AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Youtube: ಯೂಟ್ಯೂಬ್​​ನಿಂದ ಭಾರತೀಯರು ಗಳಿಸಿರುವ ಆದಾಯ ಎಷ್ಟು ಗೊತ್ತಾ? ವೇವ್ಸ್ ಸಮಿಟ್​​​ನಲ್ಲಿ ಉತ್ತರ ಕೊಟ್ಟ ಸಿಇಒ

Youtube CEO Neal Mohan reveals interesting figures at WAVES Summit 2025: ಯೂಟ್ಯೂಬ್​ನಲ್ಲಿ ವಿಡಿಯೋ, ಶಾರ್ಟ್ಸ್ ಹಾಕಿದರೆ ಹಣ ಸಿಗುತ್ತದೆ. ಈ ರೀತಿ ಇದೂವರೆಗೂ ಭಾರತೀಯರು ಯೂಟ್ಯೂಬ್​​​ನಿಂದ ಗಳಿಸಿದ ಹಣ 21,000 ಕೋಟಿ ರೂ. ಮುಂಬೈನಲ್ಲಿ ಇಂದು ಆರಂಭಗೊಂಡ ನಾಲ್ಕು ದಿನಗಳ ವೇವ್ಸ್ ಸಮಿಟ್​​ನಲ್ಲಿ ಯೂಟ್ಯೂಬ್ ಸಿಇಒ ನೀಲ್ ಮೋಹನ್ ಈ ಮಾಹಿತಿ ನೀಡಿದ್ದಾರೆ.

Youtube: ಯೂಟ್ಯೂಬ್​​ನಿಂದ ಭಾರತೀಯರು ಗಳಿಸಿರುವ ಆದಾಯ ಎಷ್ಟು ಗೊತ್ತಾ? ವೇವ್ಸ್ ಸಮಿಟ್​​​ನಲ್ಲಿ ಉತ್ತರ ಕೊಟ್ಟ ಸಿಇಒ
ನೀಲ್ ಮೋಹನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 01, 2025 | 7:02 PM

Share

ಮುಂಬೈ, ಮೇ 1: ಭಾರತದಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗುತ್ತಿರುವ ಕಂಟೆಂಟ್ ಬಹಳ ಅಗಾಧವಾಗಿದೆ. ಬಹುತೇಕ ಜನರು ಯೂಟ್ಯೂಬ್, ಇನ್ಸ್​​ಟಾಗಳಲ್ಲಿ ಕಂಟೆಂಟ್ ನೀಡುತ್ತಿರುವುದು ವರ್ಷದಿಂದ ವರ್ಷ ಗಣನೀಯವಾಗಿ ಹೆಚ್ಚುತ್ತಿದೆ. ದೂರದ ಕುಗ್ರಾಮದಲ್ಲಿರುವ ಒಬ್ಬ ಸಾಧಾರಣ ಹುಡುಗಿ ಕೂಡ ರೀಲ್ಸ್ ಮಾಡುತ್ತಿದ್ದಾಳೆ. ಇಷ್ಟು ಮಾತ್ರವಲ್ಲ, ಹಣವನ್ನೂ ಕೂಡ ಗಳಿಸುತ್ತಿದ್ದಾರೆ. ಅದೆಷ್ಟು ಹಣ ಗಳಿಸುತ್ತಿರಬಹುದು ಎನ್ನುವು ಕುತೂಹಲಕ್ಕೆ ಯೂಟ್ಯೂಬ್​​​ನ ಸಿಇಒ ನೀಲ್ ಮೋಹನ್ (Neal Mohan) ಅವರೇ ಖುದ್ದಾಗಿ ಅಂಕಿ ಅಂಶ ನೀಡಿದ್ದಾರೆ.

ಯೂಟ್ಯೂಬ್​​​ನಿಂದ 21,000 ಕೋಟಿ ರೂ ಹಣ ಗಳಿಸಿದ ಭಾರತೀಯರು

ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್​​​ನಲ್ಲಿ ಇವತ್ತು ಆರಂಭವಾಗಿರುವ ವೇವ್ಸ್ ಸಮಿಟ್​​​ನಲ್ಲಿ (WAVES Summit) ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಯೂಟ್ಯೂಬ್ ಸಿಇಒ ನೀಲ್ ಮೋಹನ್ ಅವರು ಭಾರತದ ಕ್ರಿಯೇಟರ್ ಎಕನಾಮಿ ಹೇಗೆ ಬೆಳೆದಿದೆ ಎನ್ನುವುದು ತಿಳಿಸಿದರು. ಈ ವೇಳೆ, ಭಾರತದಲ್ಲಿರುವ ಕಂಟೆಂಟ್ ಕ್ರಿಯೇಟರ್​​ಗಳಿಗೆ ಯೂಟ್ಯೂಬ್ ಈವರೆಗೆ 21,000 ಕೋಟಿ ರೂ ನೀಡಿರುವುದನ್ನು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಲೈವ್ ಇವೆಂಟ್ಸ್​​ನಿಂದ ಆರ್ಥಿಕತೆಗೆ ಏನೆಲ್ಲಾ ಲಾಭ? ಮೇ 3ರಂದು ಕೇಂದ್ರ ಸಚಿವರಿಂದ ಶ್ವೇತಪತ್ರ ಬಿಡುಗಡೆ

ಕಳೆದ ವರ್ಷ 10 ಕೋಟಿಗೂ ಅಧಿಕ ಭಾರತೀಯ ಯೂಟ್ಯೂಬ್ ಚಾನಲ್​​​ಗಳು ವಿಡಿಯೋ ಕಂಟೆಂಟ್ ಅಪ್​ಲೋಡ್ ಮಾಡಿವೆ. 10 ಲಕ್ಷಕ್ಕೂ ಅಧಿಕ ಸಬ್​​ಸ್ಕ್ರೈಬರ್ಸ್ ಹೊಂದಿರುವ ಭಾರತೀಯ ಯೂಟ್ಯೂಬ್ ಚಾನಲ್​​​ಗಳ ಸಂಖ್ಯೆ 11,000ದಷ್ಟಿದ್ದದ್ದು ಒಂದು ವರ್ಷದಲ್ಲಿ 15,000ಕ್ಕೆ ಏರಿದೆ ಎನ್ನುವ ಮಾಹಿತಿಯನ್ನು ಯೂಟ್ಯೂಬ್ ಸಿಇಒ ನೀಲ್ ಮೋಹನ್ ಅವರು ವೇವ್ಸ್ ಸಮಿಟ್​ನಲ್ಲಿ ಬಹಿರಂಗಪಡಿಸಿದ್ದಾರೆ.

ಪ್ರಧಾನಿ ಮೋದಿಗೆ ಅತಿಹೆಚ್ಚು ಫಾಲೋಯರ್ಸ್

ಜಾಗತಿಕವಾಗಿ ಯೂಟ್ಯೂಬ್ ಚಾನಲ್ ಹೊಂದಿರುವ ಸರ್ಕಾರಿ ನಾಯಕರುಗಳ ಪೈಕಿ ನರೇಂದ್ರ ಮೋದಿ ಅತಿ ಜನಪ್ರಿಯರಂತೆ. ನರೇಂದ್ರ ಮೋದಿ ಅವರ ಯೂಟ್ಯೂಬ್ ವಾಹಿನಿಗೆ 2.5 ಕೋಟಿ ಫಾಲೋಯರ್ಸ್ ಇದ್ದಾರೆ. ಜಾಗತಿಕವಾಗಿ ಯೂಟ್ಯೂಬ್​​​ನಲ್ಲಿ ಅತಿಹೆಚ್ಚು ಫಾಲೋಯರ್ಸ್ ಹೊಂದಿರುವ ಸರ್ಕಾರಿ ನಾಯಕ ಎಂದರೆ ನರೇಂದ್ರ ಮೋದಿ ಎಂದು ನೀಲ್ ಮೋಹನ್ ಹೇಳಿದ್ದಾರೆ.

ಇದನ್ನೂ ಓದಿ: WAVES Summit: ಭಾರತದಲ್ಲಿ ಸೃಜಿಸಿ, ವಿಶ್ವಕ್ಕೆ ಸೃಜಿಸಿ; ಆರೆಂಜ್ ಆರ್ಥಿಕತೆಗೆ ಪ್ರಧಾನಿ ಒತ್ತು

ಭಾರತದ ಕಂಟೆಂಟ್ ಕ್ರಿಯೇಟರ್ಸ್​ಗೆ ಪುಷ್ಟಿ ನೀಡಲು ಯೂಟ್ಯೂಬ್ ಮತ್ತಷ್ಟು ಯತ್ನ

ಭಾರತದಲ್ಲಿ ಕಂಟೆಂಟ್ ಸೃಷ್ಟಿಸಬಲ್ಲ ಸ್ಥಳೀಯ ಪ್ರತಿಭೆಯನ್ನು ಬೆಳೆಸಲು ಯೂಟ್ಯೂಬ್ ಬದ್ಧವಾಗಿದೆ. ಭಾರತೀಯ ಕಂಟೆಂಟ್ ಸೃಷ್ಟಿಕರ್ತರ ವಿಡಿಯೋಗಳ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಅವರ ಸಂಖ್ಯೆ ಹೆಚ್ಚಿಸಲು ಯೂಟ್ಯೂಬ್ ಸಂಸ್ಥೆ ಮುಂದಿನ ಎರಡು ವರ್ಷದಲ್ಲಿ 850 ಕೋಟಿ ರೂ ಹೂಡಿಕೆ ಮಾಡಲಿರುವುದಾಗಿ ನೀಲ್ ಮೋಹನ್ ಇದೇ ವೇಳೆ ಘೋಷಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು