ಶೂಟ್ ಮುಗಿಸಿ ಹೋದ ನಟ ಬರಲೇ ಇಲ್ಲ; ಹೃದಯ ಸ್ತಂಭನದಿಂದ ಯೋಗೇಶ್ ಮಹಾಜನ್ ನಿಧನ

50 ವರ್ಷದ ಭೋಜ್ಪುರಿ ಮತ್ತು ಮರಾಠಿ ನಟ ಯೋಗೇಶ್ ಮಹಾಜನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಿಂದಿ ಧಾರಾವಾಹಿಯ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಅವರು, ಹಠಾತ್ ಅಸ್ವಸ್ಥತೆಯಿಂದಾಗಿ ಮೃತಪಟ್ಟಿದ್ದಾರೆ. ಅವರ ಅಕಾಲಿಕ ನಿಧನವು ಚಿತ್ರರಂಗಕ್ಕೆ ತೀವ್ರ ಆಘಾತವನ್ನುಂಟುಮಾಡಿದೆ. ಅವರು ಮರಾಠಿ ಚಲನಚಿತ್ರಗಳು ಮತ್ತು ಹಿಂದಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಶೂಟ್ ಮುಗಿಸಿ ಹೋದ ನಟ ಬರಲೇ ಇಲ್ಲ; ಹೃದಯ ಸ್ತಂಭನದಿಂದ ಯೋಗೇಶ್ ಮಹಾಜನ್ ನಿಧನ
ಯೋಗೇಶ್
Follow us
ರಾಜೇಶ್ ದುಗ್ಗುಮನೆ
|

Updated on: Jan 20, 2025 | 2:35 PM

ಭಾರತೀಯ ಚಿತ್ರರಂಗಕ್ಕೆ ಒಂದಾದಮೇಲೆ ಒಂದರಂತೆ ಶಾಕ್​ಗಳು ಎದುರಾಗುತ್ತಿವೆ. ಇತ್ತೀಚೆಗೆ ಭೋಜ್ಪುರಿ ನಟ ಸುದೀಪ್ ಪಾಂಡೆ ಅವರು ಹೃದಯಘಾತದಿಂದ ಮೃತಪಟ್ಟ ವಿಚಾರ ತಣ್ಣಗಾಗುವ ಮೊದಲೇ ಭೋಜ್ಪುರಿ, ಮರಾಠಿ ಧಾರಾವಾಹಿಗಳಲ್ಲಿ ಹೆಸರು ಮಾಡಿದ್ದ ಯೋಗೇಶ್ ಮಹಾಜನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಭಿಮಾನಿಗಳು ಸಾಕಷ್ಟು ನೊಂದುಕೊಂಡಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಅವರ ಕುಟುಂಬದವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

1976ರ ಸೆಪ್ಟೆಂಬರ್‌ನಲ್ಲಿ ರೈತ ಕುಟುಂಬದಲ್ಲಿ ಯೋಗೇಶ್ ಜನಿಸಿದರು. ನಟನಾ ಕ್ಷೇತ್ರದಲ್ಲಿ ಗಾಡ್ ಫಾದರ್ ಇಲ್ಲದಿದ್ದರೂ ತಮ್ಮದೇ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದ ಗುರುತಿಸಿಕೊಂಡರು. ಅವರು ಮರಾಠಿ, ಹಿಂದಿ ಮತ್ತು ಭೋಜ್‌ಪುರಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮೊದಲು ನಟಿಸಿದ್ದು ಭೋಜ್​ಪುರಿ ಸಿನಿಮಾದಲ್ಲಿ. ಅವರು ಈ ಮೊದಲು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು.

ಭಾನುವಾರ (ಜನವರಿ 19) ಯೋಗೇಶ್ ಮಹಾಜನ್ ಅವರಿಗೆ ಹೃದಯ ಸ್ತಂಭನ ಆಗಿದೆ. ಇದು ಅವರ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರಿಗೆ ದೊಡ್ಡ ಆಘಾತ ತಂದಿದೆ. ಇಂದು (ಜನವರಿ 19) ಅವರ ಅಂತ್ಯಸಂಸ್ಕಾರ ನೆರವೇರಿದೆ. ಮುಂಬೈನಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ.

ಯೋಗೇಶ್ ಮಹಾಜನ್ ಅನೇಕ ಮರಾಠಿ ಚಲನಚಿತ್ರಗಳು ಮತ್ತು ಕೆಲವು ಹಿಂದಿ ಪೌರಾಣಿಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಶಿವ ಶಕ್ತಿ-ತಪ, ‘ತ್ಯಾಗ’, ‘ತಾಂಡವ್’, ‘ಆದಿ ಶಂಕರಾಚಾರ್ಯ’, ‘ಶ್ರೀಮದ್ ರಾಮಾಯಣ’ ರೀತಿಯ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು.

ಹಿಂದಿ ಧಾರಾವಾಹಿಯ ಶೂಟಿಂಗ್‌ಗಾಗಿ ಅವರು ಉಮರ್‌ಗಾಂವ್‌ಗೆ ಹೋಗಿದ್ದರು. ಈ ಧಾರಾವಾಹಿಯಲ್ಲಿ ಅವರು ಶುಕ್ರಾಚಾರ್ಯರ ಪಾತ್ರವನ್ನು ನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ಅವರು ಧಾರಾವಾಹಿಯ ಶೂಟಿಂಗ್ ಮುಗಿಸಿದ್ದಾರೆ. ಈ ವೇಳೆ ಅವರಿಗೆ ದೇಹದಲ್ಲಿ ಏನೋ ವ್ಯತ್ಯಾಸ ಇದೆ ಎಂಬುದು ಗೊತ್ತಾಗಿದೆ. ವೈದ್ಯರ ಬಳಿ ಹೋಗಿ ಅವರು ಔಷಧ ತೆಗೆದುಕೊಂಡು ರಾತ್ರಿ ಹೋಟೆಲ್​ನಲ್ಲಿ ಮಲಗಿದ್ದರು.

ಇದನ್ನೂ ಓದಿ: ಬಿಗ್ ಬಾಸ್​ಗೆ ಗುಡ್​ ಬೈ; ಮತ್ತೊಮ್ಮೆ ಖಚಿತಪಡಿಸಿದ ಕಿಚ್ಚ ಸುದೀಪ್

ಭಾನುವಾರ ಬೆಳಿಗ್ಗೆ ಯೋಗೇಶ್ ಶೂಟಿಂಗ್‌ಗೆ ಸೆಟ್‌ಗೆ ಬಂದಿರಲಿಲ್ಲ. ಯೋಗೇಶ್ ಸೆಟ್​ಗೆ ಬರದ ಕಾರಣ ಧಾರಾವಾಹಿಯ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಯೋಗೇಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರಾದರೂ ಯೋಗೇಶ್ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ಅವರ ಹೋಟೆಲ್ ಕೋಣೆಯ ಬಾಗಿಲು ತೆರೆದಾಗ, ಅವರು ಹಾಸಿಗೆಯ ಮೇಲೆ ಮಲಗಿಯೇ ಇದ್ದರು. ಹೋಗಿ ನೋಡಿದಾಗ ಅವರು ಉಸಿರಾಡುತ್ತಾ ಇರಲಿಲ್ಲ. ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ