AirAsia ಸಂಸ್ಥೆಯಿಂದ ಕೇವಲ 1475 ರೂ.ಗೆ ಅಗ್ಗದ ವಿಮಾನ ಯಾನ ಕೊಡುಗೆ ವಿವರ ಇಲ್ಲಿದೆ

AirAsia independence day offer: ಏರ್ ಏಷ್ಯಾ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಪ್ರತಿದಿನ ನೂರಾರು ಪ್ರಯಾಣಿಕರಿಗೆ ವಿಮಾನ ಯಾನ ಕಲ್ಪಿಸುತ್ತಿದೆ. ಏರ್ ಏಷ್ಯಾ ಇದೀಗ ದೇಶದ 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ವಿಶೇಷ ವಿಮಾನ ಯಾನ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದೆ.

AirAsia ಸಂಸ್ಥೆಯಿಂದ ಕೇವಲ 1475 ರೂ.ಗೆ ಅಗ್ಗದ ವಿಮಾನ ಯಾನ ಕೊಡುಗೆ ವಿವರ ಇಲ್ಲಿದೆ
AirAsia India: ಸಂಸ್ಥೆಯಿಂದ ಕೇವಲ 1475 ರೂಪಾಯಿಗೆ ಅಗ್ಗದ ವಿಮಾನ ಯಾನ ಕೊಡುಗೆ, ಮುಂದಿನ ಮಾರ್ಚ್​ವರೆಗೂ ಇದು ಅನ್ವಯ! ಏನಿದೆ ವಿವರ?
TV9kannada Web Team

| Edited By: Apurva Kumar Balegere

Sep 07, 2022 | 3:53 PM

AirAsia ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಪ್ರತಿದಿನ ನೂರಾರು ಪ್ರಯಾಣಿಕರಿಗೆ ವಿಮಾನ ಯಾನ ಕಲ್ಪಿಸುತ್ತಿದೆ. ಏರ್ ಏಷ್ಯಾ ಇದೀಗ 75 ನೇ ಸ್ವಾತಂತ್ರ್ಯ ದಿನದ (Azadi Ka Amrit Mahotsav) ಅಂಗವಾಗಿ ವಿಶೇಷ ವಿಮಾನ ಯಾನ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದೆ. ಭಾರತವು ಈ ವರ್ಷ ತನ್ನ 75 ನೇ ಸ್ವಾತಂತ್ರ್ಯ ದಿನ (independence day 2022) ಆಚರಿಸುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಏರ್ ಏಷ್ಯಾ ವಿಮಾನ ಯಾನ ಸಂಸ್ಥೆಯು ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಯನ್ನು ಕೊಡಮಾಡಿದೆ. ತನ್ಮೂಲಕ ಪ್ರಯಾಣಿಕರಿಗೆ ಕೇವಲ 1475 ರೂಪಾಯಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸುತ್ತಿದೆ.

ನೀವು ಸಹ ಈ ಕೊಡುಗೆಯ ಲಾಭವನ್ನು ಪಡೆಯಲು ಬಯಸಿದರೆ, 13 ಆಗಸ್ಟ್ 2022 ರವರೆಗೆ AirAsia ದೇಶೀಯ ವಿಮಾನಯಾನ ಟಿಕೆಟ್​ ಗಳನ್ನು ಕಾಯ್ದಿರಿಸಿ. ಗಮನಿಸಿ – ಈ ಕೊಡುಗೆ ಅಂತರರಾಷ್ಟ್ರೀಯ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಕಂಪನಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ನಿಮ್ಮ ಪ್ರಯಾಣವು 25 ಆಗಸ್ಟ್ 2022 ರಿಂದ 31 ಮಾರ್ಚ್ 2023 ರ ನಡುವೆ ಇರಬೇಕು.

ಏರ್ ಏಷ್ಯಾ ಟ್ವೀಟ್ ಮಾಹಿತಿ ಹೀಗಿದೆ:

ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲು ವಿಶೇಷ ಕೊಡುಗೆ ತಂದಿದ್ದೇವೆ. 2022 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ AirAsia ನೀಡುವ ಈ ವಿಶೇಷ ರಿಯಾಯಿತಿಯ ಲಾಭವನ್ನು ಪಡೆಯಲು ನೀವು ಬಯಸಿದ್ದೇ ಆದರೆ, ಅದರ ಲಾಭವನ್ನು ಪಡೆಯಲು ಸಾಧ್ಯವಾದಷ್ಟು ಬೇಗ ಬುಕ್ ಮಾಡಿ. ಈ ಕೊಡುಗೆಯು ಮೊದಲು ಬಂದವರಿಗೆ ಮೊದಲ ಸೇವೆಯ ಆಧಾರದ ಮೇಲೆ ಇದೆ. ಅಲ್ಲದೆ, ಈ ಕೊಡುಗೆಯು ಸೀಮಿತ ಮಾರ್ಗಗಳಲ್ಲಿ ಮಾತ್ರ ಅನ್ವಯಿಸುತ್ತದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada