AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax Return: ಪರಿಷ್ಕೃತ ಆದಾಯ ತೆರಿಗೆ ರಿಟರ್ನ್; ಅರ್ಹತೆ, ಗಡುವು, ನೀವು ತಿಳಿದಿರಬೇಕಾದ ಇತರೆ ಅಂಶಗಳು ಇಲ್ಲಿವೆ

ಐಟಿಆರ್‌ನಲ್ಲಿ ತಪ್ಪಾದ ಐಟಿಆರ್ ಫಾರ್ಮ್, ತಪ್ಪು ಬ್ಯಾಂಕ್ ಖಾತೆ ಸಂಖ್ಯೆ ಇತ್ಯಾದಿಗಳಂತಹ ಕೆಲವು ತಪ್ಪು ಮಾಹಿತಿಯನ್ನು ಭರ್ತಿ ಮಾಡಿದ್ದರೆ ನಿಮಗೆ ಇನ್ನೂ ಒಂದು ಅವಕಾಶ ಇದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139 (5) ರ ಅಡಿಯಲ್ಲಿ ಒಬ್ಬರ ಆದಾಯ ತೆರಿಗೆ ರಿಟರ್ನ್ ಅನ್ನು ಪರಿಷ್ಕರಿಸಬಹುದು.

Income Tax Return: ಪರಿಷ್ಕೃತ ಆದಾಯ ತೆರಿಗೆ ರಿಟರ್ನ್; ಅರ್ಹತೆ, ಗಡುವು, ನೀವು ತಿಳಿದಿರಬೇಕಾದ ಇತರೆ ಅಂಶಗಳು ಇಲ್ಲಿವೆ
ಸಾಂಕೇತಿ ಚಿತ್ರ
TV9 Web
| Updated By: Rakesh Nayak Manchi|

Updated on:Aug 11, 2022 | 12:15 PM

Share

ಲೆಕ್ಕಪರಿಶೋಧನೆ ಮಾಡದ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಅಂತಿಮ ದಿನಾಂಕವು ಈಗಾಗಲೇ ಮುಕ್ತಾಯಗೊಂಡು ಹತ್ತು ದಿನಗಳು ಕಳೆದಿವೆ. ಆದರೆ ತಮ್ಮ ಐಟಿಆರ್‌ನಲ್ಲಿ ತಪ್ಪಾದ ಐಟಿಆರ್ ಫಾರ್ಮ್, ತಪ್ಪು ಬ್ಯಾಂಕ್ ಖಾತೆ ಸಂಖ್ಯೆ ಇತ್ಯಾದಿಗಳಂತಹ ಕೆಲವು ತಪ್ಪು ಮಾಹಿತಿಯನ್ನು ಭರ್ತಿ ಮಾಡಿದ್ದರೆ ನಿಮಗೆ ಇನ್ನೂ ಒಂದು ಅವಕಾಶ ಇದೆ.  ಪರಿಷ್ಕೃತ ಆದಾಯ ತೆರಿಗೆ ನಿಯಮಗಳ ಪ್ರಕಾರ, ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 139 (5) ರ ಅಡಿಯಲ್ಲಿ ಒಬ್ಬರ ಆದಾಯ ತೆರಿಗೆ ರಿಟರ್ನ್ ಅನ್ನು ಪರಿಷ್ಕರಿಸಬಹುದು.

ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ನಿಯಮಗಳ ಕುರಿತು ಮಾತನಾಡಿದ ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞ ಜಿತೇಂದ್ರ ಸೋಲಂಕಿ, “ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139 (5)ರ ಅಡಿಯಲ್ಲಿ ತೆರಿಗೆದಾರನಿಗೆ ಆದಾಯ ತೆರಿಗೆ ರಿಟರ್ನ್ ಅನ್ನು ಪರಿಷ್ಕರಿಸಲು ಅವಕಾಶವಿದೆ. ನಿಗದಿತ ದಿನಾಂಕದ ಮೊದಲು ಅಥವಾ ನಂತರ ತಮ್ಮ ಐಟಿಆರ್​ ಅನ್ನು ಸಲ್ಲಿಸಿದವರು ಆದಾಯ ತೆರಿಗೆ ರಿಟರ್ನ್ ಅನ್ನು ಪರಿಷ್ಕರಿಸಲು ಅರ್ಹರಾಗಿರುತ್ತಾರೆ” ಎಂದು ಹೇಳಿದ್ದಾರೆ.

“ಮೌಲ್ಯಮಾಪನ ವರ್ಷ 2022-23ಕ್ಕಾಗಿ ಆದಾಯ ತೆರಿಗೆದಾರರು ಮೂರು ತಿಂಗಳ ಮೊದಲು ಪರಿಷ್ಕೃತ ಐಟಿಆರ್ ಅನ್ನು ಸಲ್ಲಿಸಬಹುದು. ಪರಿಷ್ಕೃತ ಐಟಿಆರ್ ಸಲ್ಲಿಸಲು ಇದೇ ವರ್ಷದ ಡಿ.31 ಕೊನೆಯ ದಿನಾಂಕವಾಗಿದೆ. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ https://www.incometax.gov.in ಗೆ ಲಾಗ್​ಇನ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಪರಿಷ್ಕೃತ ಐಟಿಆರ್ ಸಲ್ಲಿಸಬಹುದು” ಎಂದು ಆಪ್ಟಿಮಾ ಮನಿ ಮ್ಯಾನೇಜರ್ಸ್‌ ಸಂಸ್ಥಾಪಕ ಮತ್ತು ಸಿಇಒ ಪಿ. ಪಂಕಜ್ ಮಠಪಾಲ್ ಹೇಳಿದರು.

ಪರಿಷ್ಕೃತ ಐಟಿಆರ್ ಫೈಲಿಂಗ್‌ಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಮಾಹಿತಿಗಳು ಇಲ್ಲಿವೆ:

ಅರ್ಹತೆ: ಐಟಿಆರ್ ಫೈಲಿಂಗ್ ಕೊನೆಯ ದಿನಾಂಕ ಜು. 31ರ ಮೊದಲು ಅಥವಾ ನಂತರ ಐಟಿಆರ್ ಸಲ್ಲಿಸಿದವರು ಪರಿಷ್ಕೃತ ಐಟಿಆರ್ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆದಾಯ ತೆರಿಗೆ ನಿಯಮ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 (5)ರ ಅಡಿಯಲ್ಲಿ ಒಬ್ಬರ ಆದಾಯ ತೆರಿಗೆ ರಿಟರ್ನ್ ಅನ್ನು ಪರಿಷ್ಕರಿಸಲು ಅನುಮತಿಸಲಾಗುತ್ತದೆ.

ಪರಿಷ್ಕೃತ ಐಟಿಆರ್ ಫೈಲಿಂಗ್‌ಗೆ ಅಂತಿಮ ದಿನಾಂಕ: ತೆರಿಗೆದಾರರು ಮೌಲ್ಯಮಾಪನ ವರ್ಷದ ಮೂರು ತಿಂಗಳುಗಳನ್ನು ಪೂರ್ಣಗೊಳಿಸುವ ಮೊದಲು ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬಹುದು. ಮೌಲ್ಯಮಾಪನ ವರ್ಷ 2022-23 ಕ್ಕಾಗಿ ಪರಿಷ್ಕೃತ ಐಟಿಆರ್ ಅನ್ನು ಸಲ್ಲಿಸಲು 2022ರ ಡಿ.31 ಕೊನೆಯ ದಿನಾಂಕವಾಗಿದೆ.

ಮೌಲ್ಯಮಾಪನ ವರ್ಷ 2022-23 ಗಾಗಿ ಐಟಿಆರ್ ಫೈಲಿಂಗ್‌ಗೆ ಅಂತಿಮ ದಿನಾಂಕಗಳು: ಮೌಲ್ಯಮಾಪನ ವರ್ಷ 2022-23 ಕ್ಕಾಗಿ ಲೆಕ್ಕಪರಿಶೋಧನೆ ಮಾಡದ ಐಟಿಆರ್ ಫೈಲಿಂಗ್‌ ಅಂತಿಮ ದಿನಾಂಕ ಜುಲೈ 31ಕ್ಕೆ ಕೊನೆಗೊಂಡಿದೆ. ಆದರೆ ಮೌಲ್ಯಮಾಪನ ವರ್ಷ 2022-23 ಕ್ಕಾಗಿ ಆಡಿಟ್ ಮಾಡಲಾದ ಐಟಿಆರ್ ಫೈಲಿಂಗ್‌ಗೆ 2022ರ ಅಕ್ಟೋಬರ್ 31 ಅಂತಿಮ ದಿನಾಂಕವಾಗಿದೆ.

ITR ಫೈಲಿಂಗ್ ಕೊನೆಯ ದಿನಾಂಕ: ಐಟಿಆರ್ ಫೈಲಿಂಗ್ ಮತ್ತು ಪರಿಷ್ಕೃತ ಐಟಿಆರ್ ಫೈಲಿಂಗ್‌ಗೆ 2022ರ ಡಿ.31 ಕೊನೆಯ ದಿನವಾಗಿದೆ.

Published On - 12:15 pm, Thu, 11 August 22