ಡಬ್ಲ್ಯುಇಎಫ್ ಸಭೆಯಲ್ಲಿ ಸ್ಮೃತಿ ಇರಾನಿ; ಸಚಿವೆಯಾಗಿ ಅಲ್ಲ ಎಜಿಜಿ ಮುಖ್ಯಸ್ಥೆಯಾಗಿ ಭಾಗಿ
World Economic Forum annual meeting 2025: ಕಳೆದ ವರ್ಷ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾರತದ ನಿಯೋಗದ ನಾಯಕತ್ವ ವಹಿಸಿದ್ದ ಸ್ಮೃತಿ ಇರಾನಿ ಈ ಬಾರಿಯ ಸಭೆಯಲ್ಲೂ ಸಕ್ರಿಯವಾಗಿದ್ದಾರೆ. ಇರಾನಿ ಅವರು ಮೂರು ಸೆಷನ್ಗಳಲ್ಲಿ ಸ್ಪೀಕರ್ ಆಗಿದ್ದಾರೆ. ಜನವರಿ 22ರಂದು ಎರಡು ಸೆಷನ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ 23ರಂದು ಒಂದು ಸೆಷನ್ನಲ್ಲಿ ಭಾಗಿಯಾಗಲಿದ್ದಾರೆ. ಅಲಾಯನ್ಸ್ ಫಾರ್ ಗ್ಲೋಬಲ್ ಫೂಡ್ ಎನ್ನುವ ಸಂಸ್ಥೆಯ ಮುಖ್ಯಸ್ಥೆಯಾಗಿ ಅವರು ಡಬ್ಲ್ಯುಇಎಫ್ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನವದೆಹಲಿ, ಜನವರಿ 20: ಸ್ವಿಟ್ಜರ್ಲ್ಯಾಂಡ್ ರಾಜಧಾನಿ ನಗರಿ ಡಾವಾಸ್ನಲ್ಲಿ ಇಂದು ವರ್ಲ್ಡ್ ಎಕನಾಮಿಕ್ ಫೋರಂನ ಐದು ದಿನಗಳ ವಾರ್ಷಿಕ ಸಭೆ ಆರಂಭವಾಗಿದೆ. ಇದರಲ್ಲಿ ವಿಶ್ವಾದ್ಯಂತ 70 ಪ್ರಮುಖ ದೇಶಗಳ ಆರ್ಥಿಕ ಕ್ಷೇತ್ರದಲ್ಲಿರುವ ರಾಜಕಾರಣಿಗಳು ಮತ್ತು ನುರಿತರು ಪಾಲ್ಗೊಳ್ಳುತ್ತಿದ್ದಾರೆ. ಭಾರತದಿಂದ ಕೆಲ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸರ್ಕಾರಗಳ ಸಚಿವರುಗಳು ಹಾಗೂ ನೂರಾರು ಉದ್ಯಮಿಗಳು, ತಜ್ಞರೂ ಈ ಡಬ್ಲ್ಯುಇಎಫ್ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೂ ಪಾಲ್ಗೊಳ್ಳಲಿದ್ದು, ಮೂರು ಸೆಷನ್ಗಳಲ್ಲಿ ಅವರು ವಿವಿಧ ಚರ್ಚೆಗಳು ಮತ್ತು ಭಾಷಣಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಸ್ಮೃತಿ ಇರಾನಿ ಅವರು ಕೇಂದ್ರ ಸಚಿವೆಯಾದರೂ ಡಬ್ಲ್ಯುಇಎಫ್ ಸಭೆಯಲ್ಲಿ ಅವರು ಅಲಾಯನ್ಸ್ ಫಾರ್ ಗ್ಲೋಬಲ್ ಫೂಡ್ ಎನ್ನುವ ಸಂಘಟನೆಯ ಛೇರ್ಮನ್ ಆಗಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಅಲಾಯನ್ಸ್ ಫಾರ್ ಗ್ಲೋಬಲ್ ಫೂಡ್ ಸಂಘಟನೆಯನ್ನು ಸ್ಮೃತಿ ಇರಾನಿ ಅವರೇ ಆರಂಭಿಸಿದ್ದು. ಭಾರತೀಯ ಉದ್ಯಮಗಳ ಮಹಾ ಒಕ್ಕೂಟ (ಸಿಐಐ) ಮತ್ತು ಬಿಲ್ ಗೇಟ್ಸ್ ಫೌಂಡೇಶನ್ನ ನೆರವು ಈ ಸಂಘಟನೆಗೆ ಇದೆ.
ಸ್ಮೃತಿ ಇರಾನಿ ಅವರು ಡಬ್ಲ್ಯಇಎಫ್ ಸಭೆಯ ಐದು ದಿನದಲ್ಲಿ ಮೂರು ಸೆಷನ್ಗಳಲ್ಲಿ ಮಾತನಾಡಲಿದ್ದಾರೆ. ಜನವರಿ 22, ಬುಧವಾರದಂದು ಎರಡು ಸೆಷನ್ಗಳು, ಜನವರಿ 23ರಂದು ಒಂದು ಸೆಷನ್ನಲ್ಲಿ ಅವರು ಭಾಷಣ ಮಾಡುತ್ತಿದ್ದಾರೆ. ಈ ಜಾಗತಿಕ ವೇದಿಕೆಯಲ್ಲಿ ಸ್ಮೃತಿ ಇರಾನಿ ಭಾರತೀಯ ಮಹಿಳೆಯರ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಜನವರಿ 22, ಬುಧವಾರದಂದು ಸ್ಮೃತಿ ಇರಾನಿ ತಮ್ಮ ಮೊದಲ ಸೆಷನ್ನಲ್ಲಿ ಶಿಕ್ಷಣ ವಲಯದಲ್ಲಿ ಸುಧಾರಣೆ ತರುವುದು, ಲಿಂಗ ಸಮಾನತೆ ತರುವ ವಿಷಯದ ಬಗ್ಗೆ ಮಾತನಾಡುತ್ತಾರೆ.
ಇದನ್ನೂ ಓದಿ: ಪಿಎಲ್ಐ ಸ್ಕೀಮ್; 84 ಎಸಿ ಮತ್ತು ಎಲ್ಇಡಿ ತಯಾರಕ ಕಂಪನಿಗಳಿಂದ 10,478 ಕೋಟಿ ರೂ ಹೂಡಿಕೆ ನಿರೀಕ್ಷೆ
ಅದೇ ದಿನ ನಡೆಯುವ ತಮ್ಮ ಎರಡನೇ ಸೆಷನ್ನಲ್ಲಿ ಇಂಧನ ಮತ್ತು ಲಿಂಗ ಸಮಾನತೆ ವಿಚಾರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಹೇಗೆ ತರಬಹುದು, ಯಾಕೆ ತರಬೇಕು ಎಂಬುದನ್ನು ಅವರು ವಿವರಿಸುವ ಪ್ರಯತ್ನ ಮಾಡಲಿದ್ದಾರೆ.
ಜನವರಿ 23ರಂದು ತಮ್ಮ ಮೂರನೇ ಸೆಷನ್ನಲ್ಲಿ ಸ್ಮೃತಿ ಇರಾನಿ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಪಾಲ್ಗೊಳ್ಳಲಿದ್ದಾರೆ. ಮಹಿಳಾ ಪೌಷ್ಟಿಕಾಂಶದ ಕ್ಷೇತ್ರದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ತಮಗಾದ ಅನುಭವಗಳನ್ನು ಅವರು ಹಂಚಿಕೊಳ್ಳಲಿದ್ದಾರೆ.
ಭಾರತದಿಂದ ಯಾರು ಪಾಲ್ಗೊಳ್ಳುತ್ತಿದ್ದಾರೆ ಈ ಡಬ್ಲ್ಯುಇಎಫ್ ಸಭೆಯಲ್ಲಿ…?
ಸ್ಮೃತಿ ಇರಾನಿಯೂ ಸೇರಿದಂತೆ ಆರು ಮಂದಿ ಕೇಂದ್ರ ಸಚಿವರು ಡಬ್ಲ್ಯುಇಎಫ್ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಶ್ವಿನಿ ವೈಷ್ಣವ್, ಸಿಆರ್ ಪಾಟೀಲ್, ಚಿರಾಗ್ ಪಾಸ್ವಾನ್, ಜಯಂತ್ ಚೌಧರಿ, ಕೆ ರಾಮಮೋಹನ್ ನಾಯ್ಡು ಅವರು ಸಭೆಯಲ್ಲಿ ಭಾಗಿಯಾಗಲಿರುವ ಇತರ ಸಚಿವರು.
ಇದನ್ನೂ ಓದಿ: ಕೆಲ ಸುಧಾರಣಾ ಕ್ರಮ ತಂದರೆ ಭಾರತಕ್ಕೆ ಶೇ. 8ರ ದರದಲ್ಲಿ ಬೆಳೆಯಲು ಸಾಧ್ಯ: ಡಬ್ಲ್ಯುಇಎಫ್ ಮುಖ್ಯಸ್ಥರ ಅನಿಸಿಕೆ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ವಿವಿಧ ರಾಜ್ಯಗಳ ಹಲವು ಸಚಿವರು, ನೂರು ಸಿಇಒಗಳು, ವಿವಿಧ ಕ್ಷೇತ್ರಗಳ ಗಣ್ಯರು ಭಾರತವನ್ನು ವಿಶ್ವ ವೇದಿಕೆಯಲ್ಲಿ ಪ್ರತಿನಿಧಿಸಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ