ನವದೆಹಲಿ: ವಿಶ್ವದ ಶ್ರೀಮಂತ ದೇಶಗಳು, ವಿಶ್ವದ ಅತ್ಯಂತ ಬಡ ದೇಶಗಳು, ವಿಶ್ವದ ಅತಿಖುಷಿಯ ದೇಶಗಳು, ವಿಶ್ವದ ಅತೃಪ್ತರ ದೇಶಗಳು ಹೀಗೆ ಹಲವು ಪಟ್ಟಿಗಳನ್ನು ನಾನು ನೋಡಿದ್ದೇವೆ. ಈಗ ವಿಶ್ವದ ಅತ್ಯಂತ ದರಿದ್ರ ದೇಶಗಳ ಪಟ್ಟಿ (World’s Most Miserable Countries 2022) ಬಂದಿದೆ. ಹಾಂಕೆ ಎಂಬ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ 2022ರಲ್ಲಿ ವಿಶ್ವದ ಅತ್ಯಂತ ದರಿದ್ರ ದೇಶ ಜಿಂಬಾಬ್ವೆಯಂತೆ. 2022ರ ವಾರ್ಷಿಕ ದಾರಿದ್ರ್ಯ ಸೂಚ್ಯಂಕ (HIMA- Hanke’s Annual Misery Index) ದಲ್ಲಿ 157 ದೇಶಗಳ ಪಟ್ಟಿ ಪ್ರಕಟವಾಗಿದೆ. ಜಿಂಬಾಬ್ವೆ ಮೊದಲ ಸ್ಥಾನದಲ್ಲಿದ್ದರೆ ಸ್ವಿಟ್ಜರ್ಲೆಂಡ್ ಕೊನೆಯ (157ನೇ) ಸ್ಥಾನದಲ್ಲಿದೆ. ಅಂದರೆ ಸ್ವಿಟ್ಜರ್ಲೆಂಡ್ ಅತೀ ಕಡಿಮೆ ದಾರಿದ್ರ್ಯದ ದೇಶವಾಗಿದೆ. ಕುತೂಹಲವೆಂದರೆ, ವಿಶ್ವದಲ್ಲಿ ಅತ್ಯಂತ ಸಂತೋಷದ ದೇಶವೆಂದು (Happiest Nation) ಪರಿಗಣಿಸಲಾದ ಫಿನ್ಲೆಂಡ್ ದೇಶವು ದರಿದ್ರರ ಪಟ್ಟಿಯಲ್ಲಿ 109ನೇ ಸ್ಥಾನದಲ್ಲಿದೆ. ಅಂದರೆ ಫಿನ್ಲೆಂಡ್ ಜನರು ದಾರಿದ್ರ್ಯದಲ್ಲೂ ಸಂತೋಷ ಅನುಭವಿಸುತ್ತಾರೆ ಎನ್ನುವ ಅಂಶ ಗಮನಿಸಬಹುದು.
ಇದನ್ನೂ ಓದಿ: Bernard Arnault: ವಿಶ್ವ ನಂ. 1 ಶ್ರೀಮಂತ ಆರ್ನಾಲ್ಟ್ ಒಂದೇ ದಿನದಲ್ಲಿ 11 ಬಿಲಿಯನ್ ಡಾಲರ್ ಕಳೆದುಕೊಳ್ಳಲು ಏನು ಕಾರಣ?
ಈ ಮೇಲಿನ 15 ದೇಶಗಳ ಪೈಕಿ ಸಿರಿಯಾ, ಉಕ್ರೇನ್, ಆಂಗೋಲ, ಟಾಂಗ ದೇಶಗಳು ದರಿದ್ರ ದೇಶಗಳ ಪಟ್ಟಿಗೆ ಸೇರಲು ನಿರುದ್ಯೋಗ ಅಂಶ ಪ್ರಮುಖ ಕಾರಣವಾಗಿದೆ. ಉಳಿದ ಟಾಪ್ 15 ದೇಶಗಳಲ್ಲಿ ಹಣದುಬ್ಬರು ದಾರಿದ್ರ್ಯಕ್ಕೆ ಪ್ರಮುಖ ಕಾರಣವಾಗಿದೆ. ಜಿಂಬಾಬ್ವೆಯಲ್ಲಿ ಹಣದುಬ್ಬರ ಶೇ. 243.8ರಷ್ಟು ಇದ್ದು, ಅಲ್ಲಿನ ಬಡ್ಡಿ ದರ ಶೇ. 131.8ರಷ್ಟು ಇದೆ.
In #Cuba, disastrous economic policies have left the country in shambles. It’s no wonder why the Communist utopia is the NINTH-MOST MISERABLE COUNTRY in the world according to the Hanke 2022 Annual Misery Index. pic.twitter.com/1RPDbfCO4p
— Steve Hanke (@steve_hanke) May 23, 2023
ವಿಶ್ವ ದಾರಿದ್ರ್ಯ ದೇಶಗಳ ಪಟ್ಟಿಯಲ್ಲಿ 157 ದೇಶಗಳ ಪೈಕಿ ಭಾರತ 103ನೇ ಸ್ಥಾನದಲ್ಲಿದೆ. ಭಾರತದ ದಾರಿದ್ರ್ಯಕ್ಕೆ ಪ್ರಮುಖ ಕಾರಣವಾಗಿರುವುದು ನಿರುದ್ಯೋಗ ಎಂದು ಹಾಂಕೇ ಹೆಸರಿಸಿದೆ. ಇನ್ನು, ಪಾಕಿಸ್ತಾನ 35ನೇ ಸ್ಥಾನದಲ್ಲಿದ್ದು, ಅದಕ್ಕೆ ಪ್ರಮುಖ ಕಾರಣ ಹಣದುಬ್ಬರ.
ವರ್ಷಾಂತ್ಯದಲ್ಲಿನ ಒಟ್ಟಾರೆ ನಿರುದ್ಯೋಗ, ಹಣದುಬ್ಬರ, ಬ್ಯಾಂಕ್ ಬಡ್ಡಿ ದರಗಳು ಹಾಗೂ ಜಿಡಿಪಿ ತಲಾದಾಯದಲ್ಲಿನ ವಾರ್ಷಿಕ ಶೇಕಡಾರು ಬದಲಾವಣೆ ಆಧಾರದ ಮೇಲೆ ಒಂದು ದೇಶದ ದಾರಿದ್ರ್ಯತೆಯನ್ನು ಅಳೆಯಲಾಗಿದೆ. ಹಾಂಕೆಯ ಮುಖ್ಯಸ್ಥ ಸ್ಟೀವ್ ಹಾಂಕೆ ಈ ಪಟ್ಟಿ ಪ್ರಕಟಿಸಿದ್ದಾರೆ.
Published On - 2:03 pm, Wed, 24 May 23