Retail Inflation and IIP: ಸೆಪ್ಟೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರ 5 ತಿಂಗಳ ಕನಿಷ್ಠ ಮಟ್ಟಕ್ಕೆ, ಆಗಸ್ಟ್​ ಐಐಪಿ ಶೇ 11.9ರಷ್ಟು ಏರಿಕೆ

2021ರ ಸೆಪ್ಟೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ದರ ಐದು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಇನ್ನು ಕೈಗಾರಿ ಉತ್ಪಾದನೆ ಸೂಚ್ಯಂಕವು ಶೇ 11.9ರಷ್ಟು ಏರಿಕೆ ಆಗಿದೆ. ಆ ಬಗ್ಗೆ ಮಾಹಿತಿ ನಿಮ್ಮೆದುರು ಇದೆ.

Retail Inflation and IIP: ಸೆಪ್ಟೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರ 5 ತಿಂಗಳ ಕನಿಷ್ಠ ಮಟ್ಟಕ್ಕೆ, ಆಗಸ್ಟ್​ ಐಐಪಿ ಶೇ 11.9ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 12, 2021 | 6:30 PM

ಭಾರತದ ಚಿಲ್ಲರೆ ಹಣದುಬ್ಬರವು (Retail Inflation) ಸೆಪ್ಟೆಂಬರ್‌ನಲ್ಲಿ ಮತ್ತೆ ಕಡಿಮೆಯಾಗಿದ್ದು, ಈ ಮೂಲಕ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಕಳೆದ ವರ್ಷದ ಅನುಕೂಲಕರ ಹೋಲಿಕೆ ಮತ್ತು ಕಚ್ಚಾ ತೈಲ ಹಾಗೂ ಇಂಧನದ ಬೆಲೆಯಲ್ಲಿನ ಏರಿಕೆಯನ್ನು ಸರಿದೂಗಿಸಿದ ಆಹಾರ ಬೆಲೆಗಳನ್ನು ಮಿತಗೊಳಿಸಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಮಂಗಳವಾರ ತೋರಿಸಿವೆ. ಗ್ರಾಹಕರ ಬೆಲೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ 5.3ರಿಂದ ಸೆಪ್ಟೆಂಬರ್‌ನಲ್ಲಿ ಶೇ 4.35ಕ್ಕೆ ಇಳಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶೇ 2ರಿಂದ ಶೇ 6ರರೊಳಗೆ ರೀಟೇಲ್ ಹಣದುಬ್ಬರವನ್ನು ನಿರ್ವಹಿಸಬೇಕು ಎಂಬ ಗುರಿಯೊಳಗೆ ಇರುವಂತೆ ಇದು ಸತತ ಮೂರನೇ ತಿಂಗಳಾಗಿದೆ. ಬೆಲೆ ಒತ್ತಡವು ತಗ್ಗಿರುವುದು ಆರ್‌ಬಿಐಗೆ ನೀತಿ ನಿರೂಪಣೆಗೆ ಅವಕಾಶ ಒದಗಿಸುತ್ತದೆ. ಕಳೆದ ವಾರ ನಡೆದ ಆರ್​ಬಿಐನ ದ್ವೈಮಾಸಿಕ ಹಣಕಾಸು ನೀತಿ ಸಭೆಯ ಕೊನೆಯಲ್ಲಿ ಪ್ರಮುಖ ರೆಪೊ ದರವನ್ನು ಶೇ 4ರಷ್ಟು ಹೊಂದಿತ್ತು. ಏಕೆಂದರೆ ಇದು ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವತ್ತ ಗಮನ ಹರಿಸಿತ್ತು.

ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಆಗಸ್ಟ್ ತಿಂಗಳಿಗೆ ಶೇ 11.9ರಷ್ಟು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು, ಜುಲೈನಲ್ಲಿ ಶೇ 11.5 ರಷ್ಟಿತ್ತು ಎಂದು ಈಚಿನ ದತ್ತಾಂಶ ತೋರಿಸಿದೆ. ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (NSO) ಯಿಂದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ (IIP) ಮಾಹಿತಿಯ ಪ್ರಕಾರ, ಉತ್ಪಾದನಾ ವಲಯದ ಉತ್ಪಾದನೆಯು ಆಗಸ್ಟ್ 2021ರಲ್ಲಿ ಶೇ 9.7ರಷ್ಟು ಏರಿಕೆಯಾಗಿದೆ. ಆಗಸ್ಟ್​ನಲ್ಲಿ ಗಣಿಗಾರಿಕೆ ಉತ್ಪಾದನೆಯು ಶೇ 23.6ಕ್ಕೆ ಏರಿಲೆ ಆಗಿದೆ ಮತ್ತು ವಿದ್ಯುತ್ ಉತ್ಪಾದನೆಯು ಶೇ 16ರಷ್ಟು ಹೆಚ್ಚಾಗಿದೆ. ಐಐಪಿ ಆಗಸ್ಟ್ 2020ರಲ್ಲಿ ಶೇ 7.1ರಷ್ಟು ಕುಸಿದಿತ್ತು.

ಈ ವರ್ಷ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಐಐಪಿ 28.6ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 25ರ ಕುಸಿತ ಆಗಿತ್ತು. ಕಳೆದ ವರ್ಷ ಮಾರ್ಚ್‌ನಿಂದ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕೈಗಾರಿಕಾ ಉತ್ಪಾದನೆಗೆ ಹೊಡೆತ ಬಿದ್ದಿದ್ದು, ಅದು ಶೇ 18.7ಕ್ಕೆ ಕುಗ್ಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿನ ಕುಸಿತದಿಂದಾಗಿ ಇದು 2020ರ ಏಪ್ರಿಲ್‌ನಲ್ಲಿ ಶೇ 57.3ಕ್ಕೆ ಕುಗ್ಗಿತು.

ಇದನ್ನೂ ಓದಿ: Bengaluru Vegetable Price List: ತರಕಾರಿ ಬೆಲೆಗಳಲ್ಲಿ ದಿಢೀರ್ ಏರಿಕೆ; ಯಾವ ತರಕಾರಿಗೆ ಎಷ್ಟು? ಬೆಲೆ ಏರಿಕೆಗೆ ಕಾರಣವೇನು?