AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ರಾಜ್ಯಗಳ 26 ಗ್ರಾಮೀಣ ಬ್ಯಾಂಕುಗಳ ವಿಲೀನ ಪೂರ್ಣ; ಕರ್ನಾಟಕದಲ್ಲಿ ಒಂದುಗೂಡಿದ ಬ್ಯಾಂಕುಗಳಿವು…

Amalgamation of regional rural banks across India: ಕರ್ನಾಟಕ ಸೇರಿ 11 ರಾಜ್ಯಗಳ 26 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನಗೊಳಿಸಲಾಗಿದ್ದು, ಇವತ್ತು ಚಾಲ್ತಿಗೆ ಬಂದಿದೆ. ದೇಶಾದ್ಯಂತ 43 ಇದ್ದ ಗ್ರಾಮೀಣ ಬ್ಯಾಂಕುಗಳ ಸಂಖ್ಯೆಯ ಈಗ 28ಕ್ಕೆ ಇಳಿದಿದೆ. ಕರ್ನಾಟಕದಲ್ಲಿ ವಿಕಾಸ್ ಗ್ರಾಮೀಣ ಬ್ಯಾಂಕು ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನೊಂದಿಗೆ ವಿಲೀನಗೊಂಡಿದೆ. ಈಗ ಅದು ದೇಶದ ಎರಡನೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್ ಎನಿಸಿದೆ.

11 ರಾಜ್ಯಗಳ 26 ಗ್ರಾಮೀಣ ಬ್ಯಾಂಕುಗಳ ವಿಲೀನ ಪೂರ್ಣ; ಕರ್ನಾಟಕದಲ್ಲಿ ಒಂದುಗೂಡಿದ ಬ್ಯಾಂಕುಗಳಿವು...
ಗ್ರಾಮೀಣ ಬ್ಯಾಂಕು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 01, 2025 | 5:15 PM

Share

ನವದೆಹಲಿ, ಮೇ 1: ಭಾರತದ ಗ್ರಾಮೀಣ ಭಾಗದ ಉಸಿರಾಗಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು (RRB- Regional Rural Bank) ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ವಿವಿಧ ಬ್ಯಾಂಕುಗಳನ್ನು ವಿಲೀನಗೊಳಿಸುತ್ತಿದೆ. 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 26 ಆರ್​​​ಆರ್​​ಬಿಗಳ ವಿಲೀನ ಪೂರ್ಣಗೊಂಡಿದೆ. ಇದರೊಂದಿಗೆ ದೇಶದ 26 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರ್​​ಆರ್​​​ಬಿಗಳ ಸಂಖ್ಯೆ 28ಕ್ಕೆ ಇಳಿದಿದೆ. ಇವತ್ತು, ಮೇ 1ರಿಂದ ಹೊಸ ಆರ್​​ಆರ್​​ಬಿಗಳು ಚಾಲನೆಗೆ ಬರುತ್ತಿವೆ. ಕೇಂದ್ರದ ಹಣಕಾಸು ಸೇವಾ ಇಲಾಖೆ ತನ್ನ ಎಕ್ಸ್ ಪೋಸ್ಟ್​​ವೊಂದರಲ್ಲಿ ಗ್ರಾಮೀಣ ಬ್ಯಾಂಕುಗಳ ವಿಲೀನ ಚಾರಿಗೆ ಬಂದಿರುವುದನ್ನು ತಿಳಿದಿದೆ.

‘11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 26 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ ಇವತ್ತು ಚಾಲನೆಗೆ ಬರುತ್ತಿದೆ. ಪ್ರಬಲ ಗ್ರಾಮೀಣ ಬ್ಯಾಂಕು, ಉತ್ತಮ ಆಡಳಿತ, ಸುಧಾರಿತ ಸಾಲ, ಹಣಕಾಸು ಒಳಗೊಳ್ಳುವಿಕೆಗೆ ಇದು ಮುಖ್ಯ ಹೆಜ್ಜೆಯಾಗಿದೆ’ ಎಂದು ಫೈನಾನ್ಷಿಯಲ್ ಸರ್ವಿಸ್ ಡಿಪಾರ್ಟ್ಮೆಂಟ್ ಹೇಳಿದೆ.

ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್ ಎನ್ನುವ ಸರ್ಕಾರದ ನೀತಿಗೆ ಅನುಗುಣವಾಗಿ ವಿವಿಧ ರೀಜನಲ್ ರೂರಲ್ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ.

ಇದನ್ನೂ ಓದಿ: ಒಂದು ರೂಗೆ ಚಿಕಿತ್ಸೆ, 11,000 ವೈದ್ಯರಿಗೆ ಕೆಲಸ; ಡಾ. ಪ್ರತಾಪ್ ರೆಡ್ಡಿ ಲಕ್ಷ ಕೋಟಿ ರೂ ಸಾಮ್ರಾಜ್ಯದ ಕಥೆ

ಕರ್ನಾಟಕದಲ್ಲಿ ಹೊಸ ಗ್ರಾಮೀಣ ಬ್ಯಾಂಕು; ಇದು ದೇಶದ ಎರಡನೇ ಅತಿದೊಡ್ಡ ರೂರಲ್ ಬ್ಯಾಂಕು

ಕರ್ನಾಟಕದಲ್ಲಿ ಈ ಮುಂಚೆ ಇದ್ದ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕು (ಕೆವಿಜಿಬಿ) ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕು (ಕೆಜಿಬಿ) ಇವೆರಡನ್ನೂ ವಿಲೀನಗೊಳಿಸಿ ಏಕೀಕೃತ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿರ್ಮಿಸಲಾಗಿದೆ. ಕೆನರಾ ಬ್ಯಾಂಕು ಇದರ ಪ್ರಾಯೋಜಕವಾಗಿದ್ದು, ಬಳ್ಳಾರಿಯಲ್ಲಿ ಮುಖ್ಯಕಚೇರಿ ಇರುತ್ತದೆ. ಎಲ್ಲಾ ಜಿಲ್ಲೆಗಳಲ್ಲೂ ಈ ಬ್ಯಾಂಕ್​​ನ ಶಾಖೆಗಳಿವೆ.

1975ರಲ್ಲಿ ಕರ್ನಾಟಕದಲ್ಲಿ 13 ಗ್ರಾಮೀಣ ಬ್ಯಾಂಕುಗಳಿದ್ದುವು. ಈ ಕ್ಷೇತ್ರವನ್ನು ಬಲಪಡಿಸಲು ವಿವಿಧ ಕೇಂದ್ರ ಸರ್ಕಾರಗಳು ಹಂತ ಹಂತವಾಗಿ ವಿಲೀನ ಪ್ರಕ್ರಿಯೆ ಮಾಡುತ್ತಾ ಬಂದವು. ಅಂತಿಮವಾಗಿ ಕರ್ನಾಟಕದಲ್ಲಿ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ ಎರಡಕ್ಕೆ ಇಳಿಯಿತು.

ಧಾರವಾಡದಲ್ಲಿ ಪ್ರಧಾನ ಕಚೇರಿ ಇದ್ದ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕು 9 ಜಿಲ್ಲೆಗಳಲ್ಲಿ 629 ಶಾಖೆ ಹೊಂದಿತ್ತು. ಅದರ ಬ್ಯುಸಿನೆಸ್ ಟರ್ನೋವರ್ 38,714 ಕೋಟಿ ರೂ ಇತ್ತು.

ಇನ್ನು, ಕರ್ನಾಟಕ ಗ್ರಾಮೀಣ ಬ್ಯಾಂಕು ಬಳ್ಳಾರಿಯಲ್ಲಿ ಮುಖ್ಯ ಕಚೇರಿ ಇದ್ದು, 22 ಜಿಲ್ಲೆಗಳಲ್ಲಿ 1,122 ಶಾಖೆಗಳನ್ನು ಹೊಂದಿ, 66,137 ಕೋಟಿ ರೂ ವ್ಯವಹಾರ ಕಾಣುತ್ತಿತ್ತು. ಈಗ ಇವೆರಡೂ ಬ್ಯಾಂಕುಗಳು ವಿಲೀನಗೊಂಡ ಬಳಿಕ ದೇಶದ ಎರಡನೇ ಅತಿದೊಡ್ಡ ಗ್ರಾಮೀಣ ಬ್ಯಾಂಕು ಕರ್ನಾಟಕಕ್ಕೆ ಬಂದಂತಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಸೃಜಿಸಿ, ವಿಶ್ವಕ್ಕೆ ಸೃಜಿಸಿ; ಆರೆಂಜ್ ಆರ್ಥಿಕತೆಗೆ ಪ್ರಧಾನಿ ಒತ್ತು

ಲಕ್ಷ ಕೋಟಿ ರೂ ಟರ್ನೋವರ್ ಇರುವ ಏಕೀಕೃತ ಬ್ಯಾಂಕು

ಏಕೀಕೃತ ಕರ್ನಾಟಕ ಗ್ರಾಮೀಣ ಬ್ಯಾಂಕು ಎಲ್ಲಾ ಜಿಲ್ಲೆಗಳಲ್ಲಿ ಸೇರಿ 1,751 ಶಾಖೆಗಳನ್ನು ಹೊಂದಿದೆ. ಅದರ ಒಟ್ಟು ವ್ಯವಹಾರ 1,04,851 ಕೋಟಿ ರೂನಷ್ಟಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್​​​ನಲ್ಲಿ ಕೇಂದ್ರ ಸರ್ಕಾರದ ಪಾಲು ಶೇ. 50ರಷ್ಟಿರುತ್ತದೆ. ರಾಜ್ಯ ಸರ್ಕಾರ ಶೇ. 15, ಹಾಗೂ ಪ್ರಾಯೋಜಕ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಶೇ. 35 ಪಾಲು ಹೊಂದಿರುತ್ತದೆ.

ಯಾವ್ಯಾವ ರಾಜ್ಯಗಳ ಗ್ರಾಮೀಣ ಬ್ಯಾಂಕುಗಳು ವಿಲೀನಗೊಂಡಿವೆ..?

ಕರ್ನಾಟಕ ಅಲ್ಲದೆ, ಆಂಧ್ರ, ಉತ್ತಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದ ಗ್ರಾಮೀಣ ಬ್ಯಾಂಕುಗಳು ವಿಲೀನಗೊಳ್ಳುತ್ತಿವೆ. ಇದರೊಂದಿಗೆ 43 ಇದ್ದ ಬ್ಯಾಂಕುಗಳ ಸಂಖ್ಯೆ 28ಕ್ಕೆ ಇಳಿಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್