2013ರಲ್ಲಿ GTA5, 2026ರಲ್ಲಿ GTA 6; ‘ಭಾರತ ಈಗ ಹೊಸ ಗೇಮ್ ಆಡುತ್ತಿದೆ’: ವಿಪಕ್ಷಗಳಿಗೆ ನರೇಂದ್ರ ಮೋದಿ ಟಾಂಟ್
ಜನಪ್ರಿಯ ವಿಡಿಯೋ ಗೇಮ್ 'ಜಿಟಿಎ 6' (GTA 6) ಬಿಡುಗಡೆಯ ಸಂದರ್ಭವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 13 ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಪರೋಕ್ಷವಾಗಿ ಟಾಂಟ್ ನೀಡಿದ್ದಾರೆ. ಆರ್ಥಿಕತೆ, ಬಡತನ, ಸ್ಟಾರ್ಟಪ್ಸ್, ಶೌಚ, ಸೌರಶಕ್ತಿ, ವಿದ್ಯುದೀಕರಣ ಇತ್ಯಾದಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಎತ್ತಿ ತೋರಿಸಲಾಗಿದೆ.

ನವದೆಹಲಿ, ನವೆಂಬರ್ 19: ಜನಪ್ರಿಯ ಗೇಮಿಂಗ್ ಸರಣಿಯಾದ ‘ಗ್ರ್ಯಾಂಡ್ ಥೆಫ್ಟ್ ಆಟೋ 6’ (GTA 6) ಬಿಡುಗಡೆಯಾದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳಿಗೆ ಟಾಂಟ್ ಮಾಡುವಂತಹ ಪೋಸ್ಟ್ವೊಂದನ್ನು ಹಾಕಿದ್ದಾರೆ. 2013ರಲ್ಲಿ ‘GTA 5’ ಬಂದಾಗಿನಿಂದ ಇಂದಿನವರೆಗೆ (‘GTA 6’) ಭಾರತ ಹೇಗೆ ಬದಲಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಸೋಷಿಯಲ್ ಖಾತೆಗಳಲ್ಲಿ ವಿವರಿಸಿದ್ದಾರೆ.
“ಭಾರತ ಈಗ ಸಂಪೂರ್ಣ ಹೊಸ ಆಟ ಆಡುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ವಿವಿಧ ಚಿತ್ರಗಳನ್ನು ಲಗತ್ತಿಸಿರುವ ಪೋಸ್ಟ್ ಇದು. ಗೇಮ್ ಶೈಲಿಯ ಚಿತ್ರಗಳ ಮೂಲಕ ಕಳೆದ ದಶಕದ ಸಾಧನೆಗಳನ್ನು ಪಟ್ಟಿ ಮಾಡಿ ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ (UPA) ಸರ್ಕಾರದ ಅವಧಿಗೆ ಹೋಲಿಕೆ ಮಾಡಲಾಗಿದೆ.
ಇದನ್ನೂ ಓದಿ: ನಾನು ಆದಾಯ ಕರದಲ್ಲಿ 12 ಲಕ್ಷ ಬಿಟ್ಟೆ..ನೀವು ಉದ್ಯೋಗಿಗಳ ತಿಂಗಳ ಪಗಾರು ಏರಿಸಿದ್ರಾ? ನರೇಂದ್ರ ಮೋದಿ ಪ್ರಶ್ನೆ
2013 ಮತ್ತು 2026ರ ಸ್ಥಿತಿಗಳ ನಡುವೆ ಹೋಲಿಕೆ
ಬಡತನ ನಿರ್ಮೂಲನೆ, ಸ್ವಚ್ಛತಾ ಅಭಿಯಾನ, ಸೌರಶಕ್ತಿ ಸಾಮರ್ಥ್ಯ ಹೆಚ್ಚಳ, ವಿದ್ಯುದ್ದೀಕರಣ ಹಾಗೂ 440 ನೋಂದಾಯಿತ ಬಾಹ್ಯಾಕಾಶ ತಂತ್ರಜ್ಞಾನ ನವೋದ್ಯಮಗಳ (Space-tech startups) ಬೆಳವಣಿಗೆಯನ್ನು ಪ್ರಸ್ತಾಪಿಸಲಾಗಿದೆ. 2013ರಲ್ಲಿ ಹೇಗಿತ್ತು, ಈಗ ಹೇಗಿದೆ ಎಂದು ಹೀಗೆ ಹೋಲಿಕೆ ಮಾಡಲಾಗಿದೆ:
- ಆಗ ಆರ್ಥಿಕತೆ ‘ದುರ್ಬಲ 5’ (Fragile 5) ಪಟ್ಟಿಯಲ್ಲಿ ಇತ್ತು. ಈಗ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿದೆ.
- ಆಗ, ಕಡುಬಡತನ ಶೇ. 27 ಇತ್ತು, ಈಗ ಶೇ. 2.6ಕ್ಕೆ ಇಳಿದಿದೆ.
- ಆಗ ಶೌಚಾಲಯ ಶೇ. 39 ಮಂದಿಯನ್ನು ತಲುಪಿತ್ತು. ಈಗ ಶೇ. 100 ಬಯಲು ಶೌಚಮುಕ್ತ ಮಾಡಲಾಗಿದೆ. ಸ್ಯಾನಿಟೇಶನ್ ಮಿಶನ್ ಪೂರ್ಣಗೊಂಡಿದೆ.
- ಆಗ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ 2.82 ಗಿ.ವ್ಯಾ. ಇತ್ತು. ಈಗ 175 ಗಿ.ವ್ಯಾಟ್ಗೆ ಏರಿದೆ.
- ಆಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದೂ ಸ್ಟಾರ್ಟಪ್ ಇರಲಿಲ್ಲ. ಈಗ 440 ಸ್ಟಾರ್ಟಪ್ಗಳಿವೆ.
- ಆಗ ರೈಲ್ವೆ ವಿದ್ಯುದೀಕರಣ ಶೇ. 20ರಷ್ಟು ಇತ್ತು. ಈಗ ಶೇ. 99.6ರಷ್ಟಾಗಿದೆ.
- ಆಗ ಇಂಟರ್ನೆಟ್ ದರ ಒಂದು ಜಿಬಿಗೆ 308 ರೂ ಇತ್ತು. ಈಗ ಒಂದು ಜಿಬಿಗೆ ಬೆಲೆ 7.51ಕ್ಕೆ ಇಳಿದಿದೆ.
- ಆಗ ಭಾರತ ಪ್ರಮುಖ ಡಿಫೆನ್ಸ್ ಆಮದುದಾರ ದೇಶವಾಗಿತ್ತು. ಈಗ 80ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
- ಆಗ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 182 ಇತ್ತು. ಈಗ ಇಡೀ ದೇಶವು ನಕ್ಸಲ್ಮುಕ್ತವಾಗದೆ.
ಇದನ್ನೂ ಓದಿ: ಸರ್ಕಾರಿ ಬ್ಯಾಂಕುಗಳಿಗೆ 6 ತಿಂಗಳಲ್ಲಿ ಲಕ್ಷ ಕೋಟಿ ರೂ ಲಾಭ; ಪಿಎಸ್ಯುಗಳು ನಾಲಾಯಕ್ಕೆನ್ನುವವರ ಕಣ್ತೆರೆಸುವ ಸುದ್ದಿ
India is playing a whole new game! https://t.co/CMkMbK6vII
— Narendra Modi (@narendramodi) November 19, 2026
ಈ ಪೋಸ್ಟ್ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಗಳು ಮತ್ತು ಸಾವಿರಾರು ಪ್ರತಿಕ್ರಿಯೆಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




