
ಮುಂಬೈ, ಮೇ 1: ಭಾರತದಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗುತ್ತಿರುವ ಕಂಟೆಂಟ್ ಬಹಳ ಅಗಾಧವಾಗಿದೆ. ಬಹುತೇಕ ಜನರು ಯೂಟ್ಯೂಬ್, ಇನ್ಸ್ಟಾಗಳಲ್ಲಿ ಕಂಟೆಂಟ್ ನೀಡುತ್ತಿರುವುದು ವರ್ಷದಿಂದ ವರ್ಷ ಗಣನೀಯವಾಗಿ ಹೆಚ್ಚುತ್ತಿದೆ. ದೂರದ ಕುಗ್ರಾಮದಲ್ಲಿರುವ ಒಬ್ಬ ಸಾಧಾರಣ ಹುಡುಗಿ ಕೂಡ ರೀಲ್ಸ್ ಮಾಡುತ್ತಿದ್ದಾಳೆ. ಇಷ್ಟು ಮಾತ್ರವಲ್ಲ, ಹಣವನ್ನೂ ಕೂಡ ಗಳಿಸುತ್ತಿದ್ದಾರೆ. ಅದೆಷ್ಟು ಹಣ ಗಳಿಸುತ್ತಿರಬಹುದು ಎನ್ನುವು ಕುತೂಹಲಕ್ಕೆ ಯೂಟ್ಯೂಬ್ನ ಸಿಇಒ ನೀಲ್ ಮೋಹನ್ (Neal Mohan) ಅವರೇ ಖುದ್ದಾಗಿ ಅಂಕಿ ಅಂಶ ನೀಡಿದ್ದಾರೆ.
ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ಇವತ್ತು ಆರಂಭವಾಗಿರುವ ವೇವ್ಸ್ ಸಮಿಟ್ನಲ್ಲಿ (WAVES Summit) ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಯೂಟ್ಯೂಬ್ ಸಿಇಒ ನೀಲ್ ಮೋಹನ್ ಅವರು ಭಾರತದ ಕ್ರಿಯೇಟರ್ ಎಕನಾಮಿ ಹೇಗೆ ಬೆಳೆದಿದೆ ಎನ್ನುವುದು ತಿಳಿಸಿದರು. ಈ ವೇಳೆ, ಭಾರತದಲ್ಲಿರುವ ಕಂಟೆಂಟ್ ಕ್ರಿಯೇಟರ್ಗಳಿಗೆ ಯೂಟ್ಯೂಬ್ ಈವರೆಗೆ 21,000 ಕೋಟಿ ರೂ ನೀಡಿರುವುದನ್ನು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಲೈವ್ ಇವೆಂಟ್ಸ್ನಿಂದ ಆರ್ಥಿಕತೆಗೆ ಏನೆಲ್ಲಾ ಲಾಭ? ಮೇ 3ರಂದು ಕೇಂದ್ರ ಸಚಿವರಿಂದ ಶ್ವೇತಪತ್ರ ಬಿಡುಗಡೆ
ಕಳೆದ ವರ್ಷ 10 ಕೋಟಿಗೂ ಅಧಿಕ ಭಾರತೀಯ ಯೂಟ್ಯೂಬ್ ಚಾನಲ್ಗಳು ವಿಡಿಯೋ ಕಂಟೆಂಟ್ ಅಪ್ಲೋಡ್ ಮಾಡಿವೆ. 10 ಲಕ್ಷಕ್ಕೂ ಅಧಿಕ ಸಬ್ಸ್ಕ್ರೈಬರ್ಸ್ ಹೊಂದಿರುವ ಭಾರತೀಯ ಯೂಟ್ಯೂಬ್ ಚಾನಲ್ಗಳ ಸಂಖ್ಯೆ 11,000ದಷ್ಟಿದ್ದದ್ದು ಒಂದು ವರ್ಷದಲ್ಲಿ 15,000ಕ್ಕೆ ಏರಿದೆ ಎನ್ನುವ ಮಾಹಿತಿಯನ್ನು ಯೂಟ್ಯೂಬ್ ಸಿಇಒ ನೀಲ್ ಮೋಹನ್ ಅವರು ವೇವ್ಸ್ ಸಮಿಟ್ನಲ್ಲಿ ಬಹಿರಂಗಪಡಿಸಿದ್ದಾರೆ.
ಜಾಗತಿಕವಾಗಿ ಯೂಟ್ಯೂಬ್ ಚಾನಲ್ ಹೊಂದಿರುವ ಸರ್ಕಾರಿ ನಾಯಕರುಗಳ ಪೈಕಿ ನರೇಂದ್ರ ಮೋದಿ ಅತಿ ಜನಪ್ರಿಯರಂತೆ. ನರೇಂದ್ರ ಮೋದಿ ಅವರ ಯೂಟ್ಯೂಬ್ ವಾಹಿನಿಗೆ 2.5 ಕೋಟಿ ಫಾಲೋಯರ್ಸ್ ಇದ್ದಾರೆ. ಜಾಗತಿಕವಾಗಿ ಯೂಟ್ಯೂಬ್ನಲ್ಲಿ ಅತಿಹೆಚ್ಚು ಫಾಲೋಯರ್ಸ್ ಹೊಂದಿರುವ ಸರ್ಕಾರಿ ನಾಯಕ ಎಂದರೆ ನರೇಂದ್ರ ಮೋದಿ ಎಂದು ನೀಲ್ ಮೋಹನ್ ಹೇಳಿದ್ದಾರೆ.
ಇದನ್ನೂ ಓದಿ: WAVES Summit: ಭಾರತದಲ್ಲಿ ಸೃಜಿಸಿ, ವಿಶ್ವಕ್ಕೆ ಸೃಜಿಸಿ; ಆರೆಂಜ್ ಆರ್ಥಿಕತೆಗೆ ಪ್ರಧಾನಿ ಒತ್ತು
ಭಾರತದಲ್ಲಿ ಕಂಟೆಂಟ್ ಸೃಷ್ಟಿಸಬಲ್ಲ ಸ್ಥಳೀಯ ಪ್ರತಿಭೆಯನ್ನು ಬೆಳೆಸಲು ಯೂಟ್ಯೂಬ್ ಬದ್ಧವಾಗಿದೆ. ಭಾರತೀಯ ಕಂಟೆಂಟ್ ಸೃಷ್ಟಿಕರ್ತರ ವಿಡಿಯೋಗಳ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಅವರ ಸಂಖ್ಯೆ ಹೆಚ್ಚಿಸಲು ಯೂಟ್ಯೂಬ್ ಸಂಸ್ಥೆ ಮುಂದಿನ ಎರಡು ವರ್ಷದಲ್ಲಿ 850 ಕೋಟಿ ರೂ ಹೂಡಿಕೆ ಮಾಡಲಿರುವುದಾಗಿ ನೀಲ್ ಮೋಹನ್ ಇದೇ ವೇಳೆ ಘೋಷಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ