ನವದೆಹಲಿ, ಡಿಸೆಂಬರ್ 31: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (forex reserves) ಇನ್ನಷ್ಟು ಭರ್ತಿಯಾಗಿದೆ. ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್ 22ರಂದು ಅಂತ್ಯಗೊಂಡ ವಾರದಲ್ಲಿ 4.471 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಉಬ್ಬಿದೆ. ಇದರೊಂದಿಗೆ ಒಟ್ಟು ನಿಧಿ 620.441 ಬಿಲಿಯನ್ ಡಾಲರ್ನಷ್ಟಾಗಿದೆ. ಹಿಂದಿನ ವಾರದಲ್ಲಿ, ಅಂದರೆ ಡಿಸೆಂಬರ್ 15ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 9.112 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿತ್ತು.
ವಿದೇಶಗಳೊಂದಿಗೆ ವ್ಯವಹಾರ ನಡೆಸಲು ಮತ್ತು ದೇಶದ ಕರೆನ್ಸಿಯನ್ನು ರಕ್ಷಿಸಲು ಬೇಕಾದ ನಿಧಿ. ಇದರಲ್ಲಿ ವಿದೇಶೀ ಕರೆನ್ಸಿಗಳು, ಚಿನ್ನ, ಎಸ್ಡಿಆರ್ ಮತ್ತು ಐಎಂಎಫ್ನಲ್ಲಿರಿಸಿದ ಕರೆನ್ಸಿ ಮೊತ್ತ ಈ ನಾಲ್ಕು ಅಂಶಗಳು ಇರುತ್ತವೆ. ಇದರಲ್ಲಿ ವಿದೇಶೀ ಕರೆನ್ಸಿಗಳ ಸಂಗ್ರಹ ಅತಿದೊಡ್ಡ ಅಂಶ. ನಂತರದ ಸ್ಥಾನ ಚಿನ್ನದ್ದು. ಇನ್ನು, ಎಸ್ಡಿಆರ್ ಎಂದರೆ ಸ್ಪೆಷಲ್ ಡ್ರಾಯಿಂಗ್ ರೈಟ್ಸ್. ಇದು ಆಯ್ದ ವಿದೇಶೀ ಕರೆನ್ಸಿಗಳ ಮೌಲ್ಯ. ಐಎಂಎಫ್ ರಿಸರ್ವ್ ಪೊಸಿಶನ್ ಎಂಬುದು ಐಎಂಎಫ್ನಲ್ಲಿ ಒಂದು ದೇಶವು ಒಂದಷ್ಟು ಕರೆನ್ಸಿಯನ್ನು ಇರಿಸಬೇಕು.
ಇದನ್ನೂ ಓದಿ: Year Ender 2023: ಹಿಂಡನ್ಬರ್ಗ್ ರಿಪೋರ್ಟ್ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು
ಡಿಸೆಂಬರ್ 22ರ ವಾರದಲ್ಲಿ ಭಾರತದ ಫಾರೆಕ್ಸ್ ನಿಧಿಯಲ್ಲಿ 4.471 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಇದರಲ್ಲಿ ಫಾರೀನ್ ಕರೆನ್ಸಿ ಆಸ್ತಿಗಳೇ 4.898 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿವೆ. ಆದರೆ, ಚಿನ್ನದ ಸಂಗ್ರಹ 101 ಬಿಲಿಯನ್ನಷ್ಟು ಕಡಿಮೆ ಆಗಿದೆ. ಐಎಂಎಂಫ್ನೊಂದಿಗಿನ ಮೀಸಲು ಮೊತ್ತವೂ 129 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ.
ಒಟ್ಟು ಫಾರೆಕ್ಸ್ ನಿಧಿ: 620.441 ಬಿಲಿಯನ್ ಡಾಲರ್
ಇದನ್ನೂ ಓದಿ: PIDF: ಪೇಮೆಂಟ್ ಸ್ವೀಕೃತಿ ಸಾಧನಗಳಿಗೆ ಸಬ್ಸಿಡಿ ನೀಡುವ ಸ್ಕೀಮ್; ಪಿಐಡಿಎಫ್ ಅವಧಿ 2 ವರ್ಷ ಹೆಚ್ಚಿಸಿದ ಆರ್ಬಿಐ
2021ರ ಅಕ್ಟೋಬರ್ನಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್ ಮಟ್ಟ ಮುಟ್ಟಿತ್ತು. ಅದು ಭಾರತದ ಫಾರೆಕ್ಸ್ನ ಸಾರ್ವಕಾಲಿಕ ಮಟ್ಟ. ಆ ಬಳಿಕ ರುಪಾಯಿ ಮೌಲ್ಯ ಕುಸಿತವನ್ನು ತಡೆಯಲು ಆರ್ಬಿಐ ಕೈಗೊಂಡ ವಿವಿಧ ಕ್ರಮಗಳ ಪರಿಣಾಮ ಮೀಸಲು ನಿಧಿಯಲ್ಲಿ ಕ್ರಮೇಣ ಇಳಿಕೆ ಆಗುತ್ತಾ ಬಂದಿತ್ತು. ಈಗ್ಗೆ ಕೆಲ ವಾರಗಳಿಂದ ನಿಧಿಯಲ್ಲಿ ಮತ್ತೆ ಏರಿಕೆ ಆಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ