WPI: ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ ಸೆಪ್ಟೆಂಬರ್​ನಲ್ಲಿ ಶೇ 10.66ಕ್ಕೆ

| Updated By: Srinivas Mata

Updated on: Oct 15, 2021 | 11:41 AM

ಸಗಟು ದರ ಸೂಚ್ಯಂಕ ಹಣದುಬ್ಬರವು 2021ರ ಸೆಪ್ಟೆಂಬರ್​ನಲ್ಲಿ ಆರು ತಿಂಗಳಲ್ಲೇ ಕನಿಷ್ಠ ಮಟ್ಟವಾದ ಶೇ 10.66ರಷ್ಟು ತಲುಪಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

WPI: ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ ಸೆಪ್ಟೆಂಬರ್​ನಲ್ಲಿ ಶೇ 10.66ಕ್ಕೆ
ಸಾಂದರ್ಭಿಕ ಚಿತ್ರ
Follow us on

ಸಗಟು ಬೆಲೆ ಹಣದುಬ್ಬರವು (Wholesale Price Inflation) ಸೆಪ್ಟೆಂಬರ್‌ನಲ್ಲಿ ಆರು ತಿಂಗಳಲ್ಲೇ ಕನಿಷ್ಠ ಮಟ್ಟವಾದ ಶೇ 10.66ಕ್ಕೆ ಇಳಿದಿದೆ. ಚಿಲ್ಲರೆ ಹಣದುಬ್ಬರದ ಇಳಿಕೆಯೊಂದಿಗೇ ಆಹಾರದಲ್ಲಿನ ಬೆಲೆ ಒತ್ತಡವು ಮತ್ತಷ್ಟು ಕಡಿಮೆಯಾಯಿತು. ಆದರೂ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಈಗಲೂ ಅಧಿಕವಾಗಿಯೇ ಇದೆ. ಏಕೆಂದರೆ ವಿದ್ಯುತ್ ಮತ್ತು ಇಂಧನ, ಉತ್ಪಾದಿತ ಉತ್ಪನ್ನಗಳ ಹಣದುಬ್ಬರವು ಹೆಚ್ಚುತ್ತಲೇ ಇವೆ. ಇದನ್ನು ಗುರುವಾರ ಬಿಡುಗಡೆ ಮಾಡಿದ ಅಧಿಕೃತ ಡೇಟಾ ತೋರಿಸಿದೆ. ಕನಿಷ್ಠ ಸರಾಗಗೊಳಿಸುವುದರ ಹೊರತಾಗಿಯೂ ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 24.81ರಷ್ಟಿತ್ತು. ಆದರೆ ತಯಾರಿಸಿದ ಉತ್ಪನ್ನಗಳ ಹಣದುಬ್ಬರವು ಶೇ 11.41ಕ್ಕೆ ತಲುಪಿತು. ಇದು ಆಹಾರ ಹಣದುಬ್ಬರದ ಕುಸಿತವನ್ನು (ಪ್ರಾಥಮಿಕ ಮತ್ತು ತಯಾರಿಸಿದ ಉತ್ಪನ್ನಗಳೆರಡೂ) ಹಿಂದಿನ ತಿಂಗಳಲ್ಲಿ ಶೇ 3.43ರಿಂದ ಸೆಪ್ಟೆಂಬರ್‌ನಲ್ಲಿ ಶೇ 1.14ಕ್ಕೆ ಇಳಿಸಿತು. ಕುತೂಹಲಕಾರಿ ಅಂಶ ಏನೆಂದರೆ, ಪ್ರಾಥಮಿಕ ಆಹಾರ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ (-)4.69% ಕ್ಕೆ ಕುಸಿದಿದೆ, ತಯಾರಿಸಿದ ಆಹಾರ ಉತ್ಪನ್ನಗಳಲ್ಲಿ ಬೆಲೆ ಒತ್ತಡವು ಶೇ 12.65ಕ್ಕೆ ಏರಿತು. ಸಸ್ಯಜನ್ಯ ಎಣ್ಣೆ ಹಣದುಬ್ಬರದಲ್ಲಿ ಶೇ 36.85ರಷ್ಟು ಏರಿಕೆಯಾಗಿದೆ. ಇದರರ್ಥ ಪ್ರಮುಖವಾದವು ಡಬ್ಲ್ಯೂಪಿಐ ಹಣದುಬ್ಬರದಿಂದ ಸಾಕಷ್ಟು ಪ್ರಯೋಜನ ಪಡೆದಿಲ್ಲ.

ಈ ಮಧ್ಯೆ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಐದು ತಿಂಗಳ ಕನಿಷ್ಠ ಮಟ್ಟವಾದ ಶೇ 4.35ಕ್ಕೆ ತಲುಪಿದೆ. ಇದು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾದ ಟಾರ್ಗೆಟ್ ಬ್ಯಾಂಡ್‌ನೊಳಗೆ (ಶೇ 2-6) ಸತತ ಮೂರನೇ ತಿಂಗಳಲ್ಲಿ ಉಳಿಯಿತು. ಮುಖ್ಯವಾಗಿ ಕೋರ್ ಡಬ್ಲ್ಯೂಪಿಐ ಹಣದುಬ್ಬರ ಮತ್ತು ಉತ್ಪಾದನಾ ಹಣದುಬ್ಬರವನ್ನು ಸೆಪ್ಟೆಂಬರ್‌ನಲ್ಲಿ ಕ್ರಮವಾಗಿ ಶೇ 11.1 ಮತ್ತು ಶೇ 11.4ರಲ್ಲಿ ಇರಿಸಿದೆ. ಇದು ಸತತ ಮೂರನೇ ತಿಂಗಳು ಶೇ 11ಕ್ಕಿಂತ ಹೆಚ್ಚು ಉಳಿದಿದೆ. ಪ್ರಾಥಮಿಕವಾಗಿ ತಯಾರಕರು ತಮ್ಮ ಇನ್​ಪುಟ್​ ಬೆಲೆ ಹೆಚ್ಚಳವನ್ನು ಔಟ್​ಪುಟ್ ಬೆಲೆಗಳಿಗೆ ಹಾಕುತ್ತಿದ್ದಾರೆ ಎಂದು ಇಂಡಿಯಾ ರೇಟಿಂಗ್​ನ ಪ್ರಧಾನ ಅರ್ಥಶಾಸ್ತ್ರಜ್ಞ ಸುನಿಲ್ ಸಿನ್ಹಾ ಹೇಳಿದ್ದಾರೆ. ಹೆಚ್ಚಿನ ಇಂಧನ ಬೆಲೆಯಿಂದಾಗಿ ಸಾರಿಗೆ ವೆಚ್ಚವನ್ನು ಹೆಚ್ಚಿಸುವುದರಿಂದ ಇದು ಉತ್ಪಾದನಾ ವಲಯದ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮವನ್ನು ಬೀರುತ್ತದೆ. ಆ ಪರಿಣಾಮವಾಗಿ, ಏಳು ಗುಂಪುಗಳು- ಜವಳಿ, ಕಾಗದ, ರಾಸಾಯನಿಕಗಳು, ರಬ್ಬರ್ ಮತ್ತು ಪ್ಲಾಸ್ಟಿಕ್, ಮೂಲ ಲೋಹಗಳು, ತಯಾರಿಸಿದ ಲೋಹಗಳು ಮತ್ತು ಪೀಠೋಪಕರಣಗಳು- ಇವುಗಳು ಸೆಪ್ಟೆಂಬರ್ ತನಕ ಸತತ ನಾಲ್ಕು ತಿಂಗಳು ಎರಡಂಕಿಯ ಹಣದುಬ್ಬರವನ್ನು ಕಂಡಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

ಮೂರನೇ ತ್ರೈಮಾಸಿಕದಲ್ಲಿ ಎರಡಂಕಿಯಲ್ಲಿ
ಆದರೂ ಜಾಗತಿಕ ಪೂರೈಕೆ ಸಮಸ್ಯೆಗಳಿಂದ ಹಣದುಬ್ಬರವು ಹೆಚ್ಚುತ್ತಿರುವ ಸಮಯದಲ್ಲಿ ಹಣಕಾಸು ನೀತಿ ಸಮಿತಿಯು ಬೆಳವಣಿಗೆ ಉದ್ದೇಶವನ್ನು ಬಿಟ್ಟುಕೊಡುವ ಸಾಧ್ಯತೆಯಿಲ್ಲ. “ಬೇಡಿಕೆ ಒತ್ತಡಗಳು ಹಣದುಬ್ಬರದ ಮೇಲೆ ಪ್ರಾಬಲ್ಯ ಸಾಧಿಸಿದ ನಂತರವೇ ವಿತ್ತೀಯ ನೀತಿ ಸಾಮಾನ್ಯ ಸ್ಥಿತಿಗೆ ಬರುವುದಕ್ಕೆ ಪ್ರಾರಂಭವಾಗುತ್ತದೆ ಎಂದು ನಮಗೆ ಮನವರಿಕೆಯಾಗಿದೆ,” ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಡಬ್ಲ್ಯೂಪಿಐ ಹಣದುಬ್ಬರದಲ್ಲಿನ ಇತ್ತೀಚಿನ ಬದಲಾವಣೆಯು, “ಕಲ್ಲಿದ್ದಲು, ಕಚ್ಚಾ ತೈಲ, ಲೋಹಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಮತ್ತು ರೂಪಾಯಿ ಮೌಲ್ಯ ಕುಸಿತಕ್ಕೆ ಸಂಬಂಧಿಸಿದ ಆತಂಕವನ್ನು ಗಮನದಲ್ಲಿಟ್ಟುಕೊಂಡು ಸೌಕರ್ಯದ ಮಿತಿಯನ್ನು ನೀಡುತ್ತದೆ”. ನಾಲ್ಕು ತಿಂಗಳ ಸತತ ಇಳಿಕೆಯ ನಂತರ ಡಬ್ಲ್ಯೂಪಿಐ ಹಣದುಬ್ಬರವು ಅಕ್ಟೋಬರ್‌ನಲ್ಲಿ ಏರಿಕೆಯಾಗಬಹುದು ಮತ್ತು ಮೂರನೇ ತ್ರೈಮಾಸಿಕದಲ್ಲಿ ಎರಡಂಕಿಯಲ್ಲಿ ಉಳಿಯಬಹುದು ಎಂದು ನಾಯರ್ ಹೇಳಿದ್ದಾರೆ.

ತಯಾರಿಸಿದ ಉತ್ಪನ್ನಗಳ ವಿಭಾಗದಲ್ಲಿ ಸಸ್ಯಜನ್ಯ ಎಣ್ಣೆಗಳು ಮತ್ತು ಮೂಲ ಲೋಹಗಳು ಹೆಚ್ಚಿನ ಬೆಲೆ ಒತ್ತಡಕ್ಕೆ ಸಾಕ್ಷಿಯಾದವು. ಸತತ ನಾಲ್ಕನೇ ತಿಂಗಳಲ್ಲಿ ಇಳಿಕೆಯ ಹೊರತಾಗಿಯೂ ಸಸ್ಯಜನ್ಯ ಎಣ್ಣೆಯಲ್ಲಿನ ಡಬ್ಲ್ಯೂಪಿಐ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 36.85% ರಷ್ಟಿತ್ತು. ಮೂಲ ಲೋಹಗಳ ಹಣದುಬ್ಬರವು ಶೇ 26.71ಕ್ಕೆ ತಲುಪಿದೆ. ಸರ್ಕಾರವು ಇತ್ತೀಚೆಗೆ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿತು, ಸಹಜವಾಗಿ ಇದು ಸ್ವಲ್ಪ ಪರಿಹಾರವನ್ನು ನೀಡುವ ನಿರೀಕ್ಷೆಯಿದೆ. ಈ ತಿಂಗಳ ಆರಂಭದಲ್ಲಿ ವಿತ್ತೀಯ ನೀತಿ ಹೇಳಿಕೆಯಲ್ಲಿ ಕೇಂದ್ರೀಯ ಬ್ಯಾಂಕ್ ಹೇಳಿರುವಂತೆ, (ಚಿಲ್ಲರೆ) ಹಣದುಬ್ಬರ ಪಥವು ಮೂರನೇ ತ್ರೈಮಾಸಿಕದಲ್ಲಿ ಕೆಳಕ್ಕೆ ಇಳಿಯಲಿದೆ. ಇದು ಇತ್ತೀಚೆಗೆ ಖಾರಿಫ್ ಬಿತ್ತನೆ ಮತ್ತು ದಾಖಲೆಯ ಉತ್ಪಾದನೆಯ ಕಾರಣಕ್ಕೆ ನೆಮ್ಮದಿ ಪಡೆಯುತ್ತದೆ. ಆದರೆ ಇತ್ತೀಚಿನ ಅವಧಿಯಲ್ಲಿ ಖಾದ್ಯ ತೈಲಗಳ ಬೆಲೆಗಳ ಏರಿಕೆ “ಆತಂಕಕ್ಕೆ ಕಾರಣವಾಗಿದೆ”. ಕಚ್ಚಾ ತೈಲ ಬೆಲೆಯಿಂದಲೂ ಒತ್ತಡಗಳು ಮುಂದುವರಿಯುತ್ತವೆ. “ಹೆಚ್ಚುತ್ತಿರುವ ಲೋಹಗಳು ಮತ್ತು ಇಂಧನ ಬೆಲೆಗಳು ಪ್ರಮುಖ ಕೈಗಾರಿಕಾ ಘಟಕಗಳ ತೀವ್ರ ಕೊರತೆ ಮತ್ತು ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಗಳು ಇನ್​ಪುಟ್ ವೆಚ್ಚದ ಒತ್ತಡವನ್ನು ಹೆಚ್ಚಿಸುತ್ತವೆ,” ಎಂದು ಅದು ಹೇಳಿದೆ.

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು?
ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್​ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.

ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.

ಇದನ್ನೂ ಓದಿ: ಜಾಗತಿಕ ಸಾಲದ ಪ್ರಮಾಣ 226 ಲಕ್ಷ ಕೋಟಿ ಡಾಲರ್​ಗೆ ಏರಿಕೆ; ಭಾರತದ ಪರಿಸ್ಥಿತಿ ಹೇಗಿದೆ ಗೊತ್ತೆ?

Retail Inflation and IIP: ಸೆಪ್ಟೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರ 5 ತಿಂಗಳ ಕನಿಷ್ಠ ಮಟ್ಟಕ್ಕೆ, ಆಗಸ್ಟ್​ ಐಐಪಿ ಶೇ 11.9ರಷ್ಟು ಏರಿಕೆ

Published On - 11:41 am, Fri, 15 October 21