ನಟ ಸೂರ್ಯ ಮೇಲೆ ಸಿಟ್ಟು ಹೊರಹಾಕಿದ ಖ್ಯಾತ ನಿರ್ದೇಶಕ

Suriya: ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಮೇಲೆ ಅದೇ ಚಿತ್ರರಂಗದ ಜನಪ್ರಿಯ ನಿರ್ದೇಶಕ ಮತ್ತು ಮಾಜಿ ಗೆಳೆಯ ಗೌತಮ್ ವಾಸುದೇವ್ ಮೆನನ್ ಕಿಡಿ ಕಾರಿದ್ದಾರೆ. ಎರಡು ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಸೂರ್ಯ ಅಪಮಾನ ಮಾಡಿದ್ದಾರೆ ಎಂಬರ್ಥದ ಮಾತುಗಳನ್ನಾಡಿದ್ದಾರೆ. ಏನಿದು ವಿವಾದ?

ನಟ ಸೂರ್ಯ ಮೇಲೆ ಸಿಟ್ಟು ಹೊರಹಾಕಿದ ಖ್ಯಾತ ನಿರ್ದೇಶಕ
Suriya Gautham Vasudev Menon
Follow us
ಮಂಜುನಾಥ ಸಿ.
|

Updated on: Jan 20, 2025 | 1:22 PM

ತಮಿಳಿನ ಸ್ಟಾರ್ ನಟ ಸೂರ್ಯ ಮೇಲೆ ಮಾಜಿ ಗೆಳೆಯ, ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸಿಟ್ಟು ಹೊರಹಾಕಿದ್ದಾರೆ. ಸೂರ್ಯ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಆಗಿರುವ ‘ವಾರನಮ್ ಅಯುರುಮ್’ (ಸೂರ್ಯ ಸನ್ ಆಫ್ ಕೃಷ್ಣಮೂರ್ತಿ), ‘ಕಾಕ ಕಾಕ’ ಸೇರಿದಂತೆ ಹಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಗೌತಮ್ ವಾಸುದೇವ್ ಮೆನನ್, ಸೂರ್ಯ ಮಾತ್ರವಲ್ಲದೆ ತಮಿಳು ಚಿತ್ರರಂಗದ ಹಲವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಇದ್ದಾಗ ಯಾರೂ ನೆರವಾಗುತ್ತಿಲ್ಲ ಎಂದಿದ್ದಾರೆ.

ಗೌತಮ್ ವಾಸುದೇವ್ ಮೆನನ್ ‘ಧ್ರುವ ನಚ್ಚಿತರಮ್’ ಹೆಸರಿನ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ನಾಯಕ. ಆದರೆ ಈ ಸಿನಿಮಾದ ಬಿಡುಗಡೆ ತಡವಾಗತ್ತಲೇ ಬರುತ್ತಿದೆ. ಹಣಕಾಸಿನ ಮುಗ್ಗಟ್ಟು, ಚಿತ್ರರಂಗದವರ ಅಸಹಕಾರ ಇನ್ನಿತರೆ ಕಾರಣಗಳಿಗೆ ಸಿನಿಮಾ ತಡವಾಗುತ್ತಿದೆ. ಒಂದು ಸಮಯದಲ್ಲಿ ಒಂದರ ಮೇಲೊಂದು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಗೌತಮ್ ವಾಸುದೇವ್ ಮೆನನ್ ಈಗ ಒಬ್ಬಂಟಿಯಾಗಿದ್ದಾರೆ. ಹಾಗಾಗಿ ಅವರು ತಮಿಳು ಚಿತ್ರರಂಗದ ದಿಗ್ಗಜರು ಹಾಗೂ ತಮ್ಮ ಮಾಜಿ ಗೆಳೆಯರ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ವಾಸುದೇವ್ ಮೆನನ್, ‘ಸೂರ್ಯ ‘ಧ್ರುವ ನಚ್ಚಿತ್ತರಮ್’ ಸಿನಿಮಾ ಮಾಡುವುದೋ ಬೇಡವೋ ಎಂದು ಯೋಚನೆ ಸಹ ಮಾಡಬಾರದಿತ್ತು, ಒಮ್ಮೆಲೆ ಒಪ್ಪಿಗೆ ನೀಡಬೇಕಿತ್ತು. ಸಿನಿಮಾದಲ್ಲಿ ನಟಿಸಬೇಕೋ ಬೇಡವೋ ಎಂಬ ಪ್ರಶ್ನೆಯೂ ಆತನಲ್ಲಿ ಮೂಡಬಾರದಿತ್ತು’ ಎಂದಿದ್ದಾರೆ. ಗೌತಮ್ ವಾಸುದೇವ್ ಮೆನನ್, ಸೂರ್ಯ ವೃತ್ತಿ ಜೀವನದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳಾದ ವಾರನಮ್ ಅಯುರುಮ್’ (ಸೂರ್ಯ ಸನ್ ಆಫ್ ಕೃಷ್ಣಮೂರ್ತಿ), ‘ಕಾಕ ಕಾಕ’ ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಎರಡು ಹಿಟ್ ಕೊಟ್ಟ ನಿರ್ದೇಶಕ ಕೇಳಿದಾಗ ಇಲ್ಲ ಎನ್ನಬಾರದಿತ್ತು ಎಂಬುದು ಅವರ ವಾದ.

ಇದನ್ನೂ ಓದಿ:ನಟ ಸೂರ್ಯಗಿಂತ ಮೂರು ಪಟ್ಟು ಜಾಸ್ತಿ ಸಂಬಳ ಪಡೆಯುತ್ತಿದ್ದ ಪತ್ನಿ ಜ್ಯೋತಿಕಾ

‘ಧೃವ ನಚ್ಚಿತರಮ್’ ಸಿನಿಮಾದಲ್ಲಿ ಸೂರ್ಯ ನಟಿಸಿದ್ದರೆ ಸಿನಿಮಾ ಬೇರೆಯದ್ದೇ ರೀತಿ ಇರುತ್ತಿತ್ತು. ತನಗಾಗಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕನ ಬಗ್ಗೆ ಸೂರ್ಯ ಅನುಮಾನ ಪಡಬಾರದಿತ್ತು. ಸಿನಿಮಾದಲ್ಲಿ ನಟಿಸುವ ಮೂಲಕ ನನ್ನ ಮೇಲೆ ಕರುಣೆ ತೋರಿಸು ಎಂದು ನಾನು ಕೇಳಿರಲಿಲ್ಲ ಬದಲಿಗೆ ಸಿನಿಮಾದಲ್ಲಿ ನಟಿಸು ಎಂದಷ್ಟೆ ನಾನು ಕೇಳಿದ್ದೆ. ನಟಿಸಿದ್ದರೆ ಆತ ಕಳೆದುಕೊಳ್ಳುವುದು ಏನೂ ಇರಲಿಲ್ಲ, ಏಕೆಂದರೆ ಸಿನಿಮಾದ ನಿರ್ಮಾಪಕ ನಾನು ಅವನಲ್ಲ’ ಎಂದಿದ್ದಾರೆ ಗೌತಮ್ ವಾಸುದೇವ್ ಮೆನನ್.

‘ಧ್ರುವ ನಚ್ಚಿತರಮ್’ ಸಿನಿಮಾದ ಬಿಡುಗಡೆಗೆ ನಾನು ಕಷ್ಟಪಡುತ್ತಿದ್ದೇನೆ. ಸಿನಿಮಾ ಬಿಡುಗಡೆ ಮಾಡುವುದು ಬಹಳ ಕಠಿಣವಾಗುತ್ತಿದೆ. ನನಗೆ ಈಗ ಚಿತ್ರರಂಗದವರ ಸಹಾಯ, ನೆರವು, ಮಾರ್ಗದರ್ಶನ ಬೇಕಿದೆ ಆದರೆ ಯಾರೂ ಸಹ ಮುಂದೆ ಬರುತ್ತಿಲ್ಲ. ಆದರೆ ಸಿನಿಮಾದ ಬಗ್ಗೆ ಪ್ರೇಕ್ಷಕರು ಕಾತರರಾಗಿದ್ದಾರೆ. ಹಾಗಾಗಿ ಕಷ್ಟವಾದರೂ ನಾನೇ ಎಲ್ಲವನ್ನೂ ನೋಡಿಕೊಂಡು ಸಿನಿಮಾ ಬಿಡುಗಡೆ ಮಾಡುವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು