದರ ಬೆಲೆ 2 ಲಕ್ಷಕ್ಕೂ ಹೆಚ್ಚು
Vivo X Fold 6
ಮಾಲಾಶ್ರೀ ಅಂಚನ್​
| Edited By: |

Updated on:Oct 06, 2026 | 5:02 PM

Share

ಮುಖ್ಯಾಂಶಗಳು

  • ವಿವೋದಿಂದ ಒಂದೇ ಬಾರಿಗೆ ಮೂರು ಹೊಸ ಫೋನ್‌ಗಳು.
  • 2 ಲಕ್ಷಕ್ಕೂ ಹೆಚ್ಚು ಬೆಲೆಯ ವಿವೋ ಫೋಲ್ಡ್ ಫೋನ್ ಭಾರತಕ್ಕೆ ಬಂದಿದೆ.
  • ವಿವೋ ಎಸ್2 ಎಫ್ಇಯಲ್ಲಿ ಬರೋಬ್ಬರಿ 10,000mAh ಬ್ಯಾಟರಿ ಇದೆ.

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ (Vivo) ಮೂರು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ವಿವೋ ಎಕ್ಸ್ ಫೋಲ್ಡ್6, ವಿವೋ ವಿ80 ಮತ್ತು ವಿವೋ ಎಸ್2 ಎಫ್‌ಇ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಪೈಕಿ ಎಕ್ಸ್ ಫೋಲ್ಡ್6 ಕಂಪನಿಯ ಅತ್ಯಂತ ದುಬಾರಿ ಫೋನ್ ಆಗಿದ್ದು, ಇದರ ಬೆಲೆ 2 ಲಕ್ಷಕ್ಕೂ ಹೆಚ್ಚಿದೆ. ಫೋನ್‌ನಲ್ಲಿ 6,900mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿವೋ ಎಕ್ಸ್ ಫೋಲ್ಡ್6 ಬೆಲೆ ಎಷ್ಟು?

ವಿವೋ ಎಕ್ಸ್ ಫೋಲ್ಡ್6 ಬೆಲೆ 2,19,999. ಇದು 12GB RAM ಮತ್ತು 512GB ಸಂಗ್ರಹ ಸಾಮರ್ಥ್ಯದ ಒಂದೇ ಮಾದರಿಯಲ್ಲಿ ಲಭ್ಯವಾಗಲಿದೆ. ಪುಸ್ತಕದಂತೆ ತೆರೆದುಕೊಳ್ಳುವ ವಿನ್ಯಾಸ ಹೊಂದಿರುವ ಈ ಫೋನ್‌ನಲ್ಲಿ ಹೊರಭಾಗದ ಪರದೆ ಮತ್ತು ಒಳಭಾಗದಲ್ಲಿ ದೊಡ್ಡ ಮಡಚಬಹುದಾದ ಪರದೆ ಇದೆ.

ಫೋನ್‌ನಲ್ಲಿ 6,900mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಭಾರತದಲ್ಲಿ ಮಾರಾಟವಾಗುವ ಫೋಲ್ಡೆಬಲ್ ಫೋನ್‌ಗಳ ಪೈಕಿ ಇದು ಅತ್ಯಂತ ದೊಡ್ಡ ಬ್ಯಾಟರಿ ಸಾಮರ್ಥ್ಯ ಹೊಂದಿದೆ ಎಂದು ವಿವೋ ಹೇಳಿದೆ. ಫೋನ್‌ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 9500 ಪ್ರೊಸೆಸರ್ ಮತ್ತು ಆ್ಯಂಡ್ರಾಯ್ಡ್ 17 ಆಧಾರಿತ ಒರಿಜಿನ್‌ಓಎಸ್ 7 ಇದೆ.

ಕ್ಯಾಮೆರಾದ ವಿಚಾರದಲ್ಲೂ ಎಕ್ಸ್ ಫೋಲ್ಡ್6 ಗಮನ ಸೆಳೆಯುತ್ತದೆ. ಇದರಲ್ಲಿ 200 ಮೆಗಾಪಿಕ್ಸೆಲ್ ಜೆಐಸ್ ಮುಖ್ಯ ಕ್ಯಾಮೆರಾ ಮತ್ತು ಜೆಐಸ್ ಎಪಿಒ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. 100x ವರೆಗೆ ಜೂಮ್‌ ಸೌಲಭ್ಯವೂ ಇದೆ. ದೊಡ್ಡ ಒಳಪರದೆಯಲ್ಲಿ ಒಂದೇ ಸಮಯದಲ್ಲಿ ಹಲವು ಅಪ್ಲಿಕೇಶನ್‌ಗಳನ್ನು ಬಳಸಲು ಅನುಕೂಲವಾಗುವ ಮಲ್ಟಿಟಾಸ್ಕಿಂಗ್ ವ್ಯವಸ್ಥೆಯನ್ನೂ ನೀಡಲಾಗಿದೆ.

ವಿವೋ ವಿ80 ಬೆಲೆ 62,999

ವಿವೋ ವಿ80 ಅನ್ನು ಕ್ಯಾಮೆರಾ ಮತ್ತು ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು ನೀಡುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿದೆ. ಇದರ 8GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಮೂಲ ಮಾದರಿಯ ಬೆಲೆ 62,999. 8GB+256GB ಮಾದರಿಗೆ 69,999 ಮತ್ತು 8GB+512GB ಮಾದರಿಗೆ 79,999 ಬೆಲೆ ನಿಗದಿಪಡಿಸಲಾಗಿದೆ.

ಫೋನ್ ಖರೀದಿಸುವ ಮುನ್ನ ಒಮ್ಮೆ ಯೋಚಿಸಿ; ಶೀಘ್ರದಲ್ಲೇ ಬರಲಿವೆ ಈ 4 ಹೊಸ ಸ್ಮಾರ್ಟ್‌ಫೋನ್‌ಗಳು

ವಿ80ನಲ್ಲಿ 6.59 ಇಂಚಿನ 1.5K ಅಮೋಲೆಡ್‌ ಪರದೆ ಇದ್ದು, 144Hz ರಿಫ್ರೆಶ್ ರೇಟ್‌ ಬೆಂಬಲಿಸುತ್ತದೆ. ಇದರಲ್ಲಿ ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 4 ಪ್ರೊಸೆಸರ್, 7,200mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೌಲಭ್ಯವಿದೆ. ಫೋನ್‌ನಲ್ಲಿ 50 ಮೆಗಾಪಿಕ್ಸೆಲ್ ಜೆಐಸ್ ಕ್ಯಾಮೆರಾ ವ್ಯವಸ್ಥೆ, 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ವಿವೋ ಎಸ್2 ಎಫ್‌ಇ 38,999

ಹೊಸ ಸರಣಿಯಲ್ಲಿ ಕಡಿಮೆ ಬೆಲೆಯ ಆಯ್ಕೆಯಾಗಿ ವಿವೋ ಎಸ್2 ಎಫ್‌ಇ ಬಂದಿದೆ. ಇದರ 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಮಾದರಿಗೆ 38,999 ಬೆಲೆ ಇದೆ. 8GB RAM ಮತ್ತು 128GB ಮಾದರಿಯ ಬೆಲೆ 42,999. ಈ ಫೋನ್‌ನಲ್ಲಿ 6.83 ಇಂಚಿನ 1.5K ಅಮೋಲೆಡ್‌ ಪರದೆ ಇದ್ದು, 120Hz ರಿಫ್ರೆಶ್ ರೇಟ್‌ ಬೆಂಬಲಿಸುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 7300ಇ ಪ್ರೊಸೆಸರ್ ಮತ್ತು 10,000mAh ದೊಡ್ಡ ಬ್ಯಾಟರಿ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. 44W ವೇಗದ ಚಾರ್ಜಿಂಗ್‌ ಸೌಲಭ್ಯವೂ ಇದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಯಾವಾಗ ಮಾರಾಟ ಆರಂಭ?

ವಿವೋ ಎಕ್ಸ್ ಫೋಲ್ಡ್6 ಮತ್ತು ವಿ80 ಫೋನ್‌ಗಳ ಮಾರಾಟ ಅಕ್ಟೋಬರ್ 13ರಿಂದ ಆರಂಭವಾಗಲಿದೆ. ಎಕ್ಸ್ ಫೋಲ್ಡ್6 ಅನ್ನು ವಿವೋ ಇಂಡಿಯಾ ಇ-ಸ್ಟೋರ್, ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಅಧಿಕೃತ ಚಿಲ್ಲರೆ ಮಳಿಗೆಗಳಲ್ಲಿ ಖರೀದಿಸಬಹುದು. ಎಸ್2 ಎಫ್‌ಇ ಮಾರಾಟ ಅಕ್ಟೋಬರ್ 20ರಿಂದ ಆರಂಭವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Tue, 6 October 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು