Ajay Banga: ವಿಶ್ವಬ್ಯಾಂಕ್ ಮುಖ್ಯಸ್ಥರಾಗುತ್ತಿರುವ ಅಜಯ್ ಬಾಂಗಾ ಆಸ್ತಿಪಾಸ್ತಿ ಎಷ್ಟು? ವೃತ್ತಿ ಮೈಲಿಗಲ್ಲುಗಳೇನು?

|

Updated on: Feb 26, 2023 | 2:14 PM

Ajay Banga Net Worth: ಭಾರತ ಮೂಲಕ ಅಮೆರಿಕಾ ಪ್ರಜೆ ಅಜಯ್ ಬಾಂಗಾ ಇದೀಗ ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದಾರೆ. ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರ ಪಡೆದಿರುವ ಅವರು 4 ದಶಕಗಳ ವೃತ್ತಿಜೀವನದಲ್ಲಿ ವಿವಿಧ ಮೈಲಿಗಲ್ಲು ಸ್ಥಾಪಿಸಿದ್ದಾರೆ.

Ajay Banga: ವಿಶ್ವಬ್ಯಾಂಕ್ ಮುಖ್ಯಸ್ಥರಾಗುತ್ತಿರುವ ಅಜಯ್ ಬಾಂಗಾ ಆಸ್ತಿಪಾಸ್ತಿ ಎಷ್ಟು? ವೃತ್ತಿ ಮೈಲಿಗಲ್ಲುಗಳೇನು?
ಅಜಯ್ ಬಾಂಗಾ
Follow us on

ನವದೆಹಲಿ: ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ನಾಮನಿರ್ದೇಶನಗೊಳ್ಳುವ ಮೂಲಕ ಅಜಯ್ ಬಾಂಗಾ (Ajay Banga) ಹೊಸ ಇತಿಹಾಸ ಪುಟ ತೆರೆದಿದ್ದಾರೆ. ವರ್ಲ್ಡ್ ಬ್ಯಾಂಕ್ (World Bank) ಮುಖ್ಯಸ್ಥರಾಗಲಿರುವ ಮೊದಲ ಭಾರತೀಯ ಅಮೆರಿಕನ್ ಮತ್ತು ಸಿಖ್ ವ್ಯಕ್ತಿ ಅವರು. 63 ವರ್ಷದ ಅಜಯ್ ಬಾಂಗಾ ಅವರನ್ನು ಐಎಂಎಫ್ ಅಥವಾ ವರ್ಲ್ಡ್ ಬ್ಯಾಂಕ್ ಈ ಎರಡಲ್ಲೊಂದು ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಿಗೆ ಮುಖ್ಯಸ್ಥರಾಗಿ ಆಯ್ಕೆ ಮಾಡಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಚ್ಛಿಸಿದ್ದರು. ಅಂತಿಮವಾಗಿ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಮೆರಿಕ ತನ್ನ ಪ್ರಜೆಯನ್ನು ನಾಮನಿರ್ದೇಶನ ಮಾಡುತ್ತದೆ.

ಅಜಯ್ ಬಾಂಗಾ ಭಾರತ ಸಂಜಾತ ವ್ಯಕ್ತಿ. ಡೆಲ್ಲಿ ಯೂನಿವರ್ಸಿಟಿ ಮತ್ತು ಐಐಎಂ ಅಹ್ಮದಾಬಾದ್​ನಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರು ಮಾಸ್ಟರ್​ಕಾರ್ಡ್ ಸಿಇಒ ಆಗಿಯೂ ಕೆಲಸ ಮಾಡಿದ ಅನುಭವಿಯಾಗಿದ್ದಾರೆ. ಭಾರತ ಸರ್ಕಾರ ಇವರಿಗೆ 2016ರಲ್ಲಿ ಪದ್ಮಶ್ರೀ ಪ್ರಶಸ್ತಿಯ ಗೌರವ ಕೂಡ ನೀಡಿದೆ.

ಬಾಂಗಾ ಆಸ್ತಿ?

ವಿವಿಧ ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಅಜಯ್ ಬಾಂಗಾ ಅವರ ಒಟ್ಟು ಆಸ್ತಿ 2021ರ ಜುಲೈ ವೇಳೆಯಲ್ಲಿ 206 ಮಿಲಿಯನ್ ಡಾಲರ್ (ಸುಮಾರು 1700 ಕೋಟಿ ರೂ) ಇದೆ ಎನ್ನಲಾಗಿದೆ. ಮಾಸ್ಟರ್​ಕಾರ್ಡ್ ಸಂಸ್ಥೆಯಲ್ಲಿ ಅವರು ಹೊಂದಿರುವ ಷೇರುಗಳ ಮೌಲ್ಯ ಸುಮಾರು 113 ಮಿಲಿಯನ್ ಡಾಲರ್ (937 ಕೋಟಿ ರೂ) ಎಂದು ಹೇಳಲಾಗುತ್ತಿದೆ. ಮಾಸ್ಟರ್​ಕಾರ್ಡ್ ಸಂಸ್ಥೆಯ ಮುಖ್ಯಸ್ಥರಾಗಿ ಅವರು ಪಡೆಯುತ್ತಿದ್ದ ಸಂಭಾವನೆ ವರ್ಷಕ್ಕೆ 2.32 ಕೋಟಿ ಡಾಲರ್ ಆಗಿತ್ತು.

ಇದನ್ನೂ ಓದಿWorld Bank: ವಿಶ್ವ ಗದ್ದುಗೆಯಲ್ಲಿ ಭಾರತೀಯರು, ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಅಜಯ್ ನಾಮನಿರ್ದೇಶನ: ಅಮೆರಿಕದಲ್ಲಿ ಉನ್ನತ ಹುದ್ದೆಯಲ್ಲಿರುವ ಭಾರತೀಯರು ಇವರೇ

ನೆಸ್ಲೆಯಿಂದ ವೃತ್ತಿ ಜೀವನ

63 ವರ್ಷದ ಅಜಯ್ ಬಾಂಗಾ ಅವರದ್ದು 4 ದಶಕಗಳ ವೃತ್ತಿಜೀವನವಾಗಿದೆ. 1981ರಲ್ಲಿ ನೆಸ್ಲೆ ಕಂಪನಿಯಲ್ಲಿ ವೃತ್ತಿ ಆರಂಭಿಸಿದ ಅವರು ಬಳಿಕ ಪೆಪ್ಸಿಕೋ, ಸಿಟಿ ಗ್ರೂಪ್ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ಮಾಸ್ಟರ್​ಕಾರ್ಡ್ ಸಂಸ್ಥೆಯ ಸಿಒಒ ಆದ ಅವರು 2010ರಲ್ಲಿ ಅಧ್ಯಕ್ಷ ಮತ್ತು ಸಿಇಒ ಆದರು. ಕಂಪನಿಯ ನಿರ್ದೇಶಕರ ಮಂಡಳಿಯ ಸದಸ್ಯರೂ ಆದರು. 2020ರಲ್ಲಿ ಅವರು ಅಂತಾರಾಷ್ಟ್ರೀಯ ವಾಣಿಜ್ಯ ಮಂಡಳಿ (ಐಸಿಸಿ) ಛೇರ್ಮನ್ ಆಗಿ ನೇಮಕವಾದರು.

ಸದ್ಯ ಅವರು ಖಾಸಗಿ ಈಕ್ವಿಟಿ ಕಂಪನಿ ಜನರಲ್ ಅಟ್ಲಾಂಟಿಕ್​ನ ಉಪಾಧ್ಯಕ್ಷರಾಗಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಅವರ ಮೇಲೆ ಗುರುತರ ಜವಾಬ್ದಾರಿಗಳಿವೆ. ಬಹಳಷ್ಟು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಐಎಂಎಫ್ ಮತ್ತು ವರ್ಲ್ಡ್ ಬ್ಯಾಂಕ್ ಸಾಲಗಳಿಗೆ ಎಡತಾಕುತ್ತಿವೆ. ಇಂತಹ ಸಂದರ್ಭವನ್ನು ನಿಭಾಯಿಸುವುದು ದೊಡ್ಡ ಸವಾಲಿನ ಕೆಲಸವೇ ಸರಿ.

ಹೆಚ್ಚಿನ ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Sun, 26 February 23