Kannada News Business Work from home again Rules For special economic zones IT company employees should not miss this news
ಮತ್ತೆ ವರ್ಕ್ ಫ್ರಂ ಹೋಂ: ಐಟಿ ಕಂಪನಿ ಉದ್ಯೋಗಿಗಳು ಮಿಸ್ ಮಾಡದೇ ಓದಬೇಕಾದ ಸುದ್ದಿ ಇದು
ಕೇಂದ್ರ ಸರ್ಕಾರವು ವಿಶೇಷ ಆರ್ಥಿಕ ವಲಯಗಳಿಗೆ ವರ್ಕ್ ಫ್ರಂ ಹೋಂ ಮಾನದಂಡಗಳನ್ನು ಸರಾಗಗೊಳಿಸಲು ಯೋಜಿಸುತ್ತಿದೆ. ಗರಿಷ್ಠ ಒಂದು ವರ್ಷದವರೆಗೆ ವರ್ಕ್ ಫ್ರಂ ಹೋಂ ಅನ್ನು ಅನುಮತಿಸಲಾಗಿದೆ.
ಸಾಂದರ್ಭಿಕ ಚಿತ್ರ
Follow us on
ಡೆವಲಪರ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ (IT) ಕಂಪನಿಗಳ ನಡುವಿನ ವ್ಯತ್ಯಾಸಗಳನ್ನು ವಿಂಗಡಿಸಲು ಕೇಂದ್ರ ಸರ್ಕಾರವು ವಿಶೇಷ ಆರ್ಥಿಕ ವಲಯಗಳಿಗೆ (Special Economic Zones) ಮನೆಯಿಂದ ಕೆಲಸ ನಿರ್ವಹಿಸುವ (Work From Home) ಮಾನದಂಡಗಳನ್ನು ಸರಾಗಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ರಿಮೋಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಸಂಪೂರ್ಣ ಪಟ್ಟಿಯನ್ನು ಒದಗಿಸಲು ಐಟಿ ಕಂಪನಿಗಳಿಗೆ ಅಗತ್ಯವಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಹೊರತರುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
ಇದಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ಎಕನಾಮಿಕ್ ಟೈಮ್ಸ್ ಜೊತೆ ಮಾತನಾಡುತ್ತಾ, “ಎರಡು ವಾರಗಳ ತೀವ್ರವಾದ ಮಾತುಕತೆಗಳ ನಂತರ ಪ್ರಕ್ರಿಯೆಗಳನ್ನು ಸರಳಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ವಾರದ ಅಂತ್ಯದ ವೇಳೆಗೆ ವಿವರಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.
ವಿಶೇಷ ಆರ್ಥಿಕ ವಲಯಗಳಿಗಾಗಿ ವರ್ಕ್ ಫ್ರಂ ಹೋಂ ನಿಮಗಳು
ವಿಶೇಷ ಆರ್ಥಿಕ ವಲಯ (SEZ) ಘಟಕದಲ್ಲಿ ಗರಿಷ್ಠ ಒಂದು ವರ್ಷದವರೆಗೆ ವರ್ಕ್ ಫ್ರಂ ಹೋಂ ಅವಕಾಶ
ಇದನ್ನು ಒಟ್ಟು ಉದ್ಯೋಗಿಗಳ ಶೇ.50ಕ್ಕೆ ವಿಸ್ತರಿಸಬಹುದು
ಹೊಸ ನಿಯಮವು IT/ITeS SEZ ಘಟಕಗಳಲ್ಲಿ ಹೊರಗೆ ಕೆಲಸ ಮಾಡುತ್ತಿರುವ, ಪ್ರಯಾಣಿಸುವ ನೌಕರರು, ತಾತ್ಕಾಲಿಕವಾಗಿ ಉದ್ಯೋಗಿಗಳಿಗೆ ಅನ್ವಯ
ಸರ್ಕಾರವು ವಿಶೇಷ ಆರ್ಥಿಕ ವಲಯಗಳ ಅಭಿವೃದ್ಧಿ ಆಯುಕ್ತರಿಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ (50 ಪ್ರತಿಶತಕ್ಕಿಂತ ಹೆಚ್ಚು) ವರ್ಕ್ ಫ್ರಂ ಹೋಂ ನಿಬಂಧನೆಯನ್ನು ಲಿಖಿತವಾಗಿ ದಾಖಲಿಸಲು ಯಾವುದೇ ಪ್ರಾಮಾಣಿಕ ಕಾರಣಕ್ಕಾಗಿ ಅನುಮೋದಿಸಲು ಅವಕಾಶ ನೀಡಿದೆ
ಈಗಾಗಲೇ ಮನೆಯಿಂದ ಕೆಲಸ ಮಾಡುತ್ತಿರುವ ನೌಕರರು ಅನುಮೋದನೆ ಪಡೆಯಲು ಸರ್ಕಾರವು ಅವರಿಗೆ 90 ದಿನಗಳ ಅವಕಾಶವನ್ನು ನೀಡಲಾಗಿದೆ
SEZ ಘಟಕಗಳು ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಉಪಕರಣಗಳು ಮತ್ತು ಸುರಕ್ಷಿತ ಸಂಪರ್ಕವನ್ನು ಒದಗಿಸಲಿವೆ