ಜಗದ್ವಿಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಮತ್ತೊಂದು ದೇಣಿಗೆಯ ಘೋಷಣೆ ಮಾಡಿದ್ದಾರೆ. 410 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಬರ್ಕ್ಶೈರ್ ಹಾಥ್ವೇ ಷೇರುಗಳನ್ನು ಐದು ಫೌಂಡೇಷನ್ಗಳಿಗೆ ದೇಣಿಗೆ ನೀಡುವುದಾಗಿ ಜೂನ್ 23ನೇ ತಾರೀಕಿನ ಬುಧವಾರದಂದು ವಾರೆನ್ ಬಫೆಟ್ ಘೋಷಣೆ ಮಾಡಿದ್ದಾರೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ನ ಟ್ರಸ್ಟಿ ಜವಾಬ್ದಾರಿಗೆ ರಾಜೀನಾಮೆ ಘೋಷಿಸುವ ಸಂದರ್ಭದಲ್ಲೇ ಈ ವಿಷಯವನ್ನೂ ಅವರು ತಿಳಿಸಿದ್ದಾರೆ. ಇವತ್ತಿಗೆ 410 ಕೋಟಿ ಡಾಲರ್ ಮೌಲ್ಯದ ಷೇರು ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 30.4 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವಾಗುತ್ತದೆ.
ಈ ಬಗ್ಗೆ ಮಾತನಾಡಿರುವ ವಾರೆನ್ ಬಫೆಟ್, “ವರ್ಷಗಳಿಂದ ನಾನು ಟ್ರಸ್ಟಿ ಆಗಿದ್ದೇನೆ. ನಾನು ಹಣ ನೀಡುವ ಬಿಲ್ ಮತ್ತು ಗೇಟ್ಸ್ ಫೌಂಡೇಷನ್ನಲ್ಲಿ ನಿಷ್ಕ್ರಿಯ ಟ್ರಸ್ಟಿ ಆಗಿದ್ದೇನೆ. ಹೇಗೆ ಬರ್ಕ್ಶೈರ್ ಹೊರತುಪಡಿಸಿ ಎಲ್ಲಾ ಕಾರ್ಪೊರೇಟ್ ಮಂಡಳಿಗಳಲ್ಲಿ ಮಾಡಿದಂತೆಯೇ ಈಗ ಈ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ,” ಎಂದು ಬಫೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2006ನೇ ಇಸವಿಯಲ್ಲಿ ತಮ್ಮ ಪಾಲಿನ ಎಲ್ಲ ಬರ್ಕ್ಶೈರ್ ಷೇರುಗಳನ್ನು ದಾನ ಮಾಡುವುದಾಗಿ ಬಫೆಟ್ ಘೋಷಣೆ ಮಾಡಿದ್ದರು. ಪ್ರತಿ ವರ್ಷ ಬಿಲ್ ಮತ್ತ ಮೆಲಿಂಡಾ ಗೇಟ್ಸ್ ಫೌಂಡೇಷನ್, ಸೂಸಾನ್ ಥಾಮ್ಸನ್ ಬಫೆಟ್ ಫೌಂಡೇಷನ್, ಶೆರ್ವುಡ್ ಫೌಂಡೇಷನ್, ಹೊವಾರ್ಡ್ ಜಿ. ಬಫೆಟ್ ಫೌಂಡೇಷನ್ ಮತ್ತು NoVo ಫೌಂಡೇಷನ್ಗೆ ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದ್ದರು. ಅವರು ಆಗ ಹೇಳಿದ್ದರು ಒಟ್ಟು ಲೆಕ್ಕದ ಅರ್ಧದಷ್ಟನನ್ನು ತಲುಪಿದಂತಾಗಿದೆ.
“ಈ ದಿನ ನ್ನ ಪಾಲಿನ ಮೈಲುಗಲ್ಲು,” ಎಂದು ಬಫೆಟ್ ಹೇಳಿದ್ದಾರೆ. “2006ರಲ್ಲಿ ನನ್ನ ನಿವ್ವಳ ಮೌಲ್ಯದ ಶೇ 99ರಷ್ಟನ್ನು, ಅಂದರೆ ಬಕ್ಶೈರ್ ಷೇರಿನ ಎಲ್ಲವನ್ನೂ ದಾನದ ಉದ್ದೇಶಕ್ಕೆ ವಿತರಣೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದೆ. ಈಗಿನ 4.1 ಬಿಲಿಯನ್ ಅಮೆರಿಕನ್ ಡಾಲರ್ ವಿತರಣೆಯೊಂದಿಗೆ ನಾನು ಅರ್ಧ ದಾರಿಯಲ್ಲಿ ಇದ್ದೇನೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Jamshetji Tata: ಶತಮಾನದ ಟಾಪ್ 50 ದಾನಿಗಳಲ್ಲಿ ಜಮ್ಷೆಡ್ ಜೀ ಟಾಟಾ ನಂಬರ್ 1; ನೀಡಿದ ದೇಣಿಗೆ 10,200 ಕೋಟಿ ಯುಎಸ್ಡಿ
(Veteran Warren Buffett announced 4.1 billion USD donation to 5 foundations also resignation for Bill And Melinda foundation as trustee on June 23rd, Wednesday)
Published On - 11:24 pm, Wed, 23 June 21