ಕೆಲ ಸುಧಾರಣಾ ಕ್ರಮ ತಂದರೆ ಭಾರತಕ್ಕೆ ಶೇ. 8ರ ದರದಲ್ಲಿ ಬೆಳೆಯಲು ಸಾಧ್ಯ: ಡಬ್ಲ್ಯುಇಎಫ್ ಮುಖ್ಯಸ್ಥರ ಅನಿಸಿಕೆ

WEF president Borge Brende speaks on Indian economic growth: ಭಾರತದ ಆರ್ಥಿಕ ಬೆಳವಣಿಗೆಯ ವೇಗ ಮತ್ತೆ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ತಲುಪಲು ಅವಕಾಶ ಇದೆ ಎಂದು ಡಬ್ಲ್ಯುಇಎಫ್ ಸಿಇಒ ಹೇಳಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂನ ಐದು ದಿನಗಳ ಸಮಾವೇಶದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಭಾರತದ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಲಕ್ಷಕ್ಕೂ ಹೆಚ್ಚು ಇರುವ ಸ್ಟಾರ್ಟಪ್​ಗಳೇ ಅದಕ್ಕೆ ಬಲ ನೀಡಿವೆ ಎಂಬುದು ಬೋರ್ಜೆ ಬ್ರೆಂಡೆ ಹೇಳಿದ್ದಾರೆ.

ಕೆಲ ಸುಧಾರಣಾ ಕ್ರಮ ತಂದರೆ ಭಾರತಕ್ಕೆ ಶೇ. 8ರ ದರದಲ್ಲಿ ಬೆಳೆಯಲು ಸಾಧ್ಯ: ಡಬ್ಲ್ಯುಇಎಫ್ ಮುಖ್ಯಸ್ಥರ ಅನಿಸಿಕೆ
ಡಬ್ಲ್ಯುಇಎಫ್ ಡಾವಾಸ್ ವಾರ್ಷಿಕ ಸಭೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 20, 2025 | 1:58 PM

ನವದೆಹಲಿ, ಜನವರಿ 20: ಶೇ. 6ರ ಆಸುಪಾಸಿನಲ್ಲಿ ಇರುವ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 7ರಿಂದ 8ರ ಮಟ್ಟ ಮುಟ್ಟಲು ಸಾಧ್ಯ ಎಂದು ವರ್ಲ್ಡ್ ಎಕನಾಮಿಕ್ ಫೋರಂ ಅಧ್ಯಕ್ಷ ಹಾಗೂ ಸಿಇಒ ಬೋರ್ಜೆ ಬ್ರೆಂಡೆ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತೊಮ್ಮೆ ಶೇ. 7ಕ್ಕಿಂತಲೂ ಹೆಚ್ಚಿನ ಬೆಳವಣಿಗೆ ದರ ಹೊಂದಲು ಸಾಧ್ಯವಿದೆ. ಆದರೆ, ಅದಕ್ಕೆ ಪೂರಕವಾಗಿ ಕೆಲ ಅಗತ್ಯ ಸುಧಾರಣೆಗಳಾಗಬೇಕು ಎಂದೂ ಸಲಹೆ ನೀಡಿದ್ದಾರೆ.

ಸ್ವಿಟ್ಜರ್​ಲ್ಯಾಂಡ್ ದೇಶದ ಡಾವಾಸ್ ನಗರದಲ್ಲಿ ಇವತ್ತು ಆರಂಭವಾದ ಐದು ದಿನಗಳ ಡಬ್ಲ್ಯುಇಎಫ್ ಶೃಂಗಸಭೆ ಇವತ್ತು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಡಬ್ಲ್ಯುಇಎಫ್ ಅಧ್ಯಕ್ಷರು ಮಾತನಾಡುತ್ತಾ ಭಾರತದ ಆರ್ಥಿಕತೆ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

‘ಭಾರತಕ್ಕೆ ಅದ್ಭುತ ಶಕ್ತಿ ಇದೆ. ಈ ವರ್ಷ ಶೇ. 6ರಷ್ಟು ಅದರ ಆರ್ಥಿಕತೆ ಬೆಳೆದಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಆದರೂ ಕೂಡ ಹೂಡಿಕೆಗಳು, ಇನ್​ಫ್ರಾಸ್ಟ್ರಕ್ಚರ್, ಶಿಕ್ಷಣ, ಆರ್ ಅಂಡ್ ಡಿ ವಲಯದಲ್ಲಿ ಸುಧಾರಣೆಗಳನ್ನು ತರುವುದಾದರೆ ಭಾರತಕ್ಕೆ ಮತ್ತೊಮ್ಮೆ ಶೇ. 7 ಅಥವಾ ಶೇ. 8ರಷ್ಟಾದರೂ ಬೆಳವಣಿಗೆ ಹೊಂದಲು ಕಷ್ಟಸಾಧ್ಯವೇನಲ್ಲ’ ಎಂದು ಬೋರ್ಜೆ ಬ್ರೆಂಡೆ ಹೇಳಿದರೆಂದು ಎನ್​ಡಿಟಿವಿ ವಾಹಿನಿ ವರದಿ ಮಾಡಿದೆ.

ಇದನ್ನೂ ಓದಿ: ಯುವಕರ ಕೈಗೆ ಕೆಲಸ ನೀಡುವುದು ಸರ್ಕಾರಕ್ಕೆ ದೊಡ್ಡ ಸವಾಲು; ಬಜೆಟ್​ನಲ್ಲಿ ದೊಡ್ಡ ನಿರೀಕ್ಷೆ

ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಶೇ. 20

‘ಮುಂದಿನ ಕೆಲ ವರ್ಷಗಳಲ್ಲಿ ವಿಶ್ವದ ಒಟ್ಟಾರೆ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 20ರಷ್ಟಿರುತ್ತದೆ. ಅದಾದಲ್ಲಿ ನಿಜಕ್ಕೂ ಗಮನಾರ್ಹ ಸಂಗತಿ ಎನಿಸುತ್ತದೆ. ಭಾರತಕ್ಕೆ ಸ್ಟಾರ್ಟಪ್​ಗಳು ಒಳ್ಳೆಯ ಶಕ್ತಿ ತಂದಿವೆ. ಭಾರತದಲ್ಲಿ 1.20 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್​ಗಳಿವೆ. 120ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಭವಿಷ್ಯದ ಪ್ರಗತಿಗೆ ಇಂಥದ್ದೊಂದು ಇಕೋಸಿಸ್ಟಂ ಒಳ್ಳೆಯ ಬುನಾದಿಯಾಗಬಹುದು ಎನ್ನುವುದು ನನ್ನ ಭಾವನೆ’ ಎಂದು ವರ್ಲ್ಡ್ ಎಕನಾಮಿಕ್ ಫೋರಂನ ಸಿಇಒ ತಿಳಿಸಿದ್ದಾರೆ.

ಭಾರತಕ್ಕೆ 2047ರ ಗುರಿ ಮುಟ್ಟಲು ಸಾಧ್ಯವಾ?

2047ರೊಳಗೆ ಮುಂದುವರಿದ ದೇಶ ನಿರ್ಮಾಣವಾಗಬೇಕು ಎಂದು ಭಾರತ ಸರ್ಕಾರ ಸಂಕಲ್ಪ ತೊಟ್ಟಿದೆ. ಈ ವಿಚಾರದ ಬಗ್ಗೆ ಮಾತನಾಡಿದ ಬೋರ್ಜೆ ಬ್ರೆಂಡೆ ಅವರು, ಈ ಸಾಧನೆ ಅಸಾಧ್ಯವಲ್ಲ ಎಂದಿದ್ದಾರೆ.

ಭಾರತ ಶೀಘ್ರದಲ್ಲೇ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ. ಹೆಚ್ಚಿನ ವ್ಯಾಪಾರವು ಡಿಜಿಟಲ್ ಟ್ರೇಡ್ ಮತ್ತು ಸರ್ವಿಸ್​ಗಳಲ್ಲಿ ಆಗುತ್ತಿದೆ. ಸಾಂಪ್ರದಾಯಿಕ ಸರಕುಗಳಿಗಿಂತ ಹೆಚ್ಚಿನ ಟ್ರೇಡಿಂಗ್ ಇಲ್ಲಿ ಆಗುತ್ತದೆ. ಗಮನಾರ್ಹ ಸಂಗತಿ ಎಂದರೆ ಈ ಡಿಜಿಟಲ್ ಟ್ರೇಡ್ ಮತ್ತು ಸರ್ವಿಸ್ ವಲಯದಲ್ಲಿ ಭಾರತ ಪ್ರಬಲವಾಗಿದೆ. ಇದು ಭಾರತದ ಅಗತ್ಯ ಬೆಳವಣಿಗೆಗೆ ಪೂರಕವಾಗುವ ಅಂಶಗಳು ಎಂದು ವಲ್ಡ್ ಎಕನಾಮಿಕ್ ಫೋರಂನ ಅಧ್ಯಕ್ಷರಾದ ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಆಟೊಮೊಬೈಲ್ ಮಾರುಕಟ್ಟೆ ಗಾತ್ರ ಅಲ್ಪಸಮಯದಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆ

ಉದ್ಯೋಗ ವಲಯದಲ್ಲಿ ಡಿಜಿಟಲೀಕರಣದ ಪರಿಣಾಮ…

ಉದ್ಯೋಗ ವಲಯದಲ್ಲಿ ಭಾರತಕ್ಕೆ ಡಿಜಿಟಲೀಕರಣವು ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಡಿಜಿಟಲೀಕರಣದಿಂದಾಗಿ ಉತ್ಪನ್ನಶೀಲತೆ ಹೆಚ್ಚಿದೆ. ಉತ್ಪನ್ನಶೀಲತೆ ಎಂದರೆ ಕಡಿಮೆ ಸಂಪನ್ಮೂಲದಲ್ಲಿ ಹೆಚ್ಚು ಉತ್ಪಾದಿಸುವುದು. ಇದು ಬ್ಯಾಕ್ ಆಫೀಸ್ ಇತ್ಯಾದಿ ಕೆಲ ಉದ್ಯೋಗಗಳ ನಷ್ಟಕ್ಕೆ ಎಡೆ ಮಾಡಿಕೊಡಬಹುದು. ಆದರೆ, ಈ ಹಿನ್ನಡೆಯನ್ನೂ ಬಲವಾಗಿ ಪರಿವರ್ತಿಸಲು ಸಾಧ್ಯ. ಉದ್ಯೋಗ ನಷ್ಟವಾಗುವ ವಲಯದಿಂದ ಜನರ ಶಕ್ತಿ ಬೇರೆಡೆ ಬಳಕೆಯಾದರೆ ಮತ್ತಷ್ಟು ಉತ್ಪಾದನೆ ಹೆಚ್ಚುತ್ತದೆ. ಇದನ್ನೇ ಸಮೃದ್ಧಿ ಎನ್ನುವುದು ಎಂದು ಡಬ್ಲ್ಯುಇಎಫ್ ಮುಖ್ಯಸ್ಥರು ವ್ಯಾಖ್ಯಾನಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ