ನಿಮ್ಮ ಬ್ಯಾಂಕ್​ನಿಂದ ಟಿಡಿಎಸ್​ ಕ್ರೆಡಿಟ್ ಕ್ಲೇಮ್ ಮಾಡಲು ಆಗುತ್ತಿಲ್ಲವೇ? ಏಕೆಂಬ ಕಾರಣ ಇಲ್ಲಿದೆ

| Updated By: Srinivas Mata

Updated on: Jul 30, 2021 | 12:57 PM

ನೀವು ಗಳಿಸಿದ ಬಡ್ಡಿಯ ಆದಾಯಕ್ಕೆ (Interest Income) ಬ್ಯಾಂಕ್​ನಂಥ ಸಂಸ್ಥೆಗಳು ಟಿಡಿಎಸ್​ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಶೇ 20ರಷ್ಟು ಕಡಿತ ಮಾಡಬಹುದು. ಒಂದು ವೇಳೆ ಅದಾಗಲೇ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಪಾವತಿ ಮಾಡಿದ್ದಲ್ಲಿ, ಅದನ್ನು ಒಟ್ಟಾರೆ ತೆರಿಗೆ ಜವಾಬ್ದಾರಿಗೆ ಹೊಂದಿಸಬಹುದು. ಇನ್ನು ತೆರಿಗೆ ಜವಾಬ್ದಾರಿಗಿಂತ ಹೆಚ್ಚಿನದನ್ನು ಕಡಿತ ಮಾಡಿದ್ದಲ್ಲಿ ರೀಫಂಡ್​ಗೆ ಕ್ಲೇಮ್ ಮಾಡಬಹುದು. ತೆರಿಗೆ ಪಾವತಿದಾರರು ತೆರಿಗೆ- ಪೂರ್ವ ಅಥವಾ ಗ್ರಾಸ್ ಆದಾಯವನ್ನು ಐಟಿಆರ್​ನಲ್ಲಿ ತೋರಿಸಬೇಕು. ಮತ್ತು ತೆರಿಗೆ ಪಾವತಿಸಿರುವ ಕ್ರೆಡಿಟ್​ ಅನ್ನು ಪ್ರತ್ಯೇಕವಾಗಿ […]

ನಿಮ್ಮ ಬ್ಯಾಂಕ್​ನಿಂದ ಟಿಡಿಎಸ್​ ಕ್ರೆಡಿಟ್ ಕ್ಲೇಮ್ ಮಾಡಲು ಆಗುತ್ತಿಲ್ಲವೇ? ಏಕೆಂಬ ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ನೀವು ಗಳಿಸಿದ ಬಡ್ಡಿಯ ಆದಾಯಕ್ಕೆ (Interest Income) ಬ್ಯಾಂಕ್​ನಂಥ ಸಂಸ್ಥೆಗಳು ಟಿಡಿಎಸ್​ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಶೇ 20ರಷ್ಟು ಕಡಿತ ಮಾಡಬಹುದು. ಒಂದು ವೇಳೆ ಅದಾಗಲೇ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಪಾವತಿ ಮಾಡಿದ್ದಲ್ಲಿ, ಅದನ್ನು ಒಟ್ಟಾರೆ ತೆರಿಗೆ ಜವಾಬ್ದಾರಿಗೆ ಹೊಂದಿಸಬಹುದು. ಇನ್ನು ತೆರಿಗೆ ಜವಾಬ್ದಾರಿಗಿಂತ ಹೆಚ್ಚಿನದನ್ನು ಕಡಿತ ಮಾಡಿದ್ದಲ್ಲಿ ರೀಫಂಡ್​ಗೆ ಕ್ಲೇಮ್ ಮಾಡಬಹುದು. ತೆರಿಗೆ ಪಾವತಿದಾರರು ತೆರಿಗೆ- ಪೂರ್ವ ಅಥವಾ ಗ್ರಾಸ್ ಆದಾಯವನ್ನು ಐಟಿಆರ್​ನಲ್ಲಿ ತೋರಿಸಬೇಕು. ಮತ್ತು ತೆರಿಗೆ ಪಾವತಿಸಿರುವ ಕ್ರೆಡಿಟ್​ ಅನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬೇಕು. ಆದರೂ ಟಿಡಿಎಸ್​ ಕ್ರೆಡಿಟ್ ಕ್ಲೇಮ್ ಮಾಡುವುದಕ್ಕೆ ಕಷ್ಟ ಎದುರಾಗಬಹುದು. ಫಾರ್ಮ್ 26ASನಲ್ಲಿ ಅದು ರಿಫ್ಲೆಕ್ಟ್ ಆಗುವುದಿಲ್ಲ. ಏಕೆಂದರೆ ಬ್ಯಾಂಕ್​ಗೆ PAN ನೀಡಿರುವುದಿಲ್ಲ. ಬ್ಯಾಂಕ್​ನಿಂದ ಫೈಲ್​ ಮಾಡಿರುವ ಟಿಡಿಎಸ್​ ರಿಟರ್ನ್​ನಲ್ಲಿ, “ಪ್ಯಾನ್ ಲಭ್ಯವಿಲ್ಲ” ಎಂದು ಬರುತ್ತದೆ.

ಬ್ಯಾಂಕ್​ಗಳು ಸೇರಿದಂತೆ ಯಾವುದೇ ವ್ಯಕ್ತಿಯು ಟಿಡಿಎಸ್​ ಕಡಿತ ಮಾಡುವಾಗ ಯಾವ ವ್ಯಕ್ತಿಯ ಟಿಡಿಎಸ್​ ಕಡಿತ ಮಾಡುತ್ತಿದ್ದಾರೋ ಮತ್ತು ಹಣ ಪಾವತಿಸುತ್ತಿದ್ದಾರೋ ಅವರ ಪ್ಯಾನ್​ ನಂಬರ್ (ಮತ್ತು ಟ್ಯಾಕ್ಸ್​ ಖಾತೆ ಸಂಖ್ಯೆ ಅಥವಾ TAN) ತಿಳಿದುಕೊಳ್ಳಬೇಕಾಗುತ್ತದೆ. ಹೀಗೆ ತೆರಿಗೆ ಕಡಿತ ಮಾಡುವವರು ತ್ರೈಮಾಸಿಕ ಸ್ಟೇಟ್​ಮಂಟ್ (ಟಿಡಿಎಸ್ ರಿಟರ್ನ್ಸ್) ಸಲ್ಲಿಸಬೇಕು. ಹೀಗೆ ಆ ವ್ಯಕ್ತಿಗಳ ಸರಿಯಾದ PAN/TAN ಸಂಖ್ಯೆಯನ್ನು ಹಾಕಿ, ಟಿಡಿಎಸ್ ಕಡಿತ ಮಾಡಿ, ಪಾವತಿಸಲಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಪ್ಯಾನ್ ಆಧಾರದ ಮೇಲೆ ಟಿಡಿಎಸ್ ರಿಟರ್ನ್ಸ್ ಫೈಲ್ ಮತ್ತು ಟಿಡಿಎಸ್ ಕ್ರೆಡಿಟ್ಸ್​ ಪಡೆಯಲಾಗುತ್ತದೆ. ಈಗ ಒಂದು ವೇಳೆ ಬ್ಯಾಂಕ್​ ಬಳಿ ಖಾತೆದಾರರ ಪ್ಯಾನ್​ ಕಾರ್ಡ್​ ಮಾಹಿತಿ ಇಲ್ಲದಿದ್ದಲ್ಲಿ ಅಥವಾ ತಪ್ಪಾದ ಪ್ಯಾನ್ ಇದ್ದಲ್ಲಿ ಆಗಲೂ ಟಿಡಿಎಸ್​ ಕಡಿತ ಮಾಡಿ- ಪಾವತಿಸುತ್ತಾರೆ. ಆದರೆ ಟಿಡಿಎಸ್ ರಿಟರ್ನ್ ಸರಿಯಾದ ಪ್ಯಾನ್ ಸಂಖ್ಯೆ ತೋರಿಸುವುದಿಲ್ಲ. ಆದ್ದರಿಂದ ಪ್ಯಾನ್​ ಸಂಖ್ಯೆಯ ಆಧಾರದಲ್ಲಿ ಟಿಡಿಎಸ್ ಕ್ರೆಡಿಟ್ ಎಷ್ಟಾಗಿದೆ ಎಂದು ಸಿಸ್ಟಮ್​ನಲ್ಲಿ ಅಪ್​ಡೇಟ್ ಆಗುವುದಿಲ್ಲ.

ಆ ಕಾರಣಕ್ಕೆ ಈ ಕ್ರೆಡಿಟ್ ಕ್ಲೇಮ್ ಮಾಡುವುದಕ್ಕೆ ಅಗತ್ಯ ಮಾಹಿತಿ ಬೇಕಾಗುತ್ತದೆ. ಮೊದಲೇ ಹೇಳಿದಂತೆ ಸಿಸ್ಟಮ್​ನಲ್ಲಿ ಇದು ಅಪ್​ಡೇಟ್ ಆಗುವುದಿಲ್ಲ. ಇದು ಹೇಗೆಂದರೆ, ಒಬ್ಬ ವ್ಯಕ್ತಿ ನಿಮ್ಮ ಹಣವನ್ನು ತಪ್ಪಾದ ಬ್ಯಾಂಕ್​ ಖಾತೆ ಸಂಖ್ಯೆಗೆ ಪಾವತಿಸಿದಂತೆ. ಅವರು ಪ್ರಯತ್ನಿಸಿ, ಹಣವನ್ನು ವರ್ಗಾವಣೆ ಮಾಡಬಹುದು. ಆದರೆ ಅದು ನಿಮ್ಮ ಖಾತೆಗೆ ತಲುಪುವುದಿಲ್ಲ. ಆದ್ದರಿಂದ ಟಿಡಿಎಸ್ ಕ್ರೆಡಿಟ್ ಕ್ಲೇಮ್ ಮಾಡುವುದಕ್ಕೆ ಇರುವ ಒಂದೇ ದಾರಿ ಅಂದರೆ, ಸರಿಯಾದ ಪ್ಯಾನ್​ ಸಂಖ್ಯೆಯನ್ನು ಬ್ಯಾಂಕ್​ ಜತೆಗೆ ಅಪ್​ಡೇಟ್ ಮಾಡಬೇಕು. ಟಿಡಿಎಸ್​ ರಿಟರ್ನ್ಸ್​ ಪರಿಷ್ಕೃತಗೊಳಿಸುವಂತೆ ಕೇಳಬೇಕು.

ಇದನ್ನೂ ಓದಿ: Income Tax Return: ಯಾಮಾರಿದ್ರೆ ಬೀಳುತ್ತೆ ಹೊರೆ: ಐಟಿ ರಿಟರ್ನ್​, ಟಿಡಿಎಸ್​ನಲ್ಲಿ ಏನಿದು ಹೊಸ ನಿಯಮ? ಐಟಿ ಇಲಾಖೆ ಹೇಗೆ ಚೆಕ್ ಮಾಡುತ್ತೆ?

(Your Bank Unable To Claim TDS Credits Here Is The Reason Why )