ಟಿವಿ9 WITTಯಲ್ಲಿ ಪ್ರಧಾನಿ ಮೋದಿ ಭಾಷಣ; ಅಬುಧಾಬಿಯಿಂದ ವೀಕ್ಷಿಸಿದ ಲುಲು ಗ್ರೂಪ್ ಮಾಲೀಕ

Lulu Group chairman Yusuff Ali listens PM Modi's speech at TV9 WITT: ಮಾರ್ಚ್ 28 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಟಿವಿ9ನ WITT ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಟಿವಿ9 ನಲ್ಲಿ ಅವರ ಭಾಷಣ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೇಳಿಬಂತು. ಅಬುಧಾಬಿಯ ಉದ್ಯಮಿ ಯೂಸುಫ್ ಅಲಿ ಮತ್ತು ಅವರ ತಂಡದವರು ಪ್ರಧಾನ ಮಂತ್ರಿಯವರ ಭಾಷಣವನ್ನು ಅಲ್ಲಿಂದಲೇ ಆಲಿಸಿದರು.

ಟಿವಿ9 WITTಯಲ್ಲಿ ಪ್ರಧಾನಿ ಮೋದಿ ಭಾಷಣ; ಅಬುಧಾಬಿಯಿಂದ ವೀಕ್ಷಿಸಿದ ಲುಲು ಗ್ರೂಪ್ ಮಾಲೀಕ
ಟಿವಿ9ನ WITT ಶೃಂಗಸಭೆ

Updated on: Mar 31, 2025 | 4:52 PM

ನವದೆಹಲಿ, ಮಾರ್ಚ್ 31: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ‘ (WITT- What India Thinks Today) ಕಾರ್ಯಕ್ರಮದ ಮೂರನೇ ಆವೃತ್ತಿಯು ಮಾರ್ಚ್ 28 ರಂದು ಪ್ರಧಾನಿ ಮೋದಿಯವರ ಭಾಷಣದೊಂದಿಗೆ ಪ್ರಾರಂಭವಾಯಿತು. ಹೋಟೆಲ್ ಸಂಪ್ರದಾಯವನ್ನು ಮುರಿದಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಟಿವಿ9 ಅನ್ನು ಅಭಿನಂದಿಸಿದರು. ಈ ಶೃಂಗಸಭೆಯನ್ನು ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿತ್ತು. ಟಿವಿ9 ಅನ್ನು ಮನದುಂಬಿ ಶ್ಲಾಘಿಸಿದ ಮೋದಿ, ಶೀಘ್ರದಲ್ಲೇ ಇತರ ಮಾಧ್ಯಮ ಕಂಪನಿಗಳು ಸಹ ಟಿವಿ9 ಅನ್ನು ಅನುಸರಿಸುವುದನ್ನು ಕಾಣಬಹುದು. ತಮ್ಮ ನೆಟ್‌ವರ್ಕ್‌ನ ಜಾಗತಿಕ ಪ್ರೇಕ್ಷಕರು ಸಹ ಹೆಚ್ಚಾಗುತ್ತಿದ್ದಾರೆ. ಭಾರತೀಯರು ಮಾತ್ರವಲ್ಲ ಹಲವು ದೇಶಗಳ ಜನರು ಈ ಶೃಂಗಸಭೆಯನ್ನು ವೀಕ್ಷಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಬೆಂಗಳೂರು ಮೊದಲಾದ ಕಡೆ ಬೃಹತ್ ಮಳಿಗೆಗಳನ್ನು ಹೊಂದಿರುವ ಲುಲು ಗ್ರೂಪ್ ಸಂಸ್ಥೆ ದೂರದ ಅರಬ್ ನಾಡಾದ ಅಬುಧಾಬಿಯಲ್ಲಿ ಟಿವಿ9ನ ಡಬ್ಲ್ಯುಐಟಿಟಿ ಶೃಂಗಸಭೆಯನ್ನು ವೀಕ್ಷಿಸಲು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ವೀಕ್ಷಿಸಲು ವ್ಯವಸ್ಥೆ ಮಾಡಿತ್ತು. ಲುಲು ಗ್ರೂಪ್ ಮಾಲೀಕ ಯೂಸುಫ್ ಅಲಿ ಹಾಗೂ ಅವರ ತಂಡದವರು ಕೂಡ ಪ್ರಧಾನಿ ಭಾಷಣವನ್ನು ಕೇಳಿದರು.

ಇದನ್ನೂ ಓದಿ: WITT Global Summit 2025: ಅತಿ ಹೆಚ್ಚು ಬೇಡಿಕೆಯಿರುವ ಖನಿಜ ಸಂಪತ್ತು ದೇಶದಲ್ಲಿದೆ, ಪತ್ತೆ ಹಚ್ಚಿ ಹೊರತೆಗೆಯುವ ಪ್ರಯತ್ನವಾಗಲಿ : ಅನಿಲ್ ಅಗರ್ವಾಲ್

ಇದನ್ನೂ ಓದಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಅತಿ ಹೆಚ್ಚು ಬೇಡಿಕೆಯಿರುವ ಖನಿಜ ಸಂಪತ್ತು ದೇಶದಲ್ಲಿದೆ

ಭಾರತದಲ್ಲಿ ಯೂಸುಫ್ ಅಲಿಯ ಹೂಡಿಕೆ

ಅಬುಧಾಬಿ ಮೂಲದ ಲುಲು ಗ್ರೂಪ್ ಇಂಟರ್ನ್ಯಾಷನಲ್ ಸಂಸ್ಥೆಯು ಭಾರತದಲ್ಲಿ ಆಹಾರ ಸಂಸ್ಕರಣೆ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಹೂಡಿಕೆಗಳನ್ನು ಹೊಂದಿದೆ. ಭಾರತದ ವಿವಿಧ ನಗರಗಳಲ್ಲಿ ಲುಲು ಮಾಲ್​ಗಳನ್ನು ತೆರೆಯಲಾಗಿದೆ. ಇನ್ನೂ ಹಲವು ನಗರಗಳಲ್ಲಿ ಮತ್ತಷ್ಟು ಮಾಲ್ ತೆರೆಯುವ ಇರಾದೆಯಲ್ಲಿದೆ. ಭಾರತದಲ್ಲಿ ಮೊದಲ ಲುಲು ಮಾಲ್ ಆರಂಭವಾಗಿದ್ದು ಬೆಂಗಳೂರಿನಲ್ಲಿ. ಈಗ ಕೇರಳದ ಕೊಚ್ಚಿ, ತಿರುವನಂತಪುರಂ, ತ್ರಿಶೂರ್​​ನಲ್ಲಿ ಲುಲು ಮಾಲ್​​ಗಳಿವೆ. ಲಕ್ನೋ, ಹೈದರಾಬಾದ್ ಮೊದಲಾದ ಕಡೆಯೂ ಲುಲು ಮಾಲ್ ಇದೆ,

ಲುಲು ಗ್ರೂಪ್ ಇಂಟರ್​ನ್ಯಾಷನಲ್ ಸಂಸ್ಥೆ ವಿಶ್ವಾದ್ಯಂತ ಲುಲು ಹೈಪರ್‌ಮಾರ್ಕೆಟ್ ಸರಪಳಿ ಮತ್ತು ಲುಲು ಇಂಟರ್ನ್ಯಾಷನಲ್ ಶಾಪಿಂಗ್ ಮಾಲ್‌ಗಳನ್ನು ಹೊಂದಿದೆ. ಅದರ ವ್ಯವಹಾರವು ಭಾರತ ಸೇರಿದಂತೆ ಪ್ರಪಂಚದ 22 ದೇಶಗಳಲ್ಲಿ ಹರಡಿದೆ.

ಇದನ್ನೂ ಓದಿ: WITT Summit 2025: ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು: ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್

ಅವರ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ವಲಸಿಗರು ಕೆಲಸ ಮಾಡುತ್ತಾರೆ. ಫೋರ್ಬ್ಸ್ ಮಿಡಲ್ ಈಸ್ಟ್ ಪ್ರಕಾರ, ಯೂಸುಫ್ ಅಲಿ 2018 ರ ಅರಬ್ ಪ್ರಪಂಚದ ಟಾಪ್ 100 ಭಾರತೀಯ ವ್ಯಾಪಾರ ಮಾಲೀಕರಲ್ಲಿ ನಂಬರ್ 1 ಸ್ಥಾನ ಪಡೆದಿದ್ದಾರೆ. ಅಕ್ಟೋಬರ್ 2023 ರಲ್ಲಿ ಪ್ರಕಟವಾದ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅವರು 6.9 ಬಿಲಿಯನ್ ಯುಎಸ್ ಡಾಲರ್ ನಿವ್ವಳ ಮೌಲ್ಯದೊಂದಿಗೆ 27 ನೇ ಶ್ರೀಮಂತ ಭಾರತೀಯರೆನಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ