Mutual Funds CAS: ಮ್ಯೂಚುವಲ್​ ಫಂಡ್​ ಹೂಡಿಕೆದಾರರೆ? ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಬಗ್ಗೆ ಗೊತ್ತೆ?

| Updated By: Srinivas Mata

Updated on: Jun 18, 2021 | 5:55 PM

Mutual Fund CAS: ಮ್ಯೂಚುವಲ್ ಫಂಡ್ ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್​ ಬಗ್ಗೆ ಹೂಡಿಕೆದಾರರಿಗೆ ಗೊತ್ತಿರಬೇಕಾದ ಸಂಗತಿಗಳೇನು? ಇಲ್ಲಿದೆ ಪ್ರಮುಖ ಮಾಹಿತಿ.

Mutual Funds CAS: ಮ್ಯೂಚುವಲ್​ ಫಂಡ್​ ಹೂಡಿಕೆದಾರರೆ? ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಬಗ್ಗೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us on

ನೀವು ಮ್ಯೂಚುವಲ್ ಫಂಡ್ ಹೂಡಿಕೆದಾರರಾಗಿದ್ದಲ್ಲಿ ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ (CAS) ಬರುತ್ತಿರುತ್ತದೆ. ಒಂದು ತಿಂಗಳಲ್ಲಿ (ಆಯಾ ತಿಂಗಳು) ಎಲ್ಲ ಮ್ಯೂಚುವಲ್​ ಫಂಡ್​ಗಳಲ್ಲಿ ಸೇರಿ ನಡೆಸಿದ ಹಣಕಾಸು ವ್ಯವಹಾರ ಮಾಹಿತಿಯನ್ನು ಕಳುಹಿಸಲಾಗುತ್ತದೆ. ಆ CAS ಅನ್ನು ಎಲೆಕ್ಟ್ರಾನಿಕ್ ಫಾರ್ಮ್​ನಲ್ಲಿ (eCAS) ಹಾಗೂ ಕಾಗದ ರೂಪದಲ್ಲಿ ಕೂಡ ದೊರೆಯುತ್ತದೆ. ಇದರಿಂದ ಹೆಚ್ಚಿನ ಮೌಲ್ಯ, ಅನುಕೂಲ ಹಾಗೂ ಭದ್ರತೆ ಕೂಡ ಒದಗಿಸುತ್ತದೆ. ಎಲೆಕ್ಟ್ರಾನಿಕ್ ಸಂಗ್ರಹ ಮತ್ತು ಯಾವುದೇ ಸಂದರ್ಭದಲ್ಲಿ ಹಾಗೂ ಎಲ್ಲಿಂದ ಬೇಕಾದರೂ ಸಂಪರ್ಕಿಸಬಹುದು. ಹೂಡಿಕೆದಾರರ ಪೈಕಿ ಎಷ್ಟು ಮಂದಿ ಈ ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಪೂರ್ಣ ಪ್ರಮಾಣದಲ್ಲಿ ನೋಡುತ್ತೇವೋ? CAS ಎಂಬುದು ಸರಳವಾಗಿ ಹೇಳಬೇಕೆಂದರೆ, ಹೂಡಿಕೆದಾರರಾಗಿ ಯಾವ್ಯಾವ ಮ್ಯೂಚುವಲ್ ಫಂಡ್​ಗಳಲ್ಲಿ ನಿಮ್ಮ ಹೂಡಿಕೆ ಇದೆ ಎಂದು ತಿಳಿಸುವ ಸ್ಟೇಟ್​ಮೆಂಟ್. ಒಂದು ಪ್ಯಾನ್​ ನಂಬರ್ ಅಡಿಯಲ್ಲಿ ಸಿಡಿಎಸ್​ಎಲ್ ಅಥವಾ ಎನ್​ಎಸ್​ಡಿಎಲ್​ನ ಡಿಮ್ಯಾಟ್​ ಖಾತೆಯಲ್ಲಿ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಮ್ಯೂಚುವಲ್ ಫಂಡ್ ಹೊಂದಿದ್ದರೆ ಈ ಸಿಎಎಸ್ ಕಳುಹಿಸಲಾಗುತ್ತದೆ. ಹೂಡಿಕೆದಾರರ ಮ್ಯೂಚುವಲ್ ಫಂಡ್​ಗಳ ಮಾಹಿತಿಯನ್ನು ಮತ್ತು ಡೆಪಾಸಿಟರಿ ಖಾತೆಗಳನ್ನು ಸಿಎಎಸ್ ಒದಗಿಸುತ್ತದೆ.

ಸಿಎಎಸ್ ಯಾವಾಗ ಜನರೇಟ್ ಆಗುತ್ತದೆ?
ಕಂಪ್ಯೂಟರ್ ಏಜ್ ಮ್ಯಾನೇಜ್​ಮೆಂಟ್ ಸರ್ವೀಸಸ್ (ಸಿಎಎಂಎಸ್) ಮತ್ತು ಕಾರ್ವಿ ಕೂಡ ಹೂಡಿಕೆದಾರರಿಗೆ ಸರಾಸರಿ ಸ್ಟೇಟ್​ಮೆಂಟ್​ಗಳನ್ನು ಒಂದು ಪ್ಯಾನ್ ಅಡಿಯಲ್ಲಿ ಪಡೆಯಲು ಅವಕಾಶ ಒದಗಿಸುತ್ತದೆ. ಆದರೆ ಅದನ್ನು ಮಾಡುವುದಕ್ಕಾಗಿ ಹೂಡಿಕೆದಾರರು ತಮ್ಮ ಇಮೇಲ್ ವಿಳಾಸವನ್ನು ರಿಜಿಸ್ಟ್ರಾರ್ ಅಂಡ್ ಟ್ರಾನ್ಸ್​ಫರ್ ಏಜೆನ್ಸಿ (RTA) ಅಂತ ನೋಂದಣಿ ಮಾಡಿಸಿರಬೇಕು. ಇದನ್ನು ಪ್ರತಿ ತಿಂಗಳು ಜನರೇಟ್ ಮಾಡಲಾಗುತ್ತದೆ. ಒಂದು ಸಾಮಾನ್ಯ PAN ಜತೆಗೆ ಆರ್​ಟಿಎ ಮತ್ತು ಡೆಪಾಸಿಟರಿಗಳೊಂದಿಗೆ ಮಾಡಲಾಗುತ್ತದೆ.

ಇದನ್ನು ಅರ್ಥ ಮಾಡಿಕೊಳ್ಳುವುದು ಹೂಡಿಕೆದಾರರಿಗೆ ಯಾಕಿಷ್ಟು ಮುಖ್ಯ?
-ಹಣಕಾಸು ವ್ಯವಹಾರಗಳಾದ ಯೂನಿಟ್ ಖರೀದಿಗಳು, ರಿಡೆಂಪ್ಷನ್​ಗಳು, ಅದರಲ್ಲೂ ಮೆಚ್ಯೂರಿಟಿ ಪಾವತಿಗಳು, ಸ್ವಿಚ್​ಗಳು, ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್​ ಪ್ಲಾನ್ (ಎಸ್​ಐಪಿ), ಸಿಸ್ಟಮ್ಯಾಟಿಕ್ ವಿಥ್​ಡ್ರಾ ಪ್ಲಾನ್ (ಎಸ್​ಡಬ್ಲ್ಯುಪಿ), ಸಿಸ್ಟಮ್ಯಾಟಿಕ್ ಟ್ರಾನ್ಸ್​ಫರ್ ಪ್ಲಾನ್ (ಎಸ್​ಟಿಪಿ), ಡಿವಿಡೆಂಡ್ ಪಾವತಿ ಅಥವಾ ಡಿವಿಡೆಂಡ್​ಗಳ ಪುನರ್​ಹೂಡಿಕೆ, ಹೂಡಿಕೆಗಳ ವಿಲೀನ, ಬೋನಸ್ ಯೂನಿಟ್ ವಿತರಣೆ ಈ ರೀತಿಯದ್ದು ಸಿಎಎಸ್​ ಮೂಲಕ ಗೊತ್ತಾಗುತ್ತದೆ

-ವಿಳಾಸ ಬದಲಾವಣೆ, ಬ್ಯಾಂಕ್​ ಅಕೌಂಟ್ ಮಾಹಿತಿ, ನಾಮಿನೇಷನ್ ನೋಂದಣಿ ಮತ್ತು ಇತರ ಹಣಕಾಸೇತರ ವಹಿವಾಟುಗಳು ಒಳಗೊಳ್ಳುತ್ತವೆ.

– ಹಿಂದಿನ ತಿಂಗಳಲ್ಲಿ ನಡೆದ ವಹಿವಾಟುಗಳು ದೊರೆಯುತ್ತವೆ (ಮಾನ್ಯತೆ ಹೊಂದಿದ ಪ್ಯಾನ್ ಸಂಖ್ಯೆಗೆ ಸಂಬಂಧಿಸಿದ ಹೂಡಿಕೆದಾರರ ಫೋಲಿಯೋ). ಉದಾಹರಣೆಗೆ, ವ್ಯಕ್ತಿಯೊಬ್ಬರಿಗೆ ಮೂರು ಪೋರ್ಟ್​ಫೋಲಿಯೋಗಳು ಇದ್ದು, ಅದರಲ್ಲಿ ಎರಡು ಮಾತ್ರ ವಹಿವಾಟು ನಡೆಸುತ್ತಿದ್ದಲ್ಲಿ, ಆ ತಿಂಗಳಿಗೆ ಸಿಎಎಸ್ ಸಕ್ರಿಯ ಆಗಿರುವ ಎರಡು ಆ್ಯಕ್ಟಿವ್ ಪೋರ್ಟ್​ಫೋಲಿಯೋಗಳನ್ನು ತೋರಿಸುತ್ತದೆ. ಮೂರನೆಯದು ತೋರಿಸುವುದಿಲ್ಲ.

-ಒಂದು ವೇಳೆ ಯಾವುದೇ ವಹಿವಾಟು ನಡೆಸದಿದ್ದಲ್ಲಿ ಆ ತಿಂಗಳು ಸಿಎಎಸ್​ ವಿತರಣೆ ಮಾಡುವುದಿಲ್ಲ.

-ಒಂದು ವೇಳೆ ಯಾರಾದರೂ ಹೂಡಿಕೆದಾರರು ಏನೇ ವಹಿವಾಟು ನಡೆಸದಿದ್ದಲ್ಲಿ ಸಿಎಎಸ್​ ಅನ್ನು ಪ್ರತಿ ಆರು ತಿಂಗಳಿಗೊಮ್ಮೆ ಸೆಪ್ಟೆಂಬರ್/ಮಾರ್ಚ್​ನಲ್ಲಿ ವಿತರಿಸಲಾಗುತ್ತದೆ.

– ಆಯಾ ಮ್ಯೂಚುವಲ್ ಫಂಡ್​ಗಳ ಬಳಿ ಇಮೇಲ್ ಐಡಿ ನೋಂದಣಿ ಮಾಡಿಸಿದಲ್ಲಿ ಹಣಕಾಸು ವಹಿವಾಟು ನಡೆಸಿದ ಐದು ದಿನದೊಳಗೆ ಪಿಡಿಎಫ್​ ದಾಖಲಾತಿ ದೊರೆಯುತ್ತದೆ.

– ಪರಿಣಾಮಕಾರಿ ಹೂಡಿಕೆ ನಿರ್ವಹಣೆ ವ್ಯೂಹ ರೂಪಿಸುವುದಕ್ಕೆ ಹೂಡಿಕೆದಾರರಿಗೆ ಸಿಎಎಸ್​ ನೆರವು ನೀಡುತ್ತದೆ. ಕಡಿಮೆ ಕಾಗದ ಪತ್ರಗಳಲ್ಲಿ ಇದಾಗುತ್ತದೆ. ಕಾಲಕಾಲಕ್ಕೆ ಪಡೆದ ರಿಡೆಂಪ್ಷನ್​ಗಳು ಹಾಗೂ ಡಿವಿಡೆಂಡ್​ಗಳನ್ನು ಬಗ್ಗೆ ಸಿಎಎಸ್ ತೋರಿಸುತ್ತದೆ.​

– ತೆರಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಿಎಎಸ್ ಬಹಳ ಮೌಲ್ಯಯುತವಾದದ್ದು. ಸಿಎಎಸ್​ ಮೂಲಕ ಎಲ್ಲ ಮ್ಯೂಚುವಲ್ ಫಂಡ್​ಗಳ ಫೋಲಿಯೋಗಳಿಗೆ ಒಂದೇ ಕಡೆ ಸಂಪರ್ಕ ದೊರಕಿಸುತ್ತದೆ.

ಇದನ್ನೂ ಓದಿ: ELSS Mutual Fund Tax Savings Planning: ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಹೂಡಿಕೆ ವರ್ಷದ ಆರಂಭದಲ್ಲೇ ಯೋಚಿಸಿ

(What is Consolidated Account Statement (CAS)? Why it is important to mutual fund investors. Here is the details)

Published On - 5:54 pm, Fri, 18 June 21