ನವದೆಹಲಿ, ಡಿಸೆಂಬರ್ 31: ಭಾರತ ಮತ್ತು ರಷ್ಯಾದ ಫೋರೆಕ್ಸ್ ಮೀಸಲು ನಿಧಿ (Forex Reserves) ಗಮನಾರ್ಹವಾಗಿ ಹೆಚ್ಚಳವಾಗಿದೆ. ಅತಿಹೆಚ್ಚು ವಿದೇಶೀ ವಿನಿಮಯ ಮೀಸಲು ನಿಧಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಭಾರತ 620 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಚೀನಾ 3,800 ಬಿಲಿಯನ್ ಡಾಲರ್ನಷ್ಟು ಸಂಗ್ರಹ ಹೊಂದಿದ್ದು ಟಾಪ್ ಒನ್ನಲ್ಲಿ ಇದೆ. ಜಪಾನ್ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳು ಟಾಪ್-3 ಪಟ್ಟಿಯಲ್ಲಿವೆ. ಭಾರತದ ನೆರೆಯ ದೇಶಗಳ ಪೈಕಿ ನೇಪಾಳ ಮತ್ತು ಬಾಂಗ್ಲಾದೇಶ 10ರಿಂದ 20 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿವೆ. ಪಾಕಿಸ್ತಾನದ ಬಳಿ 7ರಿಂದ 8 ಬಿಲಿಯನ್ ಡಾಲರ್ನಷ್ಟು ಮಾತ್ರ ನಿಧಿ ಇರುವುದು.
ಇದನ್ನೂ ಓದಿ: Forex Reserves: ಭಾರತದ ವಿದೇಶೀ ಮೀಸಲು ನಿಧಿಯಲ್ಲಿ ಮತ್ತೆ ಹೆಚ್ಚಳ; 620 ಬಿಲಿಯನ್ ಡಾಲರ್ ಆದ ಫಾರೆಕ್ಸ್ ರಿಸರ್ವ್ಸ್
ಇದನ್ನೂ ಓದಿ: Year Ender 2023: ಹಿಂಡನ್ಬರ್ಗ್ ರಿಪೋರ್ಟ್ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು
ವಿದೇಶಗಳೊಂದಿಗೆ ವ್ಯವಹಾರ ನಡೆಸಲು ಮತ್ತು ದೇಶದ ಕರೆನ್ಸಿಯನ್ನು ರಕ್ಷಿಸಲು ಬೇಕಾದ ನಿಧಿ. ಇದರಲ್ಲಿ ವಿದೇಶೀ ಕರೆನ್ಸಿಗಳು, ಚಿನ್ನ, ಎಸ್ಡಿಆರ್ ಮತ್ತು ಐಎಂಎಫ್ನಲ್ಲಿರಿಸಿದ ಕರೆನ್ಸಿ ಮೊತ್ತ ಈ ನಾಲ್ಕು ಅಂಶಗಳು ಇರುತ್ತವೆ. ಇದರಲ್ಲಿ ವಿದೇಶೀ ಕರೆನ್ಸಿಗಳ ಸಂಗ್ರಹ ಅತಿದೊಡ್ಡ ಅಂಶ. ನಂತರದ ಸ್ಥಾನ ಚಿನ್ನದ್ದು. ಇನ್ನು, ಎಸ್ಡಿಆರ್ ಎಂದರೆ ಸ್ಪೆಷಲ್ ಡ್ರಾಯಿಂಗ್ ರೈಟ್ಸ್. ಇದು ಆಯ್ದ ವಿದೇಶೀ ಕರೆನ್ಸಿಗಳ ಮೌಲ್ಯ. ಐಎಂಎಫ್ ರಿಸರ್ವ್ ಪೊಸಿಶನ್ ಎಂಬುದು ಐಎಂಎಫ್ನಲ್ಲಿ ಒಂದು ದೇಶವು ಒಂದಷ್ಟು ಕರೆನ್ಸಿಯನ್ನು ಇರಿಸಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ