Jeff Bezos: ವಿಶ್ವದ ನಂಬರ್ 1 ಶ್ರೀಮಂತ ಜೆಫ್​ ಬೆಜೋಸ್ ಆಸ್ತಿ ಭಾರತದ ರೂಪಾಯಿ ಲೆಕ್ಕದಲ್ಲಿ 15,66,948.60 ಕೋಟಿ

| Updated By: Srinivas Mata

Updated on: Jul 07, 2021 | 4:09 PM

ಕಳೆದ ಜನವರಿಯಲ್ಲಿ ವಿಶ್ವದ ನಂಬರ್ 1 ಶ್ರೀಮಂತನ ಸ್ಥಾನಕ್ಕೆ ಏರಿದ ಎಲಾನ್ ಮಸ್ಕ್ ಆಸ್ತಿ ಮೌಲ್ಯ 21,000 ಕೋಟಿ ಯುಎಸ್​ಡಿಯೊಂದಿಗೆ ಹೊಸ ದಾಖಲೆಯನ್ನು ಬರೆದಿತ್ತು. ಇದೀಗ ಅಮೆಜಾನ್ ಕಂಪೆನಿ ಸ್ಥಾಪಕ ಜೆಫ್ ಬೆಜೋಸ್ ಆಸ್ತಿ 21,100 ಕೋಟಿ ಅಮೆರಿಕನ್ ಡಾಲರ್ ಮುಟ್ಟಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 15,66,948.60 ಕೋಟಿ ಆಗುತ್ತದೆ.

Jeff Bezos: ವಿಶ್ವದ ನಂಬರ್ 1 ಶ್ರೀಮಂತ ಜೆಫ್​ ಬೆಜೋಸ್ ಆಸ್ತಿ ಭಾರತದ ರೂಪಾಯಿ ಲೆಕ್ಕದಲ್ಲಿ 15,66,948.60 ಕೋಟಿ
ಜೆಫ್ ಬಿಜೊಸ್ (ಸಂಗ್ರಹ ಚಿತ್ರ)
Follow us on

ಬ್ಲೂಮ್​ಬರ್ಗ್​ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ವಿಶ್ವದ ಅತ್ಯಂತ ಸಿರಿವಂತ, ಅಮೆಜಾನ್ ಕಂಪೆನಿ ಸ್ಥಾಪಕ ಜೆಫ್ ಬೆಜೋಸ್ ಆಸ್ತಿ 21,100 ಕೋಟಿ ಅಮೆರಿಕನ್ ಡಾಲರ್ ಮುಟ್ಟಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 15,66,948.60 ಕೋಟಿ ಆಗುತ್ತದೆ. ಅಮೆರಿಕದ ರಕ್ಷಣಾ ಇಲಾಖೆಯು ಜುಲೈ 6ರಂದು ತಿಳಿಸಿರುವ ಪ್ರಕಾರಮ ಮೈಕ್ರೋಸಾಪ್ಟ್​ ಜತೆಗಿನ 10 ಬಿಲಿಯನ್ ಅಮೆರಿಕನ್ ಡಾಲರ್​ ಮೌಲ್ಯದ JEDI- ಕ್ಲೌಡ್ ಕಂಪ್ಯೂಟಿಂಗ್ ಪ್ರಾಜೆಕ್ಟ್ ಅನ್ನು ರದ್ದು ಮಾಡಿದೆ. ಆ ಸುದ್ದಿ ಹೊರಬಿದ್ದ ನಂತರ ಅಮೆಜಾನ್​ ಕಂಪೆನಿಯ ಷೇರು ಮೌಲ್ಯ ಶೇ 4.7ರಷ್ಟು ಗಳಿಕೆ ಕಂಡಿದ್ದು, ವಿಶ್ವದ ಅತ್ಯಂತ ಸಿರಿವಂತ ಜೆಫ್​ ಬೆಜೋಸ್ ಆಸ್ತಿ ಮೌಲ್ಯದಲ್ಲಿ 840 ಕೋಟಿ ಅಮೆರಿನ್ ಡಾಲರ್ ಜಾಸ್ತಿಯಾಯಿತು. ಪೆಂಟಗನ್ ಹೇಳಿರುವ ಪ್ರಕಾರ, ಮೈಕ್ರೋಸಾಫ್ಟ್ ಹಾಗೂ ಅಮೆಜಾನ್​ ಮಾತ್ರ ಇಲಾಖೆಗೆ ಅಗತ್ಯ ಇರುವುದನ್ನು ಒದಗಿಸುವುದಕ್ಕೆ ಸಾಧ್ಯ. ಹೊಸ ಬಹುಸರಬರಾಜುದಾರ ಕ್ಲೌಡ್ ಕಂಪ್ಯೂಟಿಂಗ್ ಒಪ್ಪಂದ ಮಾಡಿಕೊಳ್ಳುವುದಾಗಿ, ಮತ್ತು ಮೈಕ್ರೋಸಾಫ್ಟ್ ಹಾಗೂ ಅಮೆಜಾನ್ ಎರಡೂ ಈ ಒಪ್ಪಂದ ಪಡೆಯಲಿವೆ ಎಂದು ತಿಳಿಸಲಾಗಿದೆ.

ಕಳೆದ ಜನವರಿಯಲ್ಲಿ ವಿಶ್ವದ ನಂಬರ್ 1 ಶ್ರೀಮಂತನ ಸ್ಥಾನಕ್ಕೆ ಏರಿದ ಎಲಾನ್ ಮಸ್ಕ್ ಆಸ್ತಿ ಮೌಲ್ಯ 21,000 ಕೋಟಿ ಯುಎಸ್​ಡಿಯೊಂದಿಗೆ ಹೊಸ ದಾಖಲೆಯನ್ನು ಬರೆದಿತ್ತು. ಅಂದಹಾಗೆ ಅಮೆಜಾನ್ ಕಂಪೆನಿಯನ್ನು ಸ್ಥಾಪನೆ ಮಾಡಿದ 27 ವರ್ಷಗಳ ನಂತರ, ಜುಲೈ 5, 2021ರಂದು ಸಿಇಒ ಹುದ್ದೆಯಿಂದ ಬೆಜೋಸ್ ಕೆಳಗಿಳಿದಿದ್ದಾರೆ. ಈಗ ಆ ಜವಾಬ್ದಾರಿ ಆ್ಯಂಡಿ ಜಸ್ಸಿ ಹೆಗಲೇರಿದೆ. ಜೆಫ್​ ಬೆಜೋಸಿ ಕಾರ್ಯಕಾರಿ ಅಧ್ಯಕ್ಷರಾಗಿ ಮುಂದುವರಿಯುಲಿದ್ದಾರೆ. ಕಂಪೆನಿಯಲ್ಲಿ ಈಗಲೂ ಬೆಜೋಸ್ ಶೇ 11ರಷ್ಟು ಷೇರನ್ನು ಹೊಂದಿದ್ದಾರೆ ಎಂದು ಬ್ಲೂಮ್​ಬರ್ಗ್ ವರದಿ ಮಾಡಿದೆ.

ಸದ್ಯಕ್ಕೆ ವಿಶ್ವದ ಟಾಪ್​ 10 ಶ್ರೀಮಂತರ ಪೈಕಿ 9 ಮಂದಿ ಅಮೆರಿಕನ್ನರು. ಫ್ರಾನ್ಸ್​ನ ಒಬ್ಬರು ಮಾತ್ರ ಹತ್ತರಲ್ಲಿ ಒಬ್ಬರಾಗಿದ್ದಾರೆ. ಟಾಪ್ ಶ್ರೀಮಂತರ ಹೆಸರು ಮತ್ತು ಆಸ್ತಿ ಮೌಲ್ಯದ ವಿವರ ಇಲ್ಲಿದೆ.
1) ಜೆಫ್ ಬೆಜೋಸ್ – 21,100 ಕೋಟಿ ಯುಎಸ್​ಡಿ
2) ಎಲಾನ್ ಮಸ್ಕ್ – 18,100 ಕೋಟಿ ಯುಎಸ್​ಡಿ
3) ಬರ್ನಾರ್ಡ್ ಅರ್ನಾಲ್ಟ್- 16,900 ಕೋಟಿ ಯುಎಸ್​ಡಿ
4) ಬಿಲ್ ಗೇಟ್ಸ್- 14,700 ಕೋಟಿ ಯುಎಸ್​ಡಿ
5) ಮಾರ್ಕ್ ಝುಕರ್​ಬರ್ಗ್- 13,100 ಕೋಟಿ ಯುಎಸ್​ಡಿ
6) ಲ್ಯಾರಿ ಪೇಜ್- 11,500 ಕೋಟಿ ಯುಎಸ್​ಡಿ
7) ಸರ್ಗೆ ಬ್ರಿನ್- 11,100 ಕೋಟಿ ಯುಎಸ್​ಡಿ
8) ವಾರೆನ್ ಬಫೆಟ್- 10,100 ಕೋಟಿ ಯುಎಸ್​ಡಿ
9) ಸ್ಟೀವ್ ಬಲ್ಮರ್- 9980 ಕೋಟಿ ಅಮೆರಿಕನ್ ಡಾಲರ್
10) ಲ್ಯಾರಿ ಎಲಿಸನ್- 9630 ಕೋಟಿ ಯುಎಸ್​ಡಿ
12) ಮುಕೇಶ್​ ಅಂಬಾನಿ- 8020 ಕೋಟಿ ಅಮೆರಿಕನ್ ಡಾಲರ್

ಭಾರತದ ಮುಕೇಶ್​ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8,020 ಕೋಟಿ ಅಮೆರಿಕನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ 5,98,425.13 ಕೋಟಿ ಆಗುತ್ತದೆ. ಇನ್ನು ಸದ್ಯಕ್ಕೆ ಏಷ್ಯಾದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ.

ಇದನ್ನೂ ಓದಿ: Jeff Bezos: ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿದ ಜಗತ್ತಿನ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್; ಪಿಕ್ಚರ್ ಅಭೀ ಬಾಕಿ ಹೈ

ಇದನ್ನೂ ಓದಿ: Jeff Bezos: ಪುಟ್ಟ ಗ್ಯಾರೇಜಿನಿಂದ 131.58 ಲಕ್ಷ ಕೋಟಿ ರೂಪಾಯಿ ಸಾಮ್ರಾಜ್ಯದ ತನಕ ಅಮೆಜಾನ್​.ಕಾಮ್ ಕಟ್ಟಿದ ಜೆಫ್​ ಬೆಜೋಸ್​

(World’s richest person and Amazon founder Jeff Bezos wealth crossed 211 billion USD. Here is the top billionaires list)